Elephant Camp: ರಾಮನಗರದ ಮುತ್ತತ್ತಿ ಬಳಿ ರಾಜ್ಯದ 10ನೇ ಆನೆ ಕ್ಯಾಂಪ್ ಶೀಘ್ರ ಆರಂಭ?
ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯಲ್ಲಿ ಸಂಘರ್ಷ ತಡೆಗೆ ಕ್ರಮ
Team Udayavani, Jan 8, 2025, 7:00 AM IST
ರಾಮನಗರ: ಕಾವೇರಿ ವನ್ಯಜೀವಿ ಅರಣ್ಯ ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ಮಾನವ-ಕಾಡಾನೆ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಮುತ್ತತ್ತಿ ಬಳಿ ಆನೆಕ್ಯಾಂಪ್ ಸ್ಥಾಪನೆಗೆ ಮುಂದಾಗಿದ್ದು ಸರಕಾರ ಒಪ್ಪಿಗೆ ಸೂಚಿಸಿದರೆ ಕಾವೇರಿ ವನ್ಯಜೀವಿ ವಲಯದಲ್ಲಿ ರಾಜ್ಯದ 10ನೇ ಆನೆ ಕ್ಯಾಂಪ್ ಆರಂಭವಾಗಲಿದೆ.
ರಾಮನಗರ ಜಿಲ್ಲೆಯ ಜನ ಕಾಡಾನೆ ಹಾವಳಿಗೆ ಹೈರಾಣಾಗಿದ್ದು 2016ರಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ 8 ಕಾಡಾನೆಗಳನ್ನು ಸೆರೆ ಹಿಡಿದು ಸ್ಥಳಾಂತರ ಮಾಡಲಾಗಿದೆ. 28.25 ಕಿ.ಮೀ. ರೈಲ್ವೇ ಬ್ಯಾರಿಕೇಡ್ ಅಳವಡಿಸಿ ಆನೆ ತಡೆಗೋಡೆ, 41 ಕಿ.ಮೀ. ಸೌರವಿದ್ಯುತ್ ಬೇಲಿ ಅಳವಡಿಸಲಾಗಿದೆಯಾದರೂ ಕಾಡಾನೆ ಸಮಸ್ಯೆಗೆ ಮುಕ್ತಿ ದೊರೆತಿಲ್ಲ.
2023ರ ಆನೆ ಗಣತಿ ಅನ್ವಯ ಕಾವೇರಿ ವನ್ಯಜೀವಿ ವಲಯದಲ್ಲಿ 620 ಕಾಡಾನೆಗಳಿದ್ದು, ಬನ್ನೇರುಘಟ್ಟ ಅರಣ್ಯ ಪ್ರದೇಶದಲ್ಲಿ 240 ಕಾಡಾನೆಗಳಿವೆ. 20 ವರ್ಷಗಳ ಹಿಂದೆ ಮುತ್ತತ್ತಿಯ ಬಳಿಯ ಕೆಸರಿಕೆಹಳ್ಳ ಎಂಬ ಪ್ರದೇಶದಲ್ಲಿ 2 ಆನೆಗಳನ್ನು ಇರಿಸಿ ಆನೆ ಕ್ಯಾಂಪ್ ಪ್ರಾರಂಭಿಸಲಾಗಿತ್ತು. ವನ್ಯಜೀವಿ ವಲಯ ಆರಂಭವಾದ ಬಳಿಕ ಈ ಕ್ಯಾಂಪ್ ಸ್ಥಳಾಂತರಿಸಲಾಯಿತು. ಮುತ್ತತ್ತಿ ಬಳಿ ಆನೆಶಿಬಿರ ಮಾಡುವುದಕ್ಕೆ ಅಗತ್ಯವಿರುವ ಭೂಮಿ ಇದ್ದು, ಇದರೊಂದಿಗೆ ಕಾವೇರಿ ನದಿ ಹರಿಯುವ ಕಾರಣ ಅಗತ್ಯವಿರುವ ನೀರು ಮತ್ತು ಮೇವಿನ ಲಭ್ಯತೆ ಇರಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dinner Meeting: ಸಭೆ ಮಾಡಬೇಡಿ ಎನ್ನಲು ಇವರೇನು ಪರಿಶಿಷ್ಟ ಸಮುದಾಯದ ವಿರೋಧಿಗಳಾ?: ಸಚಿವ
Bengaluru: ಶಸ್ತ್ರಾಸ್ತ್ರ ತ್ಯಜಿಸಿ ಸಿಎಂ ಮುಂದೆ ಶರಣಾದ 6 ನಕ್ಸಲರು…
Raichur: ಮೂರೂ ದಶಕಗಳ ಬಳಿಕ ನಕ್ಸಲ್ ಮಾರೆಪ್ಪ ಅರೋಳಿ ಶರಣಾಗತಿ… ಕುಟುಂಬದಲ್ಲಿ ಖುಷಿ
ಹೈಕಮಾಂಡ್ ಸೂಚನೆಗೆ ಔತಣಕೂಟ ಮುಂದಕ್ಕೆ ಹಾಕಿದ್ದೇವೆ, ರದ್ದು ಮಾಡಿಲ್ಲ: ಜಿ.ಪರಮೇಶ್ವರ್
ಅಂತಾರಾಜ್ಯ ಮಕ್ಕಳ ಮಾರಾಟ ಜಾಲ ಪತ್ತೆ… 4.50 ಲಕ್ಷಕ್ಕೆ ಗೋವಾಕ್ಕೆ ಮಾರಿದ್ದ ಮಗುವಿನ ರಕ್ಷಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.