ಹೈನುಗಾರಿಕೆಯಿಂದ ಗ್ರಾಮೀಣ ಯುವಕರಿಗೆ ಉದ್ಯೋಗ: ರವಿ
Team Udayavani, Feb 10, 2020, 4:13 PM IST
ಕನಕಪುರ: ಹೈನುಗಾರಿಕೆಯಲ್ಲಿ ರೈತರು ಸಬಲತೆ ಸಾಧಿಸಲು ಬೆಂಗಳೂರು ಹಾಲು ಒಕ್ಕೂಟ ಬಹಳ ಸಹಕಾರಿಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ರವಿ ತಿಳಿಸಿದರು.
ತಾಲೂಕಿನ ಮರಳವಾಡಿಯಲ್ಲಿ ರಾಜ್ಯ ಹಾಲು ಒಕ್ಕೂಟದ ಮಹಾ ಮಂಡಳಿ ಹಾಗೂ ಬೆಂಗಳೂರು ಸಹಕಾರ ಹಾಲು ಒಕ್ಕೂಟದ ಸಹಯೋಗದೊಂದಿಗೆ ದಕ್ಷಿಣ ಮತ ಕ್ಷೇತ್ರದ ವ್ಯಾಪ್ತಿಯಲ್ಲಿ ಸಬ್ಸಿಡಿ ದರದಲ್ಲಿ ದೇಶಿ ತಳಿ ರಾಸುಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ತಾಲೂಕಿನ ಹಲವಾರು ನಿರುದ್ಯೋಗ ಯುವಕರು ಉದ್ಯೋಗ ಹರಸಿ ಬೆಂಗಳೂರಿನತ್ತ ಮುಖ ಮಾಡಿದ್ದಾರೆ.ಅಂತಹ ನಿರುದ್ಯೋಗ ಯುಕರಿಗೆ ಸ್ಥಳಿಯವಾಗಿ ಉದ್ಯೋಗ ಒದಗಿಸಿ ಕೂಟ್ಟು ಹೈನುಗಾರಿಕೆ ಉದ್ಯಮಕ್ಕೆ ಉತ್ತೇಜನ ನೀಡಲು ಹಾಲು ಉತ್ಪಾದಕ ರೈತರಿಗೆ ಸಬ್ಸಿಡಿ ದರದಲ್ಲಿ ದೇಶಿ ತಳಿ ರಾಸುಗಳನ್ನು ವಿತರಿಸಲಾಗುತ್ತಿದೆ ಎಂದರು. ಮೊದಲ ಹಂತವಾಗಿ ಮರಳವಾಡಿಯಲ್ಲಿ 200 ರಾಸುಗಳನ್ನು ವಿತರಿಸಲಾಗುತ್ತಿದ್ದು, 80 ಸಾವಿರದ ರಾಸುಗಳನ್ನು 50 ರಷ್ಟು ಸಬ್ಸಿಡಿ ದರದಲ್ಲಿ ಅಂದರೆ ರೈತರು 40 ಸಾವಿರ ಪಾವತಿಸಿದರೆ, ಸಂಘದ ವತಿಯಿಂದ 40 ಸಾವಿರ ಕೋಟ್ಟು ಉತ್ತಮ ತಳಿಯ ರಾಸುಗಳನ್ನು ನೀಡಲಾಗುತ್ತಿದೆ. ಅಲ್ಲದೆ ರೈತರು ರಾಸು ಖರೀದಿಸಲು ಸಂಘದ ವತಿಯಿಂದ ಶೇ.3 ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಬಸಪ್ಪ, ಇಕ್ಬಾಲ್ ಹುಸೇನ್,ನಾಗರಾಜು, ಮುನಿ ಹುಚ್ಚೇಗೌಡ, ರಾಮಕೃಷ್ಣ, ಯದುನಂದನ್‌ಗೌಡ,ಗೌತಮ್‌ಗೌಡ, ಅಶೋಕ್, ಜಗದೀಶ್, ವೆಂಕಟಸ್ವಾಮಿ, ವರದರಾಜು ಸೇರಿದಂತೆ ಆನೇಕರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.