ಇಪಿಟಿ ಪಿಟ್ ಕ್ಲೀನ್ ಮಾಡುವ ವೇಳೆ ಇಬ್ಬರ ದುರ್ಮರಣ
Team Udayavani, May 29, 2017, 5:34 PM IST
ಕನಕಪುರ: ತಾಲೂಕಿನ ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಭಾನುವಾರ ಬೆಳಗಿನ ಜಾವ ಇಪಿಟಿ ಪಿಟ್ ಕ್ಲೀನ್ ಮಾಡಲು ಹೋದ ಕಾರ್ಮಿಕರಿಬ್ಬರು ದುರ್ಮರಣಕ್ಕೆ ಈಡಾದ ಘಟನೆ ಸಂಭವಿಸಿದೆ. ಮೃತ ಕಾರ್ಮಿಕರನ್ನು ಮೈಸೂರಿನ ಕೆ.ಆರ್. ನಗರ ನಿವಾಸಿ ಉಮೇಶ್ (30), ಬೆಂಗಳೂರು ನಿವಾಸಿ ದಿಲೀಪ್ (22) ಎಂದು ತಿಳಿದುಬಂದಿದೆ.
ಮೃತ ಕಾರ್ಮಿಕರಿಬ್ಬರು ಹಾರೋಹಳ್ಳಿ ಕೈಗಾರಿಕಾ ಪ್ರದೇಶ ವ್ಯಾಪ್ತಿಯಲ್ಲಿರುವ ಹಾರಿಜನ್ ಫ್ಯಾಕ್ಸ್ ಎಂಬ ಕಾರ್ಖಾನೆಯಲ್ಲಿ ಕಾರ್ಟನ್ ಬಾಕ್ಸ್ ತಯಾರಿಕೆ ಮಾಡುತ್ತಿದ್ದರು. ತ್ಯಾಜ್ಯಯುಕ್ತ ನೀರನ್ನು ಗುಂಡಿಯಿಂದ ಹೊರಹಾಕಲು ಹೋದಾಗ ಈ ಸಾವು ಸಂಭವಿಸಿದೆ.
ಉಮೇಶ್ ಮತ್ತು ದಿಲೀಪ್ ಇಬ್ಬರು ಇಪಿಟಿ ಕ್ಲೀನಿಂಗ್ ಏಜೆನ್ಸಿಯೊಂದರ ಕಾಂಟ್ರಕ್ಟರ್ ಆದ ಶಂಕರ್ ಬಳಿ ಕೆಲಸ ಮಾಡುತ್ತಿದ್ದರು. ಭಾನುವಾರ ಬೆಳಗ್ಗೆ ಕ್ಲೀನಿಂಗ್ ಮಾಡಲು ಬಂದಿದ್ದರು. ಆಗ ಆಕಸ್ಮಿಕವಾಗಿ ಈ ಘಟನೆ ಸಂಭವಿಸಿ ಸಾವನ್ನಪ್ಪಿದ್ದಾರೆ ಎಂದು ಕಾರ್ಖಾನೆ ಅಕೌಂಟೆಂಟ್ ಚಂದ್ರಶೇಖರ್ ಹೇಳಿದ್ದಾರೆ.
ಈ ಕಾರ್ಮಿಕರರಿಬ್ಬರ ಸಾವಿನ ಬಗ್ಗೆ ಅನುಮಾನವಿದೆ. ಭಾನುವಾರ ರಜೆ ದಿನವಾಗಿದ್ದರೂ ಭಾನುವಾರವೇ ಬಂದು ಯಾಕೆ ಕೆಲಸ ಮಾಡುತ್ತಿದ್ದರು ಎಂಬುದು ಪ್ರಶ್ನೆಯಾಗಿದೆ.
ಕಾರ್ಖಾನೆಯ ಮಾಲೀಕರು ಹಾಗೂ ಏಜೆನ್ಸಿದಾರರು ಇಬ್ಬರೂ ಈ ಕಾರ್ಮಿಕರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಕಾರ್ಮಿಕ ಸಂಘಟನೆ ಮುಖಂಡ ಜಯಸಿಂಹ ಆರೋಪಿಸಿದ್ದಾರೆ.
ಕಾರ್ಖಾನೆ ನಡೆಯುವ ವೇಳೆ ಭದ್ರತೆಯಲ್ಲಿ ಮಾತ್ರ ಇಂತಹ ಅಪಾಯಕಾರಿಯದ ಕೆಲಸ ಮಾಡಬೇಕಾಗಿದೆ. ಆದರೆ, ಭಾನುವಾರ ರಜೆ ದಿನ ಏಕೆ ಮಾಡಿದರು ಎಂಬ ಪ್ರಶ್ನೆಗೆ ಹೆಸರಲು ತಿಳಿಸಲಿಚ್ಛಿಸದ ಕಾರ್ಖಾನೆ ಕೆಲಸಗಾರನೋರ್ವ ಶನಿವಾರ ಸಂಜೆಯೇ ಇಬ್ಬರು ಕಾರ್ಮಿಕರು ಸಾವಿಗೀಡಾಗಿದ್ದಾರೆ. ಮೃತನ ಮನೆಯವರು ಭಾನುವಾರ ಬೆಳಗ್ಗೆ ಕಾರ್ಮಿಕರು ಮನೆಗೆ ಬಾರದೇ ಇರುವುದರಿಂದ ಹುಡಿಕಿಕೊಂಡು ಕಾರ್ಖಾನೆಗೆ ಬಂದು ಕೇಳಿದಾಗ ಸಾವಿನ ಸುದ್ಧಿ ಹೊರಬಿದ್ದಿದ್ದೆ ಎಂದು ತಿಳಿಸಿದ್ದಾರೆ.
ಸಾವಿಗೀಡಾದ ಕಾರ್ಮಿಕರ ಕುಟುಂಬಕ್ಕೆ ಸರ್ಕಾರ ಹಾಗೂ ಕಾರ್ಖಾನೆ ಆಡಳಿತ ಮಂಡಳಿ ನ್ಯಾಯಯುತವಾಗಿ ಸಿಗಬೇಕಾದ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.
ಸಂಪೂರ್ಣವಾಗಿ ಕಾರ್ಖಾನೆ ಆಡಳಿತ ಮಂಡಳಿ ಹಾಗೂ ಏಜೆನ್ಸಿದಾರರಿಬ್ಬರೂ ನಿರ್ಲಕ್ಷ ವಹಿಸಿದ್ದಾರೆ. ಇಪಿಟಿ ಪಿಟ್‌ನಲ್ಲಿ ಕಾರ್ಖಾನೆ ರಾಸಾಯನಿಕ ಯುಕ್ತ ನೀರು ಸೇರಿದ್ದು, ಪ್ರತಿ ಎಂಟು ದಿನಕ್ಕೆ ಒಮ್ಮೆ ಕ್ಲೀನ್ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಎಂಟು ದಿನಗಳ ಒಳಗೆ ಈ ಗುಂಡಿ ಮುಚ್ಚಿರುವುದರಿಂದ ಒಳಗೆ ವಿಷಗಾಳಿ ಸೇರ್ಪಡೆಗೊಂಡಿದ್ದು, ಮನುಷ್ಯರು ಈ ವಿಷಗಾಳಿ ಕುಡಿದ ತಕ್ಷಣ ಸಾವಿಗೀಡಾಗುವಂತಹ ಸನ್ನಿವೇಶ ಏರ್ಪಡುತ್ತದೆ. ಆದೆ ರೀತಿ ಇಲ್ಲಿಯೂ ಆಗಿದೆ ಎಂದು ಗ್ರಾಮ ಪಂಚಾಯತಿ ಸದಸ್ಯ ನರಸಿಂಹಯ್ಯ ಹೇಳಿದ್ದಾರೆ.
ಕಾರ್ಖಾನೆಯವರು ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದ್ದು ತಮ್ಮನ್ನೇ ಒಳಗೆ ಬಿಡದೆ ಸಾವಿನ ಸುದ್ದಿ ಮುಚ್ಚಿಹಾಕಲು ಪ್ರಯತ್ನಿಸಿದ್ದಾರೆ ಎಂದು ದೂರಿದರು.
ಸಾವಿಗೀಡದ ಉಮೇಶ್ ಎಂಬಾತನಿಗೆ 3 ತಿಂಗಳ ಮಗುವಿದೆ. ಈತನ ಕುಟುಂಬ ಬೀದಿಪಾಲು ಮಾಡಿದ ಕಾರ್ಖಾನೆ ಮಾಲೀಕರು ಹಾಗೂ ಏಜೆನ್ಸಿದಾರರಿಬ್ಬರು ಪರಿಹಾರ ಕಟ್ಟಿಕೊಡುವಂತೆ ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nikhil Kumarswamy: ಸೋತ ನಿಖಿಲ್‌ಗೆ ಜಿಲ್ಲೆಯ ಪಕ್ಷ ಸಂಘಟನೆ ಹೊಣೆ
Ramanagara: ಆಸ್ಪತ್ರೆಯ ಶೌಚಾಲಯದ ಗುಂಡಿಯಲ್ಲಿ ನವಜಾತ ಶಿಶುವಿನ ಶವ ಪತ್ತೆ!
Channapatna: ಸ್ಮಶಾನಕ್ಕೆ ಜಾಗ ಬೇಕೆಂದು ತಾಲೂಕು ಕಚೇರಿಯೆದುರು ಶವವಿಟ್ಟು ಪ್ರತಿಭಟನೆ
Teacher: ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!
Road Mishap: ಬಸ್-ಕಾರು ನಡುವೆ ಡಿಕ್ಕಿ; ಮೂವರ ಸಾವು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
BBK11: ಆರಂಭದಿಂದಲೂ ಮಂಜು ಮೋಸದಿಂದಲೇ ಆಡುತ್ತಾ ಬರುತ್ತಿದ್ದಾರೆ.. ಮೋಕ್ಷಿತಾ ಕಣ್ಣೀರು
Adani ವಿದ್ಯುತ್ ಖರೀದಿ ಅಕ್ರಮ: ಆರೋಪ ತಳ್ಳಿ ಹಾಕಿದ ಜಗನ್ ರೆಡ್ಡಿ
Mangaluru: ಗಾಂಜಾ ಸೇವನೆ; ಪ್ರತ್ಯೇಕ ಪ್ರಕರಣ; ಇಬ್ಬರು ವಶಕ್ಕೆ
IFFI 2024; ಟಾಕ್ಸಿಕ್ ಗೆ ಅತ್ಯುತ್ತಮ ಪ್ರಶಸ್ತಿ, ವಿಕ್ರಾಂತ್ ಮಸ್ಸೆಗೆ ವಾರ್ಷಿಕ ಪುರಸ್ಕಾರ
Kasaragod: ಕಾರು ಢಿಕ್ಕಿ ಹೊಡೆಸಿ ವ್ಯಾಪಾರಿಯ 2 ಕೆಜಿ ಚಿನ್ನ ದರೋಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.