ಎಲ್ಲರಿಗೂ ಪಾಸ್‌ಪೋರ್ಟ್ ಅವಶ್ಯ
Team Udayavani, Mar 2, 2019, 7:16 AM IST
ಚನ್ನಪಟ್ಟಣ: ಪಾಸ್‌ಪೋರ್ಟ್ ಕೇವಲ ದೇಶಕ್ಕೆ ಹೋಗುವ ಉದ್ದೇಶಕ್ಕಾಗಿ ಇರುವ ವ್ಯವಸ್ಥೆಯಲ್ಲ. ಅದು ದೇಶದ ಪ್ರತಿಯೊಬ್ಬ ನಾಗರಿಕರು ಹೊಂದಬೇಕಾದ ಅವಶ್ಯ ಗುರುತಿನ ಚೀಟಿಯಾಗಿದೆ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದರು.
ಪಟ್ಟಣದ ಪ್ರಧಾನ ಅಂಚೆ ಕಚೇರಿಯ ಪಕ್ಕದಲ್ಲಿ ನಿರ್ಮಿಸಿರುವ ನೂತನ ಅಂಚೆ ಕಚೇರಿ ಪಾಸ್‌ಪೋರ್ಟ್ ಸೇವಾ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಪಾಸ್‌ಪೋರ್ಟ್ ಅನ್ನು ಹಲವು ದಾಖಲಾತಿಗಳನ್ನು ಪರಿಶೀಲನೆ ನಡೆಸಿ ನೀಡಲಾಗುತ್ತದೆ. ಜತೆಗೆ ಪೊಲೀಸ್ ಪರಿಶೀಲನೆಯೂ ಆಗಿರುತ್ತದೆ. ಆಧಾರ್, ಎಪಿಕ್ ಕಾರ್ಡ್‌ಗಳಿದ್ದರೂ ಪಾಸ್‌ಪೋರ್ಟ್ ದೇಶದ ನಾಗರಿಕರು ಅಗತ್ಯವಾಗಿ ಪಡೆದುಕೊಳ್ಳಬೇಕಿದೆ ಎಂದರು.
ಲೋಕಸಭಾ ಕ್ಷೇತ್ರಗಳಲ್ಲಿ ಸೇವಾ ಕೇಂದ್ರ ಆರಂಭ: ಪಾಸ್‌ಪೋರ್ಟ್ ಪರಿಶೀಲನೆ ಹಾಗೂ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ದೂರದ ಬೆಂಗಳೂರು ಅಥವಾ ಮೈಸೂರು ನಗರಗಳಿಗೆ ಈ ಹಿಂದೆ ಹೋಗಬೇಕಿತ್ತು. ದಿನವಿಡೀ ಕಾಲ ಕಳೆಯಬೇಕಿತ್ತು. ಆದರೆ, ಇದೀಗ ಎಲ್ಲಾ ವಿಧಾನಗಳನ್ನು ಸರಳೀಕರಿಸಿ ಹತ್ತಿರದಲ್ಲೇ ಸೇವೆ ಸಿಗುವಂತೆ ಭಾರತ ಸರ್ಕಾರ ದೇಶದೆಲ್ಲೆಡೆ 400 ಸೇವಾ ಕೇಂದ್ರಗಳನ್ನು ತೆರೆಯಲು ಮುಂದಾಗಿದೆ. ಕರ್ನಾಟಕದಲ್ಲಿಯೂ ಪ್ರತಿ ಲೋಕಸಭಾ ಕ್ಷೇತ್ರಗಳಲ್ಲಿ ಒಂದರಂತೆ ಅಂಚೆ ಇಲಾಖೆ ಸಹಯೋಗದೊಂದಿಗೆ ಸೇವಾ ಕೇಂದ್ರ ತೆರೆಯಲಾಗುತ್ತಿದೆ, ಸಾರ್ವಜನಿಕರು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ತಂತ್ರಜ್ಞಾನದಿಂದ ಅಂಚೆ ಮೂಲೆಗುಂಪು: ಈ ಹಿಂದೆ ಅಂಚೆ ಇಲಾಖೆ ಗ್ರಾಮೀಣ ಭಾಗದಲ್ಲಿ ಮಾಹಿತಿ ಸಂವಹನಕ್ಕಾಗಿ ಸಾಕಷ್ಟು ಶ್ರಮಿಸಿದೆ. ಅಂಚೆ ಇಲಾಖೆ ಇಲ್ಲದಿದ್ದರೆ ಯಾವುದೇ ಮಾಹಿತಿ ರವಾನೆಯಾಗುತ್ತಿರಲಿಲ್ಲ. ವರ್ಷಗಟ್ಟಲೆ ಜನಸೇವೆ ಸಲ್ಲಿಸಿದ ಇಲಾಖೆ ಇತ್ತೀಚಿನ ದಿನಗಳಲ್ಲಿ ತಂತ್ರಜಾnನ ಬೆಳೆದಂತೆ ಮೂಲೆಗುಂಪಾಗುತ್ತಿದೆ. ಅದನ್ನು ತಪ್ಪಿಸಲು ಅಂಚೆ ಸೇವೆಯ ಜತೆಗೆ ಬ್ಯಾಂಕಿಂಗ್, ಜೀವ ವಿಮೆ, ಪೆನನ್ ಸ್ಕೀಂ ಹೀಗೆ ಇತರೆ ಸೇವೆಗಳನ್ನು ನೀಡಲು ಭಾರತ ಸರ್ಕಾರ ಮುಂದಾಗಿದೆ ಎಂದು ತಿಳಿಸಿದರು.
ಸನಿಹದಲ್ಲೇ ಪಾಸ್‌ಪೋರ್ಟ್ ಸೇವೆ: ಪ್ರಾದೇಶಿಕ ಪಾಸ್‌ಪೋರ್ಟ್ ಅಧಿಕಾರಿ ಭರತ್‌ಕುಮಾರ್ ಕುತ್ತಾಟಿ ಮಾತನಾಡಿ, ಸಾರ್ವಜನಿಕರಿಗೆ ಪಾಸ್ ಪೋರ್ಟ್ ಸೇವೆ ಸನಿಹದಲ್ಲೇ ಸಿಗುವಂತೆ ಮಾಡುವ ಉದ್ದೇಶದಿಂದ ಅಂಚೆ ಇಲಾಖೆ ಸಹಯೋಗದೊಂದಿಗೆ ಸೇವಾ ಕೇಂದ್ರ ಆರಂಭಿಸಲಾಗುತ್ತಿದೆ. ಅಂಚೆ ಇಲಾಖೆಯ ಸಿಬ್ಬಂದಿ ಹಾಗೂ ವಿದೇಶಾಂಗ ಇಲಾಖೆ ಅಧಿಕಾರಿ ಸಾರ್ವಜನಿಕರಿಗೆ ಸೇವೆ ಸಲ್ಲಿಸಲಿದ್ದಾರೆ. ಪ್ರತಿಯೊಬ್ಬರೂ ಪಾಸ್‌ಪೋರ್ಟ್ ನೀಡುವುದು ಇದರ ಪ್ರಮುಖ ಉದ್ದೇಶವಾಗಿದೆ ಎಂದರು.
ಪಾಸ್‌ಪೋರ್ಟ್ ಪೌರತ್ವದ ಸಂಕೇತ: ಪಾಸ್ ಪೋರ್ಟ್ ಸೇವೆ ಸಾರ್ವಜನಿಕರಿಗೆ 10-12 ದಿನಗಳಲ್ಲಿ ಲಭ್ಯವಾಗಬೇಕಿದ್ದರೂ ಪೊಲೀಸ್ ಪರಿಶೀಲನೆ ತಡವಾಗುತ್ತಿರುವುದರಿಂದ ಪ್ರಕ್ರಿಯೆ ತಡವಾಗುತ್ತಿದೆ. ಆನ್‌ಲೈನ್‌ನಲ್ಲೇ ಎಲ್ಲ ಪ್ರಕ್ರಿಯೆ ನಡೆಯಬೇಕಿರುವುದರಿಂದ ತಡವಾಗುವುದಿಲ್ಲ. ಸಾರ್ವಜನಿಕರು ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಿ ನಿಗದಿಯಾದ ದಿನಾಂಕದಂದು ಸೇವಾ ಕೇಂದ್ರಕ್ಕೆ ಭೇಟಿ ನೀಡಿ ದಾಖಲಾತಿಗಳನ್ನು ಒದಗಿಸಬೇಕು. ಪಾಸ್‌ಪೋರ್ಟ್ ದೇಶದ ಪೌರತ್ವದ ಸಂಕೇತವಾಗಿದೆ ಎಂದು ಹೇಳಿದರು.
ಸದ್ಬಳಕೆಯಿಂದ ಉದ್ದೇಶ ಸಾರ್ಥಕ: ಬೆಂಗಳೂರು ಭಾಗದ ಪೋಸ್ಟ್ ಮಾಸ್ಟರ್ ಜನರಲ್ ಕರ್ನಲ್ ಅರವಿಂದ ವರ್ಮ ಮಾತನಾಡಿ, ಪಾಸ್‌ಪೋರ್ಟ್ ಸೇವಾ ಕೇಂದ್ರ ಅಂಚೆ ಕಚೇರಿ ಪಕ್ಕದಲ್ಲೇ ಸ್ಥಾಪನೆಯಾಗಬೇಕೆಂಬ ನಿಯಮವಿದೆ. ಅನ್ಯಕೆಲಸಕ್ಕಾಗಿ ವಿನ್ಯಾಸಗೊಂಡಿದ್ದ ಕಚೇರಿಯನ್ನೇ ಸೇವಾ ಕೇಂದ್ರಕ್ಕೆ ಬಳಕೆ ಮಾಡಲಾಗುತ್ತಿದೆ. ಸಾರ್ವಜನಿಕರು ಕೇಂದ್ರದ ಸದ್ಬಳಕೆ ಮಾಡಿಕೊಂಡರೆ ಉದ್ದೇಶ ಸಾರ್ಥಕವಾಗುತ್ತದೆ ಎಂದರು. ಈ ವೇಳೆಯಲ್ಲಿ ಅಂಚೆ ಅಧೀಕ್ಷಕ ಎನ್.ವಿ. ಸತ್ಯನಾರಾಯಣ ರಾಜು, ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ವೀಣಾ ಕುಮಾರಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!
By Election: ದೇವೇಗೌಡರನ್ನು 1994ರಲ್ಲಿ ಮುಖ್ಯಮಂತ್ರಿ ಮಾಡಿದ್ದೇ ನಾನು: ಸಿಎಂ ಸಿದ್ದರಾಮಯ್ಯ
Ramanagara: ಆರು ಟ್ರಾನ್ಸ್ ಫಾರ್ಮರ್ ಗಳ ಕಳವು
Congress Government: ಉಪಚುನಾವಣೆ ಬಳಿಕ ಗೃಹಲಕ್ಷ್ಮಿ ಸ್ಥಗಿತ: ಎಚ್.ಡಿ.ದೇವೇಗೌಡ ಭವಿಷ್ಯ
By Election: ಗದ್ದುಗೆ ಸೈನಿಕ ಯೋಗೇಶ್ವರ್‌ಗೋ? ನಿಖಿಲ್ ಕುಮಾರಸ್ವಾಮಿಗೋ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.