ಸಿಎಂ ತವರು ಜಿಲ್ಲೆಯಲ್ಲಿ ಬೆಟ್ಟದಷ್ಟು ನಿರೀಕ್ಷೆ
Team Udayavani, Feb 8, 2019, 7:08 AM IST
ರಾಮನಗರ: ಬೊಂಬೆ ನಗರಿಯ ಶಾಸಕ, ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಫೆಬ್ರವರಿ 8ರ ಶುಕ್ರವಾರ ಮಂಡಿಸಲಿರುವ 2019-20ನೇ ಸಾಲಿನ ಬಜೆಟ್ ಬಗ್ಗೆ ಅವರ ರಾಜಕೀಯ ತವರು ಜಿಲ್ಲೆಯಲ್ಲಿ ಬೆಟ್ಟದಷ್ಟು ನಿರೀಕ್ಷೆಗಳಿವೆ.
2018ರ ಜುಲೈ 5ರಂದು ಅವರು ಮಂಡಿಸಿದ್ದ ಬಜೆಟ್‌ನಲ್ಲಿ ಕೆಲವು ಹೊಸ ಯೋಜನೆಗಳನ್ನು ಘೋಷಿಸಿದ್ದರು. ಈ ಪೈಕಿ ಬಹುತೇಕ ಯೋಜನೆಗಳು ಆರಂಭವನ್ನೇ ಕಂಡಿಲ್ಲ. ಆದರೂ ಸಿಎಂ ಕುಮಾರಸ್ವಾಮಿ ಅವರ ಬಗ್ಗೆ ಇರುವ ಭರವಸೆ ಇನ್ನೂ ಕಮರಿಲ್ಲ. ಮಾದರಿ ಜಿಲ್ಲೆಯನ್ನಾಗಿ ರೂಪಿಸುವೆ ಎಂದು ಪದೇ ಪದೇ ಹೇಳಿಕೊಳ್ಳುತ್ತಿರುವ ಅವರು, ಈ ಬಾರಿಯ ಬಜೆಟ್‌ನಲ್ಲಿ ಜಿಲ್ಲೆಯನ್ನು ಮಾದರಿಯಾಗಿಸುವ ಎಲ್ಲಾ ಕೊಡುಗೆಗಳನ್ನು ನೀಡಲಿದ್ದಾರೆ ಎಂದು ಜಿಲ್ಲೆಯ ಜನತೆ ನಿರೀಕ್ಷೆಯಲ್ಲಿದ್ದಾರೆ.
ಜಿಲ್ಲೆಯ ನಿರೀಕ್ಷೆಗಳು: ಪ್ರಸ್ತುತ ಇಡೀ ಜಿಲ್ಲೆಯನ್ನು ಕಸ ವಿಲೇವಾರಿ ಸಮಸ್ಯೆ, ಶಾಶ್ವತ ನೀರಾವರಿ ಸಮಸ್ಯೆ ಕಾಡುತ್ತಿದೆ. ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಭರವಸೆಗಳು ಹರಿಯುತ್ತಿವೆಯಾದರು ಏನೂ ಕಾರ್ಯರೂಪಕ್ಕೆ ಬರುತ್ತಿಲ್ಲ. ಜಿಲ್ಲೆಯಲ್ಲಿ ಬಹುತೇಕ ರಸ್ತೆಗಳು ಹದಗೆಟ್ಟಿವೆ. ರೈತರು ತಮ್ಮ ಸಾಲ ಮನ್ನಾ ಇನ್ನೂ ಆಗಿಲ್ಲ ಎಂದು ದೂರುತ್ತಿದ್ದಾರೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ, ಮೂಲಸೌಕರ್ಯಗಳ ಕೊರತೆಗಳು ಕಾಡುತ್ತಿವೆ. ಇವುಗಳನ್ನೆಲ್ಲ ಸಿಎಂ ಅವರು ಪರಿಹರಿಸುತ್ತಾರೆ. ಜಿಲ್ಲೆಯಲ್ಲಿ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸುವ ಬಗ್ಗೆ ಸ್ವಯಂ ಕುಮಾರಸ್ವಾಮಿಯವರೇ ಅಭಿಪ್ರಾಯ ಪಟ್ಟಿದ್ದರು. ರೇಷ್ಮೆ, ಹೈನೋದ್ಯಮದ ಜೊತೆಗೆ ಹೊಸ ವಹಿವಾಟಿನ ಅಧ್ಯಾಯ ತೆರೆದುಕೊಳ್ಳಲಿದೆ ಎಂಬ ಬೃಹತ್ ನಿರೀಕ್ಷೆಯನ್ನು ಜನತೆ ಹೊಂದಿದ್ದಾರೆ.
ಅವಳಿ ನಗರದ ಕನಸು ನನಸಾಗಲಿ: ಕಳೆದ ಚುನಾವಣೆ ವೇಳೆ ಮುಖ್ಯಮಂತ್ರಿಗಳು ರಾಮನಗರ ಮತ್ತು ಚನ್ನಪಟ್ಟಣ ನಗರಗಳನ್ನು ಅವಳಿ ನಗರಗಳಂತೆ ಅಭಿವೃದ್ಧಿಪಡಿಸುವುದಾಗಿ ಹೇಳಿದ್ದರು. ಎರಡೂ ನಗರಗಳ ಮಧ್ಯೆ ಬೃತಹ್ ಕೃಷಿ ಮಾರುಕಟ್ಟೆಯನ್ನು ಸ್ಥಾಪಿಸಲು ಚಿಂತಿಸಿರುವುದಾಗಿ ತಿಳಿಸಿದ್ದರು.
ಈ ನಿಟ್ಟಿನಲ್ಲಿ ಅವರು ಈ ಬಾರಿಯ ಆಯವ್ಯಯದಲ್ಲಿ ಸ್ಪಷ್ಟ ಚಿತ್ರಣ ಕೊಟ್ಟು ಅವಶ್ಯಕತೆ ಇರುವಷ್ಟು ಹಣವನ್ನು ಮೀಸಲಿಡಲ್ಲಿದ್ದಾರೆ ಎಂಬ ನಿರೀಕ್ಷೆಯನ್ನು ರಾಮನಗರ ಮತ್ತು ಚನ್ನಪಟ್ಟಣ ನಗರವಾಸಿಗಳು ವ್ಯಕ್ತಪಡಿಸಿದ್ದಾರೆ. ಅವಳಿ ನಗರ ಸಾಕಾರವಾದರೆ ವ್ಯಾಪಾರ, ವಹಿವಾಟು ವೃದ್ಧಿಸಿ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಕಾರಣವಾಗಲಿದೆ ಎಂಬುದು ಸಾರ್ವಜನಿಕರ ಹಂಬಲ.
ಮಾವು ಸಂಸ್ಕರಣಾ ಘಟಕಕ್ಕೆ ಮತ್ತೆ ಆಗ್ರಹ: ಜಿಲ್ಲೆ ಮಾವು ಬೆಳೆಗೆ ಖ್ಯಾತಿ ಹೊಂದಿದೆ. ಮಾವು ಸಂಸ್ಕರಣಾ ಘಟಕವನ್ನು ಸ್ಥಾಪಿಸಲು ಜಿಲ್ಲೆಯ ಜನತೆ ಹಲವು ವರ್ಷಗಳಿಂದ ಒತ್ತಾಯಿಸುತ್ತಲೇ ಇದ್ದಾರೆ. ಅದು ಈ ಬಾರಿಯಾದರೂ ಸಾಕಾರವಾಗುತ್ತದೆ ಎಂಬ ನಿರೀಕ್ಷೆ ಇದೆ.
ಹಾಲಿ ಇರುವ ರೇಷ್ಮೆ ಗೂಡು ಮಾರುಕಟ್ಟೆಯ ಜೊತೆಗೆ ಅಂತಾರಾಷ್ಟ್ರೀಯ ಮಟ್ಟದ ಗೂಡು ಮಾರುಕಟ್ಟೆ ನಿರ್ಮಣ, ರೇಷ್ಮೆ ಗೂಡು ಬ್ಯಾಂಕ್ ಸ್ಥಾಪನೆ, ರೈತರು ಮತ್ತು ರೀಲರ್‌ಗಳ ಇಬ್ಬರನ್ನು ಗಮನದಲ್ಲಿರಿಸಿಕೊಂಡು ರೇಷ್ಮೆ ಉದ್ಯಮ ಬಲಗೊಳಿಸುವ ಯೋಜನೆಗಳು, ರೇಷ್ಮೆ ನೂಲು ವಿಚಾರದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ರೀಲಿಂಗ್ ಪಾರ್ಕ್ ಸ್ಥಾಪನೆ. ರಾಜೀವ್ ಗಾಂಧಿ ವಿವಿ ನಿರ್ಮಾಣ, ಕೃಷಿ ಉತ್ಪನ್ನಗಳ ಶೇಖರಣೆಗೆ ಅತ್ಯಾಧುನಿಕ ಶೀತಲ ಘಟಕಗಳ ಸ್ಥಾಪನೆಗೆ ಬಜೆಟ್‌ನಲ್ಲಿ ಸೂಕ್ತ ಮೊತ್ತವನ್ನು ಮೀಸಲಿಡುವಂತೆ ಜಿಲ್ಲೆಯ ಜನತೆ ಆಗ್ರಹಿಸಿದ್ದಾರೆ.
ಬಿಡದಿವರೆಗೂ ಮೆಟ್ರೋ ವ್ಯವಸ್ಥೆಗೆ ಒತ್ತಾಯ: ಬೆಂಗಳೂರು ಮಹಾನಗರದ ಮಗ್ಗಲಲ್ಲೇ ಇರುವ ರಾಮನಗರ ಜಿಲ್ಲೆ ಬೆಂಗಳೂರಿಗೆ ಪರ್ಯಾವಾಗಿ ಬೆಳೆವಣಿಗೆ ಕಾಣುವ ಎಲ್ಲಾ ಸಾಧ್ಯತೆಗಳು ಇರುವುದರಿಂದ ಮೆಟ್ರೋ ಸೇರಿದಂತೆ ಸಾರಿಗೆ ವ್ಯವಸ್ಥೆಯನ್ನು ಬಲಗೊಳಿಸಬೇಕಾಗಿದೆ. ಬೆಂಗಳೂರು ನಗರಕ್ಕೆ ರಾಮನಗರ ಜಿಲ್ಲೆಯ ನಗರ, ಪಟ್ಟಣಗಳನ್ನು ಸ್ಯಾಟಿಲೈಟ್ ನಗರಗಳನ್ನಾಗಿ ರೂಪಿಸುವ ಚಿಂತನೆ ಸರ್ಕಾರಕ್ಕೆ ಇದ್ದರೆ ಮೊದಲು ರಸ್ತೆ ಮುಂತಾದ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಜಿಲ್ಲೆಯ ಜನತೆ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ರೇಷ್ಮೆ ಉಪಉತ್ಪನ್ನಗಳ ವಿಚಾರ ಏನಾಯ್ತು?: ರೇಷ್ಮೆ ಉದ್ಯಮವನ್ನು ಬಲಗೊಳಿಸಲು ಎಚ್.ಡಿ.ಕುಮಾರ ಸ್ವಾಮಿ ಅವರು ರೇಷ್ಮೆ ಮೂಲಕ ಉಗುರು ಪಾಲಿಷ್, ಲಿಪ್‌ಸ್ಟಿಕ್ ಹೀಗೆ ಅನೇಕ ಉಪ ಉತ್ಪನ್ನಗಳ ತಂತ್ರಜ್ಞಾನವನ್ನು ಯುವ ಸಮುದಾಯಕ್ಕೆ ಪರಿಚಯಿಸಿ, ತರಬೇತಿ ನೀಡುವುದಾಗಿ ತನ್ಮೂಲಕ ಗ್ರಾಮೀಣ ಯುವ ಜನತೆಯನ್ನು ಸಶಕ್ತರನ್ನಾಗಿಸಲು ನೀಡಿದ್ದ ಭರವಸೆ ಏನಾಯ್ತು ಎಂದು ಜಿಲ್ಲೆಯ ಜನತೆ ಪ್ರಶ್ನಿಸಿದ್ದಾರೆ.
2018ರ ಜುಲೈ 5ರಂದು ಎಚ್.ಡಿ.ಕುಮಾರಸ್ವಾಮಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬಜೆಟ್‌ನ ವಿಸ್ತೃತ ರೂಪವನ್ನು ಮಂಡಿಸಿದ್ದರು. ಆಗ ರಾಮನಗರ ಜಿಲ್ಲೆಗೆ ಸಿಕ್ಕ ಯೋಜನೆಗಳು ಏನಾಗಿವೆ ಎಂಬುದುರ ಬಗ್ಗೆ ಇಲ್ಲೊಂದು ನೋಟವಿದೆ. ರಾಮನಗದಲ್ಲಿ 300 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ತೆರೆಯಲು 40 ಕೋಟಿ ರೂ. ಒದಗಿಸಲಾಗಿದೆ. ಆದರೆ, ಈ ಆಸ್ಪತ್ರೆ ಎಂತಹದ್ದು, ಎಷ್ಟು ಭೂಮಿ ಬೇಕು ಇತ್ಯಾದಿ ಮೂಲ ಮಾಹಿತಿಯೇ ಜಿಲ್ಲಾಡಳಿತಕ್ಕೆ ಲಭ್ಯವಾಗಿಲ್ಲ.
ಚನ್ನಪಟ್ಟಣದಲ್ಲಿರುವ ಕರ್ನಾಟಕ ರೇಷ್ಮೆ ಕೈಗಾರಿಕಾ ನಿಗಮದ (ಕೆಎಸ್‌ಐಸಿ) ಘಟಕದ ಪುನಶ್ಚೇತನಕ್ಕಾಗಿ 5 ಕೋಟಿ ರೂ. ನೀಡಲಾಗಿತ್ತು. ಇದರಲ್ಲಿ ಒಂದು ಘಟಕ ಕಾರ್ಯಾರಂಭವಾಗಿದ್ದು, ಎರಡನೇ ಘಟಕ ಆರಂಭಕ್ಕೆ ಇದೀಗ ಸಿದ್ಧತೆಗಳು ಆರಂಭವಾಗಿದೆ. 5 ಕೋಟಿ ಪೈಕಿ ಎಷ್ಟು ಅನುದಾನ ಬಿಡುಗಡೆ ಆಗಿದೆ ಎಂಬುದು ಸ್ಥಳೀಯ ಅಧಿಕಾರಿಗಳ ಬಳಿ ಮಾಹಿತಿ ಇಲ್ಲ.
ಕನಕಪುರದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಕಳೆದ ಬಜೆಟ್‌ನಲ್ಲಿ ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕನಕಪುರ ತಾಲೂಕು ತುಂಗಣಿ – ಕುರಿಗೌಡನದೊಡ್ಡಿ ಬಳಿ ಭೂಮಿ ಗುರುತಿಸಲಾಗಿದೆ. ಆದರೆ, ಕಳೆದ ಬಜೆಟ್‌ನಲ್ಲಿ ಹಣ ಮೀಸಲಿಡಲಿಲ್ಲ. ಈ ಬಾರಿ ಮೀಸಲಿಡುವ ಭರವಸೆಯನ್ನು ಜಿಲ್ಲೆಯ ಜನತೆ ಹೊಂದಿದ್ದಾರೆ.
ಚನ್ನಪಟ್ಟಣದಲ್ಲಿ ಆರ್ಟ್ಸ್ ಮತ್ತು ಕ್ರಾಫ್ಟ್ ವಿಲೇಜ್ ಸ್ಥಾಪನೆಯ ಘೋಷಣೆಯಾಗಿತ್ತು. ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದು ಬಿಟ್ಟರೆ ಇನ್ನೇನು ಪ್ರಗತಿ ಆಗಿಲ್ಲ. ಕಣ್ವ ಜಲಾಶಯದ ಪ್ರದೇಶದಲ್ಲಿ ಚಿಲ್ಡ್ರನ್ಸ್ ವರ್ಲ್ಡ್ ಸ್ಥಾಪನೆಗೆ 10 ಕೋಟಿ ಮೀಸಲಿಡಲಾಗಿತ್ತು. ಈ ಪೈಕಿ 1 ಕೋಟಿ ರೂ. ಸರ್ಕಾರ ಬಿಡುಗಡೆ ಮಾಡಿದೆ ಎಂದು ತಿಳಿದು ಬಂದಿದೆ. ಜಿಲ್ಲಾ ಪ್ರವಾಸೋದ್ಯಮ ಇಲಾಖೆಗೆ ಈ ಹಣ ಇನ್ನೂ ವರ್ಗಾವಣೆ ಆಗಿಲ್ಲ.
ಕಳೆದ ಬಜೆಟ್‌ನಲ್ಲಿ ರಾಮನಗರದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಚಲನಚಿತ್ರ ವಿಶ್ವವಿದ್ಯಾನಿಲಯವನ್ನು ತೆರೆಯಲು 30 ಕೋಟಿ ಬಂಡವಾಳ ನೀಡಲು ಉದ್ದೇಶಿಸಲಾಗಿತ್ತು. ಇದಲ್ಲದೆ, ರಾಮನಗರದ ಫಿಲ್ಮ್ ಸಿಟಿ ಸ್ಥಾಪನೆ ಬಗ್ಗೆಯೂ ಉಲ್ಲೇಖವಾಗಿತ್ತು. ಆದರೆ, ಇದಕ್ಕೆ ಬೇಕಾದ 300 ಎಕರೆ ಭೂಮಿ ಸಿಗದ ಕಾರಣ ಮತ್ತು ಮೈಸೂರು ನಿವಾಸಿಗಳ ಒತ್ತಾಯಕ್ಕೆ ಮಣಿದ ಕುಮಾರಸ್ವಾಮಿ ಅವರು ಈ ಯೋಜನೆಗಳನ್ನು ಮೈಸೂರಿಗೆ ವರ್ಗಾಯಿಸಿದ್ದಾರೆ.
ಕಳೆದ ಬಜೆಟ್‌ನಲ್ಲಿ ಸಿಕ್ಕಿದ್ದು, ಈಡೇರಿದ್ದು ಏನು?: 2018ರ ಜುಲೈ 5ರಂದು ಎಚ್.ಡಿ.ಕುಮಾರಸ್ವಾಮಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬಜೆಟ್‌ನ ವಿಸ್ತೃತ ರೂಪವನ್ನು ಮಂಡಿಸಿದ್ದರು. ಆಗ ರಾಮನಗರ ಜಿಲ್ಲೆಗೆ ಸಿಕ್ಕ ಯೋಜನೆಗಳು ಏನಾಗಿವೆ ಎಂಬುದುರ ಬಗ್ಗೆ ಇಲ್ಲೊಂದು ನೋಟವಿದೆ. ರಾಮನಗದಲ್ಲಿ 300 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ತೆರೆಯಲು 40 ಕೋಟಿ ರೂ. ಒದಗಿಸಲಾಗಿದೆ.
ಆದರೆ, ಈ ಆಸ್ಪತ್ರೆ ಎಂತಹದ್ದು, ಎಷ್ಟು ಭೂಮಿ ಬೇಕು ಇತ್ಯಾದಿ ಮೂಲ ಮಾಹಿತಿಯೇ ಜಿಲ್ಲಾಡಳಿತಕ್ಕೆ ಲಭ್ಯವಾಗಿಲ್ಲ. ಚನ್ನಪಟ್ಟಣದಲ್ಲಿರುವ ಕರ್ನಾಟಕ ರೇಷ್ಮೆ ಕೈಗಾರಿಕಾ ನಿಗಮದ (ಕೆಎಸ್‌ಐಸಿ) ಘಟಕದ ಪುನಶ್ಚೇತನಕ್ಕಾಗಿ 5 ಕೋಟಿ ರೂ. ನೀಡಲಾಗಿತ್ತು. ಇದರಲ್ಲಿ ಒಂದು ಘಟಕ ಕಾರ್ಯಾರಂಭವಾಗಿದ್ದು, ಎರಡನೇ ಘಟಕ ಆರಂಭಕ್ಕೆ ಇದೀಗ ಸಿದ್ಧತೆಗಳು ಆರಂಭವಾಗಿದೆ. 5 ಕೋಟಿ ಪೈಕಿ ಎಷ್ಟು ಅನುದಾನ ಬಿಡುಗಡೆ ಆಗಿದೆ ಎಂಬುದು ಸ್ಥಳೀಯ ಅಧಿಕಾರಿಗಳ ಬಳಿ ಮಾಹಿತಿ ಇಲ್ಲ.
ಕನಕಪುರದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಕಳೆದ ಬಜೆಟ್‌ನಲ್ಲಿ ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕನಕಪುರ ತಾಲೂಕು ತುಂಗಣಿ – ಕುರಿಗೌಡನದೊಡ್ಡಿ ಬಳಿ ಭೂಮಿ ಗುರುತಿಸಲಾಗಿದೆ. ಆದರೆ, ಕಳೆದ ಬಜೆಟ್‌ನಲ್ಲಿ ಹಣ ಮೀಸಲಿಡಲಿಲ್ಲ. ಈ ಬಾರಿ ಮೀಸಲಿಡುವ ಭರವಸೆಯನ್ನು ಜಿಲ್ಲೆಯ ಜನತೆ ಹೊಂದಿದ್ದಾರೆ. ಚನ್ನಪಟ್ಟಣದಲ್ಲಿ ಆರ್ಟ್ಸ್ ಮತ್ತು ಕ್ರಾಫ್ಟ್ ವಿಲೇಜ್ ಸ್ಥಾಪನೆಯ ಘೋಷಣೆಯಾಗಿತ್ತು.
ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದು ಬಿಟ್ಟರೆ ಇನ್ನೇನು ಪ್ರಗತಿ ಆಗಿಲ್ಲ. ಕಣ್ವ ಜಲಾಶಯದ ಪ್ರದೇಶದಲ್ಲಿ ಚಿಲ್ಡ್ರನ್ಸ್ ವರ್ಲ್ಡ್ ಸ್ಥಾಪನೆಗೆ 10 ಕೋಟಿ ಮೀಸಲಿಡಲಾಗಿತ್ತು. ಈ ಪೈಕಿ 1 ಕೋಟಿ ರೂ. ಸರ್ಕಾರ ಬಿಡುಗಡೆ ಮಾಡಿದೆ ಎಂದು ತಿಳಿದು ಬಂದಿದೆ. ಜಿಲ್ಲಾ ಪ್ರವಾಸೋದ್ಯಮ ಇಲಾಖೆಗೆ ಈ ಹಣ ಇನ್ನೂ ವರ್ಗಾವಣೆ ಆಗಿಲ್ಲ.
ಕಳೆದ ಬಜೆಟ್‌ನಲ್ಲಿ ರಾಮನಗರದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಚಲನಚಿತ್ರ ವಿಶ್ವವಿದ್ಯಾನಿಲಯವನ್ನು ತೆರೆಯಲು 30 ಕೋಟಿ ಬಂಡವಾಳ ನೀಡಲು ಉದ್ದೇಶಿಸಲಾಗಿತ್ತು. ಇದಲ್ಲದೆ, ರಾಮನಗರದ ಫಿಲ್ಮ್ ಸಿಟಿ ಸ್ಥಾಪನೆ ಬಗ್ಗೆಯೂ ಉಲ್ಲೇಖವಾಗಿತ್ತು. ಆದರೆ, ಇದಕ್ಕೆ ಬೇಕಾದ 300 ಎಕರೆ ಭೂಮಿ ಸಿಗದ ಕಾರಣ ಮತ್ತು ಮೈಸೂರು ನಿವಾಸಿಗಳ ಒತ್ತಾಯಕ್ಕೆ ಮಣಿದ ಕುಮಾರಸ್ವಾಮಿ ಅವರು ಈ ಯೋಜನೆಗಳನ್ನು ಮೈಸೂರಿಗೆ ವರ್ಗಾಯಿಸಿದ್ದಾರೆ.
ಮಾಗಡಿ ತಾಲೂಕಿನ ನಿರೀಕ್ಷೆಗಳೇನು?
ಮಾಗಡಿ: ಹಿಂದುಳಿದ ತಾಲೂಕು ಹಣೆಪಟ್ಟಿ ಹೊತ್ತಿರುವ ಜಿಲ್ಲೆಯ ಮಾಗಡಿ ತಾಲೂಕಿನ ಅಭಿವೃದ್ಧಿಗೂ ಅಲ್ಲಿನ ಜನತೆ ನಿರೀಕ್ಷೆಗಳನ್ನು ಇರಿಸಿಕೊಂಡಿದ್ದಾರೆ. ಮಾಗಡಿ ತಾಲೂಕಿನ ಕೆರೆಗಳನ್ನು ತುಂಬಿಸಿ, ಅಂತರ್ಜಲ ವೃದ್ಧಿಸುವ ಶ್ರೀರಂಗ ಏತ ನೀರಾವರಿ ಯೋಜನೆಗೆ ಹೆಚ್ಚಿನ ಅನುದಾನ ಒದಗಿಸುವುದು ಮತ್ತು ಕಾಮಗಾರಿಯನ್ನು ತಕ್ಷಣ ಪೂರ್ಣಗೊಳಿಸುವುದು. ಕುಡಿಯುವ ನೀರು ಮತ್ತು ಕೃಷಿ ಚಟುವಟಿಕೆಗಳಿಗೆ ಪೂರಕವಾಗುವ ಕಣ್ವ ಜಲಾಶಯದಿಂದ ನೀರನ್ನು ವೈ.ಜಿ.ಗುಡ್ಡ ಮತ್ತು ಮಂಚನಬೆಲೆಗೆ ಹರಿಸುವ ಯೋಜನೆ ತಕ್ಷಣ ಜಾರಿ ಮಾಡುವುದು.
ಕೆಂಪಾಪುರ ಗ್ರಾಮ ಅಭಿವೃದ್ಧಿಗೆ 50 ಕೋಟಿ ರೂ. ಅನುದಾನ ಮಂಜೂರಾಗಿದೆಯಾದರೂ, ಅಭಿವೃದ್ಧಿಗೆ ಯೋಜನೆ ತಯಾರಾಗಿಲ್ಲ ಎಂಬ ಅಸಮಾಧಾನ ಅಲ್ಲಿನ ನಾಗರಿಕರಲ್ಲಿದೆ. ತಿಪ್ಪಗೊಂಡನಹಳ್ಳಿ ಜಲಾಶಯದ ನೀರು ಕಲುಷಿತಗೊಂಡಿದ್ದು, ಆ ನೀರನ್ನು ಶುದ್ಧೀಕರಿಸಿ ಕೃಷಿ ಚಟುವಟಿಕೆಗಳಿಗೆ ಹರಿಸುವುದು. ಮಾಗಡಿಯಲ್ಲೂ ಕೈಗಾರಿಕೆಗಳನ್ನು ಸ್ಥಾಪಿಸಿ, ಉದ್ಯೋಗ ಸೃಷ್ಟಿಸುವಂತೆ ಅಲ್ಲಿನ ಜನತೆ ಆಗ್ರಹಿಸಿದ್ದಾರೆ.
* ಬಿ.ವಿ.ಸೂರ್ಯ ಪ್ರಕಾಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Channapatna: ಕೆಲಸದ ಒತ್ತಡ ತಾಳಲಾರದೆ ಮುಖ್ಯ ಶಿಕ್ಷಕ ವಿಷ ಸೇವಿಸಿ ಆತ್ಮಹ*ತ್ಯೆ
Ramanagara: ಕಾಡಾನೆ ದಾಳಿಗೆ ರೈತ ಬಲಿ
Ramanagara:ನಾಯಿ ಜತೆ ಮೂವರ ಅನೈಸರ್ಗಿಕ ಲೈಂಗಿ*ಕ ಚಟುವಟಿಕೆ: ಓರ್ವ ಸೆರೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.