ರೇಷ್ಮೆ ಮಾರುಕಟ್ಟೆಗೆ ಬರಲಿದೆ ಫೇಸ್ ರೀಡಿಂಗ್ ತಂತ್ರಜ್ಞಾನ
Team Udayavani, May 6, 2023, 3:40 PM IST
ರಾಮನಗರ: ರೇಷ್ಮೆಗೂಡಿನ ಕಳವು, ರೈತರ ಮೇಲಿನ ದೌರ್ಜನ್ಯ ಹೀಗೆ ಅನಪೇಕ್ಷಿತ ವ್ಯಕ್ತಿಗಳಿಂದ ಏಷ್ಯಾದ ಅತಿದೊಡ್ಡ ರೇಷ್ಮೆ ಗೂಡಿನ ಮಾರುಕಟ್ಟೆ ಎನಿಸಿರುವ ರಾಮನಗರ ರೇಷ್ಮೆ ಮಾರುಕಟ್ಟೆಯಲ್ಲಿ ನಡೆಯು ತ್ತಿರುವ ಅನಪೇಕ್ಷಿತ ಬೆಳವಣಿಗೆಗಳಿಗೆ ಕಡಿವಾಣ ಹಾಕಲು ಮುಂದಾಗಿದ್ದು, ರೇಷ್ಮೆ ಮಾರು ಕಟ್ಟೆ ಇಲಾಖೆ ಇದೀಗ ಫೇಸ್ ರೀಡಿಂಗ್ ತಂತ್ರ ಜ್ಞಾನವನ್ನು ಮಾರುಕಟ್ಟೆಯಲ್ಲಿ ಅಳವಡಿಸಿಕೊಳ್ಳಲು ಮುಂದಾಗಿದೆ.
ನೂತನ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವು ದರಿಂದ ಮಾರುಟ್ಟೆಗೆ ಹೋಗಿ-ಬರುವವರ ಚಲನ ವನ್ನು ಗಮನಿಸಲು ಸಾಧ್ಯವಾಗುವ ಜೊತೆಗೆ, ಅನಗತ್ಯ ವ್ಯಕ್ತಿಗಳು ಮಾರುಕಟ್ಟೆಯನ್ನು ಪ್ರವೇಶಿಸಲು ನಿರ್ಬಂಧಿ ಸಲು ಸಹಕಾರಿಯಾಗಲಿದೆ. ಇತ್ತೀಚಿನ ದಿನಗಳಲ್ಲಿ ರಾಮನಗರ ರೇಷ್ಮೆ ಮಾರುಕಟ್ಟೆಯಲ್ಲಿ ನಡೆದ ಹಲವು ಸಮಸ್ಯೆಗಳಿಗೆ ಈ ತಂತ್ರಜ್ಞಾನ ಪರಿಹಾರ ನೀಡಲಿದೆ ಎಂದು ಅಧಿಕಾರಿಗಳು ನಂಬಿದ್ದಾರೆ.
ಮಾರುಕಟ್ಟೆ ಪ್ರವೇಶಕ್ಕೆ ನಿರ್ಬಂಧ: ಇತ್ತೀಚಿಗೆ ರೇಷ್ಮೆಗೂಡಿನ ಮಾರುಕಟ್ಟೆಯಲ್ಲಿ ರೀಲರ್ ಜೊತೆಯಲ್ಲಿ ಬಂದ ವ್ಯಕ್ತಿಯೊಬ್ಬರು ರೈತರು ತಂದಿದ್ದ ರೇಷ್ಮೆಗೂಡನ್ನು ಕಳವು ಮಾಡುತ್ತಿದ್ದ ಪ್ರಕರಣವನ್ನು ಮಾರುಕಟ್ಟೆ ಅಧಿಕಾರಿಗಳು ಪತ್ತೆ ಮಾಡಿದ್ದರು. ಇನ್ನು ರೇಷ್ಮೆ ಬೆಳೆಗಾರನ ಮೇಲೆ ಹಲ್ಲೆ ಮಾಡಿದ ಪ್ರಕರಣ ಸಹ ಸಾಕಷ್ಟು ಸದ್ದು ಮಾಡಿತ್ತು. ಈ ಕಾರಣದಿಂದ ಫೇಸ್ ರೀಡಿಂಗ್ ತಂತ್ರಜ್ಞಾನವನ್ನು ಅಳವಡಿಸುವ ಮೂಲಕ ಅನಗತ್ಯ ವ್ಯಕ್ತಿಗಳಿಗೆ ಪ್ರವೇಶದ್ವಾರದಲ್ಲೇ ಕಡಿವಾಣ ಹಾಕುವ ಪ್ರಯತ್ನಕ್ಕೆ ಮಾರುಕಟ್ಟೆ ಇಲಾಖೆ ಮುಂದಾಗಿದೆ.
ಏಷ್ಯಾದ ಅತಿದೊಡ್ಡ ರೇಷ್ಮೆ ಮಾರುಕಟ್ಟೆ ಎನಿಸಿರುವ ರಾಮನಗರ ಮಾರುಕಟ್ಟೆಯಲ್ಲಿ ಪ್ರತಿದಿನ 40 ರಿಂದ 50 ಸಾವಿರ ಕೆ.ಜಿ.ಯಷ್ಟು ರೇಷ್ಮೆಗೂಡಿನ ವಹಿವಾಟು ಇಲ್ಲಿ ನಡೆಯುತ್ತದೆ. ಮಾರುಕಟ್ಟೆಗೆ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ರೈತರು ಬರುತ್ತಾರೆ. ಮಾರುಕಟ್ಟೆಯಲ್ಲಿ ನೋಂದಾಯಿತ ರೀಲರ್‌ಗಳ ಸಂಖ್ಯೆ 600 ಇದ್ದು, ಒಬ್ಬ ರೀಲರ್‌ನೊಂದಿಗೆ 5ರಿಂದ 6 ಮಂದಿ ಬರುವ ಕಾರಣ ಮಾರುಕಟ್ಟೆಯಲ್ಲಿ ಪ್ರತಿದಿನ ನಾಲ್ಕರಿಂದ 5 ಸಾವಿರದಷ್ಟು ಜನ ಜಮಾವಣೆಗೊಳ್ಳುತ್ತಾರೆ. ಇದರಿಂದ ಮಾರುಕಟ್ಟೆಯಲ್ಲಿ ಹೆಚ್ಚಿನ ಜನಜಂಗುಳಿ ಉಂಟಾಗಿ ಇಲ್ಲದ ಸಮಸ್ಯೆಗಳಿಗೆ ಕಾರಣವಾಗಿದೆ. ಅನಗತ್ಯವಾಗಿ ಮಾರುಕಟ್ಟೆ ಪ್ರವೇಶಿಸುವ ವ್ಯಕ್ತಿಗಳಿಗೆ ಕಡಿವಾಣ ಹಾಕಲು ಇದೀಗ ಫೇಸ್‌ರೀಡಿಂಗ್ ವ್ಯವಸ್ಥೆಯನ್ನು ಮಾರುಕಟ್ಟೆ ಅಧಿಕಾರಿಗಳು ಅಳವಡಿಸಲು ಮುಂದಾಗಿದ್ದಾರೆ.
ಏನಿದು ಫೇಸ್ ರೀಡಿಂಗ್?: ಮಾರುಕಟ್ಟೆಯಲ್ಲಿ ಅಳವಡಿಸಲು ಉದ್ದೇಶಿಸಿರುವ ಫೇಸ್ ರೀಡಿಂಗ್ ತಂತ್ರಜ್ಞಾನ ಸುಧಾರಿತ ವ್ಯವಸ್ಥೆಯಾಗಿದ್ದು, ರೀಲ್ ಗಳ ಜೊತೆಗೆ ಒಬ್ಬ ಸಹಾಯಕನಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಫೇಸ್ ರೀಡಿಂಗ್ ತಂತ್ರಜ್ಞಾನದ ಮೂಲಕ ರೀಲರ್ ಮತ್ತು ಅವರೊಂದಿಗೆ ಬರುವ ಸಹಾಯಕನ ಮುಖ ಚಹರೆಯನ್ನು ಕಂಪ್ಯೂಟರ್‌ನಲ್ಲಿ ದಾಖಲಿಸಿ ಪ್ರವೇಶಕ್ಕೆ ಅನುಮತಿ ನೀಡಲಾ ಗಿರುತ್ತದೆ. ಹೀಗೆ ಅನುಮತಿಸಿದ ವ್ಯಕ್ತಿಯನ್ನು ಬಿಟ್ಟು ಬೇರೆಯವರು ಬಂದರೆ ಅವರನ್ನು ತಂತ್ರಜ್ಞಾನದ ಸಹಾಯದಿಂದ ಹೊರಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುತ್ತದೆ. ಗಣಕೀಕೃತ ವ್ಯವಸ್ಥೆಯ ಮೂಲಕ ಅನಗತ್ಯವಾಗಿ ಮಾರುಕಟ್ಟೆ ಪ್ರವೇಶಿಸುವ ವ್ಯಕ್ತಿಗಳನ್ನು ಪತ್ತೆ ಮಾಡಲು ಸಹಕಾರಿ ಆಗುತ್ತದೆ.
ಚುನಾವಣೆ ಬಳಿಕ ನೂತನ ತಂತ್ರಜ್ಞಾನ ಕಾರ್ಯಾರಂಭ: ನೂತನ ಫೇಸ್‌ರೀಡಿಂಗ್ ತಂತ್ರಜ್ಞಾನ ಅಳವಡಿಕೆಗೆ ಈಗಾಗಲೇ ಅಧಿಕಾರಿಗಳು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ತಂತ್ರಜ್ಞಾನವನ್ನು ಅಳವಡಿಸುವ ಕಾರ್ಯ ಆರಂಭಗೊಂಡಿದ್ದು, ಚುನಾವಣೆ ಮುಗಿದ ಬಳಿಕ ನೂತನ ತಂತ್ರಜ್ಞಾನ ಕಾರ್ಯಾರಂಭ ಮಾಡಲಿದೆ. ಹೊಸ ತಂತ್ರಜ್ಞಾನ ಅಳವಡಿಕೆಯಿಂದ ರೈತರಿಗೆ ಅನುಕೂಲವಾಗಲಿದೆ ಎಂದು ಮಾರುಕಟ್ಟೆ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.