ಬ್ರಾಂಡ್‌ಗಳ ಹೆಸರಲ್ಲಿ ಲೋಕಲ್ ‌ಟಿ.ವಿ. ಮಾರಾಟ

ಆರೋಪಿಗಳನ್ನು ಬಂಧಿಸಿದಕುದೂರು ಪೊಲೀಸರು , 15ಕ್ಕೂಹೆಚ್ಚು ಟಿ.ವಿ. ಮಾರಾಟ

Team Udayavani, Nov 24, 2020, 3:12 PM IST

ಬ್ರಾಂಡ್‌ಗಳ ಹೆಸರಲ್ಲಿ ಲೋಕಲ್ ‌ಟಿ.ವಿ. ಮಾರಾಟ

ರಾಮನಗರ: ಮಾಮೂಲಿ ಎಲ್‌ಇಡಿ ಟಿ.ವಿ.ಗಳಿಗೆ ಸೋನಿ ಬ್ರಾವಿಯಾ ಮುಂತಾದ ಪ್ರತಿಷ್ಠಿತ ಬ್ರಾಂಡ್‌ಗಳ ಸ್ಟಿಕರ್‌ ಮೆತ್ತಿ ಮುಗ್ಧ ಹಳ್ಳಿಗರಿಗೆ ಮಕ್ಮಲ್‌ ಟೋಪಿ ಹಾಕುತ್ತಿದ್ದ ಇಬ್ಬರು ಆರೋಪಿಗಳನ್ನು ಜಿಲ್ಲೆಯ ಮಾಗಡಿ ತಾಲೂಕು ಕುದೂರು ಪೊಲೀಸರು ಬಂಧಿಸಿದ್ದಾರೆ.

ಉತ್ತರಪ್ರದೇಶದ ಮುಜಫ್ಪರ್‌ ನಗರದ ನಿವಾಸಿಗಳಾದ ಶಹರ್‌ಯಾರ್‌ ಖಾನ್‌ ಮತ್ತು ಶಾರುಖ್‌ ಖಾನ್‌ ಬಂಧಿತ ಆರೋಪಿಗಳು. ಮತ್ತೂಬ್ಬ ಆರೋಪಿ ನಾಸೀರ್‌ ಖಾನ್‌ ಪರಾರಿಯಾಗಿದ್ದಾನೆ. ಪ್ರತಿಷ್ಠಿತ ಟಿ.ವಿ.ಗಳ ಸ್ಟಿಕ್ಕರ್‌ ಬಳಕೆ: ಪ್ರಸಿದ್ಧ ಬ್ರಾಂಡ್‌ಗಳ ತದ್ರೂಪಿನ ಬಾಕ್ಸ್‌ಗಳು ಹಾಗೂ ಟಿ.ವಿ.ಯ ಮೇಲೆ ಚಂದವಾಗಿ ಎಲ್‌.ಇ.ಡಿ ಸ್ಮಾರ್ಟ್‌ ಟಿ.ವಿ. ಎಂದು ನಮೂದಾಗಿರುತ್ತವೆ. ಈ ಟಿ.ವಿ.ಗಳನ್ನು ಆರೇಳು ಸಾವಿರಗಳಿಗೆ ಖರೀದಿಸುವ ಆರೋಪಿಗಳು ಸೋನಿ ಬ್ರಾವಿಯಾ ಮುಂತಾದ ಪ್ರತಿಷ್ಠಿತ ಟಿ.ವಿ.ಗಳಹೆಸರು ಮೆತ್ತಿ ವಿಶೇಷವಾಗಿ ಗ್ರಾಮೀಣ ಭಾಗದಲ್ಲೇ ಮಾರಾಟ ಮಾಡುತ್ತಾರೆ.

15 ಟಿ.ವಿ. ಮಾರಾಟ: ಮಾರುಕಟಯಲ್ಲಿ ಈ ಟಿ.ವಿ.ಗಳ ಬೆಲೆ 40 ರಿಂದ50 ಸಾವಿರ ಇದೆ, ಡಿಸ್ಕೌಂಟ್‌ನಲ್ಲಿ ಮಾರಿ ಬಿಡುತ್ತಿದ್ದೇವೆ, ಖರೀದಿ ಬಿಲ್‌ ಇದೆ ಎಂದು ನಕಲಿ ಬಿಲ್‌ ಗಳನ್ನು ತೋರಿಸಿ ಪುಸಲಾಯಿಸುತ್ತಾರೆ. ಇವರ ಮಾತುಗಳಿಗೆ ಮರಳಾಗುವ ಗ್ರಾಮಾಂತರ ಮುಗ್ಧರು ಬೆಲೆ ಚೌಕಾಸಿ ಮಾಡುತ್ತಾರೆ. 15 ಸಾವಿರದ ಮೇಲೆ ಎಷ್ಟೇ ಸಿಕ್ಕರೂ ಮಾರಿ ಬಿಡುವ ಚಾಣಕ್ಷರಿವರು. ಹಣ ಕೈಸೇರಿದ ಮರು ಕ್ಷಣದಲ್ಲೇ ಅಲ್ಲಿಂದ ಕಾಲ್ಕಿàಳುವ ಈ ಆರೋಪಿಗಳು ಕುಣಿಗಲ್‌, ಕುದೂರು ಮುಂತಾದ ಕಡೆ ಸುಮಾರು 15 ಟಿ.ವಿ.ಗಳನ್ನು ಮಾರಾಟ ಮಾಡಿದ್ದಾರೆ.

ಸಿಕ್ಕಿ ಬಿದ್ದಿದ್ದು ಹೇಗೆ? : ನಗರ ಪ್ರದೇಶಗಳ ನಾಗರಿಕರುಪರಿಶೀಲಿಸಿದರೆ ತಮ್ಮ ನಕಲಿ ಬಣ್ಣ ಬಯಲಿಗೆ ಬರುತ್ತದೆ ಎಂಬ ಕಾರಣಕ್ಕೆ ಆರೋಪಿಗಳು ಮುಗ್ಧ ಗ್ರಾಮಸ್ಥರನ್ನು ಟಾರ್ಗೆಟ್‌ ಮಾಡುತ್ತಾರೆ. ನ.17ರಂದು ಕುದೂರು ಪೊಲೀಸ್‌ ಠಾಣೆ ವ್ಯಾಪ್ತಿಯ ಕೃಷ್ಣಮೂರ್ತಿ ಎಂಬುವರು ಆರೋಪಿಗಳಿಗೆ 8300 ರೂ.ಗೆ ಟಿ.ವಿ. ಖರೀದಿಗೆ ಬೆಲೆ ಕುದುರಿಸುತ್ತಾರೆ. ಟಿ.ವಿ. ಪರಿಶೀಲಿಸಿದಾಗ ಅನುಮಾನ ಬಂದು ಕುದೂರು ಪೊಲೀಸರ ಮೊರೆ ಹೋಗುತ್ತಾರೆ. ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ನಕಲಿ ಟಿ.ವಿ. ರಹಸ್ಯ ಹೊರಬಿದ್ದಿದೆ.

ಕಾರ್ಯಾಚರಣೆ ಹೇಗೆ? : ಉತ್ತರ ಪ್ರದೇಶ ಮೂಲದ ವರಾದ ಈ ಆರೋಪಿಗಳು ದೆಹಲಿಯಿಂದ ಚೆನ್ನೈನ ಚೆನ್ನಿ ಖಾನ್‌ ಟ್ರೇಡರ್ಗೆ ತರಿಸಿ ಅಲ್ಲಿಂದ ಕೊರಿಯರ್‌ ಮೂಲಕ ಹೈ-ಫೈ ಹೆಸರಿನ 43 ಇಂಚಿನ ಟಿ.ವಿ.ಗಳನ್ನು ಖರೀದಿಸುತ್ತಾರೆ. ಪ್ರಸಿದ್ಧ ಬ್ರಾಂಡ್‌ಗಳ ಸ್ಟಿಕ್ಕರ್‌ಗಳು ಸಹ ಚೆನ್ನೈನಿಂದಲೇ ಪೂರೈಕೆಯಾಗುತ್ತವೆ. ಸ್ಟಿಕ್ಕರ್‌ ಗಳನ್ನು ಮೆತ್ತಿ ಮುಗ್ಧ ಗ್ರಾಮಸ್ಥರಿಗೆ ಮಾರಾಟ ಮಾಡುವುದು ಈ ಆರೋಪಿಗಳಕೆಲಸವಾಗಿದೆ.

ದೊಡ್ಡ ಜಾಲವೇ ಇರಬಹುದು; ಎಸ್ಪಿ :  ಕುದೂರು ಪೊಲೀಸರು ಪತ್ತೆ ಹಚ್ಚಿದ ನಕಲಿ ಟಿ.ವಿ. ಪ್ರಕರಣದ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದ ಎಸ್ಪಿ ಎಸ್‌.ಗಿರೀಶ್‌ ಪ್ರಸಿದ್ಧ ಬ್ರಾಂಡ್‌ ಗಳ ಹೆಸರಿನಲ್ಲಿ ಮೋಸ ಮಾಡು ತ್ತಿರುವ ಜಾಲ ದೊಡ್ಡದಿರುವ ಶಂಕೆ ಇದೆ. ದೆಹಲಿಗೆ ಜಿಲ್ಲೆಯಿಂದ ಪೊಲೀಸರ ತಂಡ ಹೋಗಿ ಪರಿಶೀಲಿಸಿದೆ. ‌ ಕುದೂರು ಪೊಲೀಸರು ಬಂಧಿಸಿರುವ ಆರೋಪಿಗಳಿಂದ 18 ಟಿ.ವಿ.ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದರು.

ಶ್ಲಾಘನೀಯಕಾರ್ಯ : ಮಾಗಡಿ ಉಪಾಧೀಕ್ಷಕರಾದ ಓಂಪ್ರಕಾಶ್‌ ನೇತೃತ್ವದಲ್ಲಿ ವೃತ್ತ ನಿರೀಕ್ಷಕರಾದ ಮಂಜುನಾಥ್‌.ಬಿ.ಎಸ್‌, ಕುದೂರು ಠಾಣೆ ಪಿ.ಎಸ್‌.ಐ ಮಂಜುನಾಥ್‌.ಎಚ್‌.ಟಿ, ಸಿಬ್ಬಂದಿ ಯಾದ ಗುರುಮೂರ್ತಿ, ಲಕ್ಷ್ಮೀಕಾಂತ್‌, ಶಿವಕುಮಾರ್‌, ಲವಕುಮಾರ್‌, ಪುರುಷೋತ್ತಮ, ಸುಭಾಷ್‌ ನಾಗೂರ್‌ತಂಡ ಶ್ಲಾಘನೀಯಕಾರ್ಯ ಮಾಡಿದೆ ಎಂದು ಎಸ್ಪಿ.ಎಸ್‌.ಗಿರೀಶ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಟಾಪ್ ನ್ಯೂಸ್

Parliament; Pushing in front of Parliament House; Two MPs injured, allegations against Rahul Gandhi

Parliament; ಸಂಸತ್‌ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್‌ ವಿರುದ್ದ ಆರೋಪ

BBK11: ಕೊನೆಗೂ ಬಿಗ್‌ ಬಾಸ್‌ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್‌ ಸುರೇಶ್

BBK11: ಕೊನೆಗೂ ಬಿಗ್‌ ಬಾಸ್‌ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್‌ ಸುರೇಶ್

ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು

ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

28 cricketers who said goodbye in 2024; Here is the list

Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ

ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Upendra: ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ

Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Channapatna: ಕೆಲಸದ ಒತ್ತಡ ತಾಳಲಾರದೆ ಮುಖ್ಯ ಶಿಕ್ಷಕ ವಿಷ ಸೇವಿಸಿ ಆತ್ಮಹ*ತ್ಯೆ

Channapatna: ಕೆಲಸದ ಒತ್ತಡ ತಾಳಲಾರದೆ ಮುಖ್ಯ ಶಿಕ್ಷಕ ವಿಷ ಸೇವಿಸಿ ಆತ್ಮಹ*ತ್ಯೆ

10-ramanagara

Ramanagara: ಕಾಡಾನೆ ದಾಳಿಗೆ ರೈತ ಬಲಿ

DOG (2)

Ramanagara:ನಾಯಿ ಜತೆ ಮೂವರ ಅನೈಸರ್ಗಿಕ ಲೈಂಗಿ*ಕ ಚಟುವಟಿಕೆ: ಓರ್ವ ಸೆರೆ

Magadi Bus Stand: ಮಾಗಡಿ ಬಸ್‌ ನಿಲ್ದಾಣದಲ್ಲಿ ಸಮಸ್ಯೆಗಳ ಸರಮಾಲೆ

Magadi Bus Stand: ಮಾಗಡಿ ಬಸ್‌ ನಿಲ್ದಾಣದಲ್ಲಿ ಸಮಸ್ಯೆಗಳ ಸರಮಾಲೆ

Toll: ವರ್ಷದಲ್ಲೇ 438 ಕೋ.ರೂ. ಟೋಲ್‌ ಶುಲ್ಕ ಸಂಗ್ರಹ

Toll: ವರ್ಷದಲ್ಲೇ 438 ಕೋ.ರೂ. ಟೋಲ್‌ ಶುಲ್ಕ ಸಂಗ್ರಹ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Parliament; Pushing in front of Parliament House; Two MPs injured, allegations against Rahul Gandhi

Parliament; ಸಂಸತ್‌ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್‌ ವಿರುದ್ದ ಆರೋಪ

BBK11: ಕೊನೆಗೂ ಬಿಗ್‌ ಬಾಸ್‌ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್‌ ಸುರೇಶ್

BBK11: ಕೊನೆಗೂ ಬಿಗ್‌ ಬಾಸ್‌ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್‌ ಸುರೇಶ್

ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು

ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು

1

Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.