ರೈತ ಸಭೆ: ನಿಗದಿತ ಸಮಯಕ್ಕೆ ಬಾರದ ಅಧಿಕಾರಿಗಳು
Team Udayavani, Mar 6, 2023, 2:35 PM IST
ಮಾಗಡಿ: ತಾಲೂಕು ಕಚೇರಿಯಲ್ಲಿ ನಡೆದ ರೈತರ ಸಭೆಗೆ ಅಧಿಕಾರಿಗಳು ನಿಗದಿತ ಸಮಯ ಮೀರಿ ಎರಡು ಗಂಟೆಯಾದರೂ ಬಾರದ ಹಿನ್ನಲೆ, ರೈತ ಸಂಘದ ಪದಾಧಿಕಾರಿಗಳು ಸಭೆ ಬಹಿಷ್ಕರಿಸಿ ಹೊರ ನಡೆಯುವ ವೇಳೆ ತಹಶೀಲ್ದಾರ್ ಸುರೇಂದ್ರಮೂರ್ತಿ ರೈತರನ್ನು ಮನವೊಲಿಸಿ ಸಭೆ ನಡೆಸಿದರು.
ತಾಲೂಕು ಕಚೇರಿ ಸಭಾಂಗಣದಲ್ಲಿ ನಿಗದಿಯಾಗಿದ್ದ ಸಭೆಗೆ ತಹಶೀಲ್ದಾರ್ ಒರತು ಪಡಿಸಿ ಬೆಸ್ಕಾಂ ಎಇಇ, ಆರೋಗ್ಯಾಧಿಕಾರಿ, ಕೆಎಸ್‌ಆರ್‌ಟಿಸಿ ಮ್ಯಾನೇಜರ್, ಅಬಕಾರಿ ಅಧಿಕಾರಿಗಳು ಎರಡು ಗಂಟೆ ಸಮಯ ಕಳೆದರೂ, ಬಾರದ ನಿಟ್ಟಿನಲ್ಲಿ ರೈತ ಸಂಘದ ಅಧ್ಯಕ್ಷ ಲೋಕೇಶ್ ಸೇರಿದಂತೆ ರೈತರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರೈತ ಸಂಘದ ಅಧ್ಯಕ್ಷ ಲೋಕೇಶ್ ಮಾತನಾಡಿ, ಭರ್ಗಾವತಿ ಕೆರೆಗೆ ಕಲುಷಿತ ನೀರು ಸೇರುತ್ತಿದ್ದು, ಎಂಎಸ್‌ಐಎಲ್‌ಗಳಲ್ಲಿ ಅಕ್ರಮ, ನಕಲಿ ಮದ್ಯ ಮತ್ತು ಪ್ರತಿ ಗ್ರಾಮಗಳಲ್ಲಿ ಮದ್ಯ ಮಾರಾಟ ನಡೆಯುತ್ತಿದೆ. ಇದರಿಂದ ಇತ್ತೀಚೆಗೆ ಒರ್ವ ನಿಧನರಾಗಿದ್ದಾರೆ. ಮಾಗಡಿ-ತಾಳೇಕೆರೆಯವರೆಗೆ ಆವೈಜ್ಞಾನಿಕ ಕೆಶಿಫ್ ರಸ್ತೆ ನಿರ್ಮಾಣದಿಂದ ಪ್ರಾಣ ಹಾನಿ ನಡೆಯುತ್ತಿದ್ದು, ಈ ರಸ್ತೆಗಾಗಿ ಆ್ಯಂಬುಲೆನ್ಸ್ ನಿಗದಿಪಡಿಸುವಂತಾಗಿದೆ ಎಂದು ಆರೋಪಿಸಿದರು.
ಮಾಗಡಿ-ಕುಣಿಗಲ್ ಮಾರ್ಗದಲ್ಲಿ ವಿದ್ಯಾರ್ಥಿಗಳು ಕಾಲೇಜಿಗೆ ತೆರಳುವ ವೇಳೆ ಸರ್ಕಾರಿ ಬಸ್ ಇಲ್ಲದೆ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ. ಕೃಷಿ ಇಲಾಖೆಯಲ್ಲಿ 50 ಮಂದಿಗೆ ಮಾತ್ರ ಬೆಳೆವಿಮೆ ಮಾಡಿಸಿದ್ದು, ಉಳಿದವರಿಗೆ ಮಾಡಿಸದ ಕಾರಣ ಬೆಳೆ ಹಾನಿಯಿಂದ ನಷ್ಟ ಅನುಭವಿಸುತ್ತಿದ್ದಾರೆ. ರೆಕಾರ್ಡ್ ರೂಂನಲ್ಲಿರುವ ಹಳೆಯ ದಾಖಲೆಗಳನ್ನು ಹಣ ನೀಡಿದವರಿಗೆ ದಾಖಲೆ ಮಾಡಿಕೊಡುತ್ತಿದ್ದಾರೆ. 3 ವರ್ಷದಿಂದ ಬೆಸ್ಕಾಂ ಒಂದು ಟೀಸಿ ಅಳವಡಿಸಿಲ್ಲ: 3 ವರ್ಷದಿಂದ ಬೆಸ್ಕಾಂ ಒಂದು ಟೀಸಿ ಅಳವಡಿಸಿಲ್ಲ. 40 ವರ್ಷದಿಂದ ಉಳುಮೆ ಮಾಡಿಕೊಂಡು ಬಂದಿ ರುವ ರೈತರನ್ನು ಒಕ್ಕಲೆಬ್ಬಿಸುತ್ತಿದ್ದಾರೆ. ಇದರಿಂದ ಅನ್ನ ದಾತನ ಹೊಟ್ಟೆಯ ಮೇಲೆ ಹೊಡೆಯುತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಎಂದು ಆರೋಪಿಸಿದರು.
ಮಾ. 6ರಂದು ಸೋಮೇಶ್ವರ ಕಾಲೋನಿ ಬಳಿ ರಸ್ತೆ ತಡೆದು ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ಹಿನ್ನೆಲೆ ತಹಶೀಲ್ದಾರ್ ಅಧಿಕಾರಿಗಳ-ರೈತರ ಸಭೆ ಕರೆದಿದ್ದು ತಹಶೀಲ್ದಾರ್ ಅವರ ಆದೇಶಕ್ಕೆ ಅಧಿಕಾರಿಗಳಿಗೆ ಕಿಮ್ಮತ್ತು ಇಲ್ಲದಂತಾಗಿ ಬಹುತೇಕ ಅಧಿಕಾರಿಗಳು ಸಭೆಗೆ ಭಾಗವಹಿಸದೆ ರೈತರನ್ನು ನಿರ್ಲಕ್ಷ್ಯಸಿದ್ದು, ನಮ್ಮ ಕುಂದುಕೊರತೆ ಶೀಘ್ರವೇ ಬಗೆಹರಿಸುವುದಾಗಿ ತಹಶೀಲ್ದಾರ್ ಭರವಸೆ ನೀಡಿದ್ದು , ಭರವಸೆಯಾಗೆ ಉಳಿದರೆ ರಸ್ತೆ ತಡೆದು ಬೃಹತ್ ಪ್ರತಿಭಟನೆ ನಡೆಸುವುದಾಗಿ ರೈತರು ಎಚ್ಚರಿಸಿದರು.
ಕಾಡುಪ್ರಾಣಿಗಳ ಹಾವಳಿ: ರೈತ ಮುಖಂಡ ಬೈರೇ ಗೌಡ ಮಾತನಾಡಿ, ಕಾಡುಪ್ರಾಣಿಗಳಿಗೆ ಬಲಿಯಾಗುವ ರೈತರ ಕುರಿ, ಮೇಕೆ, ಹಸುಗಳಿಗೆ ಅರಣ್ಯ ಇಲಾಖೆ ಮಕ್ಕಿಕಾಮಕ್ಕಿ ಪರಿಹಾರ ನೀಡುತ್ತಿದೆ. ರೈತರು ಉಳುಮೆ ಮಾಡುವ ಜಮೀನಿನ ಬಳಿ ಕಂದಾಯ ಅಧಿಕಾರಿಗಳು ತೆರಳದಂತೆ ಅರಣ್ಯಾಧಿಕಾರಿ ಗೀತಾಂಜಲಿ ಆದೇಶಿಸಿದರೂ, ಕಿಮ್ಮತ್ತು ಇಲ್ಲದಂತಾಗಿದೆ. ಗ್ರಾಮ ಮತ್ತು ಶಾಲೆಗಳ ಬಳಿ ಪ್ರತ್ಯಕ್ಷದಿಂದ ರೈತರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಭಯಬೀತರಾಗಿದ್ದಾರೆ ಎಂದು ಆರೋಪಿಸಿದರು.
ರೈತರ ಎಲ್ಲಾ ಸಮಸ್ಯೆಗೆ ಪರಿಹಾರ: ತಹಶೀಲ್ದಾರ್ ಜಿ. ಸುರೇಂದ್ರ ಮೂರ್ತಿ ಮಾತನಾಡಿ, ಕಾನೂನು ರೀತಿ ಪರಿಶೀಲನೆ ಮಾಡಿ ಅರ್ಹ ಫಲಾನುಭವಿಗಳಿಗೆ ಉಳುಮೆ ಚೀಟಿ ನೀಡಲು ಕ್ರಮಕೈಗೊಳ್ಳಲಾಗುವುದು. ರೆಕಾರ್ಡ್ ರೂಂನಲ್ಲಿ ನಿರ್ವಹಣೆ ಇಲ್ಲದೆ ರೆಕಾರ್ಡ್ ಗಳು ನಾಶವಾಗಿದ್ದು, ಉಳಿದ ದಾಖಲೆಗಳನ್ನು ನಿರ್ವಹಣೆ ಮಾಡಿ ಜನಸಾಮಾನ್ಯರಿಗೆ ದಾಖಲೆ ಸಿಗುವಂತೆ ಮಾಡಲಾಗುವುದು. ಇಲಾಖೆಯಲ್ಲಿ ಅನಧಿಕೃತವಾಗಿ ಯಾರು ಕೆಲಸ ಮಾಡುತ್ತಿಲ್ಲ. ರೈತರ ಎಲ್ಲಾ ಸಮಸ್ಯೆಗಳನ್ನು ಕೂಡಲೇ ಬಗೆಹರಿಸುವುದಾಗಿ ಭರವಸೆ ನೀಡಿದರು.
ಡಾಬಾಗಳಲ್ಲಿ ಮದ್ಯ ಮಾರಾಟ ಮಾಡಲು ಅನುಮತಿ ಇಲ್ಲ: ಅಬಕಾರಿ ಇಲಾಖೆಯ ಎಂ.ನಾರಾಯಣ್ ಮಾತನಾಡಿ, ತಾಲೂಕಿನ ಯಾವುದೇ ಮದ್ಯದಂಗಡಿಗಳಲ್ಲಿ ಎಂಆರ್‌ಪಿ ದರಕ್ಕಿಂತ ಹೆಚ್ಚು ಮಾರಾಟ ಮಾಡುವಂತಿಲ್ಲ, ಡಾಬಾಗಳಲ್ಲಿ ಮದ್ಯ ಮಾರಾಟ ಮಾಡಲು ಅನುಮತಿ ಇಲ್ಲ. ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುವರ ವಿರುದ್ಧ ಕೇಸ್ ದಾಖಲಿಸಲಾಗಿದ್ದು, ದೂರು ಬಂದ ಸ್ಥಳಕ್ಕೆ ಭೇಟಿ ನೀಡಿ ಅಕ್ರಮವಾಗಿ ಮದ್ಯ ಮಾರಾಟ ಮಾಡುವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದರು.
ಶಿರಸ್ತೆದಾರ್ ಶಿವಮೂರ್ತಿ, ಟಿಎಚ್‌ಒ ಎಂ.ಸಿ. ಚಂದ್ರಶೇಖರಯ್ಯ, ಅಕ್ಷರ ದಾಸೋಹ ಗಂಗಾಧರ್, ರೈತ ಸಂಘದ ಯುವ ಅಧ್ಯಕ್ಷ ರವಿಕುಮಾರ್, ಶಿವಲಿಂಗಯ್ಯ, ನಿಂಗಣ್ಣ, ಜಯಣ್ಣ, ಬುಡಾನ್ ಸಾಬ್, ದಿವಾಕರ, ಮುನಿರಾಜು, ರಾಜಣ್ಣ, ರಾಮಕೃಷ್ಣಯ್ಯ, ಹನುಮಂತಯ್ಯ, ರವಿಕುಮಾರ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
By Election: ಯೋಗೇಶ್ವರ್ ನಿಂದಿಸಿದ್ದ ಡಿ.ಕೆ.ಸುರೇಶ್ ಆಡಿಯೋ ಎಚ್‌ಡಿಕೆ ಬಿಡುಗಡೆ
Chennapattana By Poll: ಅಳುವ ಗಂಡಸು, ಯಾವತ್ತೂ ನಂಬಬೇಡಿ: ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್ ಪಠಾಣಗೋ?
King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!
Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.