ರೈತನೇ ಸೂಪರ್ ವಾರಿಯರ್, ತಿದ್ದುಪಡಿ ಕೈ ಬಿಡಿ
Team Udayavani, Oct 3, 2020, 1:11 PM IST
ರಾಮನಗರ: ತಂತ್ರಜ್ಞಾನ ಎಷ್ಟೇ ಮುಂದುವರೆದರೂ ಬೆಳೆ ಬೆಳೆದು ಹಸಿವು ನೀಗಿಸುವವರು ರೈತರು. ರೈತನೇ ಸೂಪರ್ ವಾರಿಯರ್. ಹೀಗಾಗಿ ಸರ್ಕಾರ ಗಳು ಕೃಷಿಕರ ಬೇಡಿಕೆ ಈಡೇರಿಸಬೇಕು. ಕೃಷಿ ಸಂಬಂಧಿತಕಾಯ್ದೆಗಳಿಗೆ ತಂದಿರುವ ತಿದ್ದುಪಡಿ ಕೈಬಿಡಬೇಕು ಎಂದು ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಬೈರೇಗೌಡ ಆಗ್ರಹಿಸಿದರು.
ನಗರದ ಜಿಲ್ಲಾ ಮಟ್ಟದ ಸರ್ಕಾರಿ ಕಚೇರಿಗಳ ಸಂಕೀರ್ಣದ ಆವರಣದಲ್ಲಿ ಮಹಾತ್ಮ ಗಾಂಧಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ನಂತರ ಐಕ್ಯ ಸಮಿತಿ ಹಮ್ಮಿಕೊಂಡಿದ್ದ ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾತನಾಡಿದರು.
ಎಪಿಎಂಸಿಗಳು ರೈತರು ತಮ್ಮ ಉತ್ಪನ್ನ ಮಾರಾಟ ಮಾಡಲು ಇದ್ದ ಒಂದೇ ಒಂದು ಸ್ಥಳ. ಈ ಸ್ಥಳಕ್ಕೂ ಕೇಂದ್ರ-ರಾಜ್ಯ ಸರ್ಕಾರಗಳು ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಸಂಚಕಾರ ತಂದಿವೆ ಎಂದು ಅಸ ಮಾಧಾನ ವ್ಯಕ್ತಪಡಿಸಿದರು.
ಇಂದು ಕೃಷಿ ಪ್ರದೇಶವನ್ನು ಅದಾನಿ ಎಂಬ ಕಂಪನಿ ಸೋಲಾರ್ ಪ್ಯಾನಲ್ ಅಳವಡಿಸುವ ನೆಪ ದಲ್ಲಿ ಆವರಿಸಿಕೊಳ್ಳುತ್ತಿದೆ. ಇನ್ನೊಂದೆಡೆ ಭೂ ಸುಧಾರಣೆಗೆ ತಿದ್ದುಪಡಿ ತಂದಿರುವ ಈ ಸರ್ಕಾರಗಳು ಹಣವಂತರು ಎಷ್ಟು ಭೂಮಿಯನ್ನು ಬೇಕಾದರು ಕೊಳ್ಳವಂತೆ ಮಾಡುತ್ತಿದೆ. ಹೀಗಾದರೆ ಆಹಾರ ಬೆಳೆಯಲು ಭೂಮಿ ಉಳಿಯುವುದು ಹೇಗೆ ಎಂದು ಪ್ರಶ್ನಿಸಿದರು.
ದೇಶ ದಿವಾಳಿ ಆಗುವುದನ್ನು ತಪ್ಪಿಸಿ: ರೈತರ ಉಪವಾಸ ಸತ್ಯಾಗ್ರಹಕ್ಕೆ ಬೆಂಬಲ ವ್ಯಕ್ತಪಡಿಸಿ ಕಾಂಗ್ರೆಸ್ ಮುಖಂಡರು ಸಹ ಕೆಲಕಾಲ ಸತ್ಯಾಗ್ರಹದಲ್ಲಿ ಭಾಗ ವಹಿಸಿದ್ದರು. ಈ ವೇಳೆ ಮಾತನಾಡಿದ ಕೆಪಿಸಿಸಿ ಕಾರ್ಯದರ್ಶಿ ಸೈ¿åದ್ ಜಿಯಾವುಲ್ಲಾ, ಭಾರತದ ಸಧ್ಯದ ಜಿಡಿಪಿ ಪಾತಾಳಕ್ಕೆ ಕುಸಿದಿದೆ. ಆರ್ಥಿಕವಾಗಿ ದೇಶ ದಿವಾಳಿಯಾಗುವ ಭಯ ಆವರಿಸಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೃಷಿ ಸಂಬಂಧಿತ ಕಾಯ್ದೆಗಳಿಗೆ ತಿದ್ದುಪಡಿ ತರುತ್ತಿವೆ. ಇದರ ಅವಶ್ಯಕತೆ ಏನಿತ್ತು?. ಕೃಷಿಕರೇ ಬೀದಿಗಿಳಿದು ತಿದ್ದುಪಡಿ ವಿರೋಧಿಸುತ್ತಿರುವಾಗ ಈ ಭಂಡ ಸರ್ಕಾರಗಳು ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ಜಾರಿಗೆ ಯತ್ನಿಸುತ್ತಿವೆ ಎಂದು ಕಿಡಿಕಾರಿದರು.
ರೈತ ಮುಖಂಡರಾದ ಮಲ್ಲಯ್ಯ, ತುಂಬೇನಹಳ್ಳಿ ಶಿವಕುಮಾರ್, ಚೀಲೂರು ಮುನಿರಾಜು, ಕಾಂಗ್ರೆಸ್‌ಪ್ರಮುಖರಾದ ಸಿ.ಎನ್.ಆರ್.ವೆಂಕಟೇಶ್, ನರಸಿಂಹ ಮೂರ್ತಿ, ವಿ.ಎಚ್.ರಾಜು, ಪಾರ್ವತಮ್ಮ, ಎ.ಬಿ.ಚೇ ತನ್ ಕುಮಾರ್, ಲೋಹಿತ್ ಬಾಬು, ಅನಿಲ್ ಜೋಗಿಂದರ್, ಕುಮಾರ್ ಮೋಹನ್, ಸಮದ್, ಇಸ್ಮಾಯಿಲ್ ಮತ್ತಿತರರಿದ್ದರು.
ಮೀಟರ್ ಅಳವಡಿಕೆ ಬೇಡ : ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಮೀಟರ್ ಅಳವಡಿಸುವುದನ್ನು ಕಿಸಾನ್ ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷ ಜಿ.ಮಹೇಂದ್ರ ವಿರೋಧಿಸಿದ್ದಾರೆ. ಸ್ವಾಮಿನಾಥನ್ ವರದಿಯನ್ನು ಸಮಗ್ರವಾಗಿ ಮೊದಲು ಜಾರಿಗೆ ತನ್ನಿ ತದ ನಂತರ ರೈತರ ಅಭಿಪ್ರಾಯ ಪಡೆದು ಮೀಟರ್ ಅಳವಡಿಸಿ. ಕೃಷಿ ಬೆಳೆಗಳಿಗೆ ಯೋಗ್ಯ ಬೆಲೆಕೊಡಲು ಸಾಧ್ಯ ವಾಗದಿದ್ದ ಮೇಲೆ ವಿದ್ಯುತ್ ಮೀಟರ್ ಅಳವ ಡಿಸುವುದುಸರಿಯಲ್ಲಎಂದರು.ರೇಷ್ಮೆಗೂಡು ಮಾರುಕಟ್ಟೆಗಳಲ್ಲಿ ಗೂಡು ಬೆಳೆಗಾರರಿಗೆ ಆಗುತ್ತಿರುವ ಅನ್ಯಾಯವನ್ನು ತಡೆಯ ಬೇಕಾಗಿದೆ. ವಿಶೇಷವಾಗಿ ಸಿಪಿ ಗೂಡು (ಹಳದಿ ಗೂಡು)ಖರೀದಿ ಮಾಡುವ ರೀಲರ್‌ಗಳು ಗೂಡು ಬೆಳೆಗಾರರಿಗೆ ಅನ್ಯಾಯ ಮಾಡುತ್ತಿದ್ದಾರೆ. ಹರಾಜಿನಲ್ಲಿ ಗೂಡುಖರೀದಿಸಿಅವರುಕೊಡುತ್ತಿರುವ ಚೆಕ್‌ಗಳು ಬೌನ್ಸ್ ಆಗುತ್ತಿವೆ. ಗೂಡು ಬೆಳೆಗಾರರು ರೀಲರ್‌ಗಳ ಮನೆ ಬಾಗಿಲಿಗೆ ಅಲೆದು ಸುಸ್ತಾಗಿದ್ದಾರೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.