Ramnagar: ಜಿಲ್ಲೆಯಲ್ಲಿ ಹೆಚ್ಚುತ್ತಿದೆ ಮಾರಣಾಂತಿಕ ಅಪಘಾತಗಳು
Team Udayavani, Dec 12, 2023, 12:47 PM IST
ರಾಮನಗರ: ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾದ ಬಳಿಕ ರಸ್ತೆ ಅಪಘಾತಗಳ ಪ್ರಮಾಣ ಹೆಚ್ಚಿದೆಯಾ..? ಹೌದು ಎನ್ನುತ್ತಿದೆ ಕಳೆದ ಮೂರು ವರ್ಷಗಳ ಮಾರಣಾಂತಿಕ ಅಪಘಾತಗಳ ಅಂಕಿ ಅಂಶ.
ಜಿಲ್ಲೆಯಲ್ಲಿ 2020-21ನೇ ಸಾಲಿನಲ್ಲಿ ಮಾರ ಣಾಂತಿಕ ಅಪಘಾತಗಳ ಸಂಖ್ಯೆ 290 ಇತ್ತು. 2021- 22ನೇ ಸಾಲಿನಲ್ಲಿ ಈ ಸಂಖ್ಯೆ 263ಕ್ಕೆ ಕುಸಿದಿತ್ತಾದರೂ, 2022-23ನೇ ಸಾಲಿನಲ್ಲಿ 345ಕ್ಕೆ ಹೆಚ್ಚಳಗೊಂಡಿದೆ. ವರ್ಷದಿಂದ ವರ್ಷಕ್ಕೆ ಮಾರಣಾಂತಿಕ ಅಪಘಾತಗಳ ಪ್ರಮಾಣ ಹೆಚ್ಚುತ್ತಿರುವುದು ಜನರಲ್ಲಿ ಆತಂಕ ಹೆಚ್ಚು ವಂತೆ ಮಾಡಿದೆ. ಇನ್ನು 2022-23ನೇ ಸಾಲಿನ ಅಪ ಘಾತಗಳ ಪ್ರಮಾಣವನ್ನು ಮಾರ್ಚ್ ಅಂತ್ಯಕ್ಕೆ ಗಣನೆ ಮಾಡಿದ್ದು, 2023ರ ಮಾರ್ಚ್‌ಬಳಿಕ ಸಂಭವಿಸಿದ ಅಪ ಘಾತಗಳನ್ನು ಸಾರಿಗೆ ಹಾಗೂ ಪೊಲೀಸ್ ಇಲಾಖೆ ಇನ್ನೂ ಲೆಕ್ಕಹಾಕಿಲ್ಲ.
ಎಕ್ಸ್‌ಪ್ರೆಸ್ ವೇ ಬಳಿಕ ಹೆಚ್ಚಿದ ಅಪಘಾತ: ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇ ನಿರ್ಮಾಣ ವಾದ ಬಳಿಕ ಮಾರಣಾಂತಿಕ ಅಪಘಾತಗಳ ಪ್ರಮಾಣ ಹೆಚ್ಚಾ ಗಿದ್ದು, ಈ ಹಿಂದೆ 300ರ ಒಳಗಿದ್ದ ಮಾರ ಣಾಂತಿಕ ಅಪಘಾತಗಳ ಸಂಖ್ಯೆ ಎಕ್ಸ್‌ಪ್ರೆಸ್ ವೇ ನಿರ್ಮಾಣವಾದ ಬಳಿಕ 300ರ ಗಡಿದಾಟಿದೆ. ಎಕ್ಸ್ ಪ್ರಸ್ ವೇನಲ್ಲಿ ಸಾರ್ವ ಜನಿಕ ವಾಹನಗಳ ಸಂಚಾರ ಅಧಿಕೃತವಾಗಿ ಆಗಸ್ಟ್ ತಿಂಗಳಿಂದ ಪ್ರಾರಂಭ ಗೊಂಡಿದ್ದು, ಆಗಸ್ಟ್- 2022ರಿಂದ ಮಾರ್ಚ್-2023ರ ವರೆಗೆ ಎಕ್ಸ್‌ಪ್ರೆಸ್ ವೇನಲ್ಲಿ 98 ಮಾರಣಾಂತಿಕ ಅಪಘಾತಗಳು ಸಂಭ ವಿಸಿದೆ. ಏಪ್ರಿಲ್‌ನಿಂದ ನವೆಂಬರ್ ಅಂತ್ಯದ ವರೆಗೆ 50ಕ್ಕೂ ಹೆಚ್ಚು ಅಪಘಾತಗಳು ಎಕ್ಸ್‌ಪ್ರೆಸ್ ವೇನಲ್ಲಿ ಸಂಭವಿಸಿದ್ದು, ಉಳಿದಂತೆ ಜಿಲ್ಲೆಯಲ್ಲಿ 140ಕ್ಕೂ ಹೆಚ್ಚು ಮಾರಣಾಂತಿಕ ಅಪಘಾತಗಳು ಸಂಭವಿಸಿವೆ.
ಎಚ್ಚೆತ್ತುಕೊಳ್ಳ ಬೇಕಿದೆ ಪೊಲೀಸ್ ಇಲಾಖೆ: ರಾಮನಗರ ಜಿಲ್ಲೆಯಲ್ಲಿ ಮಾರಣಾಂತಿಕ ಅಪಘಾತ ಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಎಚ್ಚೆತ್ತುಕೊಳ್ಳಬೇಕಿದ್ದು, ಸಂಚಾರ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕಾರ್ಯೋ ನ್ಮುಖಗೊಳ್ಳಬೇಕಿದೆ. ಅಪಘಾತ ಹೆಚ್ಚಾದ ತಕ್ಷಣ ರಸ್ತೆಯಲ್ಲಿ ನಿಂತು ದಂಡ ಹಾಕುವುದನ್ನು ಬಿಟ್ಟು ಪ್ರಯಾಣಿಕರಲ್ಲಿ ಅರಿವು ಮೂಡಿಸುವ ಜೊತೆಗೆ ಸಂಚಾರ ಸುರಕ್ಷತಾ ಕ್ರಮಗಳನ್ನು ಜಾರಿಗೆ ತರಬೇಕಿದೆ.
ರಾಜ್ಯದಲ್ಲೂ ಹೆಚ್ಚುತ್ತಿದೆ ಮಾರಣಾಂತಿಕ ಅಪಘಾತಗಳು:
ರಾಮನಗರ ಜಿಲ್ಲೆ ಮಾತ್ರವಲ್ಲ ರಾಜ್ಯದಲ್ಲಿ ಸಹ ಮಾರಣಾಂತಿಕ ಅಪಘಾತಗಳ ಪ್ರಮಾಣ ಹೆಚ್ಚುತ್ತಿರುವುದು ಸಾರಿಗೆ ಇಲಾಖೆಯ ಅಂಕಿಅಂಶಗಳಿಂದ ಬಹಿರಂಗವಾಗಿದೆ. ರಾಜ್ಯದಲ್ಲಿ 2020-21ನೇ ಸಾಲಿನಲ್ಲಿ 9082, 2022-23ನೇ ಸಾಲಿನಲ್ಲಿ 9458, 2022-23ನೇ ಸಾಲಿನಲ್ಲಿ 10633 ಮಾರಣಾಂತಿಕ ರಸ್ತೆ ಅಪಘಾತಗಳು ಸಂಭವಿಸಿವೆ. ಇನ್ನು ಅಪಘಾತಕ್ಕೆ ಕಾರಣವಾದ ಅಡ್ಡಾದಿಟ್ಟಿ ಚಾಲನೆ ಮಾಡಿ ಪ್ರಯಾಣಿಕರಿಗೆ ಉಪದ್ರವ ನೀಡುತ್ತಿರುವ ಪ್ರಯಾಣಿಕರ ಚಾಲನಾ ಪರವಾನಗಿ ಯನ್ನು ರದ್ದುಪಡಿಸುವ ಕಾರ್ಯಕ್ಕೂ ಸಾರಿಗೆ ಇಲಾಖೆ ಮುಂದಾಗಿದ್ದು 2020-21ರಲ್ಲಿ 1417, 2021-22ರಲ್ಲಿ 2350, 2022-23ರಲ್ಲಿ 2198 ಮಂದಿಯ ಚಾಲನಾ ಪರವಾನಗಿಯನ್ನು ರದ್ದು ಪಡಿಸಲಾಗಿದೆ.
ಗ್ರಾಮೀಣ ಬೈಕ್ ಅಪಘಾತ ಹೆಚ್ಚು : ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇ ಹೊರತು ಪಡಿಸಿದರೆ ಜಿಲ್ಲೆಯ ಉಳಿದ ಕಡೆ ಸಂಭವಿಸುವ ರಸ್ತೆ ಅವಘಡಗಳಲ್ಲಿ ಬೈಕ್‌ಗಳಿಂದ ಸಂಭವಿಸುವ ಅಪಘಾತಗಳ ಪ್ರಮಾಣ ಹೆಚ್ಚಾ ಗಿದೆ. ಬೈಕ್ ಬೈಕ್‌ಗಳ ನಡುವೆ ಡಿಕ್ಕಿ, ಬೈಕ್‌ಗೆ ಲಘು ಹಾಗೂ ದೊಡ್ಡ ವಾಹನಗಳು ಡಿಕ್ಕಿ ಹೊಡೆಯುವುದರಿಂದ ಸಂಭವಿಸುವ ಅಪಘಾತಗಳು ನೂರಾರು ಪ್ರಾಣಗಳನ್ನು ಬಲಿಪಡೆದಿವೆ. ಬೈಕ್ ಸವಾರರು ಎಚ್ಚೆತ್ತುಕೊಂಡು ಹೆಲ್ಮೆಟ್ ದರಿಸಿ ಪ್ರಯಾಣಿಸುವುದು ಸೂಕ್ತ ಎಂಬುದು ಪೊಲೀಸ್ ಅಧಿಕಾರಿಗಳ ವಿವರಣೆಯಾಗಿದೆ.
– ಸು.ನಾ.ನಂದಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BBMP Notice: ವಿರಾಟ್ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
Kasaragod: ಮರಳಿ ಬಂದ ಯುವಕ – ಯುವತಿ ಮತ್ತೆ ನಾಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.