ಸರ್ಕಾರಿ ಆಸ್ಪತ್ರೆಯಲ್ಲೇ ಭ್ರೂಣ ಹತ್ಯೆ?


Team Udayavani, Jul 11, 2023, 12:15 PM IST

ಸರ್ಕಾರಿ ಆಸ್ಪತ್ರೆಯಲ್ಲೇ ಭ್ರೂಣ ಹತ್ಯೆ?

ರಾಮನಗರ: ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳು ಸ್ತ್ರೀ ಭ್ರೂಣ ಹತ್ಯೆಯ ತಾಣಗಳಾಗಿವೆಯೇ? ಸರ್ಕಾರಿ ಆಸ್ಪತ್ರೆಯ ಅಂಗಳದಲ್ಲಿ ಮೃತ ಸ್ತ್ರೀಭ್ರೂಣ ಪತ್ತೆಯಾದ ಹಿನ್ನೆಲೆ ಇಂತಹುದೊಂದು ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.

ಕಳೆದ ಶುಕ್ರವಾರ ಮಾಗಡಿ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ನಾಲ್ಕುವರೆ ತಿಂಗಳ ಮೃತ ಹೆಣ್ಣುಭ್ರೂಣ ಪತ್ತೆಯಾಗಿತ್ತು. ಒಂದು ವರ್ಷ ಹಿಂದೆ ಚನ್ನಪಟ್ಟಣ ತಾಲೂಕು ಸಾರ್ವ ಜನಿಕ ಆಸ್ಪತ್ರೆಯೊಳಗೆ ಹೆಣ್ಣುಭ್ರೂಣ ಪತ್ತೆಯಾಗಿತ್ತು. ಸರ್ಕಾರಿ ಆಸ್ಪತ್ರೆ ಯಲ್ಲೇ ಭ್ರೂಣಗಳು ಪತ್ತೆಯಾಗುತಿ ರು ವುದನ್ನು ನೋಡಿದರೆ, ಸರ್ಕಾರಿ ಆಸ್ಪತ್ರೆಗಳಲ್ಲೇ ಅಮಾನುಷ ಭ್ರೂಣಹತ್ಯೆ ದಂಧೆ ನಡೆಯುತ್ತಿದೆಯಾ ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ.

ಇನ್ನು ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆ ಯಲ್ಲಿ ಮೃತ ಹೆಣ್ಣುಭ್ರೂಣ ಪತ್ತೆಯಾಗಿ ವರ್ಷಗಳು ಕಳೆದಿವೆಯಾದರೂ, ಇನ್ನು ಪ್ರಕರಣವನ್ನು ಭೇದಿಸಲು ಪೊಲೀಸ್‌ ಇಲಾಖೆಗಾಗಲಿ, ಜಿಲ್ಲಾ ಸಿಪಿ ಆ್ಯಂಡ್‌ ಪಿಎನ್‌ಡಿಟಿ ಸಮಿತಿಗಾಗಲಿ ಸಾಧ್ಯವಾಗಲಿಲ್ಲ. ಹೀಗಿರುವಾಗ ಮತ್ತೆ ಮಾಗಡಿಯಲ್ಲಿ ಸ್ತ್ರೀಭ್ರೂಣ ಪತ್ತೆಯಾಗಿರುವುದು ಸರ್ಕಾರಿ ಆಸ್ಪತ್ರೆಗಳತ್ತ ಜನತೆ ಸಂಶಯದ ಕಣ್ಣು ಬಿಡುವಂತಾಗಿದೆ.

ಸರ್ಕಾರಿ ಆಸ್ಪತ್ರೆಗಳು ಸೇಫ್‌: ಜಿಲ್ಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ವೈದ್ಯರು ಖಾಸಗಿ ಆಸ್ಪತ್ರೆಗಳಲ್ಲೂ ಕಾರ್ಯನಿರ್ವಹಿಸುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಖಾಸಗಿ ಸ್ಕ್ಯಾನಿಂಗ್‌ ಸೆಂಟರ್‌ ಹಾಗೂ ಆಸ್ಪತ್ರೆಗಳ ಮೇಲೆ ಆಗಾಗ್ಗ ಪಿಸಿ ಆ್ಯಂಡ್‌ ಪಿಎನ್‌ಡಿಸಿ ಸಮಿತಿಯ ರಾಜ್ಯ ಮತ್ತು ಜಿಲ್ಲಾ ತಂಡ ಭೇಟಿ ನೀಡಿ ಪರಿಶೀಲಿಸುತ್ತಿರುತ್ತವೆ. ಸರ್ಕಾರಿ ಆಸ್ಪತ್ರೆಗಳು ಎಂಬ ಕಾರಣಕ್ಕೆ ಅಧಿಕಾರಿಗಳಿಗೆ ನಮ್ಮ ಆಸ್ಪತ್ರೆಯಲ್ಲಿ ಇಂತಹ ದಂಧೆ ನಡೆಯುವುದಿಲ್ಲ ಎಂಬ ನಂಬಿಕೆ. ಈ ಕಾರಣದಿಂದ ಭ್ರೂಣಲಿಂಗ ಪತ್ತೆ ಮತ್ತು ಹತ್ಯೆ ದಂಧೆ ನಡೆಸುತ್ತಿರುವವರಿಗೆ ಸರ್ಕಾರಿ ಆಸ್ಪತ್ರೆಗಳು ಸೇಫ್‌ ಆಗಿವೆ. ಈ ಕಾರಣದಿಂದ ಕೆಲವರು ಸರ್ಕಾರಿ ಆಸ್ಪತ್ರೆಗಳಲ್ಲಿ ಭ್ರೂಣ ಹತ್ಯೆ ಮಾಡುತ್ತಿದ್ದಾರೆ ಎಂಬ ಆರೋಪಗಳು ಸಾಕಷ್ಟಿವೆ.

ಇನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಅಳವಡಿಸಿರುವ ಸ್ಕ್ಯಾನಿಂಗ್‌ ಯಂತ್ರಗಳಲ್ಲಿ ಅಳವಡಿಸಿರುವ ಸಾಫ್ಟ್‌ವೇರ್‌ ಗಳು ಇನ್ನೂ ಹಳೆಯವೇ ಆಗಿವೆ. ಖಾಸಗಿ ಸ್ಕ್ಯಾನಿಂಗ್‌ ಸೆಂಟರ್‌ಗಳಲ್ಲಿ ಫಾರಂ ಎಫ್‌ ಅನ್ನು ಕರಾರುವಕ್ಕಾಗಿ ಅಳವಡಿಸಲಾಗಿರುತ್ತದೆ. ಸ್ಕ್ಯಾನಿಂಗ್‌ ಮಾಡಿದ ದಾಖಲೆಗಳನ್ನು ವೈದ್ಯರು ಅಳಸಿ ಹಾಕಲು ಸಾಧ್ಯವಿಲ್ಲ. ಆದರೆ, ಸರ್ಕಾರಿ ಆಸ್ಪತ್ರೆಯಲ್ಲಿ ರುವ ಸ್ಕ್ಯಾನಿಂಗ್‌ ಯಂತ್ರಗಳಿಗೆ ಈ ಕಟ್ಟುಪಾಡು ಇಲ್ಲದಿ ರುವುದು ಸರ್ಕಾರಿ ಆಸ್ಪತ್ರೆಯನ್ನು ಕಾರಾ ಸ್ಥಾನ ಮಾಡಿ ಕೊಳ್ಳುವುದಕ್ಕೆ ಕಾರಣ ವಾಗಿದೆ ಎಂದು ಹೇಳಲಾಗುತ್ತಿದೆ.

ಜಿಲ್ಲೆಯಲ್ಲಿ ಹೆಚ್ಚಿನ ಪ್ರಕರಣ: 2017 ರಲ್ಲಿ ಹೆಣ್ಣು ಭ್ರೂಣ ಹತ್ಯೆಗೆ ಸಂಬಂಧಿ ಸಿದಂತೆ ವರದಿ ನೀಡಿದ್ದ ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿ ಮಂಡ್ಯದ ನಂತರ ರಾಮನಗರದಲ್ಲಿ ಸಹ ಭ್ರೂಣಲಿಂಗ ಪತ್ತೆ ಮತ್ತು ಸ್ತ್ರೀಲಿಂಗ ಭ್ರೂಣ ಹತ್ಯೆ ಅವ್ಯಾಹತವಾಗಿ ನಡೆಯುತ್ತಿದೆ. ಜಿಲ್ಲಾಮಟ್ಟದ ಪಿಸಿ ಆ್ಯಂಡ್‌ ಪಿಎನ್‌ ಡಿಸಿ ಕಾಯ್ದೆಯನ್ನು ವ್ಯಾಪಕವಾಗಿ ಉಲ್ಲಂಘನೆ ಮಾಡು ತ್ತಿದ್ದರೂ ಯಾರೂ ಕೇಳುತ್ತಿಲ್ಲ, ಕಾಯಿದೆ ಯನ್ನು ಸಮರ್ಪಕವಾಗಿ ಜಾರಿಗೊಳಿಸಲಾಗಿಲ್ಲ ಎಂಬ ವರದಿ ನೀಡಿತ್ತು. ಇದೀಗ ಜಿಲ್ಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಮೃತ ಭ್ರೂಣ ಪತ್ತೆ ಪ್ರಕರಣಗಳು ಇಂತಹ ಅನುಮಾವನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಜಿಲ್ಲಾಮಟ್ಟದಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕಿದೆ. ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತ ಒಗ್ಗೂಡಿ ಭ್ರೂಣಲಿಂಗ ಪತ್ತೆಮಾಡುವ ದಂಧೆಗೆ ಕಡಿವಾಣ ಹಾಕಬೇಕಿದೆ. ಇನ್ನು ಸಾರ್ವಜನಿಕ ಆಸ್ಪತ್ರೆಯಲ್ಲಿ ಸಹ ಈ ಬಗ್ಗೆ ಕಣ್ಗಾವಲಿರಿಸುವ ಮೂಲಕ ಈ ಅಮಾನುಷ ಕೃತ್ಯಕ್ಕೆ ಅಂತ್ಯವಾಡುವ ಕೆಲಸವಾಗಬೇಕಿದೆ.

ಕೋಡ್‌ ವರ್ಡ್‌ ಮೂಲಕ ದಂಧೆ: ಜಿಲ್ಲೆಯಲ್ಲಿ ಅನುಮತಿ ಪಡೆದಿದರುವ 54 ಸ್ಕ್ಯಾನಿಂಗ್‌ ಸೆಂಟರ್‌ ಗಳಿದ್ದು, ಇವುಗಳ ಜೊತೆಗೆ ತಾಲೂಕು ಮಟ್ಟದ ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ಕ್ಯಾನಿಂಗ್‌ ವಿಭಾಗವನ್ನು ತೆರೆಯಲಾಗಿದೆ. ಬಹುತೇಕ ಸ್ಕ್ಯಾನಿಂಗ್‌ ಸೆಂಟರ್‌ನ ಹೊರಭಾಗದಲ್ಲಿ ಭ್ರೂಣಲಿಂಗ ಪತ್ತೆ ಮಾಡಲಾಗುವುದಿಲ್ಲ ಎಂಬ ಫಲಕವನ್ನು ಹಾಕಲಾಗಿದೆಯಾದರೂ, ಇದು ಕಾನೂನಿನ ಕಣ್ಣಿಗೆ ಮಣ್ಣೆರಚುವುದಕ್ಕೆ ಮಾತ್ರವಾಗಿದೆ. ಕೆಲ ದಲ್ಲಾಳಿಗಳ ಮೂಲಕ ರಹಸ್ಯವಾಗಿ ಸ್ತ್ರೀ ಭ್ರೂಣ ಲಿಂಗ ಪತ್ತೆ ಮಾಡಲಾಗುತ್ತಿದೆ. ಹೀಗೆ ಪತ್ತೆಯಾದ ಸ್ತ್ರೀಭ್ರೂಣ ಲಿಂಗವನ್ನು ಇದಕ್ಕೆಂದೆ ಕುಖ್ಯಾತಿ ಪಡೆದಿರುವ ವೈದ್ಯರ ಮೂಲಕ ದಲ್ಲಾಳಿಗಳು ಹತ್ಯೆ ಮಾಡಿಸುತ್ತಿದ್ದಾರೆ. ಈ ಎಲ್ಲಾ ವ್ಯವಹಾರಗಳು ಗೌಪ್ಯ ಮತ್ತು ಕೋಡ್‌ ವರ್ಡ್‌ ಮೂಲಕ ನಡೆಯುವುದ ರಿಂದ ಕಾನೂನಿನ ಕಣ್ಣಿನಿಂದ ತಪ್ಪಿಸಿಕೊಳ್ಳಲಾಗು ತ್ತಿದೆ. ಅಪರೂಪಕ್ಕೆ ಇಂತಹ ಪ್ರಕರಣಗಳು ಪತ್ತೆಯಾಗುವ ಮೂಲಕ ದಂಧೆ ನಡೆಯುತ್ತಿರುವ ಸುಳಿವು ಹೊರ ಜಗತ್ತಿಗೆ ತಿಳಿಯುತ್ತದೆ.

ಮೆಡಿಕಲ್‌ ಸ್ಟೋರ್‌ಗಳಲ್ಲಿ ಸಿಗುತ್ತಿದೆ ಔಷಧ : ರಾಮನಗರ ಮತ್ತು ಮಂಡ್ಯ ಜಿಲ್ಲೆ ಸ್ತ್ರೀ ಭ್ರೂಣ ಹತ್ಯೆಯಲ್ಲಿ ಮುಂದೆ ಇವೆ ಎಂಬ ವರದಿ ಸಾಕಷ್ಟಿವೆ. ಸ್ಕ್ಯಾನಿಂಗ್‌ ಸೆಂಟರ್‌ನಲ್ಲಿ ಭ್ರೂಣಲಿಂಗ ಪತ್ತೆಯಾಗುತ್ತಿದ್ದಂತೆ ವೈದ್ಯರು ಪೋಷಕರ ಒತ್ತಾಯದ ಮೇರೆಗೆ ಸ್ತ್ರೀ ಭ್ರೂಣಲಿಂಗವಾಗಿದ್ದಲ್ಲಿ ಹತ್ಯೆಗೆ ಮುಂದಾಗುತ್ತಾರೆ. ನಾಲ್ಕೂವರೆ ತಿಂಗಳವರೆಗೆ ಭ್ರೂಣವನ್ನು ಹತ್ಯೆ ಮಾಡಲು ಬೇಕಾದ ಔಷಧಗಳು ಸಾಮಾನ್ಯವಾಗಿ ಮೆಡಿಕಲ್‌ ಸ್ಟೋರ್‌ನಲ್ಲಿ ಲಭ್ಯವಿರುತ್ತದೆ. ಇದರ ಮೂಲಕ ಭ್ರೂಣ ಹತ್ಯೆ ಮಾಡಲಾಗುತ್ತದೆ. ಹೀಗೆ ಮೂರು ತಿಂಗಳ ಬಳಿಕ ಔಷಧ ನೀಡಿ ಭ್ರೂಣಹತ್ಯೆ ಮಾಡುವುದು ವೈದ್ಯಕೀಯ ನಿಯಮದ ಪ್ರಕಾರ ಅಪಾ ಯ ಎನಿಸಿದರೂ, ಕೆಲ ವೈದ್ಯರು ಇಂತಹ ಸಾಹಸಕ್ಕೆ ಮುಂದಾಗುತ್ತಾರೆ. ಮಂಡ್ಯ ಜಿಲ್ಲೆಯಲ್ಲಿ ಹೀಗೆ ಪ್ರಯತ್ನ ಮಾಡಿ ಗರ್ಭಿಣಿ ಮಹಿಳೆಯ ಜೀವ ಬಲಿಯಾಗಿತ್ತು. ಇದಕ್ಕೆಲ್ಲಾ ಮೆಡಿಕಲ್‌ ಸ್ಟೋರ್‌ಗಳಲ್ಲಿ ಸುಲಭವಾಗಿ ಔಷಧಿ ಸಿಗುವುದೇ ಕಾರಣವಾಗಿದೆ.

ಮಾಗಡಿ ಆಸ್ಪತ್ರೆಯಲ್ಲಿ ಪತ್ತೆಯಾಗಿರುವ ಪ್ರಕರಣದ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ. ಎಲ್ಲಾ ಸ್ಕ್ಯಾನಿಂಗ್‌ ಸೆಂಟರ್‌ಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಲಾಗುವುದು. ಈಗಾಗಲೇ ಡೀಸಿ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾಮಟ್ಟದ ಪಿಸಿ ಆ್ಯಂಡ್‌ ಪಿಎನ್‌ಡಿಟಿ ಸಭೆಯಲ್ಲಿ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚಿಸಲಾಗಿದೆ. ಆರೋಗ್ಯ ಇಲಾಖೆ ಮಾಗಡಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಪತ್ತೆ ಹಚ್ಚಲು ಕ್ರಮ ಕೈಗೊಳ್ಳಲಾಗಿದೆ. ● ಕಾಂತರಾಜು, ಡಿಎಚ್‌ಒ, ರಾಮನಗರ

ಜಿಲ್ಲೆಯಲ್ಲಿ ವ್ಯಾಪಕವಾಗಿ ಭ್ರೂಣ ಹತ್ಯೆ ನಡೆಯುತ್ತಲ್ಲೇ ಇದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಸರಿಯಾಗಿ ಕ್ರಮ ಕೈಗೊಳ್ಳುತ್ತಿಲ್ಲ. ಪಿಸಿ ಆ್ಯಂಡ್‌ ಪಿಎನ್‌ಡಿಸಿ ಸಮಿತಿ ಸಭೆಯೇ ಸರಿಯಾಗಿ ನಡೆಯುತ್ತಿಲ್ಲ. ಹೆಣ್ಣು ಭ್ರೂಣ ಹತ್ಯೆಯಂತಹ ಹೇಯ ಕೃತ್ಯವನ್ನು ನಡೆಯಲು ಅಧಿಕಾರಿಗಳ ಮೌನ ಕುಮ್ಮಕ್ಕಾಗಿದೆ. ಈ ಬಗ್ಗೆ ರಾಜ್ಯಮಟ್ಟದ ಸಮಿತಿ ಗಮನಹರಿಸಬೇಕು. ● ಸುಕನ್ಯಾ ತಗಚಗೆರೆ, ಸಾಮಾಜಿಕ ಕಾರ್ಯಕರ್ತೆ

ಪಿಸಿ ಆ್ಯಂಡ್‌ ಪಿಎನ್‌ಡಿಸಿ ಸಮಿತಿಯಿಂದ ಈಗಾಗಲೇ 5 ಸ್ಕ್ಯಾನಿಂಗ್‌ ಸೆಂಟರ್‌ಗಳ ಮೇಲೆ ಪ್ರಕರಣ ದಾಖಲಿಸಿದ್ದು, ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ನಡೆಯುತ್ತಿದೆ. ಕೆಲ ಸರ್ಕಾರಿ ವೈದ್ಯರೂ ಸಾರ್ವಜನಿಕ ಆಸ್ಪತ್ರೆಯಲ್ಲೇ ಭ್ರೂಣ ಹತ್ಯೆ ಮಾಡು ತ್ತಿರುವ ಬಗ್ಗೆ ಮಾಹಿತಿ ಇದೆ. ಈ ಬಗ್ಗೆ ಸಮಿತಿ ಸಭೆಯಲ್ಲಿ ಸಹ ಗಮನ ಸೆಳೆಯಲಾಗಿದೆ. ನವೆಂಬರ್‌ ನಲ್ಲಿ ಸೂಚಿಸಿದ ಪ್ರಕರಣಗಳಿಗೆ ಇನ್ನೂ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಸಮಿತಿಯ ಜೊತೆಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಸಹಕಾರ ನೀಡಿದರೆ ಸಮಸ್ಯೆಗೆ ಕಡಿವಾಣ ಹಾಕಬಹುದು. -ಜನಾರ್ಧನ್‌, ಸದಸ್ಯರು, ಜಿಲ್ಲಾ ಪಿಸಿ ಆ್ಯಂಡ್‌ ಪಿಎನ್‌ ಡಿಸಿ ಸಮಿತಿ, ರಾಮನಗರ

●ಸು.ನಾ. ನಂದಕುಮಾರ್‌

ಟಾಪ್ ನ್ಯೂಸ್

Davanagere: ಇನ್ಶೂರೆನ್ಸ್‌ ಹಣಕ್ಕಾಗಿ ಸಂಬಂಧಿಯ ಕೊಲೆ; 24 ಗಂಟೆಯೊಳಗೆ ನಾಲ್ವರ ಬಂಧನ

Davanagere: ಇನ್ಶೂರೆನ್ಸ್‌ ಹಣಕ್ಕಾಗಿ ಸಂಬಂಧಿಯ ಕೊಲೆ; 24 ಗಂಟೆಯೊಳಗೆ ನಾಲ್ವರ ಬಂಧನ

5-udupi

Udupi: ನ. 9-11ರ ವರೆಗೆ 3 ದಿನಗಳ ಹರಿದಾಸ ಸಾಹಿತ್ಯ ಅಂತಾರಾಷ್ಟ್ರೀಯ ಸಮ್ಮೇಳನ

Brijesh-Chowta-Leter

Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ

New Delhi: BSNL invites tender for 5G service

New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್‌ ಆಹ್ವಾನ

KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ

KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ

Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ  

Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ  

J&K: If Vajpayee had lived, Jammu and Kashmir would not have become a Union Territory: Omar Abdullah

J&K: ವಾಜಪೇಯಿ ಬದುಕಿದ್ದರೆ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗುತ್ತಿರಲಿಲ್ಲ: ಒಮರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

HDK-by-Poll

By Election: ಚನ್ನಪಟ್ಟಣದಲ್ಲಿ ಧರ್ಮ-ಅಧರ್ಮದ ನಡುವೆ ಚುನಾವಣೆ: ಎಚ್‌.ಡಿ.ಕುಮಾರಸ್ವಾಮಿ

DK-Shivakuamar

By Poll: ರಣರಂಗವೂ ಇಲ್ಲ, ಚದುರಂಗವೂ ಇಲ್ಲ, ಜನರೇ ಪಟ್ಟಿ ಮಾಡಿ, ಅಂಕ ನೀಡ್ತಾರೆ: ಡಿಕೆಶಿ

HDK-election

By Election: ಮಾತೃ ಹೃದಯಗಳಲ್ಲಿ ಕಣ್ಣೀರು ಸಹಜ: ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ

Nikhil—Somanna

By Election: ರಾಜ್ಯ ಸರ್ಕಾರ ನಿರ್ಜೀವ, ನಿಂತ ನೀರು: ಕೇಂದ್ರ ಸಚಿವ ವಿ.ಸೋಮಣ್ಣ ಟೀಕೆ

CPY-1

By Election: ಕಣ್ಣೀರು ಹಾಕುವವರಿಗೆ ಮತ ನೀಡಬಾರದು: ಅಭ್ಯರ್ಥಿ ಸಿ.ಪಿ.ಯೋಗೇಶ್ವರ್‌

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Mangaluru City Corporation ಮಾಜಿ ಮೇಯರ್‌ ಅಜಿತ್‌ ಕುಮಾರ್‌ ನಿಧನ

Mangaluru City Corporation ಮಾಜಿ ಮೇಯರ್‌ ಅಜಿತ್‌ ಕುಮಾರ್‌ ನಿಧನ

6-udupi

Udupi: ಯತಿಗಳ ಸಮಾಗಮ

Davanagere: ಇನ್ಶೂರೆನ್ಸ್‌ ಹಣಕ್ಕಾಗಿ ಸಂಬಂಧಿಯ ಕೊಲೆ; 24 ಗಂಟೆಯೊಳಗೆ ನಾಲ್ವರ ಬಂಧನ

Davanagere: ಇನ್ಶೂರೆನ್ಸ್‌ ಹಣಕ್ಕಾಗಿ ಸಂಬಂಧಿಯ ಕೊಲೆ; 24 ಗಂಟೆಯೊಳಗೆ ನಾಲ್ವರ ಬಂಧನ

5-udupi

Udupi: ನ. 9-11ರ ವರೆಗೆ 3 ದಿನಗಳ ಹರಿದಾಸ ಸಾಹಿತ್ಯ ಅಂತಾರಾಷ್ಟ್ರೀಯ ಸಮ್ಮೇಳನ

Commonwealth ಸಂಸದೀಯ ಸಭೆ; ಸ್ಪೀಕರ್‌ ಯು.ಟಿ. ಖಾದರ್‌ ಭಾಗಿ

Commonwealth ಸಂಸದೀಯ ಸಭೆ; ಸ್ಪೀಕರ್‌ ಯು.ಟಿ. ಖಾದರ್‌ ಭಾಗಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.