ಫೀವರ್‌, ಟೆಸ್ಟಿಂಗ್‌ ಸಂಚಾರಿ ವಾಹನ ಸಿದ್ಧ!


Team Udayavani, May 27, 2020, 7:54 AM IST

fever-test

ರಾಮನಗರ: ಕೋವಿಡ್‌-19 ಸೋಂಕು ಪತ್ತೆಗೆ ಫೀವರ್‌ ಕ್ಲಿನಿಕ್‌ ಮತ್ತು ರ್‍ಯಾಂಡಮ್‌ ಟೆಸ್ಟಿಂಗ್‌ ಸಂಚಾರಿ ವಾಹನಕ್ಕೆ ಡೀಸಿ ಎಂ.ಎಸ್‌. ಅರ್ಚನಾ ಚಾಲನೆ ನೀಡಿದರು. ಕ್ಲಿನಿಕ್‌ ಮತ್ತು ರ್‍ಯಾಂಡಮ್‌ ಟೆಸ್ಟಿಂಗ್‌ ವಾಹ ನವಾಗಿ  ಪರಿವರ್ತನೆಯಾಗಿರುವ ಕೆಎಸ್‌ಆರ್‌ ಟಿಸಿ ಬಸ್‌ಗೆ ನಗರದ ಸರ್ಕಾರಿ ಕಚೇರಿಗಳ ಸಂಕಿರ್ಣದ ಆವರಣದಲ್ಲಿ ಜಿಲ್ಲಾಧಿಕಾರಿಗಳು ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.

ಕೋವಿಡ್‌-19 ಸೋಂಕು ಪತ್ತೆಗಾಗಿ ಈಗಾ ಗಲೇ ಜಿಲ್ಲಾದ್ಯಂತ  ರ್‍ಯಾಂಡಮ್‌ ಟೆಸ್ಟಿಂಗ್‌ ಮಾಡಲಾಗುತ್ತಿದೆ. ಹೀಗೆ ರ್‍ಯಾಂಡಮ್‌ ಟೆಸ್ಟ್‌ ಮಾಡಿದ್ದರಿಂದಲೇ ಮಾಗಡಿಯಲ್ಲಿ ಬಸ್‌ ಚಾಲಕರೊಬ್ಬರಲ್ಲಿ ಸೋಂಕು ಇರುವುದು ಪತ್ತೆ ಯಾಗಿದೆ. ಟೆಸ್ಟಿಂಗ್‌ ಇನ್ನಷ್ಟು ಪರಿಣಾಮಕಾರಿ ಗೊಳಿಸುವ ಉದ್ದೇಶದಿಂದ  ಕೆಎಸ್‌ಆರ್‌ಟಿಸಿ ತನ್ನ ಒಂದು ಬಸ್‌ನ್ನು ತಪಾಸಣೆ ಪರಿವರ್ತಿಸಿ ಕೊಟ್ಟಿದೆ. ಮತ್ತೂಂದು ಬಸ್‌ಗಾಗಿ ಜಿಲ್ಲಾಡಳಿತ ಬೇಡಿಕೆಯಿಟ್ಟಿದೆ. ಮತ್ತೂಂದು ಬಸ್‌ ಬಂದರೆ ಎರಡು ತಾಲೂಕುಗಳಿಗೆ ಒಂದು ಬಸ್‌ ನಿಯೋಜಿಸಲಾಗುವುದು ಎಂದರು.

ಸದರಿ ವಾಹನದಲ್ಲಿ ವೈದ್ಯರು ಕುಳಿತು ಕೊಳ್ಳಲು ವ್ಯವಸ್ಥೆಯಿದೆ. ರೋಗಿಯನ್ನು ತಪಾಸಣೆ ಮಾಡಲು ಹಾಸಿಗೆ, ಕೈತೊಳೆದುಕೊಳ್ಳಲು ವಾಷ್‌ ಬೇಸಿನ್‌ ಇದೆ. ಬಸ್‌ನಲ್ಲಿ ಗಂಟಲು ದ್ರವ ಪಡೆದುಕೊಳ್ಳಲು ಕ್ಯೂಬಿಕಲ್‌ ಸ್ಥಾಪನೆ ಯಾಗಿದೆ  ಎಂದು ವಿವರಿಸಿದರು. ಬಸ್‌ನಲ್ಲಿ ಒಬ್ಬ ವೈದ್ಯರು, ನರ್ಸ್‌, ಲ್ಯಾಬ್‌ ಟೆಕ್ನಿಷಿಯನ್‌, ಡಿ ಗ್ರೂಪ್‌ ನೌಕರರು ಇರಲಿದ್ದಾರೆ ಎಂದು ಮಾಹಿತಿ ಕೊಟ್ಟರು. ವಾಹನವು ಜನಸಂದಣಿ ಹೆಚ್ಚಿಗೆ ಇರುವ ಬಸ್‌ ನಿಲ್ದಾಣಗಳು, ಎಪಿಎಂಸಿ ಮಾರುಕಟ್ಟೆ, ರೇಷ್ಮೆ ಮಾರುಕಟ್ಟೆ ಮುಂತಾದ ಕಡೆ ದಿನನಿತ್ಯ ಸಂಚರಿಸಲಿದೆ ಎಂದರು.

ಸದ್ಯದಲ್ಲೇ ಸೋಂಕು ಪತ್ತೆ ಪ್ರಯೋಗಾಲಯ: ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ಸುಮಾರು 1.5 ಕೋಟಿ ರೂ. ವೆಚ್ಚದಲ್ಲಿ ಕೋವಿಡ್‌-19 ಪ್ರಯೋಗಾಲ ಯ ಸದ್ಯದಲ್ಲೇ ಸ್ಥಾಪನೆಯಾಗಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ನಗರದಲ್ಲಿ ನಿರ್ಮಾಣ ಪೂರ್ಣ ಹಂತದಲ್ಲಿರುವ ಜಿಲ್ಲಾಸ್ಪ ತ್ರೆಯ ಕಟ್ಟಡದಲ್ಲಿ ಪ್ರಯೋಗಾಲಯ ಸ್ಥಾಪನೆ ಯಾಗಲಿದೆ.

ನಾಲ್ಕೈದು ದಿನಗಳಲ್ಲಿ ಪ್ರಯೋ ಗಾಲಯಕ್ಕೆ ಬೇಕಾದ ಎಲ್ಲಾ ಯಂತ್ರೋ‌ಪಕರಣಗಳು, ಸಾಧನಗಳು ಬರಲಿವೆ.  ತದನಂತರ ಪ್ರಯೋಗಾಲಯ ಸ್ಥಾಪನೆ ಯಾಗಲಿದೆ ಎಂದರು. ರಾಮನಗರದಲ್ಲಿ ಕೋವಿಡ್‌-19 ಆಸ್ಪತ್ರೆ ಇದ್ದಾಗ್ಯೂ ಮಾಗಡಿ ತಾಲೂಕಿನ ಮಾರಸಂದ್ರ ಗ್ರಾಮದಲ್ಲಿ 2 ವರ್ಷದ ಮಗುವಿಗೆ  ಕೋವಿಡ್‌ 19 ಸೋಂಕು ಪತ್ತೆಯಾಗಿದ್ದು, ಸದರಿ ಮಗುವ ನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ದ್ದೇಕೆ? ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿಗಳು, ರಾಮನಗರದ ಕೋವಿಡ್‌ -19 ಆಸ್ಪತ್ರೆಯಲ್ಲಿ ಸೋಂಕಿಗೆ ಚಿಕಿತ್ಸೆ ನೀಡಲು ಸಜ್ಜಾಗಿದೆ.

ಆದರೆ ತೀರಾ ಚಿಕ್ಕ  ಮಕ್ಕಳು ಮತ್ತು 60 ವರ್ಷ ಮೀರಿದವರು ಹೈ ರಿಸ್ಕ್ ರೋಗಿಗಳಾ ಗಿದ್ದಾರೆ. ಇದೊಂದೇ ಕಾರಣಕ್ಕೆ ಮಗುವ ನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಲಾ ಗಿದೆ ಎಂದರು. ಅಪರ ಜಿಲ್ಲಾಧಿಕಾರಿ ಬಿ.ಪಿ. ವಿಜಯ್‌, ಡಿಎಚ್‌ಒ ಡಾ. ನಿರಂಜನ್‌,  ಆರ್‌ಸಿಎಚ್‌ ಅಧಿಕಾರಿ ಡಾ. ಪದ್ಮಾ ಇನ್ನಿತರ ಅಧಿಕಾರಿಗಳು ಹಾಜರಿದ್ದರು.

ಟಾಪ್ ನ್ಯೂಸ್

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

20-belagavi-2

Belagavi: ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳ ಈಡೇರಿಕೆಗೆ ಕ್ರಮ: ಸಚಿವೆ ಲಕ್ಷ್ಮೀ

Umar Khalid: ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್‌ಗೆ 7 ದಿನಗಳ ಮಧ್ಯಂತರ ಜಾಮೀನು

Umar Khalid: ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್‌ಗೆ 7 ದಿನಗಳ ಮಧ್ಯಂತರ ಜಾಮೀನು

‌Actress: 31 ವರ್ಷದ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್

‌Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್

1-mannn

Mumbai Train; ಮಹಿಳಾ ಬೋಗಿಗೆ ಬೆ*ತ್ತಲೆ ಯಾಗಿ ನುಗ್ಗಿದ ಪುರುಷ!!: ವಿಡಿಯೋ ವೈರಲ್

8

Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ವಿಡಿಯೋಗಳಿವು..

14-uv-fusion

Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Channapatna: ಕೆಲಸದ ಒತ್ತಡ ತಾಳಲಾರದೆ ಮುಖ್ಯ ಶಿಕ್ಷಕ ವಿಷ ಸೇವಿಸಿ ಆತ್ಮಹ*ತ್ಯೆ

Channapatna: ಕೆಲಸದ ಒತ್ತಡ ತಾಳಲಾರದೆ ಮುಖ್ಯ ಶಿಕ್ಷಕ ವಿಷ ಸೇವಿಸಿ ಆತ್ಮಹ*ತ್ಯೆ

10-ramanagara

Ramanagara: ಕಾಡಾನೆ ದಾಳಿಗೆ ರೈತ ಬಲಿ

DOG (2)

Ramanagara:ನಾಯಿ ಜತೆ ಮೂವರ ಅನೈಸರ್ಗಿಕ ಲೈಂಗಿ*ಕ ಚಟುವಟಿಕೆ: ಓರ್ವ ಸೆರೆ

Magadi Bus Stand: ಮಾಗಡಿ ಬಸ್‌ ನಿಲ್ದಾಣದಲ್ಲಿ ಸಮಸ್ಯೆಗಳ ಸರಮಾಲೆ

Magadi Bus Stand: ಮಾಗಡಿ ಬಸ್‌ ನಿಲ್ದಾಣದಲ್ಲಿ ಸಮಸ್ಯೆಗಳ ಸರಮಾಲೆ

Toll: ವರ್ಷದಲ್ಲೇ 438 ಕೋ.ರೂ. ಟೋಲ್‌ ಶುಲ್ಕ ಸಂಗ್ರಹ

Toll: ವರ್ಷದಲ್ಲೇ 438 ಕೋ.ರೂ. ಟೋಲ್‌ ಶುಲ್ಕ ಸಂಗ್ರಹ

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

17-bus

Emotions: ಭಾವನೆಗಳ ಬಸ್‌ ನಿಲ್ದಾಣ

20-belagavi-2

Belagavi: ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳ ಈಡೇರಿಕೆಗೆ ಕ್ರಮ: ಸಚಿವೆ ಲಕ್ಷ್ಮೀ

19-thirthahalli

Thirthahalli: ನದಿಗೆ ಹಾರಿ ಕಾಲೇಜು ವಿದ್ಯಾರ್ಥಿ ಮೃತ್ಯು

18-aranthodu

Aranthodu: ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ; ಪ್ರಯಾಣಿಕರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.