ತಮಟೆ ಕಲಾವಿದ ತಿಮ್ಮಯ್ಯಗೆ ಜಾನಪದ ಅಕಾಡೆಮಿ ಪ್ರಶಸ್ತಿ
Team Udayavani, Jan 5, 2021, 3:34 PM IST
ರಾಮನಗರ: ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಬ್ರಹ್ಮಿಣಿಪುರ ಗ್ರಾಮದ ತಮಟೆ ಕಲಾವಿದ ತಿಮ್ಮಯ್ಯ ಅವರು 2020ನೇ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
70 ವರ್ಷ ವಯಸ್ಸಿನ ತಿಮ್ಮಯ್ಯ ತೀರಾ ಬಡ ಕುಟುಂಬದಿಂದ ಬಂದವರು. 15ನೇ ವಯಸ್ಸಿಗೆ ತಮಟೆ ಕಲೆ ಯಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮಸಮಕಾಲೀನರ ಪೈಕಿ ಬಹುತೇಕರು ಸಕ್ರಿಯವಾಗಿಲ್ಲ. ಆದರೆ, ತಿಮ್ಮಯ್ಯ ಇಂದಿಗೂ ತಮಟೆ ನುಡಿಸುತ್ತಾರೆ.ತಿಮ್ಮಯ್ಯ ತಮ್ಮ ತಂದೆ ಹೋಟ್ಟಯ್ಅವರಿಂದ ತಮಟೆ ಕಲೆಯನ್ನು ಕಲಿತರು. ವಿದ್ಯಾಭ್ಯಾಸದಿಂದ ದೂರವುಳಿದಿರುವ ತಿಮ್ಮಯ್ಯ, ತಮ್ಮದೇ ತಂಡ ರಚಿಸಿಕೊಂಡು ತಮಟೆ ಮೇಳ ನಡೆಸಿಕೊಡುತ್ತಿದ್ದಾರೆ. ಜಾನಪದ ಕಲಾವಿದರಿಗೆ ದೊರೆ ಯುವ ಮಾಸಾಶನ ತಮಗೆದೊರೆಯುತ್ತಿಲ್ಲ ಎಂದು ಅಲವತ್ತಕೊಂಡಿದ್ದಾರೆ. ತಮಟೆ ಬಾರಿಸುವದಕ್ಕೆ ಅವಕಾಶ ಸಿಗದಿದ್ದರೆ ಕೂಲಿ ಮಾಡಿ ಜೀವನ ಸಾಗಿಸುತ್ತಾರೆ.
ಜಾನಪದ ಅಕಾಡೆಮಿ ಪ್ರಶಸ್ತಿ ಬಗ್ಗೆಪ್ರತಿಕ್ರಿಯಿಸಿರುವ ಅವರು, ತಮಟೆಕಲೆಗೆ ಸಿಕ್ಕ ಗೌರವ ಎಂದಿದ್ದಾರೆ. ತಿಮ್ಮಯ್ಯ ಅವರದ್ದು ತುಂಬು ಜೀವನ. ಒಬ್ಬ ಪುತ್ರಿಯನ್ನು ಮದುವೆ ಮಾಡಿಕೊಟ್ಟಿದ್ದಾರೆ. ಪುತ್ರನಿದ್ದು ಆತ ಖಾಸಗಿ ಉದ್ಯೋಗಿ. ಮಡದಿಯೂ ಕೂಲಿ ಮಾಡಿ ಜೀವನದ ಭಾರ ತಗ್ಗಿಸುತ್ತಿದ್ದಾರೆ. ತಂದೆ ಕಟ್ಟಿಸಿರುವ ಮನೆಯಲ್ಲೇ ವಾಸ. ಅದು ಸಹ ಇದೀಗ ಶಿಥಿಲವಾಗಿದೆ. ಫೆಬ್ರವರಿಯಲ್ಲಿ ಚಾಮರಾಜನಗರದಲ್ಲಿ ನಡೆ ಯುವ ಸಮಾರಂಭದಲ್ಲಿ ತಿಮ್ಮಯ್ಯ ಅವರಿಗೆ ಪ್ರಶಸ್ತಿಪ್ರದಾನವಾಗಲಿದೆ ಎಂದು ಅಕಾಡೆಮಿಯ ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Election: ಮಗನಿಗಾಗಿ ಎಚ್‌ಡಿಕೆ ನಿಮ್ಮ ಊರು ಹುಡುಕಿ ಬರುತ್ತಾರಷ್ಟೇ: ಡಿ.ಕೆ.ಸುರೇಶ್
Police FIR: ಎಫ್ಐಆರ್ ದಾಖಲಿಸಿ ನನ್ನ ವಿರುದ್ಧ ಸರ್ಕಾರದಿಂದ ದ್ವೇಷ ಸಾಧನೆ: ಎಚ್‌ಡಿಕೆ
By Election: ಚನ್ನಪಟ್ಟಣದಲ್ಲಿ ಧರ್ಮ-ಅಧರ್ಮದ ನಡುವೆ ಚುನಾವಣೆ: ಎಚ್.ಡಿ.ಕುಮಾರಸ್ವಾಮಿ
By Poll: ರಣರಂಗವೂ ಇಲ್ಲ, ಚದುರಂಗವೂ ಇಲ್ಲ, ಜನರೇ ಪಟ್ಟಿ ಮಾಡಿ, ಅಂಕ ನೀಡ್ತಾರೆ: ಡಿಕೆಶಿ
By Election: ಮಾತೃ ಹೃದಯಗಳಲ್ಲಿ ಕಣ್ಣೀರು ಸಹಜ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ
MUST WATCH
ಹೊಸ ಸೇರ್ಪಡೆ
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.