ಮಾಜಿ ಶಾಸಕರು ಸಣ್ಣತನ ಬಿಡಲಿ: ರಾಮಣ್ಣ
Team Udayavani, May 16, 2020, 6:07 AM IST
ಮಾಗಡಿ: ಶಾಸಕ ಎ.ಮಂಜುನಾಥ್ ಕಾಂಗ್ರೆಸ್ ಸೇರಲಿದ್ದಾರೆ ಎಂದು ಹೇಳಿ ಮಾಜಿ ಶಾಸಕ ಎಚ್. ಸಿ.ಬಾಲಕೃಷ್ಣ ಸಣ್ಣತನ ತೋರಿಸಿದ್ದಾರೆ. ಅದನ್ನು ಜೆಡಿಎಸ್ ತೀವ್ರವಾಗಿ ಖಂಡಿಸುತ್ತೇವೆ ಎಂದು ತಾಲೂಕು ಜೆಡಿಎಸ್ ಅಧ್ಯಕ್ಷ ಪೊಲೀಸ್ ರಾಮಣ್ಣ ತಿಳಿಸಿದರು. ಪಟ್ಟಣದ ಜೆಡಿಎಸ್ ಭವನದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಮಾಜಿ ಶಾಸಕರು, ಹಾಲಿ ಶಾಸಕರ ತೇಜೋವಧೆ ಮಾಡುವುದನ್ನು ನಿಲ್ಲಿಸಬೇಕು. ಕೊರೊನಾ ನೆಪ ಮಾಡಿಕೊಂಡು ಅವರಿಗೆ ಮತ ಹಾಕಿರುವವರಿಗೆ ಆಹಾರ ಪದಾರ್ಥಗಳ ಕಿಟ್ ಹಂಚಿ ತಮ್ಮ ಮುಂದಿನ ಭವಿಷ್ಯಕ್ಕೆ ಅನುಕೂಲ ಮಾಡಿ ಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಕೆ.ಕೃಷ್ಣಮೂರ್ತಿ ಮಾತನಾಡಿ, ಶಾಸಕ ಎ.ಮಂಜು ವಿರುದಟಛಿ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ.
ಶಾಸಕರು ಏಕವಚನಲ್ಲಿ ಮಾತನಾಡುವುದಕ್ಕೆ ಮಾಜಿ ಶಾಸಕರೇ ನೇರ ಕಾರಣ. ಬಿಡದಿ ಭಾಗದಲ್ಲಿ 10 ವರ್ಷ ಶಾಸಕರಾಗಿದ್ದ ಮಾಜಿ ಶಾಸಕರು ಸಮಸ್ಯೆ ಬಗೆಹರಿಸಲಿ. ಶಾಸಕರ ಮೇಲೆ ಗೂಬೆ ಕೂರಿಸುವ ಕೆಲಸ ಬಿಡಬೇಕು. ಹೇಗಾದರೂ ರೈತರಿಗೆ ಒಳ್ಳೆಯದಾದರೆ ಸಾಕು. ಶಾಸಕರ ವೈಯಕ್ತಿಕ ವಿಚಾರವನ್ನ ಜನಸಾಮಾನ್ಯರ ನಡುವೆ ತರುವುದು ತಪ್ಪು ಎಂದಿದ್ದಾರೆ. ವಾಟರ್ ಬೋರ್ಡ್ ರಾಮಣ್ಣ, ಬಿ.ಆರ್. ಗುಡ್ಡೇಗೌಡ ಮಾತನಾಡಿದರು.
ಪುರಸಭೆ ಸದಸ್ಯ ಕೆ.ವಿ.ಬಾಲು, ಎಂ.ಎನ್.ಮಂಜುನಾಥ್, ಕೆ.ಕಾಂತರಾಜು, ಮಾಜಿ ಅಧ್ಯಕ್ಷ ಪಿ.ವಿ.ಸೀತಾರಾಂ, ರಾಜಣ್ಣ, ಗಂಗರಾಜು, ತಾಪಂ ಸದಸ್ಯ ಶಂಕರ್, ರೂಪೇಶ್, ಅನಿಲ್, ಹೇಮಾವತಿ ಭೈರಪ್ಪ, ತಾಲೂಕು ಜೆಡಿಎಸ್ ಯುವ ಅಧ್ಯಕ್ಷ ವಿಜಯ ಕುಮಾರ್, ತಾಲೂಕು ಮಹಿಳಾ ಅಧ್ಯಕ್ಷೆ ಶೈಲಜಾ, ಸುರೇಶ್, ನವಾಬ್, ವೆಂಕಟೇಶ್ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!
By Election: ದೇವೇಗೌಡರನ್ನು 1994ರಲ್ಲಿ ಮುಖ್ಯಮಂತ್ರಿ ಮಾಡಿದ್ದೇ ನಾನು: ಸಿಎಂ ಸಿದ್ದರಾಮಯ್ಯ
Ramanagara: ಆರು ಟ್ರಾನ್ಸ್ ಫಾರ್ಮರ್ ಗಳ ಕಳವು
Congress Government: ಉಪಚುನಾವಣೆ ಬಳಿಕ ಗೃಹಲಕ್ಷ್ಮಿ ಸ್ಥಗಿತ: ಎಚ್.ಡಿ.ದೇವೇಗೌಡ ಭವಿಷ್ಯ
By Election: ಗದ್ದುಗೆ ಸೈನಿಕ ಯೋಗೇಶ್ವರ್‌ಗೋ? ನಿಖಿಲ್ ಕುಮಾರಸ್ವಾಮಿಗೋ?
MUST WATCH
ಹೊಸ ಸೇರ್ಪಡೆ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.