“ಸೆಕ್ಸಿಗೀತಾ’ʼ ಹೆಸರಲ್ಲಿ 41 ಲಕ್ಷ ವಂಚಿಸಿದವನ ಸೆರೆ
Team Udayavani, Aug 7, 2023, 12:49 PM IST
ರಾಮನಗರ: ಫೇಸ್‌ಬುಕ್‌ನಲ್ಲಿ ಸೆಕ್ಸಿ ಗೀತಾ ಹೆಸರಿನಲ್ಲಿ ಖಾತೆ ತೆರೆದು ಇತ್ತೀಚಿಗೆ ಹಾರೋಹಳ್ಳಿಯ ಯುವಕನಿಗೆ ವಂಚಿಸಿದ್ದ ಯುವಕನನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ರವಿಕುಮಾರ್(24) ಬಂಧಿತ ವ್ಯಕ್ತಿ. ಮೂಲತಃ ಕುಣಿಗಲ್ ತಾಲೂಕಿನ ಕಗ್ಗೇ ರಿಯ ನಿವಾಸಿಯಾಗಿದ್ದ ಈತ, ಬೆಂಗಳೂರಿನ ದಾಸರಹಳ್ಳಿಯ ಪಿಜಿಯೊಂದ ರಲ್ಲಿ ನೆಲೆಸಿದ್ದ. ಖಾಸಗಿ ಡಾಟಾಬೇಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಈತ, ಸಾಮಾಜಿಕ ಜಾಲತಾಣಗಳ ಬಳಕೆ, ಆನ್‌ಲೈನ್ ತಂತ್ರಜ್ಞಾನದ ಬಗ್ಗೆ ಚೆನ್ನಾಗಿ ತಿಳಿದಿದ್ದ.
ಘಟನೆ ಹಿನ್ನೆಲೆ: ಫೇಸ್‌ಬುಕ್‌ನಲ್ಲಿ ಸೆಕ್ಸಿ ಗೀತಾ ಎಂಬ ಖಾತೆ ತೆರೆದು ಹಾರೋಹಳ್ಳಿಯ ರಾಜೇಶ್‌ನ ಸ್ನೇಹ ಬೆಳೆಸಿದ್ದ ರವಿಕುಮಾರ್, ಸುಂದರ ಹುಡುಗಿಯರ ಫೋಟೋ ಕಳುಹಿಸಿ, ನಿನಗೆ ಬೇಕಾದವರನ್ನು ಆಯ್ಕೆ ಮಾಡಿಕೋ ಎಂದು ಹೇಳಿ ಗಾಢ ಸ್ನೇಹ ಬೆಳೆಸಿಕೊಂಡಿದ್ದ. ಇದೇ ರೀತಿ ಬೇರೆ ಹುಡುಗರಿಗೂ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದ. ಕ್ರಮೇಣ ಸೆಕ್ಸ್ ಚಾಟ್ ಮಾಡುತ್ತಿದ್ದ. ಬಳಿಕ ಮೊಬೈಲ್ ನಂಬರ್ ಪಡೆದು ಗಂಟೆಗಟ್ಟಲೆ ಹುಡುಗಿಯರ ದನಿಯಲ್ಲಿ ಮಾತನಾಡುತ್ತಿದ್ದ. ಬಳಿಕ ವಿವಿಧ ನೆಪ ಹೂಡಿ ಗೂಗಲ್ ಪೇ, ಫೋನ್ ಪೇ ಮೂಲಕ ಹಣ ಕೀಳುತ್ತಿದ್ದ.
ಈತನ ಫೋಟೋ ಬಳಕೆ ಮಾಡಿಕೊಂಡು ಅಶ್ಲೀಲವಾಗಿ ಎಡಿಟ್ ಮಾಡಿ ಬ್ಲಾಕ್ ಮೇಲ್ ಮಾಡಿದ್ದ. ಇದಕ್ಕೆ ಅಂಜಿದ ರಾಜೇಶ್ 41 ಲಕ್ಷ ರೂ. ಹಣ ನೀಡಿದ್ದ. ಇದರಿಂದ ರೋಸಿ ಹೋದ ರಾಜೇಶ್, ಸೈಬರ್‌ಕ್ರೈಂ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು.
ವಂಚಿಸಿದ್ದು ಅವಳಲ್ಲ ಅವನು: ಈ ಪ್ರಕರಣ ಗಂಭೀರವಾಗಿ ಪರಿಗಣಿಸಿದ ಪೊಲೀಸರು ಸೆಕ್ಸಿಗೀತಾ ಫೇಸ್‌ಬುಕ್ ಖಾತೆ ಆಧಾರದ ಮೇಲೆ ರವಿಕುಮಾರ್‌ನನ್ನು ಬಂಧಿಸಿದ್ದಾರೆ. ನಂತರ ಸೆಕ್ಸಿಗೀತಾ ಅವಳಲ್ಲ, ಅವನು ಎಂಬುದು ಬೆಳಕಿಗೆ ಬಂದಿದೆ. ಪೊಲೀಸರಿಗೆ ಸಿಕ್ಕಿಬಿದ್ದಿರುವ ಆರೋಪಿ ಮೋಜಿಗಾಗಿ ಆನ್‌ಲೈನ್ ವಂಚನೆ ಜಾಡು ಹಿಡಿದಿದ್ದ ಎಂದು ಪೊಲೀಸರು ಹೇಳಿದ್ದಾರೆ.
ವಿವಾಹ ಆಗುವುದಾಗಿ ನಂಬಿಸಿ ವಂಚನೆ: ಹಾರೋಹಳ್ಳಿ ರಾಜೇಶ್ ಜತೆ ಸ್ನೇಹ ಬೆಳೆಸಿದ್ದ ಆರೋಪಿ, ಆತನೊಂದಿಗೆ ಹುಡುಗಿ ಧ್ವನಿಯಲ್ಲಿ ಗಂಟೆಗಟ್ಟಲೆ ಮಾತುಕತೆ ನಡೆಸುತ್ತಿದ್ದ. ಆತನಿಗೆ ಮದುವೆ ಆಗಿಲ್ಲ ಎಂಬ ವೀಕ್‌ನೆಸ್ ತಿಳಿದ ವಂಚಕ, ವಿವಾಹ ಆಗುವುದಾಗಿ ನಂಬಿಸಿ ಹಣ ಕಿತ್ತಿದ್ದಾನೆ. ಖುದ್ದು ಭೇಟಿ ಆಗಲು ರಾಜೇಶ್ ಕೇಳಿದಾಗ, ನಮ್ಮ ಕುಟುಂಬದಲ್ಲಿ ಸಮಸ್ಯೆ ಇದೆ ಎಂದು ಭೇಟಿ ಆಗುವುದನ್ನು ಉಪಾಯದಿಂದ ತಪ್ಪಿಸಿದ್ದ.
ಹಣ ಕೊಡದಿದ್ದಕ್ಕೆ ಬ್ಲಾಕ್‌ಮೇಲ್ : ರಾಜೇಶ್‌ರಿಂದ ಆರೋಪಿತ ವ್ಯಕ್ತಿ ಸಾಕಷ್ಟು ಹಣ ಪಡೆದಿ ದ್ದಾನೆ. ಪದೇ ಪದೆ ಹಣಕ್ಕೆ ಬೇಡಿಕೆ ಇಡುತ್ತಿದ್ದ ಕಾರಣ, ಒಂದು ಹಂತದಲ್ಲಿ ಹಣ ನೀಡುವುದು ಸಾಧ್ಯವಿಲ್ಲ ಎಂದು ರಾಜೇಶ್ ತಿಳಿಸಿದ್ದಾರೆ. ತಕ್ಷಣ ಆ್ಯಪ್ ಸಹಾಯದಿಂದ ರಾಜೇಶ್‌ನ ಫೋಟೋ ಪಡೆದು ಅಶ್ಲೀಲವಾಗಿ ಎಡಿಟ್ ಮಾಡಿ, ಹಣ ನೀಡದೆ ಹೋದರೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿ ಮರ್ಯಾದೆ ಕಳೆಯುತ್ತೇನೆ ಎಂದು ಬ್ಲಾಕ್ ಮೇಲ್ ಮಾಡಲು ಆರಂಭಿಸಿದ್ದಾನೆ. ಇದರಿಂದ ರಾಜೇಶ್ ಪೊಲೀಸ್ ಠಾಣೆ ಮೆಟ್ಟಿಲೇರುವಂತಾಯಿತು.
ದೂರುದಾರ ನೀಡಿದ್ದ ಮೊಬೈಲ್ ಸಂಖ್ಯೆ ಆಧಾರದ ಮೇಲೆ ದಾಸರಹಳ್ಳಿ ಮೆಟ್ರೋ ಸ್ಟೇಷನ್ ಬಳಿಯ ಪಿಜಿಯಲ್ಲಿ ಪೊಲೀಸರು ಆರೋಪಿ ಬಂಧಿಸಿದ್ದಾರೆ.
ಮನೆಯಿಂದ ಹೊರಹಾಕಿದ್ದ ಕುಟುಂಬಸ್ಥರು:
ಆರೋಪಿತನಲ್ಲಿ ಹೆಣ್ಣಿನ ಭಾವನೆಗಳು ಹೆಚ್ಚು ಕಾಣುತ್ತಿದ್ದವು. ಈತನ ಚಟುವಟಿಕೆಗಳಿಂದ ಮುಜುಗರ ಗೊಂಡಿದ್ದ ಕುಟುಂಬದವರು ಈತನನ್ನು ಮನೆಯಿಂದ ಹೊರಗೆ ಕಳುಹಿಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇನ್ನು ವಂಚನೆ ಮೂಲಕ ಸಂಪಾದಿಸಿದ ಹಣದಲ್ಲಿ ಯುವಕರೊಂದಿಗೆ ತಿರು ಗಾಡಿ ಮೋಜು ಮಸ್ತಿ ಮಾಡುತ್ತಿದ್ದ, ತನ್ನ ಸ್ನೇಹಿತರು ತನ್ನ ಜೊತೆ ಬಿಟ್ಟು ಹೋಗದಿರಲಿ ಎಂಬ ಕಾರಣಕ್ಕೆ ಅವರನ್ನು ಸಂತೋಷಪಡಿಸಲು ಈ ರೀತಿ ಮಾಡುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.