
ಜಿಲ್ಲಾದ್ಯಂತ ಗಾಂಧೀಜಿ, ಶಾಸ್ತ್ರೀಜಿ ಜಯಂತಿ
Team Udayavani, Oct 3, 2020, 12:53 PM IST

ರಾಮನಗರ: ಜಿಲ್ಲಾದ್ಯಂತ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀಜಿ ಅವರ ಜನ್ಮದಿನವನ್ನು ಸರಳವಾಗಿ ಆಚರಿಸಲಾಯಿತು.
ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ನಾಯಕರ ಭಾವಚಿತ್ರಗಳನ್ನಿರಿಸಿ ಪುಷ್ಪ ನಮನ ಸಲ್ಲಿಸಿದರು. ನಗರದ ಜಿಲ್ಲಾ ಕಚೇರಿಗಳ ಸಂಕೀರ್ಣದಲ್ಲಿ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಮತ್ತು ಅಪರ ಜಿಲ್ಲಾಧಿ ಕಾರಿ ಜವರೇಗೌಡ ಅವರು ಮಹಾತ್ಮರಿಗೆ ಪುಷ್ಪನಮನ ಸಲ್ಲಿಸಿದರು.
ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆ ಘೋಷಣೆ ಆಗಿರುವುದರಿಂದ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಕಾರ್ಯ ಕ್ರಮವನ್ನು ಸರಳವಾಗಿ ಆಚರಿಸಲಾಯಿತು. ಭಜನಾ ಗುಂಪು ಗಾಂಧೀಜಿ ಅವರ ರಘುಪತಿ ರಾಜಾರಾಂ ಮುಂತಾದ ಗೀತೆ ಹಾಡಿದರು.
ರಥಯಾತ್ರೆ: ಕನ್ನಡ ಚಳವಳಿ ವಾಟಾಳ್ ಪಕ್ಷದ ವತಿಯಿಂದ ಗಾಂಧೀಜಿ ಅವರ ಭಾವಚಿತ್ರವನ್ನು ಬೆಳ್ಳಿ ರಥದಲ್ಲಿ ಐಜೂರು ವೃತ್ತದಲ್ಲಿ ಮೆರವಣಿಗೆ ನಡೆಯಿತು. ವಾಟಾಳ್ ನಾಗ ರಾಜ್ ಅವರು ಮಹಾತ್ಮ ಗಾಂಧೀಜಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಗಾಂಧಿ ಉದ್ಯಾನ ಸ್ವಚ್ಛತೆ: ನಗರದ ನ್ಯಾಯಾಲಯ ರಸ್ತೆಯ ಮಹಾತ್ಮ ಗಾಂಧಿ ಉದ್ಯಾನವನ್ನು ಬಿಜೆಪಿ ಕಾರ್ಯಕರ್ತರು ಸ್ವಚ್ಛಗೊಳಿಸಿ ಗಾಂಧಿ ಜಯಂತಿ ಆಚರಿಸಿದರು. ಇದೇ ವೇಳೆ ಗಾಂಧೀಜಿ, ಶಾಸ್ತ್ರೀಜಿ ಅವರ ಭಾವಚಿತ್ರ ಇರಿಸಿ ಪುಷ್ಪನಮನ ಸಲ್ಲಿಸಿದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುರೇಶ್, ಜಿಲ್ಲಾ ಮಾಧ್ಯಮ ಪ್ರಮುಖ ಚಂದ್ರಶೇಖರರೆಡ್ಡಿ, ನಗರಘಟಕದ ಅಧ್ಯಕ್ಷ ಪಿ. ಶಿವಾನಂದ, ಪ್ರ.ಕಾರ್ಯದರ್ಶಿ ಡಿ.ನರೇಂದ್ರ, ಪ್ರಮುಖರಾದ ಬಿ.ದೇವರಾಜ್, ಬಾಲರಾಜು, ದಾಸ್ ರಂಗಸ್ವಾಮಿ, ವಿನೋದ್ ಭಗತ್, ರಾಮಣ್ಣ, ಟೂರ್ ದೇವರಾಜ್, ಅಚ್ಚಲು ರಾಜೇಶ್, ಬಸವ, ಮಹಿಳಾ ಘಟಕದ ಹೇಮಾವತಿ, ಸುಶೀಲಾ, ರಂಜಿತಾ ಇದ್ದರು.
ಸಸಿ ನೆಟ್ಟರು: ರಾಮನಗರ ತಾಪಂ ಮಾಜಿ ಅಧ್ಯಕ್ಷ ಗಾಣಕಲ್ ನಟರಾಜು ತಾವು ಸ್ವಯಂ ಮತ್ತು ತಮ್ಮ ಮಿತ್ರರು ಅಭಿಮಾನಿಗಳೊಡನೆ ತಮ್ಮಕ್ಷೇತ್ರವ್ಯಾಪ್ತಿಯಲ್ಲಿಗಿಡನೆಟ್ಟು ಗಾಂಧೀಜಿ ಮತ್ತು ಲಾಲ್‌ಬಹದ್ದೂರ್ ಶಾಸ್ತ್ರೀಜಿ ಅವರ ಹುಟ್ಟು ಹಬ್ಬ ಆಚರಿಸಿದರು.
ಭಾರತ ಸೇವಾದಳ: ಭಾರತ ಸೇವಾದಳ ಜಿಲ್ಲಾ ಶಾಖೆ ವತಿಯಿಂದ ಬಾಪೂ, ಶಾಸ್ತ್ರೀಜಿ ಅವರ ಜನ್ಮ ದಿನ ನಡೆಯಿತು. ಸೇವಾದಳದ ಜಿಲ್ಲಾ ಕಾರ್ಯದರ್ಶಿ ಶಿವಕುಮಾರಸ್ವಾಮಿ, ಮುಖಂಡರಾದ ಶಿವಣ್ಣ, ಅರಸು, ಎಚ್.ಎ ಸ್.ಶಿವಕುಮಾರಸ್ವಾಮಿ, ಸೋಮಶೇಖರ್, ರಾಜು ಮತ್ತಿತರರಿದ್ದರು.
ಟಾಪ್ ನ್ಯೂಸ್

Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.