![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jun 25, 2022, 2:53 PM IST
ರಾಮನಗರ: ರೇಷ್ಮೆ ನಗರಿ, ಸಪ್ತಗಿರಿಗಳ ನಾಡು ರಾಮನಗರ ಇದೀಗ ಗಾಬೇìಜ್ ಸಿಟಿ ಎಂಬ ಕುಖ್ಯಾತಿಗೆ ಭಾಜನವಾಗುತ್ತಿದೆ. ಹೌದು ನಗರದ ಯಾವುದೇ ಮುಖ್ಯ ರಸ್ತೆ , ಅಡ್ಡರಸ್ತೆ ಇರಲಿ ಕಸದ ರಾಶಿ ಮಾಮೂಲಾಗಿಬಿಟ್ಟಿದೆ.
“ಸ್ವಚ್ಛಭಾರತ ಅಭಿಯಾನ’, “ಕ್ಲೀನ್ ಸಿಟಿ’ ಅಭಿಯಾನ ಸೇರಿದಂತೆ ಹಲವು ಯೋಜನೆಗಳಲ್ಲಿ ಲಕ್ಷಾಂತರ ರೂಪಾಯಿ ವ್ಯಯಿಸಿದ್ದರು ನಗರ ಪ್ರದೇಶ ಮಾತ್ರ ಕಸಮುಕ್ತವಾಗದೆ ಇರೋದು ವಿಪರ್ಯಾಸವೇ ಸರಿ. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿನ ರಾಮನಗರ ಪಾಧಿಕಾರದ ಕಚೇರಿ ಹಾಗೂ ಪ್ರತಿಷ್ಟಿತ ವಿದ್ಯಾಸಂಸ್ಥೆಯಾದ ವಿದ್ಯಾಪೀಠ ಶಾಲೆಯ ಮುಂಭಾಗದ ರಸ್ತೆಯಲ್ಲಿ ಕಸದ ರಾಶಿ ಬಿದ್ದಿದೆ. ಅಷ್ಟೇ ಏಕೆ ಡಾ. ಬಿ.ಆರ್.ಅಂಬೇಡ್ಕರ್ ಭವನದ ಎದುರು ರಾಶಿ ಕಸ ಹಾಕಿದ್ದು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುವ ಆರೋಪ ಸ್ಥಳೀಯರದ್ದು.
ನಗರಸಭೆಯ ಅಧಿಕಾರಿಗಳು ಮೊಂಡುಚರ್ಮದವರಾಗಿದ್ದು ಎಷ್ಟು ಭಾರೀ ಮನವಿ ಮಾಡಿದರೂ ಕಸದ ಸಮಸ್ಯೆ ನಿವಾರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಾರೆ. ಕಸದ ರಾಶಿಗೇನು ಕೊರತೆಯಿಲ್ಲ: ಇನ್ನು ನಗರದ ಎಂಜಿ ರಸ್ತೆ ಹಳೆ ಬಸ್‌ನಿಲ್ದಾಣ, ಕೆಂಪೇಗೌಡ ಸರ್ಕಲ್ ಹಾಗೂ ಮಹಿಳಾ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಮುಂಭಾಗದಲ್ಲಿ ಕಸದ ರಾಶಿಗೇನು ಕೊರತೆಯಿಲ್ಲ, ನಗರದ ವಾಣಿಜ್ಯ ಪ್ರದೇಶದಲ್ಲಿಯೇ ಕಸದ ರಾಶಿ ಬೀಳುತ್ತಿದ್ದು ಕಸ ಹಾಕುವವರ ವಿರುದ್ಧ ಕ್ರಮ ಕೈಗೊಳ್ಳಬೇಕಾದ ನಗರಸಭೆ ಅಧಿಕಾರಿಗಳು ತಮಗೂ ಇದಕ್ಕೂ ಸಂಬಂಧವಿಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ.
ಜೊತೆಗೆ ಕಸ ಎತ್ತುವವರ ಬಳಿ ರಾಮನಗರ ಪ್ರಾಧಿಕಾರದ ಮುಂಭಾಗ ಚಿಲ್ಲರೆ ಅಂಗಡಿ ವ್ಯಾಪಾರಿ ವಿಕಾಸ್ ಎಂಬುವವರು ಪೂರ್ಣ ಕಸ ತೆಗೆಯುವಂತೆ ಹೇಳಿದ್ದಾರೆ ಅದಕ್ಕೆ ಸೊಪ್ಪುಹಾಕದೆ ತಮ್ಮ ಇಚ್ಚೆಯಂತೆ ಕಸ ಎತ್ತುತ್ತಾರೆ ಎನ್ನುವ ಆರೋಪ ಸಾರ್ವ ಜನಿಕರದ್ದು. ರಸ್ತೆ ಬದಿ ಕಸ ಸುರಿದರೆ ಕಠಿಣ ಕ್ರಮ: ಕಸ ತೆರವು ಮಾಡಿಸುವುದು ನಗರಸಭೆ ಅಧಿಕಾರಿಗಳ ಕರ್ತವ್ಯ ಅನ್ನೋದರ ಜೊತೆ ಜೊತೆಗೆ ಸಾರ್ವಜನಿಕರ ಜವಾಬ್ದಾರಿ ಕೂಡ ಹೆಚ್ಚಾಗಿರುತ್ತದೆ. ಪ್ರತಿ ಮನೆಮನೆಗೂ ವಾಹನಗಳು ಆಟೋಗಳನ್ನು ಕಳಿಸುವ ಮೂಲಕ ಕಸ ಎತ್ತುವ ಕಾರ್ಯ ಮಾಡುತ್ತಿದ್ದೇವೆ ಆದರೆ ಕಸ ಸಂಗ್ರಹಣೆ ವಾಹನಗಳಿಗೆ ಕಸ ಹಾಕುವಲ್ಲಿ ವಾಣಿಜ್ಯ ಪ್ರದೇಶಗಳಲ್ಲಿ ಮುಂದಾಗುವುದಿಲ್ಲ.
ಎಲ್ಲರೂ ಅಂಗಡಿ ಬಾಗಿಲು ತೆಗೆಯುವುದು 9 ಗಂಟೆಯ ಮೇಲಾಗುತ್ತದೆ ಅಷ್ಟರಲ್ಲಿ ನಮ್ಮ ಕಾರ್ಮಿಕರು ಕಸ ತೆಗೆದುಕೊಂಡು ಬಂದಿರುತ್ತಾರೆ. ನಂತರ ಅಂಗಡಿಯವರು ಕಸ ಸುರಿಯುವುದು ಮಾಮೂಲಾಗಿದೆ ಎನ್ನುವ ನಗರಸಭೆಯ ಆರೋಗ್ಯ ಶಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಸುಬ್ರಮಣ್ಯ, ಮುಂದಿನ ದಿನಗಳಲ್ಲಿ ಬೀದಿಯಲ್ಲಿ ರಸ್ತೆ ಬದಿ ಕಸ ಸುರಿಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳುತ್ತಾರೆ.
ಗಾರ್ಬೇಜ್ ಸಿಟಿಯಾಗುವುದನ್ನ ತಪ್ಪಿಸಬೇಕಿದೆ: ನಗರದ ಪ್ರಮುಖ ಬೀದಿಗಳಲ್ಲಿಯೇ ಹೀಗಾದರೆ ಇನ್ನೂ ಗಲ್ಲಿ ಪ್ರದೇಶದ ಪಾಡು ಹೇಳತೀರದಾಗಿದೆ, ಈಗ ಮಳೆ ಸುರಿಯುತ್ತಿದ್ದು ಕಸದ ರಾಶಿ ಗಬ್ಬೆದ್ದು ನಾರುತ್ತದೆ ಇದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಆತಂಕ ಸಾರ್ವಜನಿಕರದ್ದು. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಕಸ ಸಂಗ್ರಹಣೆಯ ಜವಾಬ್ದಾರಿ ನಿಭಾಯಿಸಿ ಗಾರ್ಬೇಜ್ ಸಿಟಿಯಾಗುವುದನ್ನ ತಪ್ಪಿಸಬೇಕಿದೆ ಎನ್ನುವುದು ಸ್ಥಳೀಯರ ಒತ್ತಾಯ.
ನಗರದೆಲ್ಲೆಡೆ ಕಸದ ರಾಶಿ ಇದ್ದ ಹಾಗೇ ಇರುತ್ತೆ ಇದರಿಂದ ರೋಗರುಜಿನ ಗಳು ಹರಡುವ ಸಾಧ್ಯತೆಯಿದ್ದು ಸಂಬಂಧ ಪಟ್ಟ ಅಧಿಕಾರಿಗಳು ಕ್ರಮಜರುಗಿಸಿ ಕಸವನ್ನು ಬೀದಿಯಲ್ಲಿ ಹಾಕುವವರನ್ನು ಗುರುತಿಸಿ ದಂಡ ವಿಧಿಸಲಿ. – ರಾಜಣ್ಣ, ನಗರದ ವಾಸಿ
ನಗರಸಭೆಯಿಂದ ಪ್ರತಿ ವಾರ್ಡ್‌ಗಳ ಮನೆ ಮನೆ ಬಳಿಗೆ ವಾಹನಗಳನ್ನು ಕಳುಹಿಸಿ ಕಸ ಸಂಗ್ರಹಿಸಲಾಗುತ್ತಿದೆ. ಆದರೆ ಕೆಲವು ಅಂಗಡಿಯವರು ನಗರದ ಪ್ರಮುಖ ಬೀದಿಗಳಲ್ಲಿ ತಡವಾಗಿ ಬಂದು ಕಸ ಸುರಿಯುತ್ತಿದ್ದಾರೆ. ಈ ಬಗ್ಗೆ ಗಮನಕ್ಕೆ ಬಂದಿದೆ ನಾವು ಅವರನ್ನು ಗುರ್ತಿಸಲು ಹೋಗಿದ್ದಾಗ ಅವರ ಬಗ್ಗೆ ಮಾಹಿತಿ ನೀಡುವವರಿಲ್ಲ ಆದ್ದರಿಂದ ನಾವೇ ಅವ ರನ್ನು ಕಂಡುಹಿಡಿದು ಮುಂದಿನ ದಿನಗಳಲ್ಲಿ ದಂಡವಿಧಿಸುವ ಮೂಲಕ ಸ್ವತ್ಛತೆ ಕಾಪಾಡು ವತ್ತ ಗಮನಹರಿಸುತ್ತೇವೆ. – ಸುಭ್ರಮಣ್ಯ, ಎಇಇ, ಆರೋಗ್ಯ ಶಾಖೆ, ನಗರಸಭೆ
-ಎಂ.ಎಚ್. ಪ್ರಕಾಶ್ ರಾಮನಗರ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
DK Shivakumar: ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ನೀನೇನು ಮಾಡಿದ್ದೆ ಹೇಳಪ್ಪಾ?- ಡಿಕೆಶಿ
Ramanagara: ಬೆಂ.-ಮೈ. ಎಕ್ಸ್ ಪ್ರೆಸ್‌ವೇ ಬಿಡದಿ ಎಕ್ಸಿಟ್ ಬಂದ್
Ramanagara: ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಡಿಕೆಸು ಕಣ್ಣು ?
Kudur: ಬಿಡಿಸಿಸಿ ಬ್ಯಾಂಕ್‌ನಲ್ಲಿರುವ ಚಿನ್ನದ ಅವ್ಯವಹಾರದ ಆರೋಪ
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.