ಎಲ್ಲಿ ನೋಡಿದರಲ್ಲಿ ಕಸವೋ ಕಸ!


Team Udayavani, May 24, 2022, 4:39 PM IST

ಎಲ್ಲಿ ನೋಡಿದರಲ್ಲಿ ಕಸವೋ ಕಸ!

ಚನ್ನಪಟ್ಟಣ: ಗಬ್ಬುನಾರುತ್ತಿರುವ ಪಟ್ಟಣ. ಎಲ್ಲಿ ನೋಡಿದರಲ್ಲಿ ಕಸವೋ ಕಸ. ಮೂಗು ಮುಚ್ಚಿಕೊಂಡುಹೋಗುವ ದುಸ್ಥಿತಿ. ಸಾಂಕ್ರಾಮಿಕ ರೋಗಗಳಿಗೆ ಎಡೆ ಮಾಡಿ ಕೊಡುತ್ತಿರುವ ಕಸದ ರಾಶಿ. ಇದು ಚಂದದ ಬೊಂಬೆನಗರಿ ಪಟ್ಟಣದ ಪ್ರಸ್ತುತ ಸ್ಥಿತಿ.

ಚನ್ನಪಟ್ಟಣದಲ್ಲಿ ಕಸದ ರಾಶಿ: ಚನ್ನಪಟ್ಟಣ ಎಂದ್ರೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ವಿಶ್ವ ಪ್ರಸಿದ್ಧ ಬೊಂಬೆಆಟಿಕೆಗಳಿಗೆ ಹೆಸರುವಾಸಿಯಾದ ಪಟ್ಟಣ. ಇಲ್ಲಿನಬೊಂಬೆಗಳಿಗೆ ಇಂದಿಗೂ ಕೂಡ ದೇಶ ವಿದೇಶಗಳಲ್ಲಿ ತನ್ನದೇ ತಾದ ಬೇಡಿಕೆ ಇದೆ. ಆದರೆ, ಈ ಪಟ್ಟಣದಲ್ಲಿಪ್ರಸ್ತುತ ದಿನಗಳಲ್ಲಿ ಕಸದ ಸಮಸ್ಯೆ ಬಹಳಷ್ಟು ಕಾಡುತ್ತಿದೆ. ಎಲ್ಲಿ ನೋಡಿದರಲ್ಲಿ ಕಸದ ರಾಶಿ ಬಿದ್ದಿರುವುದನ್ನ ಕಾಣಬಹುದು. ನಗರದ ಪ್ರಮುಖ ರಸ್ತೆಗಳಾದ ಎಂ.ಜಿ.ರಸ್ತೆಯ ಅಣ್ಣೇಗೌಡ ಸರ್ಕಲ್‌, ಬಿ.ಎಂ.ರಸ್ತೆ,ಚರ್ಚ್‌ ರಸ್ತೆ, ಕುವೆಂಪುನಗರ, ವಿವೇಕಾನಂದನಗರ,ಡೂಮ್‌ಲೈಟ್‌ ಸರ್ಕಲ್‌, ಮದೀನಾ ಚೌಕ್‌ ಸೇರಿದಂತೆನಗರದ ಹಲವು ಬಡಾವಣೆಯಲ್ಲಿ ಕಸದ ರಾಶಿಯಿಂದ ಸಾರ್ವಜನಿಕರು ನಗರಸಭೆ ಹಿಡಿ ಶಾಪ ಹಾಕುತ್ತಿದ್ದಾರೆ.

ಅದರಲ್ಲೂ ಕಳೆ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಮೋರಿಯ ನೀರೆಲ್ಲಾನಗರದ ಬಡಾವಣೆಗಳಿಗೆ ನುಗ್ಗುತ್ತಿದೆ. ಎಲ್ಲಿ ಬೇಕಾದರಲ್ಲಿ ಕಸ ಹಾಕುತ್ತಿದ್ದಾರೆ. ವ್ಯಾಪಾರ ವಹಿವಾಟುನಡೆಸಲು ಜನರು ಕೂಡ ಹೈರಾಣರಾಗಿದ್ದಾರೆ.

ನಗರಸಭೆ ಶಾಪ ಹಾಕುತ್ತಿರುವ ಜನತೆ: ಕಸದ ಸಮಸ್ಯೆಯನ್ನ ಬಗೆಹರಿಸಬೇಕಾದ ನಗರಸಭೆ ಅಧಿಕಾರಿಗಳ ವಿರುದ್ಧ ನಗರವಾಸಿಗಳು ಹಾಗೂ ವ್ಯಾಪಾರಸ್ಥರು ಗರಂಆಗಿದ್ದಾರೆ. ಮುಂಜಾನೆ ಅಂಗಡಿ ತೆರೆಲು ಹೊರಟರೆ,ರಾಶಿ ಕಸದ ಗುಡ್ಡೆ ನಮ್ಮ ಅಂಗಡಿ ಮುಂದೆ ಇರುತ್ತೆ. ಕಸದವಾಸನೆಯಿಂದ ವ್ಯಾಪಾರ ವಹಿವಾಟು ನಡೆಸುವುದೇತುಂಬಾ ಕಷ್ಟವಾಗಿದೆ. ಸಾಕಷ್ಟು ಭಾರಿ ಕಸದ ಸಮಸ್ಯೆಬಗೆಹರಿಸುವಂತೆ ನಗರಸಭೆ ಅಧಿಕಾರಿಗಳಿಗೆ ದೂರನೀಡಿದರೂ, ಯಾವುದೇ ಪ್ರಯೋಜನವಾಗಿಲ್ಲ. ಇಲ್ಲಿ ನಗರಸಭೆ ಇದಿಯೋ.! ಇಲ್ಲವೋ..! ಅನುಮಾನ ಕಾಡಿದೆ.

ಕಸದ ರಾಶಿಯಿಂದ ಸಾಂಕ್ರಾಮಿಕ ರೋಗಕ್ಕೆ ನಗರಸಭೆ ಎಡೆ ಮಾಡಿಕೊಡುತ್ತಿದೆ. ಹೆಚ್ಚಿನ ಅನಾಹುತ ಆಗುವ ಮುನ್ನ ಕಸದ ಸಮಸ್ಯೆಗೆ ಆದಷ್ಟು ಬೇಗ ಪರಿಹಾರ ನೀಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ವ್ಯಾಪಾರ ವಹಿವಾಟಿನ ಪ್ರಮುಖ ಕೇಂದ್ರ: ಪ್ರಮುಖವಾಗಿ ನಗರಸಭೆ ಮುಂಭಾಗವೇ ಇರುವಅಣ್ಣೇಗೌಡ ಸರ್ಕಲ್‌ ವ್ಯಾಪಾರ ವಹಿವಾಟಿನ ಪ್ರಮುಖ ಕೇಂದ್ರ. ಪ್ರತಿದಿನ ಲಕ್ಷಾಂತರ ರೂ.ವಹಿವಾಟು ಆಗುವ ಸ್ಥಳವಾಗಿದೆ. ಇಲ್ಲಿ ದಿನಸಿವಹಿವಾಟು, ಬಾಳೆಹಣ್ಣು, ವಿಳ್ಳೇದೆಲೆ, ನಿಂಬೇಹಣ್ಣು,ರೈತರು ಬೆಳೆದ ತರಕಾರಿ, ಹೋಟೆಲ್‌ ಸೇರಿದಂತೆಪ್ರಮುಖ ಅಂಗಡಿ ಮಳಿಗೆಗಳು ಇದೇ ರಸ್ತೆಯಲ್ಲಿ ಇದೆ.ಪ್ರಸ್ತುತ ಬೆಂಗಳೂರು ಮೈಸೂರು ಹೆದ್ದಾರಿಯ ಮುನ್ನಈ ರಸ್ತೆಯಲ್ಲೇ ಎಲ್ಲ ವಾಹನಗಳ ಸಂಚಾರ ಇತ್ತು.

ವ್ಯಾಪಕವಾದ ಕಸದ ಸಮಸ್ಯೆ: ಮೈಸೂರು ಸಂಸ್ಥಾನದ ರಾಜರು ಮಾಡಿದ ರಸ್ತೆಯನ್ನ ಇಂದಿಗೂ ಕೂಡ ಇಲ್ಲಿಉಳಿಸಿಕೊಂಡಿರುವುದನ್ನು ಗಮನಿಸಬಹುದು. ಆದರೆ,ಈ ರಸ್ತೆಯ ಇಕ್ಕೇಲೆಗಳು ಪ್ರಸ್ತುತ ಕಸ ವಿಲೇವಾರಿ ಕೇಂದ್ರವಾಗಿ ಬಿಟ್ಟಿದೆ. ಇಲ್ಲಿ ಹೇಳ್ಳೋರು ಕೇಳ್ಳೋರು ಯಾರೂಇಲ್ಲದೆ ರಾತ್ರಿ ವೇಳೆ ಅಪರಿಚಿತರು ಬಂದು ಕಸ ಹಾಕಿಹೋಗುತ್ತಿದ್ದಾರೆ. ಈ ಕಸವನ್ನ ಪ್ರತಿದಿನ ಸ್ವತ್ಛ ಮಾಡುವನಗರಸಭೆ ಕೂಡ ಇತ್ತ ಗಮನ ಹರಿಸದೆ ಪ್ರಸ್ತುತ ದಿನಗಳಲ್ಲಿಕಸದ ಸಮಸ್ಯೆ ವ್ಯಾಪಕವಾಗಿದೆ. ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕಸದ ಸಮಸ್ಯೆ ಶಾಶ್ವತವಾಗಿಬಗೆಹರಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ಕಳೆದ ಒಂದು ವರ್ಷಗಳಿಂದಲೂ ನಿರಂತರವಾಗಿ ಕಸದ ಸಮಸ್ಯೆ ಇದೆ.ಕಸದ ಸಮಸ್ಯೆ ಬಗ್ಗೆ ನಗರಸಭೆಗೆ ಸಾಕಷ್ಟುಬಾರಿ ಗಮನಕ್ಕೆ ತಂದರೂ, ಯಾವುದೇಪ್ರಯೋಜನವಾಗಿಲ್ಲ. ಮುಂಜಾನೆ ಅಂಗಡಿಬಾಗಿಲು ತೆರೆಯುತ್ತಿದ್ದಂತೆ ಗಬ್ಬು ವಾಸನೆಬೀರುತ್ತಿದೆ. ಕಸ ಗುಡಿಸುವವರಿಗೆ ಹೇಳಿದ್ರೆಬೇಕಾದ್ರೆ ಕಮಿಷನರ್‌ಗೆ ದೂರು ನೀಡಿಎಂದು ಬೇಜವಾಬ್ದಾರಿ ಹೇಳಿಕೆ ನೀಡುತ್ತಾರೆ.ಕಸದ ಸಮಸ್ಯೆ ಶಾಶ್ವತವಾಗಿ ಬಗೆಹರಿಸಬೇಕು. – ರಾಜೇಶ್‌, ದಿನಸಿ ಅಂಗಡಿ ಮಾಲೀಕರು, ಚನ್ನಪಟ್ಟಣ

ಮಳೆ ಹೆಚ್ಚಾದ ಹಿನ್ನೆಲೆ ಸಂಜೆ ಹೊತ್ತು ಕಸದ ಗಾಡಿಗಳು ಕಸವನ್ನುಸಾಗಿಸುವುದು ಕಷ್ಟವಾಗಿದೆ. ಕಸ ವಿಲೇವಾರಿ ಮಾಡುವಾಗ ಮಳೆಯಿಂದ ಗಾಡಿಗಳುಹೂತುಕೊಳ್ಳುತ್ತಿವೆ. ಮಳೆ ಕಡಿಮೆಯಾದಮೇಲೆ ಹಂತ- ಹಂತವಾಗಿ ಕಸದ ಸಮಸ್ಯೆಬಗೆಹರಿಸಲಾಗುವುದು. – ಶಿವನಂದ್‌ ಕರೀಗೌಡ, ನಗರಸಭೆ ಆಯುಕ್ತ, ಚನ್ನಪಟ್ಟಣ

– ಎಂ.ಶಿವಮಾದು

ಟಾಪ್ ನ್ಯೂಸ್

Elon-Musk

America: ಎಚ್‌-1ಬಿ ವೀಸಾ ವ್ಯವಸ್ಥೆ ಸುಧಾರಣೆ ಬೇಕು: ಒಂದೇ ದಿನದಲ್ಲಿ ಮಸ್ಕ್ ಉಲ್ಟಾ!

Exam-Authotiy

Authortiy: ವರ್ಷದಲ್ಲಿ ದಾಖಲೆಯ 17 ಪರೀಕ್ಷೆ ನಡೆಸಿ ಫ‌ಲಿತಾಂಶ ಪ್ರಕಟಿಸಿದ ಕೆಇಎ

Kimmane-Ratnakar

ಸಿ.ಟಿ.ರವಿ ಪ್ರಕರಣದ ತನಿಖೆ ಸಭಾಪತಿಯೇ ನಡೆಸಲಿ: ಮಾಜಿ ಸಚಿವ ಕಿಮ್ಮನೆ ರತ್ನಾಕರ್‌

Pawan Kalyan: ಕಾನೂನು ಎಲ್ಲರಿಗೂ ಒಂದೇ: ಅಲ್ಲು ಬಂಧನಕ್ಕೆ ಆಂಧ್ರ ಡಿಸಿಎಂ ಪ್ರತಿಕ್ರಿಯೆ

Pawan Kalyan: ಕಾನೂನು ಎಲ್ಲರಿಗೂ ಒಂದೇ: ಅಲ್ಲು ಬಂಧನಕ್ಕೆ ಆಂಧ್ರ ಡಿಸಿಎಂ ಪ್ರತಿಕ್ರಿಯೆ

Delhi: 9 ವರ್ಷಗಳಲ್ಲೇ ಡಿಸೆಂಬರ್‌ ತಿಂಗಳಲ್ಲಿ ಅತ್ಯಂತ ಸ್ವಚ್ಛ ಗಾಳಿ!

Delhi: 9 ವರ್ಷಗಳಲ್ಲೇ ಡಿಸೆಂಬರ್‌ ತಿಂಗಳಲ್ಲಿ ಅತ್ಯಂತ ಸ್ವಚ್ಛ ಗಾಳಿ!

Tamil Nadu: ಸ್ತ್ರೀಯರಿಗೆ ರಕ್ಷಣೆ ಕಲ್ಪಿಸಿ: ತಮಿಳುನಾಡು ಗೌರ್ನರ್‌ಗೆ ನಟ ವಿಜಯ್‌ ಮನವಿ

Tamil Nadu: ಸ್ತ್ರೀಯರಿಗೆ ರಕ್ಷಣೆ ಕಲ್ಪಿಸಿ: ತಮಿಳುನಾಡು ಗೌರ್ನರ್‌ಗೆ ನಟ ವಿಜಯ್‌ ಮನವಿ

ರೊಹಿಂಗ್ಯಾಗಳಿಗೆ ನೆಲೆ: ಕೇಜ್ರಿವಾಲ್‌, ಕೇಂದ್ರ ಸಚಿವ ಮಧ್ಯೆ ವಾಗ್ಯುದ್ಧ

ರೊಹಿಂಗ್ಯಾಗಳಿಗೆ ನೆಲೆ: ಕೇಜ್ರಿವಾಲ್‌, ಕೇಂದ್ರ ಸಚಿವ ಮಧ್ಯೆ ವಾಗ್ಯುದ್ಧ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

aane

Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Channapatna: ಕೆಲಸದ ಒತ್ತಡ ತಾಳಲಾರದೆ ಮುಖ್ಯ ಶಿಕ್ಷಕ ವಿಷ ಸೇವಿಸಿ ಆತ್ಮಹ*ತ್ಯೆ

Channapatna: ಕೆಲಸದ ಒತ್ತಡ ತಾಳಲಾರದೆ ಮುಖ್ಯ ಶಿಕ್ಷಕ ವಿಷ ಸೇವಿಸಿ ಆತ್ಮಹ*ತ್ಯೆ

10-ramanagara

Ramanagara: ಕಾಡಾನೆ ದಾಳಿಗೆ ರೈತ ಬಲಿ

DOG (2)

Ramanagara:ನಾಯಿ ಜತೆ ಮೂವರ ಅನೈಸರ್ಗಿಕ ಲೈಂಗಿ*ಕ ಚಟುವಟಿಕೆ: ಓರ್ವ ಸೆರೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Elon-Musk

America: ಎಚ್‌-1ಬಿ ವೀಸಾ ವ್ಯವಸ್ಥೆ ಸುಧಾರಣೆ ಬೇಕು: ಒಂದೇ ದಿನದಲ್ಲಿ ಮಸ್ಕ್ ಉಲ್ಟಾ!

Exam-Authotiy

Authortiy: ವರ್ಷದಲ್ಲಿ ದಾಖಲೆಯ 17 ಪರೀಕ್ಷೆ ನಡೆಸಿ ಫ‌ಲಿತಾಂಶ ಪ್ರಕಟಿಸಿದ ಕೆಇಎ

Pierre-Filliozat

ಫ್ರಾನ್ಸ್‌ ಮೂಲದ ಸಂಸ್ಕೃತ ವಿದ್ವಾಂಸ ಪಿಯರಿ ಸಿಲ್ವೇನ್‌ ಫಿಲಿಯೋಜಾ ನಿಧನ

Kimmane-Ratnakar

ಸಿ.ಟಿ.ರವಿ ಪ್ರಕರಣದ ತನಿಖೆ ಸಭಾಪತಿಯೇ ನಡೆಸಲಿ: ಮಾಜಿ ಸಚಿವ ಕಿಮ್ಮನೆ ರತ್ನಾಕರ್‌

court

Mangaluru; ಪ್ರತ್ಯೇಕ ಚೆಕ್‌ಬೌನ್ಸ್‌ ಪ್ರಕರಣ: ಇಬ್ಬರು ಖುಲಾಸೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.