ರಸ್ತೆ ಕಲ್ಪಿಸಿಕೊಡಿ, ಇಲ್ಲವೇ ದಯಾಮರಣ ಕೊಡಿ
Team Udayavani, Sep 14, 2021, 6:00 PM IST
ಕನಕಪುರ: ಬಲಾಡ್ಯರು ಒತ್ತುವರಿ ಮಾಡಿಕೊಂಡಿರುವ ಗ್ರಾಮ ಠಾಣಾ ಜಾಗ ತೆರವುಗೊಳಿಸಿ ನಮ್ಮ ಮನೆಗೆ ಓಡಾಡಲು ರಸ್ತೆ ನಿರ್ಮಾಣ ಮಾಡಿಕೊಡದಿದ್ದರೆ ದಯಾಮರಣ ಕೊಡುವವರೆಗೂ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಮತ್ತಿಕುಂಟೆ ಗ್ರಾಮದ ವಿಶ್ವನಾಥ್ ಅವರ ಕುಟುಂಬ ಅಸಹಾಯಕತೆ ವ್ಯಕ್ತಪಡಿಸಿದೆ.
ಬೇಡಿಕೆಗಳೇನು?: ತಾಲೂಕಿನ ಹಾರೋಹಳ್ಳಿ ಹೋಬಳಿ ದೊಡ್ಡಮುದುವಾಡಿ ಗ್ರಾಪಂ ವ್ಯಾಪ್ತಿಯ ಮತ್ತಿಕುಂಟೆ ಗ್ರಾಮದಲ್ಲಿ ಮಾತನಾಡಿ, ನಮ್ಮ ತಂದೆ ಕೃಷ್ಣಮೂರ್ತಿ ಕೂಲಿ ಮಾಡಿ ಕಳೆದ 30 ವರ್ಷಗಳ ಹಿಂದೆ ಮಡಿಕೊಪ್ಪ ಗ್ರಾಮ ಠಾಣಾ ಜಾಗದಲ್ಲಿ ನಿವೇಶನ ಖರೀದಿ ಮಾಡಿ ಸೋರು ಕಟ್ಟಿಕೊಂಡಿದ್ದೇವೆ. ಆದರೆ ಗ್ರಾಮದ ಐವರು ಅಣ್ಣತಮ್ಮಂದಿರು ಸುಮಾರು ಒಂದು ಎಕರೆ ಗ್ರಾಮಠಾಣಾ ಜಾಗ ಒತ್ತುವರಿ ಮಾಡಿ ನಮ್ಮ
ಮನೆಗೆ ಓಡಾಡಲು ರಸ್ತೆ ಬಿಡದೆ ಬೇಲಿ ಹಾಕಿಕೊಂಡಿದ್ದರು. ನಂತರ ತಂದೆ ಮನೆ ಉತ್ತರ ಭಾಗದಲ್ಲಿದ್ದ ಖಾಲಿ ನಿವೇಶನ ಖರೀದಿ ಮಾಡಿ ಮನೆಗೆ
ದಾರಿ ಮಾಡಿಕೊಂಡಿದ್ದರು. ಆ ಜಾಗವೂ ನಮಗೆಸೇರಬೇಕೆಂದು ಸ್ಥಳೀಯರು ಬೇಲಿ ಹಾಕಿಕೊಂಡಿದ್ದಾರೆ.
ಮನೆಗೆ ರಸ್ತೆ ಇಲ್ಲದೆ ಬೇರೆ ದಾರಿ ಕಾಣದೆ ವಲಸೆ ಹೋಗಿ ಬೆಂಗಳೂರಿನಲ್ಲಿ ವಾಸವಾಗಿದ್ದೆವು. ಆದರೆ ಕೋವಿಡ್‌ದಿಂದ ಬೆಂಗಳೂರು ತೊರೆದು ಸ್ವಗ್ರಾಮಕ್ಕೆ ಬಂದಿದ್ದೇವೆ. ಇನ್ನು ಗ್ರಾಪಂ ಅಧಿಕಾರಿಗಳು ಒತ್ತುವರಿದಾರರ ಬೆನ್ನಿಗೆ ನಿಂತು ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ದೂರಿದರು.
ವರ್ಗಾಯಿಸಿದರು: ನಮ್ಮ ತಂದೆ ಕಷ್ಟಪಟ್ಟು ಕಟ್ಟಿದ ಮನೆಗೆ ರಸ್ತೆ ನಿರ್ಮಾಣ ಮಾಡಿಕೊಳ್ಳಲು ಅನೇಕ ಅಧಿಕಾರಿಗಳ ಕಚೇರಿಗಳ ಬಾಗಿಲನ್ನು ತಟ್ಟಿದ್ದೇವೆ. ಈ ಸಂಬಂಧ ಸೂಕ್ತ ಕ್ರಮವಹಿಸುವಂತೆ ಸಾರ್ವಜನಿಕ ಭೂ ಒತ್ತುವರಿಗಳ ನಿಗಮದಿಂದ ಜಿಲ್ಲಾಧಿಕಾರಿಗೆ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಂದ ಜಿಪಂ ಸಿಇಒ ಅವರಿಗೆ ಸೂಚನೆ ಕೊಟ್ಟಿದ್ದಾರೆ. ಆದರೆ ಜಿಲ್ಲಾಧಿಕಾರಿಗಳು ಸಿಇಒ ಅವರಿಗೆ ವರ್ಗಾಯಿಸಿ ಕೈತೊಳೆದುಕೊಂಡರು.ಸಿಇಒ ಅವರು ಇಒ ಮತ್ತು ಪಿಡಿಒ ಕ್ರಮ ವಹಿಸುವಂತೆ ಸೂಚಿಸಿದರು. ಆದರೆ, ಪಿಡಿಒ ಒತ್ತುವರಿದಾರರಬೆನ್ನಿಗೆ ನಿಂತಿದ್ದಾರೆಂದು ದೂರಿದರು.
ಇದನ್ನೂ ಓದಿ:ಕರೀನಾ ಬದಲಿಗೆ ಕಂಗನಾ : ಸೀತೆ ಪಾತ್ರಕ್ಕೆ ರಣಾವತ್ ಆಯ್ಕೆ
ನೀರು ಹೋಗಲು ಅವಕಾಶವಿಲ್ಲ: ಇಡೀ ವ್ಯವಸ್ಥೆಯಿಂದ ಬೇಸತ್ತು ಕಳೆದ 3ತಿಂಗಳ ಹಿಂದೆ ದಯಾಮರಣ ಕೋರಿ ರಾಜ್ಯಪಾಲರಿಗೆ, ಕರ್ನಾಟಕ
ಮಾನವ ಹಕ್ಕುಗಳ ಆಯೋಗಕ, ಸ್ಕೆ ರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಮಾಡಿಕೊಂಡಿದ್ದೆ. ಓಡೋಡಿ ಬಂದ ಅಧಿಕಾರಿಗಳು ಕಾಟಾಚಾರಕ್ಕೆ ನಕಾಶೆ ರಸ್ತೆ ಬಿಟ್ಟು ಮನೆ ಹಿಂಭಾಗದಲ್ಲಿ ಅವೈಜ್ಞಾನಿಕವಾಗಿ ತಾತ್ಕಾಲಿಕವಾಗಿ ರಸ್ತೆ ನಿರ್ಮಿಸಿದರು. ಇದರಿಂದ ಮಳೆಗಾಲದಲ್ಲಿ ಮಳೆ ನೀರು ಹರಿದುಹೋಗಲು ಅವಕಾಶವಿಲ್ಲದೆ ವಾಸಿಸಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ ಜೊತೆಗೆ ಗ್ರಾಮಠಾಣಾ ಒತ್ತುವರಿ
ಮಾಡಿಕೊಂಡಿರುವ ಸ್ಥಳೀಯ ಪ್ರಭಾವಿಗಳು ನಮ್ಮ ಮನೆ ಜಾಗಕ್ಕೆ ಮಣ್ಣು ಸುರಿದು ಕುಟುಂಬಕ್ಕೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ನೊಂದಕುಟುಂಬ ಅಳಲು ತೋಡಿಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Ramnagar; ಹೊಸವರ್ಷದಂದೇ ಎರಡು ಪ್ರತ್ಯೇಕ ಅಪಘಾ*ತ: ಮೂವರ ಸಾ*ವು
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Channapatna: ಕೆಲಸದ ಒತ್ತಡ ತಾಳಲಾರದೆ ಮುಖ್ಯ ಶಿಕ್ಷಕ ವಿಷ ಸೇವಿಸಿ ಆತ್ಮಹ*ತ್ಯೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bantwala: ನೇತ್ರಾವತಿ ನದಿಯ ಅಂಬಿಗ ನಾಪತ್ತೆ; ಸ್ಥಳೀಯರಿಂದ ಶೋಧ ಕಾರ್ಯ
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ರಸ್ತೆಯಲ್ಲೇ ನಡೆಯಿತು ಪವಾಡ
Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?
Chikkamagaluru: ರಾಜ್ಯ ಹೆದ್ದಾರಿ ರಸ್ತೆಯಲ್ಲಿ ರೌಂಡ್ಸ್ ಹಾಕಿದ ಒಂಟಿಸಲಗ
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.