ಇಂದಿನಿಂದ ಭಕ್ತರಿಗೆ ದೇವರ ದರ್ಶನ


Team Udayavani, Jun 8, 2020, 7:49 AM IST

devara darshana

ರಾಮನಗರ: ಕೋವಿಡ್‌-19 ಸೋಂಕು ಹರಡದಂತೆ ತಡೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಘೋಷಿಸಿದ್ದ ಲಾಕ್‌ಡೌನ್‌ನಿಂದಾಗಿ ಧಾರ್ಮಿಕ ಸ್ಥಳ ಹಾಗೂ ದೇವಸ್ಥಾನಗಳನ್ನು ಮುಚ್ಚಲಾಗಿತ್ತು. ಸುಮಾರು 80 ದಿನಗಳ  ನಂತರ ಸರ್ಕಾರ  ದೇವಾಲಯಗಳ ಅನ್‌ಲಾಕ್‌ಗೆ ಮುಂದಾಗಿದ್ದು, ಜೂನ್‌ 8ರಿಂದ ದೇವಾಲಯಗಳಲ್ಲಿ ಭಕ್ತರಿಗೆ ಪ್ರವೇಶ ಕಲ್ಪಿಸಲಾಗುತ್ತಿದೆ.

ಆದರೆ ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವಂತಹ ದೇವಾಲಯಗಳು ವಿಶೇಷ ವಾಗಿ ಎ ಕ್ಯಾಟಗರಿ  ದೇವಾಲಯಗಳು ಸೋಮವಾರವೇ ತೆರೆಯುವುದು ಅನುಮಾನ. ಕಾರಣ ಜಿಲ್ಲಾಧಿಕಾರಿಗಳ ಆದೇಶ ಇನ್ನೂ ಹೊರ ಬಿದ್ದಿಲ್ಲ. ಜಿಲ್ಲೆಯಲ್ಲಿ ಜಿಲ್ಲಾ ಕೇಂದ್ರದ ಶ್ರೀ ಚಾಮುಂಡೇಶ್ವರಿ, ಶ್ರೀ ಬನ್ನಿಮಹಾಕಾಳಿ ಅಮ್ಮನವರು, ಶ್ರೀ ಬಲಮುರಿ  ಗಣಪತಿ ದೇವಾಲಯ, ಕೈಲಾಂಚ ಹೋಬಳಿ ಎಸ್‌ಆರ್‌ ಎಸ್‌ ಕ್ಷೇತ್ರ,

ಚನ್ನಪಟ್ಟಣದ ಶ್ರೀ ಕೆಂಗಲ್‌ ಆಂಜನೇಯ ಸ್ವಾಮಿ, ಶ್ರೀ ಅಪ್ರಮೇಯ ಸ್ವಾಮಿ, ಕನಕಪುರದ ಶ್ರೀ ಕಬ್ಟಾಳಮ್ಮ ದೇವಾಲ ಯ, ಶ್ರೀ ಕಲ್ಲಳ್ಳಿ ವೆಂಕಟೇಶ್ವರಸ್ವಾಮಿ ದೇವಾಲಯ, ಮಾಗಡಿ ಶ್ರೀ ರಂಗ ನಾಥಸ್ವಾಮಿ ದೇವಾಲಯ, ಸಾವನದುರ್ಗ ದ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಮತ್ತು ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಾಲಯ ಇವು ಜಿಲ್ಲೆಯ ಪ್ರಮುಖ ದೇವಾಲಯಗಳ ಪೈಕಿ ಕೆಲವು. ದೇವಾಲಯಗಳಲ್ಲಿ  ನಿತ್ಯ ಧಾರ್ಮಿಕ ಕೈಂಕರ್ಯಗಳು ನಿಂತಿರಲಿಲ್ಲ.

ಭಕ್ತರು ಸಹಕರಿಸಲಿ: ದೇವಾಲಯಗಳು ತೆರೆಯಲು ಸರ್ಕಾರ ಕೆಲವೊಂದು ನಿಯಮ ವಿಧಿಸಿದ್ದು, ಪಾಲನೆ ಕಡ್ಡಾಯ ಎಂದಿದೆ. ಆದರೆ ಭಕ್ತರ ಸಹಕಾರವಿಲ್ಲದೇ ನಿಯಮ ಪಾಲನೆ ಕಷ್ಟಸಾಧ್ಯ ಎಂದು ದೇವಾಲಯ ಗಳ ನಿರ್ವಹಣೆ  ಮಂಡಳಿಗಳ ಪದಾಧಿ ಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ. ಸರ್ಕಾರದ ನಿಯಮಾವಳಿಗಳ ಪಾಲನೆಗೆ ಈ ಪದಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುತ್ತಿದ್ದಾರೆ.

ದೇವಾಲಯಗಳಲ್ಲಿ ನಿಯಮಗಳೇನು..?: ರೋಗ ಲಕ್ಷಣಗಳಿಲ್ಲದ ವ್ಯಕ್ತಿಗಳಿಗೆ ಮಾತ್ರ ಪ್ರವೇಶ, ಪ್ರವೇಶಕ್ಕೆ ಮುನ್ನ ಸ್ಯಾನಿಟೈಸರ್‌ ಮತ್ತು ನೀರು ಬಳಸಿ ಕೈಗಳ ಸ್ವತ್ಛತೆ ಮಾಡ ಬೇಕು. ಥರ್ಮಲ್ ಸ್ಕ್ರೀನಿಂಗ್‌ ಕಡ್ಡಾಯ, ಫೇಸ್‌ ಮಾಸ್ಕ್  ಧರಿಸುವುದು ಕಡ್ಡಾಯ. ಭಕ್ತರ ನಡುವೆ ಕನಿಷ್ಠ 6 ಅಡಿಗಳ ಸಾಮಾಜಿಕ ಅಂತರ ಕಡ್ಡಾಯ ತೀರ್ಥ, ತೀರ್ಥ ಪ್ರೋಕ್ಷಣೆ ಗಿಲ್ಲ ಅವಕಾಶ. ದೇವತಾ ಮೂರ್ತಿಗಳು, ಫೋಟೋ ಮುಟ್ಟಿ ನಮಸ್ಕರಿಸುವುದು ನಿಷಿದ್ಧ.

ಭಕ್ತರು ತಮ್ಮ ಶೂ,  ಚಪ್ಪಲಿ ಎಲ್ಲೆಂದರಲ್ಲಿ ಬಿಡುವಂತಿಲ್ಲ. ಭಕ್ತರು ತಮ್ಮ ವಾಹನಗಳಲ್ಲೇ ಬಿಡಬೇಕು, ಇಲ್ಲವೇ ದೇವಾಲಯದವರು ನಿಗದಿ ಪಡಿಸಿದ ಸ್ಥಳ, ಶೆಲ್ಫ್ ವ್ಯವಸ್ಥೆಯಲ್ಲಿ ಇಡಬೇಕು. ಧಾರ್ಮಿಕ ಸ್ಥಳಗಳ ಪ್ರವೇಶ ಮತ್ತು ನಿರ್ಗಮನ  ಪ್ರತ್ಯೇಕವಾಗಿರಬೇಕು. ಏರ್‌ ಕಂಡೀಷನ್‌ ವ್ಯವಸ್ಥೆಯಿದ್ದರೆ, ಅದರ ನಿಯಮಗಳ ಪಾಲನೆ ಕಡ್ಡಾಯ. ಗುಂಪು ಸೇರುವಿಕೆ, ದೊಡ್ಡ ಮಟ್ಟದಲ್ಲಿ ಜನ ಸೇರುವುದು ನಿಷಿದ್ಧ. ಭಜನೆ ಮುಂತಾದವು ಗಳಿಗೆ ಅವಕಾಶವಿಲ್ಲ.

ಮಸೀದಿ ಮುಂತಾದ ಪ್ರಾರ್ಥನಾ  ಸ್ಥಳಗಳಿಗೆ ಭಕ್ತರು ತಾವೇ ಸ್ವತಃ ಚಾಪೆ, ಮ್ಯಾಟ್‌ ಕೊಂಡೊಯ್ಯಬೇಕು ಎಂದು ಸರ್ಕಾರ ನಿಯಮ ವಿಧಿಸಿದೆ. ನಿಯಮ ಗಳು ಎಷ್ಟು ಪಾಲನೆಯಾಗುತ್ತದೆ ಎಂಬುದೇ ಪ್ರಶ್ನೆ!

ಟಾಪ್ ನ್ಯೂಸ್

High-Court

ಪಿಲಿಕುಳದಲ್ಲಿ ಕಂಬಳ: ವಿಚಾರಣೆ ಜನವರಿ 21ಕ್ಕೆ ಮುಂದೂಡಿಕೆ

VInaya-gurji

ಇದೇ ಅವಧಿಯಲ್ಲಿ ಡಿ.ಕೆ.ಶಿವಕುಮಾರ್‌ ಸಿಎಂ ಆಗ್ತಾರೆ: ವಿನಯ ಗುರೂಜಿ ಭವಿಷ್ಯ

Siddaramaiah

MUDA: 20 ವರ್ಷದಿಂದ ಶಾಸಕರಾಗಿ, ಮುಡಾ ಸದಸ್ಯರಾಗಿದ್ದೀರಿ, ಯಾಕೀ ಅವ್ಯವಸ್ಥೆ?: ಸಿಎಂ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವುSiddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ

Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-ramanagara

Ramanagara: ಬಸ್ -ಬೈಕ್ ಅಪಘಾತ; ಇಬ್ಬರು ಮಕ್ಕಳು ಮೂವರು ಸ್ಥಳದಲ್ಲೇ ಮೃತ್ಯು

Elephant-Camp

Elephant Camp: ರಾಮನಗರದ ಮುತ್ತತ್ತಿ ಬಳಿ ರಾಜ್ಯದ 10ನೇ ಆನೆ ಕ್ಯಾಂಪ್‌ ಶೀಘ್ರ ಆರಂಭ?

Channapatna; ನ್ಯೂಇಯರ್‌ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು

Channapatna; ನ್ಯೂಇಯರ್‌ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು

1-carr

Ramnagar; ಹೊಸವರ್ಷದಂದೇ ಎರಡು ಪ್ರತ್ಯೇಕ ಅಪಘಾ*ತ: ಮೂವರ ಸಾ*ವು

aane

Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

High-Court

ಪಿಲಿಕುಳದಲ್ಲಿ ಕಂಬಳ: ವಿಚಾರಣೆ ಜನವರಿ 21ಕ್ಕೆ ಮುಂದೂಡಿಕೆ

VInaya-gurji

ಇದೇ ಅವಧಿಯಲ್ಲಿ ಡಿ.ಕೆ.ಶಿವಕುಮಾರ್‌ ಸಿಎಂ ಆಗ್ತಾರೆ: ವಿನಯ ಗುರೂಜಿ ಭವಿಷ್ಯ

Siddaramaiah

MUDA: 20 ವರ್ಷದಿಂದ ಶಾಸಕರಾಗಿ, ಮುಡಾ ಸದಸ್ಯರಾಗಿದ್ದೀರಿ, ಯಾಕೀ ಅವ್ಯವಸ್ಥೆ?: ಸಿಎಂ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

BCCI

Vijay Hazare Trophy ಕ್ವಾರ್ಟರ್‌ ಫೈನಲ್‌ : ಕರ್ನಾಟಕಕ್ಕೆ ಬರೋಡ ಸವಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.