ಮುಂದುವರಿದ ಮುಷ್ಕರ: ರಸ್ತೆಗಿಳಿದ 9 ಸರ್ಕಾರಿ ಬಸ್
Team Udayavani, Apr 10, 2021, 12:13 PM IST
ರಾಮನಗರ: ಕೆ.ಎಸ್.ಆರ್.ಟಿ.ಸಿ. ನೌಕರರ ಮುಷ್ಕರ ಶುಕ್ರವಾರ 3ನೇ ದಿನಕ್ಕೆ ಕಾಲಿಟ್ಟಿದ್ದು,ಖಾಸಗಿ ಬಸ್, ಕ್ಯಾಬ್‌ಗಳ ಜೊತೆಗೆ ಜಿಲ್ಲೆಯಲ್ಲಿ 9 ಸರ್ಕಾರಿ ಬಸ್‌ಗಳು ಸಾರ್ವಜನಿಕರ ಸೇವೆಯಲ್ಲಿ ತೊಡಗಿಸಿ ಕೊಂಡಿದ್ದವು.
ಶುಕ್ರವಾರ ರಾಮನಗರ ವಿಭಾಗದಿಂದ ಒಟ್ಟು 9 ಸಾರಿಗೆ ಬಸ್‌ಗಳು 18 ಮಂದಿ ಸಿಬ್ಬಂ ದಿಯಿಂದ ಸಂಚಾರ ನಡೆಸಿದವು. ರಾಮನಗರ ಡಿಪೋದಿಂದ 5, ಆನೇಕಲ್ ಡಿಪೋದಿಂದ 2 ಹಾಗೂ ಹಾರೋಹಳ್ಳಿ, ಚನ್ನಪಟ್ಟಣ ಡಿಪೋಗಳಿಂದ ತಲಾ 1 ಬಸ್ ಸಂಚಾರ ನಡೆಸಿದವು.ಶುಕ್ರವಾರ ರಸ್ತೆಗಳಿದ ಸಾರಿಗೆ ಬಸ್‌ಗಳಲ್ಲಿ ನಿರ್ವಾಹಕರು, ಚಾಲಕರಾಗಿ ಸಂಸ್ಥೆಯಲ್ಲಿ ಸೆಕ್ಯೂರಿಟಿ ಗಾರ್ಡ್, ಸಂಚಾರ ನಿಯಂತ್ರಕರು,ಜೀಪ್ ಚಾಲಕರು ಸೇರಿದಂತೆ ಕಚೇರಿಯಲ್ಲಿ ಬೇರೆ ಬೇರೆ ಹುದ್ದೆಗಳನ್ನು ನಿಭಾಯಿಸುತ್ತಿದ್ದವರು ಸಾರ್ವಜನಿಕರ ಸೇವೆಯಲ್ಲಿ ತೊಡಗಿಸಿಕೊಂಡರು.
ರಾಮನಗರ ಬಸ್ ನಿಲ್ದಾಣದಿಂದ ಚನ್ನಪಟ್ಟಣ, ಮಾಗಡಿ, ಕನಕಪುರ, ಬಿಡದಿ ಹಾಗೂಆನೇಕಲ್ ಬಸ್ ನಿಲ್ದಾಣದಿಂದ ಹೊಸೂರುಮಾರ್ಗದಲ್ಲಿ ಬಸ್‌ಗಳು ಸಂಚರಿಸಿದವು. ಈ ಬಸ್‌ಗಳಲ್ಲಿ ಪ್ರಯಾಣಿಕರು ಸಂಖ್ಯೆ ವಿರಳವಾಗಿತ್ತು ಎಂದು ಗೊತ್ತಾಗಿದೆ.
ಗ್ರಾಮೀಣ ಭಾಗದ ಪ್ರಯಾಣಿಕರ ಪರದಾಟ: ಜಿಲ್ಲೆಯ ಗ್ರಾಮೀಣ ಭಾಗಗಳಸಾರ್ವಜನಿಕರು ಕೆ.ಎಸ್.ಆರ್.ಟಿ.ಸಿ ಬಸ್‌ಗಳನ್ನೇ ನೆಚ್ಚಿಕೊಂಡಿದ್ದಾರೆ. ಆದರೆ ಸಾರಿಗೆನೌಕರರ ಮುಷ್ಕರ ಕಾರಣ ಬಸ್ ಸಂಚಾರ ಸ್ಥಗಿತಗೊಂಡಿದೆ. ಗ್ರಾಮೀಣ ಭಾಗಗಳಲ್ಲಿ ಸಂಚಾರ ನಡೆಸುತ್ತಿದ್ದ ಖಾಸಗಿ ಬಸ್‌ಗಳು ಗ್ರಾಮೀಣ ಭಾಗಗಳಿಗಿಂತ ತಾಲೂಕು ಕೇಂದ್ರಗಳು ಮತ್ತು ಬೆಂಗಳೂರು, ಮಂಡ್ಯ ಮುಂತಾದನಗರಗಳ ಕಡೆ ಮುಖಮಾಡಿವೆ. ಹೀಗಾಗಿಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ಸಾರಿಗೆ ವ್ಯವಸ್ಥೆ ಇಲ್ಲದೆ ಜನ ಪರದಾಡುತ್ತಿದ್ದಾರೆ.
ಖಾಸಗಿ ಬಸ್‌ಗಳು, ಕ್ಯಾಬ್‌ಗಳು ಲಭ್ಯವಿದ್ದರೂ, ಪ್ರಯಾಣಿಕರು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಖಾಸಗಿ ಬಸ್‌ಗಳಲ್ಲಿಜನ ತುಂಬುವವರೆಗೂ ನಿಲ್ದಾಣ ಬಡುತ್ತಿಲ್ಲ.ಹೀಗಾಗಿ ತಾವು ನಿಗದಿತ ಸ್ಥಳಗಳಿಗೆ ಹೋಗುವುದು ತಡವಾಗುತ್ತಿದೆ. ಬಸ್ ನಿಲ್ದಾಣದಲ್ಲಿದ್ದಾಗ ಒಂದು ದರ ಹೇಳುವ ಸಿಬ್ಬಂದಿ, ಬಸ್‌ಹೊರಟ ನಂತರ ಮತ್ತೂಂದು ದರ ವಿಧಿಸುವ ದೂರು ಕೇಳಿ ಬಂದಿವೆ.
ಎರಡನೇ ಶನಿವಾರ ಸರ್ಕಾರಿ ರಜಾ ದಿನತದನಂತರ ಭಾನುವಾರ ನಂತರ ಯುಗಾದಿಹಬ್ಬ ಹೀಗೆ ಸಾಲು ರಜೆ ಇರುವುದರಿಂದಶುಕ್ರವಾರ ಸಂಜೆ ಪ್ರಯಾಣಿಕರ ಸಂಖ್ಯೆಯಲ್ಲಿಹೆಚ್ಚಳವಾಗಿತ್ತು. ಬೆಂಗಳೂರಿನಿಂದ ಬರುತ್ತಿದ್ದಬಸ್, ಕ್ಯಾಬ್‌ಗಳು ಪ್ರಯಾಣಿಕರಿಂದ ತುಂಬಿದ್ದು ಕಂಡು ಬಂತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.