521 ಕ್ಷೇತ್ರಗಳಿಂದ 971 ಸದಸ್ಯರ ಆಯ್ಕೆಗೆ ಕಸರತ್ತು


Team Udayavani, Dec 8, 2020, 1:32 PM IST

521 ಕ್ಷೇತ್ರಗಳಿಂದ 971 ಸದಸ್ಯರ ಆಯ್ಕೆಗೆ ಕಸರತ್ತು

ರಾಮನಗರ: ಜಿಲ್ಲೆಯ 127 ಗ್ರಾಪಂಗಳಲ್ಲಿ 118 ಗ್ರಾಪಂಗೆ ರಾಜ್ಯ ಚುನಾವಣಾ ಆಯೋಗ ಚುನಾವಣೆ ಎರಡು ಹಂತಗಳಲ್ಲಿ ನಡೆಯಲಿದೆ. ಡಿ.22 ಮೊದಲ ಹಂತದ ಚುನಾವಣೆ ಮತ್ತು ಡಿ.27ರಂದು ದ್ವಿತೀಯ ಹಂತದ ಚುನಾವಣೆ ನಡೆಯಲಿದೆ.

ಡಿ.22ರಂದು ರಾಮನಗರ ತಾಲೂಕಿನ ಎಲ್ಲಾ 20 ಗ್ರಾಪಂ, ಕನಕಪುರ ತಾಲೂಕಿನ 43 ಗ್ರಾಪಂಗಳಲ್ಲಿ 36 ಗ್ರಾಪಂಗೆ ಚುನಾವಣೆ ನಡೆಯಲಿದೆ. ಚನ್ನಪಟ್ಟಣ ತಾಲೂಕಿನ ಎಲ್ಲಾ 32 ಮತ್ತು ಮಾಗಡಿಯ 32ಗ್ರಾಪಂನಲ್ಲಿ 30 ಗ್ರಾಪಂಗೆ ಡಿಸೆಂಬರ್‌ 27ರಂದು ಚುನಾವಣೆ ನಡೆಯಲಿದೆ.

ಮೊದಲ ಹಂತ: ಮೊದಲನೆ ಹಂತದ ಚುನಾವಣೆಗೆ ಜಿಲ್ಲಾಧಿಕಾರಿಗಳು ಮಂಗಳವಾರ ಅಧಿಸೂಚನೆ ಹೊರೆಡಿಸಿದ್ದಾರೆ. ರಾಮನಗರ ಮತ್ತು ಕನಕಪುರ ತಾಲೂಕುಗಳಲಿ ನಾಮಪತ್ರಗಳನ್ನು ಸಲ್ಲಿಸಲು ಡಿ.11ಕೊನೆ ದಿನ. ನಾಮಪತ್ರ ಪರಿಶೀಲನೆ ಡಿ.12, ಉಮೇದುವಾರಿಕೆ ಹಿಂಪಡೆಯಲು ಡಿ.14 ದಿನಾಂಕಗಳು ನಿಗಧಿಯಾಗಿವೆ. ಅಧಿಸೂಚನೆಯ ಬೆನ್ನಲ್ಲೆ ಕನಕಪುರ ಮತ್ತು ರಾಮನಗರ ತಾಲೂಕುಗಳಲ್ಲಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ.

ಕನಕಪುರದ 36 ಗ್ರಾಪಂಗೆ ಚುನಾವಣೆ: ಕನಕಪುರದ 36 ಗ್ರಾಪಂ ಚುನಾವಣೆ ಡಿ.22ರಂದು ನಡೆಯಲಿದೆ. 36 ಗ್ರಾಪಂಗಳ 334 ಕ್ಷೇತ್ರಗಳಿಂದ 612 ಮಂದಿ ಸದಸ್ಯರನ್ನು ಮತದಾರರು ಆಯ್ಕೆ ಮಾಡುವರು. ಯಲಚವಾಡಿ ಗ್ರಾಪಂನಲ್ಲಿ 13 ಕ್ಷೇತ್ರಗಳಿಂದ 18 ಮಂದಿ, ಬನವಾಸಿ ಗ್ರಾಪಂನ 14 ಕ್ಷೇತ್ರಗಳಿಂದ 17 ಸದಸ್ಯರು,ಕೊಟ್ಟಗಾಳು ಗ್ರಾಪಂನಿಂದ 6 ಕ್ಷೇತ್ರಗಳಿಂದ 16 ಸದಸ್ಯರು, ಚೀಲೂರಿನ 11 ಕ್ಷೇತ್ರಗಳಿಂದ 21 ಸದಸ್ಯರು, ದೊಡ್ಡಮರಳವಾಡಿಯ 9 ಕ್ಷೇತ್ರಗಳಿಂದ 19 ಸದಸ್ಯರು, ತೋಕಸಂದ್ರದ 12 ಕ್ಷೇತ್ರಗಳಿಂದ 18 ಸದಸ್ಯರು, ತುಂಗಣಿ ಗ್ರಾಪಂನ 11 ಕ್ಷೇತ್ರಗಳಿಂದ 17 ಸದಸ್ಯರು, ಚಿಕ್ಕಮುದವಾಡಿಯ 9 ಕ್ಷೇತ್ರಗಳಿಂದ 18 ಸದಸ್ಯರು, ಅಳ್ಳೇಮಾರನಹಳ್ಳಿಯ 8 ಕ್ಷೇತ್ರಗಳಿಂದ 14 ಸದಸ್ಯರು, ಸೋಮೆದ್ಯಾಪನಹಳ್ಳಿಯ10ಕ್ಷೇತ್ರಗಳಿಂದ 15 ಸದಸ್ಯರು, ಕಲ್ಲಹಳ್ಳಿಯ 9 ಕ್ಷೇತ್ರಗಳಿಂದ 17 ಸದಸ್ಯರು, ಚಾಕನಹಳ್ಳಿಯ 12 ಕ್ಷೇತ್ರಗಳೀಂದ 22 ಸದಸ್ಯರು, ಬೂದಿಕುಪ್ಪೆಯ 3 ಕ್ಷೇತ್ರಗಳಿಂದ 7 ಸದಸ್ಯರುಆಯ್ಕೆಯಾಗಲಿದ್ದಾರೆ.

ಟಿ.ಬೇಕುಪ್ಪೆ ಗ್ರಾಪಂನಿಂದ 11 ಕ್ಷೇತ್ರಗಳಿಂದ 19 ಮಂದಿ ಸದಸ್ಯರು, ನಾರಾಯಣಪುರ ಗ್ರಾಪಂನ 10 ಕ್ಷೇತ್ರಗಳಿಂದ 16, ಶಿವನಹಳ್ಳಿಯ 11 ಕ್ಷೇತ್ರಗಳಿಂದ 20, ಅಚ್ಚಲು ಗ್ರಾಪಂನ 10 ಕ್ಷೇತ್ರಗಳಿಂದ 20 ಸದಸ್ಯರು, ಚೂಡಹಳ್ಳಿಯ 8 ಕ್ಷೇತ್ರಗಳಿಂದ 16, ಅರಕಟ್ಟೆದೊಡ್ಡಿಯ 8 ಕ್ಷೇತ್ರಗಳಿಂದ 15 ಸದಸ್ಯರು, ಕಬ್ಟಾಳು ಗ್ರಾಪಂನ 10 ಕ್ಷೇತ್ರಗಳಿಂದ 17 ಸದಸ್ಯರು, ಹೊನ್ನಿಗನಹಳ್ಳಿಯ 6 ಕ್ಷೇತ್ರಗಳಿಂದ 16, ಕಾಡಹಳ್ಳಿಯ 8 ಕ್ಷೇತ್ರಗಳಿಂದ 17, ಸಾತನೂರಿನ 8 ಕ್ಷೇತ್ರಗಳಿಂದ20, ಮರಳೆಬೇಕುಪ್ಪಯ8 ಕ್ಷೇತ್ರಗಳಿಂದ 15, ದೊಡ್ಡಾಲಹಳ್ಳಿಯ 7 ಕ್ಷೇತ್ರಗಳಿಂದ 16, ಐ.ಗೊಲ್ಲಹಳ್ಳಿಯ12ಕ್ಷೇತ್ರಗಳಿಂದ19, ಮುಳ್ಳಹ ಳ್ಳಿಯ 9 ಕ್ಷೇತ್ರಗಳಿಂದ 14, ಹೂಕುಂದ ಗ್ರಾಪಂನ 7 ಕ್ಷೇತ್ರಗಳಿಂದ14 ಸದಸ್ಯರು ಆಯ್ಕೆಯಾಗಲಿದ್ದಾರೆ.

359 ಸದಸ್ಯರು ಆಯ್ಕೆ: ರಾಮನಗರ ತಾಲೂಕಿನ 20 ಗ್ರಾಪಂನ 187 ಕ್ಷೇತ್ರಗಳಿಂದ 359 ಸದಸ್ಯರು ಆಯ್ಕೆಯಾಗಲಿದ್ದಾರೆ. ಬೈರಮಂಗಲ ಗ್ರಾಪಂನ 9 ಕ್ಷೇತ್ರಗಳಿಂದ 21 ಸದಸ್ಯರು, ಕಂಚುಗಾರನಹಳ್ಳಿಯ 10 ಕ್ಷೇತ್ರಗಳಿಂದ 17 ಸದಸ್ಯರು,ಗೋಪಹಳ್ಳಿ ಗ್ರಾಪಂನ 13 ಕ್ಷೇತ್ರಗಳಿಂದ 26, ಮಂಚನಾಯ್ಕನಹಳ್ಳಿಯ 14 ಕ್ಷೇತ್ರಗಳಿಂದ 34 ಸದಸ್ಯರು, ಬನ್ನಿಕುಪ್ಪೆಯ 11 ಕ್ಷೇತ್ರಗಳಿಂದ 20 ಸದಸ್ಯರು, ಹರೀಸಂದ್ರದ 10 ಕ್ಷೇತ್ರಗಳಿಂದ 16, ಬಿಳಗುಂಬದ 10 ಕ್ಷೇತ್ರಗಳಿಂದ 18, ಸುಗ್ಗನಹಳ್ಳಿಯ 14 ಕ್ಷೇತ್ರಗಳಿಂದ 20, ಮಾಯಗಾನಹಳ್ಳಿಯ 11 ಕ್ಷೇತ್ರಗಳಿಂದ 21, ಕೂಟಗಲ್ಲು ಗ್ರಾ

ಪಂನ 9 ಕ್ಷೇತ್ರಗಳಿಂದ 19 ಸದಸ್ಯರು, ದೊಡ್ಡಗಂಗವಾಡಿಯ 4 ಕ್ಷೇತ್ರಗಳಿಂದ 9, ಅಕ್ಕೂರಿನ 4 ಕ್ಷೇತ್ರಗಳಿಂದ 8, ಹುಲಿಕೆರೆ ಗುನ್ನೂರಿನ 10 ಕ್ಷೇತ್ರಗಳಿಂದ 17, ಜಾಲಮಂಗಲದ 5 ಕ್ಷೇತ್ರಗಳಿಂದ 11, ಲಕ್ಷ್ಮೀಪುರದ 11 ಕ್ಷೇತ್ರಗಳಿಂದ 18, ಕೈಲಾಂಚದ 7 ಕ್ಷೇತ್ರಗಳಿಂದ 15, ಹುಣಸನಹಳ್ಳಿಯ9 ಕ್ಷೇತ್ರಗಳಿಂದ21, ಬನ್ನಿಕುಪ್ಪೆ (ಕೈ) 9 ಕ್ಷೇತ್ರಗಳಿಂದ 13, ವಿಭೂತಿಕೆರೆಯ 9 ಕ್ಷೇತ್ರಗಳಿಂದ 19, ಶ್ಯಾನುಬೋಗನಹಳ್ಳಿಯ 8 ಗ್ರಾಮಪಂಚಾಯ್ತಿ ಕ್ಷೇತ್ರಗಳಿಮದ16 ಸದಸ್ಯರು ಆಯ್ಕೆಯಾಗಲಿದ್ದಾರೆ.

ಗ್ರಾಪಂ: ಮೊದಲ ಹಂತದ ವೇಳಾಪಟ್ಟಿ ಪ್ರಕಟ : ರಾಮನಗರ: ಕರ್ನಾಟಕ ಗ್ರಾಮ ಸ್ವರಾಜ್ ಮತ್ತುಪಂಚಾಯತ್‌ ರಾಜ್ ಅಧಿನಿಯಮ-1993 ಉಪಬಂಧಗಳ ಮೇರೆಗೆ ರಾಮನಗರ ಜಿಲ್ಲೆಯರಾಮನಗರ ಹಾಗೂ ಕನಕಪುರ ತಾಲೂಕಿನಲ್ಲಿ ಗ್ರಾಪಂ ಸದಸ್ಯರು ಅಧಿಕಾರವಧಿಯು ಮುಕ್ತಾಯವಾಗಿ ಹೊರ ಹೋಗಿರುವ ಕಾರಣದಿಂದ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಜಿಲ್ಲಾಧಿಕಾರಿ ಎಂ.ಎಸ್‌. ಅರ್ಚನಾ ಅವರು ವೇಳಪಟ್ಟಿಯನ್ನು ನಿಗದಿಪಡಿಸಿದ್ದಾರೆ.

ನಾಮಪತ್ರಗಳನ್ನು ಸಲ್ಲಿಸಲು ಡಿ.11 ಕೊನೆಯ ದಿನಾಂಕ. ನಾಮಪತ್ರಗಳ ಪರಿಶೀಲನೆ ಡಿ.12 ರಂದು ನಡೆಯಲಿದೆ. ಉಮೇದುವಾರಿಕೆ ಹಿಂಪಡೆಯಲು ಡಿ.14 ಕೊನೆಯ ದಿನಾಂಕವಾಗಿದೆ. ಮತದಾನದ ಅವಶ್ಯವಿದ್ದರೆ ಡಿ.22ರ ಬೆಳಗ್ಗೆ 7ರಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ. ಮರು ಮತದಾನ ಇದ್ದಲ್ಲಿ ಡಿ.24ರ ಬೆಳಗ್ಗೆ 7ರಿಂದಸಂಜೆ 5 ಗಂಟೆಯವರೆಗೆ ನಡೆಯಲಿದೆ. ಮತ ಎಣಿಕೆಯು ಡಿ.30ರ ಬೆಳಗ್ಗೆ 8 ಗಂಟೆಗೆ ಆಯಾ ತಾಲೂಕು ಕೇಂದ್ರದಲ್ಲಿ ನಡೆಯಲಿದೆ. ಚುನಾವಣಾ ಪ್ರಕ್ರಿಯೆಯು ಡಿ.31ಕ್ಕೆ ಮುಕ್ತಾಯಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ಪ್ರಥಮ ದಿನ 23 ನಾಮಪತ್ರ ಸಲ್ಲಿಕೆ :  ಗ್ರಾಪಂ ಚುನಾವಣೆಯ ಹಿನ್ನೆಲೆಯಲ್ಲಿ ಮಂಗಳವಾರದಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ರಾಮನಗರ ತಾಲೂಕಿನಲ್ಲಿ 16 ನಾಮಪತ್ರಗಳು ಸಲ್ಲಿಕೆಯಾಗಿವೆ. 359 ಸ್ಥಾನಗಳ ಪೈಕಿ 16 ಸ್ಥಾನಗಳಿಗೆ ಮಾತ್ರ ನಾಮಪತ್ರಗಳು ಸಲ್ಲಿಕೆಯಾಗಿದ್ದು, 343 ಸ್ಥಾನಗಳಿಗೆ ನಾಮಪತ್ರಗಳು ಸಲ್ಲಿಕೆಯಾಗಿಲ್ಲ. ಕನಕಪುರ ತಾಲೂಕಿನಲ್ಲಿ7 ನಾಮಪತ್ರಗಳು ಮಾತ್ರ ಸಲ್ಲಿಕೆಯಾಗಿವೆ.612 ಸ್ಥಾನಗಳ ಪೈಕಿ7 ಸ್ಥಾನಗಳಿಗೆಮಾತ್ರ ನಾಮಪತ್ರ ಸಲ್ಲಿಕೆಯಾಗಿದ್ದು,605 ಸ್ಥಾನಗಳಿಗೆ ನಾಮಪತ್ರಗಳು ಸಲ್ಲಿಕೆಯಾಗಿಲ್ಲ.

 

ಸಾಮಾನ್ಯ, ಮಹಿಳಾಮೀಸಲು ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ :

ರಾಮನಗರ: ತಾಲೂಕಿನ ಕೈಲಾಂಚ ಹೋಬಳಿ ವ್ಯಾಪ್ತಿಯ5 ಪಂಚಾಯ್ತಿಗಳ ಪೈಕಿ ಹುಣಸನಹಳ್ಳಿ, ಹುಲಿಕೆರೆ-ಗುನ್ನೂರು ಗ್ರಾಪಂಗಳಲ್ಲಿ ಮೊದಲ ದಿನದಲ್ಲಿ ಯಾವುದೇ ನಾಮಪತ್ರ ಸ್ವೀಕೃತವಾಗಲಿಲ್ಲ. ಆದರೆ, ವಿಭೂತಿಕೆರೆ ಗ್ರಾಪಂಗೆ 2, ಬನ್ನಿಕುಪ್ಪೆ ಗ್ರಾಮ ಪಂಚಾಯ್ತಿಗೆ 1, ಕೈಲಾಂಚ ಗ್ರಾಮ ಪಂಚಾಯ್ತಿಗೆ 1 ನಾಮಪತ್ರಗಳು ಸಲ್ಲಿಕೆಯಾಗಿವೆ. ಬನ್ನಿಕುಪ್ಪೆ ಸಾಮಾನ್ಯ ಕ್ಷೇತ್ರಕ್ಕೆ ಶಂಕರ್‌, ಕೈಲಾಂಚ ಸಾಮಾನ್ಯ ಕ್ಷೇತ್ರದಿಂದ ದಾಸೇಗೌಡ, ವಿಭೂತಿಕೆರೆ ಗ್ರಾಪಂ ವ್ಯಾಪ್ತಿಯ ಚನ್ನಮಾನಹಳ್ಳಿ ಭಾಗ 2ರಿಂದ ಸಾಮಾನ್ಯ ಸ್ಥಾನಕ್ಕೆ ಟಿ. ನಾಗೇಶ್‌, ಅಂಜನಾಪುರ ಮಹಿಳಾ ಮೀಸಲು ಸ್ಥಾನಕ್ಕೆ ಸಂಪಾವತಿ ನಾಮಪತ್ರ ಸಲ್ಲಿಸಿದರು.

ಟಾಪ್ ನ್ಯೂಸ್

DK-Shivakuamar

Congress: ಸಿದ್ದರಾಮಯ್ಯ ಮಾಸ್‌ ಲೀಡರ್‌, ಮುಗಿಸಲು ಬಿಜೆಪಿ ಯತ್ನ: ಡಿ.ಕೆ.ಶಿವಕುಮಾರ್‌

Udupi: ಗೀತಾರ್ಥ ಚಿಂತನೆ-88: ಸಮಸ್ಯೆಯ ಮೂಲ ಹುಡುಕುವ ರೀತಿ

Udupi: ಗೀತಾರ್ಥ ಚಿಂತನೆ-88: ಸಮಸ್ಯೆಯ ಮೂಲ ಹುಡುಕುವ ರೀತಿ

1-crick

T20; ಸ್ಯಾಮ್ಸನ್‌ ಸತತ 2ನೇ ಶತಕ:ದಕ್ಷಿಣ ಆಫ್ರಿಕಾ ಎದುರು ಭಾರತಕ್ಕೆ ಅಮೋಘ ಜಯ

Kaup: ಪಠ್ಯದ ಜತೆಗೆ ಶಿಕ್ಷಣಕ್ಕೆ ಆದ್ಯತೆ ಅತ್ಯಗತ್ಯ: ಡಾ| ಕೆ. ಪ್ರಕಾಶ್‌ ಶೆಟ್ಟಿ

Kaup: ಪಠ್ಯದ ಜತೆಗೆ ಶಿಕ್ಷಣಕ್ಕೆ ಆದ್ಯತೆ ಅತ್ಯಗತ್ಯ: ಡಾ| ಕೆ. ಪ್ರಕಾಶ್‌ ಶೆಟ್ಟಿ

Mangaluru: ಪದ್ಮಶ್ರೀ ಬೇಳೇರಿ ಸಂರಕ್ಷಿತ ಭತ್ತದ 10 ತಳಿ ಸಂವರ್ಧನೆ

Mangaluru: ಪದ್ಮಶ್ರೀ ಬೇಳೇರಿ ಸಂರಕ್ಷಿತ ಭತ್ತದ 10 ತಳಿ ಸಂವರ್ಧನೆ

1-pro

Pro Kabaddi: ಜೈಪುರ್‌ ಮೇಲೆ ಪಾಟ್ನಾ ಸವಾರಿ

ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ ಪ್ರಕರಣ: ಪೊಲೀಸ್‌ ಕ್ರಮಕ್ಕೆ ಕೇರಳ ಸಿಎಂ ಸೂಚನೆ

ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ ಪ್ರಕರಣ: ಪೊಲೀಸ್‌ ಕ್ರಮಕ್ಕೆ ಕೇರಳ ಸಿಎಂ ಸೂಚನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

HDK2

By Election: ಯೋಗೇಶ್ವರ್‌ ನಿಂದಿಸಿದ್ದ ಡಿ.ಕೆ.ಸುರೇಶ್‌ ಆಡಿಯೋ ಎಚ್‌ಡಿಕೆ ಬಿಡುಗಡೆ

CM–Chennapatana

Chennapattana By Poll: ಅಳುವ ಗಂಡಸು, ಯಾವತ್ತೂ ನಂಬಬೇಡಿ: ಸಿಎಂ ಸಿದ್ದರಾಮಯ್ಯ

HDD–BSY

By Election: ಸಿ.ಪಿ.ಯೋಗೇಶ್ವರ್‌ ಬಾಯಿ ಮಾತಿನ ಭಗೀರಥ: ಎಚ್‌.ಡಿ.ದೇವೇಗೌಡ ವಾಗ್ದಾಳಿ

HDD–By-election

By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್‌.ಡಿ.ದೇವೇಗೌಡ ಗುಡುಗು

DK-Suresh

By Election: ಮಗನಿಗಾಗಿ ಎಚ್‌ಡಿಕೆ ನಿಮ್ಮ ಊರು ಹುಡುಕಿ ಬರುತ್ತಾರಷ್ಟೇ: ಡಿ.ಕೆ.ಸುರೇಶ್‌

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-rb

ATP Finals Doubles; ಬೋಪಣ್ಣ ಜೋಡಿಗೆ 6ನೇ ಶ್ರೇಯಾಂಕ

1-weewq

Ranji; ಬಂಗಾಲ ಬಿಗಿ ಹಿಡಿತ : ಇನ್ನಿಂಗ್ಸ್‌ ಜಯದತ್ತ ಮುಂಬಯಿ

DK-Shivakuamar

Congress: ಸಿದ್ದರಾಮಯ್ಯ ಮಾಸ್‌ ಲೀಡರ್‌, ಮುಗಿಸಲು ಬಿಜೆಪಿ ಯತ್ನ: ಡಿ.ಕೆ.ಶಿವಕುಮಾರ್‌

Udupi: ಗೀತಾರ್ಥ ಚಿಂತನೆ-88: ಸಮಸ್ಯೆಯ ಮೂಲ ಹುಡುಕುವ ರೀತಿ

Udupi: ಗೀತಾರ್ಥ ಚಿಂತನೆ-88: ಸಮಸ್ಯೆಯ ಮೂಲ ಹುಡುಕುವ ರೀತಿ

1-crick

T20; ಸ್ಯಾಮ್ಸನ್‌ ಸತತ 2ನೇ ಶತಕ:ದಕ್ಷಿಣ ಆಫ್ರಿಕಾ ಎದುರು ಭಾರತಕ್ಕೆ ಅಮೋಘ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.