Magadi: ಅಂತರ್ಜಲ ಕುಸಿತ; ಒಣಗುತ್ತಿವೆ ಬೆಳೆಗಳು
Team Udayavani, Mar 17, 2024, 1:53 PM IST
ಮಾಗಡಿ: ಕಳೆದ 6 ತಿಂಗಳಿನಿಂದ ಮಳೆಯಿಲ್ಲದೆ ಅಂತರ್ಜಲ ಕುಸಿದಿದೆ. ಕೃಷಿ, ತೋಟಗಾರಿಕೆ ಬೆಳೆಗಳು ಬಣಗುತ್ತಿದ್ದು, ರೈತ ಕುಟುಂಬಗಳು ಕಂಗಾಲಾಗಿದ್ದಾರೆ.
ಮಾಗಡಿ ಬೆಟ್ಟಗುಡ್ಡಗಳಿಂದ ಕೂಡಿರುವ ಪ್ರದೇಶವಾಗಿದ್ದು, ಕೃಷಿಯನ್ನೇ ನಂಬಿ ಬದುಕುತ್ತಿರುವ ರೈತರ ಕೃಷಿ ಚಟುವಟಿಕೆಗೆ ನೀರಿಲ್ಲದೆ ತುಂಬ ಸಂಕಷ್ಟದ ಲ್ಲಿದ್ದಾರೆ. ಜನ ಜಾನು ವಾರು ಗಳಿಗೂ ನೀರಿಲ್ಲದೆ ಪರಿತಪಿಸುತ್ತಿವೆ. ಮಳೆ ಬೀಳದೆ ಕಂಗಾಲಾಗಿ ರುವ ರೈತರು ನೀರಿಲ್ಲದೆ ಯಾವ ಬೆಳೆಯನ್ನು ಬೆಳೆಯ ಲಾಗ ದಂತಹ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಕೊಳವೆ ಬಾವಿ ಗಳನ್ನು ನಂಬಿ ಕೊಂಡಿರುವ ರೈತರು ಅಂತರ್ಜಲ ವಿಲ್ಲದೆ ಕೊಳವೆ ಬಾವಿಗಳು ಬತ್ತಿ ಹೋಗುತ್ತಿವೆ. ತಾಲೂಕಿನಲ್ಲಿ ಈಗಾಗಲೇ ಸಾವಿರಾರು ಕೊಳವೆಬಾವಿ ಗಳು ಇದ್ದು ಬಹುತೇಕ ಕೊಳವೆ ಬಾವಿಗಳು ಬತ್ತಿ ಹೋಗಿವೆ. ಇದ ರಿಂದ ರೈತರ ಆತಂಕ ಹೆಚ್ಚಾಗಿದ್ದು, ಏನು ಮಾಡಲಾಗದ ಪರಿಸ್ಥಿತಿಯಲ್ಲಿ ರೈತರ ಜೀವನ ನಡೆದಿದೆ.
ನಾಡಿನತ್ತ ಕಾಡಾನೆಗಳು: ವಾಡಿಕೆಯಂತೆ ಯಥೇ ತ್ಛವಾಗಿ ಮಳೆಯಾಗುತ್ತಿದ್ದರೆ ಅಂತರ್ಜಲ ವೃದ್ಧಿ ಯಾ ಗುತ್ತಿತ್ತು. ಈ ಬಾರಿ ಮಳೆ ಕೊರತೆಯಿಂದ ಬಹುತೇಕ ಕೆರೆಕಟ್ಟೆಗಳು ನೀರಿಲ್ಲದೆ ಬಣಗಿದೆ. ಕನಿಷ್ಠ ಪ್ರಾಣಿ, ಪಕ್ಷಿ ಗಳಿಗೂ ನೀರಿಲ್ಲದಂತಾಗಿದೆ. ನೀರಿಲ್ಲದೆ ಕಾಡಾನೆಗಳು ನೀರು ಮೇವಿಗಾಗಿ ನಾಡಿನತ್ತ ನುಗ್ಗುತ್ತಿವೆ. ಬಹುತೇಕ ರೈತರು ತೋಟಗಾರಿಕೆ ಬೆಳೆ ಯಿಂದಲೇ ಬದುಕು ಕಟ್ಟಿಕೊಂಡಿದ್ದರು. ಕೊಳವೆ ಬಾವಿ ಗಳಿಂದ ನೀರು ಪೂರೈಕೆ ಮಾಡಿಕೊಂಡು ರೈತರು ಬೆಳೆಯನ್ನು ಬೆಳೆಯು ತ್ತಿದ್ದರು. ಆದರೆ ಕಳೆದ ವರ್ಷ ಸರಿಯಾದ ಪ್ರಮಾಣ ದಲ್ಲಿ ಮಳೆ ಆಗದೇ ಇರುವುದ ರಿಂದ ಕೊಳವೆಬಾವಿ ಗಳಲ್ಲಿ ನೀರು ಭತ್ತಿ ಹೋಗಿದೆ. ಮುಂದಿನ ಜೀವನ ಹೇಗೆ ಎಂಬ ಆತಂಕದ ಛಾಯೆ ರೈತರಲ್ಲಿ ಆವರಿಸಿದೆ.
ಈ ಬಾರಿ ಮಳೆ ಕೊರೆತೆಯಿಂದಾಗಿ ಬೇಸಾಯವನ್ನೇ ನಂಬಿಕೊಂಡಿದ್ಧ ರೈತರ ಪ್ರಮುಖ ಬೆಳೆಯಾಗಿದ್ದ ರಾಗಿ, ಭತ್ತ, ಜೋಳದ ಬೆಳೆಯಲಾಗಿಲ್ಲ. ತೋಟಗಾರಿಕೆ ಬೆಳೆಗಳಾದ ತೆಂಗು, ಬಾಳೆ, ಮಾವು, ಅಡಿಕೆ, ಸಪೋಟ, ಹಣ್ಣು, ತರಕಾರಿಗಳ ಬೆಳೆಯೂ ಕೂಡ ಬಣಗಿ ಹೋಗುತ್ತಿದ್ದು, ನೀರಲ್ಲದೆ ರೈತರು ಸಂಕಷ್ಟಕ್ಕೆ ಸಿಲುಕಿ ನರಕಯಾತನೆ ಅನುಭವಿಸುವಂತಾಗಿದೆ.
ಬೆಳೆಗಳ ಭೌಗೋಳಿಕ ವಿಸ್ತೀರ್ಣ: ಕಸಬಾ, ಮಾಡ ಬಾಳ್, ತಿಪ್ಪಸಂದ್ರ, ಕುದೂರು, ಸೋಲೂರು ಹೋಬ ಳಿಗಳಲ್ಲಿ 46 ಸಾವಿರ ಹೆಕ್ಟೇರ್ ಭೂ ಪ್ರದೇಶ ದಲ್ಲಿ ಕೃಷಿ ಚಟುವಟಿಕೆಗಳನ್ನು ರೈತರು ಮಾಡುತ್ತಿದ್ದಾರೆ. 30 ಸಾವಿರ ಹೆಕ್ಟರ್‌ನಲ್ಲಿ ರಾಗಿ, ಭತ್ತ ಬೆಳೆಯುತ್ತಿದ್ದು, ಜತೆಗೆ 18 ಸಾವಿರ ಹೆಕ್ಟೇರ್ ಪ್ರದೇಶ ದಲ್ಲಿ ತೋಟ ಗಾರಿಕೆ ಬೆಳೆಗಳನ್ನು ರೈತರು ಬೆಳೆ ಯುತ್ತಿದ್ದಾರೆ. ಇದ ರಿಂದ ಜೀವನ ನಡೆಸುತ್ತಿದ್ದರು. ಮಳೆ ಕೊರತೆ ಯಿಂದಾಗಿ ಉತ್ತಮ ಫಸಲು ಸಿಗದೆ ನಷ್ಟಕ್ಕೊಳ ಗಾಗಿದ್ದಾರೆ.
ಅಂತರ್ಜಲ ಕುಸಿತ: ಮಾಗಡಿ ಸುತ್ತಮುತ್ತಲ ಪ್ರದೇ ಶದಲ್ಲಿ ಕೊಳವೆಬಾವಿಗಳನ್ನು ಕೊರೆಸಿ ದರೆ 400-500 ಅಡಿಗಳಲ್ಲೇ ನೀರು ಯಥೇತ್ಛವಾಗಿ ಸಿಗುತ್ತಿತ್ತು. ಬೆಳೆ ಗಳಿಗೆ ಬೇಕಾಗುವಷ್ಟು ನೀರನ್ನು ರೈತರು ಪೂರೈಕೆ ಮಾಡಿ ಕೊಳ್ಳುತ್ತಿದ್ದರು. ಆದರೆ ಮಳೆಯ ಅಭಾವದಿಂದ ಕೆರೆ ಕಟ್ಟೆಗಳು ಬರಿದಾಗಿರುವ ಪರಿಣಾಮ 1 ಸಾವಿರ ಮೇಲ್ಪ ಟ್ಟು ಅಡಿಯಷ್ಟು ಕೊಳವೆ ಬಾವಿಯನ್ನು ಕೊರೆಸಿ ದರೂ ನೀರು ಸಿಗುತ್ತಿಲ್ಲ. ಅಷ್ಟರ ಮಟ್ಟಿಗೆ ಅಂತರ್ಜಲ ಕುಸಿದಿದೆ. ಈಗಿನ ಬಿರು ಬೇಸಿಗೆಯಲ್ಲಿ ಕೆಂಡದಂತಹ ಬಿಸಿಲಿಗೆ ಬೆಳೆಗಳು ಒಣಗಿ ನೆಲಕಚ್ಚಿವೆ. ತೋಟಗಾರಿಕೆ ಬೆಳೆಗಳಾದ ಅಡಿಕೆ, ತೆಂಗು, ಮಾವು, ಸಪೋಟ, ಹಣ್ಣು ತರಕಾರಿ ಬೆಳೆಯಲಾಗದೆ ರೈತರು ನಷ್ಟಕ್ಕೆ ಒಳಗಾಗಿ ದ್ದಾರೆ.
ಸಮುದ್ರದ ನಂಟು ಉಪ್ಪಿಗೆ ಬರ: ಮಾಗಡಿ ತಾಲೂಕಿ ನಲ್ಲಿಯೇ ಮಂಚನಬೆಲೆ, ವೈಜಿಗುಡ್ಡ, ತಿಪ್ಪಗೊಂಡನ ಹಳ್ಳಿ ಈ ಮೂರು ಜಲಾಶಯಗಳಿದ್ದರೂ ಸಮುದ್ರದ ನಂಟು ಉಪ್ಪಿಗೆ ಬರ ಎಂಬಂತಾಗಿದೆ. ತಿಪ್ಪಗೊಂಡನ ಹಳ್ಳಿ ಜಲಾಯದಲ್ಲಿ ನೀರಿನ ಸಂಗ್ರಹವಾಗಿದ್ದರೆ ಈ ಭಾಗದಲ್ಲಿ ಅಂತರ್ಜಲ ಕುಸಿಯುತ್ತಿರಲಿಲ್ಲ, ರೈತರ ಕೃಷಿ ಚಟುವಟಿಕೆಗೂ ತುಂಬ ಅನು ಕೂಲ ವಾಗುತ್ತಿತ್ತು, ಈ ಜಲಾಶಯದ ಗೇಟ್ ದುರಸ್ತಿಪಡಿಸದೆ ಇರು ವುದರಿಂದ ನೀರು ಪೋಲಾಗಿ ಹೊರ ಹರಿದು ಹೋಗಿ ರುವುದರಿಂದ ಜಲಾಶಯ ಬರಿದಾಗಿದೆ. ಅಕ್ಷಸಃ ರೈತರ ಪಾಲಿಗೆ ದುರಂತ. ಕಾವೇರಿ ಅಚ್ಚು ಕಟ್ಟು ಸತ್ತೇಗಾಲ ನದಿ ಯೋಜನೆಯಿಂದ ವೈಜಿ ಗುಡ್ಡ ಮತ್ತು ಮಂಚನ ಬೆಲೆ ಜಲಾಶಯಕ್ಕೆ ನೀರು ತುಂಬಿಸುವ ಯೋಜನೆ ಹಲವು ವರ್ಷಗಳಿಂದ ಕಾಮಗಾರಿ ಪ್ರಗತಿಯಲ್ಲಿದೆ, ಈ ಯೋಜ ನೆ ಪೂರ್ಣಗೊಂಡರೆ ತಾಲೂಕಿನ ಸಣ್ಣ ಪುಟ್ಟ ಕೆರೆಗಳಿಗೆ ನೀರು ತುಂಬಿಸಿದರೆ ರೈತರಿಗೆ ಅನುಕೂಲವಾಗಲಿದೆ.
ಆಶಾ ಗೋಪುರ ಸದ್ಯಕ್ಕೆ ಗಾಳಿ ಗೋಪುರ: ಬಹು ವರ್ಷಗಳ ರೈತರ ಬೇಡಿಕೆಯಾಗಿರುವ ಹೇಮಾವತಿ ನೀರನ್ನು ತಾಲೂಕಿನ 83 ಕ್ಕೂ ಹೆಚ್ಚು ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಿದ್ದು, ಯೋಜನೆ ಆರಂಭ ವಾಗಿ 15 ವರ್ಷ ಗಳೇ ಉರುಳಿದೆ. ಯೋಜನೆ ಮಾತ್ರ ಇನ್ನೂ ಪೂರ್ಣಗೊಂಡು ಕೆರೆಗಳಿಗೆ ನೀರು ತುಂಬಿ ಸಲಿಲ್ಲ. ನೀರಾವರಿ ಯೋಜನೆಗಳ ಅನುಷ್ಠಾನ ಗೊಳ್ಳುತ್ತದೆ ಎಂಬ ಆಶಾಗೋಪುರವನ್ನೇ ರೈತರು ಕಟ್ಟಿ ಕೊಂಡಿದ್ದರು, ಆದರೆ ಅದು ಸಧ್ಯದ ಪರಿಸ್ಥಿತಿಯಲ್ಲಿ ಗಾಳಿಗೋಪುರವಾಗಿದೆ.
ಅವೈಜ್ಞಾನಿಕ ಬೇಸಾಯ ಪದ್ಧತಿ: ಬಯಲುಸೀಮೆ ಪ್ರದೇಶವಾಗಿರುವ ಮಾಗಡಿ ತಾಲೂಕಿನ ಭೂಮಿ ಯಲ್ಲಿ ಅಡಕೆ ಬೆಳೆ ಬೆಳೆಯ ಬಹುದು.ಆದರೆ ಅಡಿಕೆ ಬೆಳೆಯ ನಿರ್ವ ಹಣೆಗೆ ಅತೀ ಹೆಚ್ಚಿನ ನೀರಿನ ಅಗತ್ಯತೆ ಇರು ವುದರಿಂದ ಒಂದೇ ಅಡಿಕೆ ತೋಟದಲ್ಲಿ ನಾಲ್ಕು ಐದು ಕೊಳವೆಬಾವಿಗಳನ್ನ ಕೊರೆಯಿಸಿ ನೀರು ಪೂರೈಕೆ ಮಾಡುತ್ತಿರುವುದರಿಂದ ಅಂತರ್ಜಲ ಬೇಗನೇ ಬರಿದಾಗುತ್ತಿದೆ ಎಂಬುದು ಪ್ರಗತಿ ಪರ ಕೃಷಿಕ ಹನು ಮಾಪುರ ಕನ್ನಡಕುಮಾರ್ ಅಭಿಪ್ರಾಯವಾಗಿದೆ.
ಬಯಲು ಸೀಮೆಯ ನೀರಿನ ಪ್ರಮಾಣವನ್ನ ಗಮದಲ್ಲಿಟ್ಟುಕೊಂಡು ರೈತರು ವೈಜ್ಞಾನಿಕ ರೀತಿಯಲ್ಲಿ ಸಾಂಪ್ರದಾಯಿಕ ಬೆಳೆಗಳತ್ತ ಹೆಚ್ಚೆಚ್ಚು ಗಮನಹರಿಸ ಬೇಕೆಂಬುದು ಹಲವು ರೈತರ ಅಭಿಪ್ರಾಯವಾಗಿದೆ.
ಏಪ್ರಿಲ್ ತಿಂಗಳಲ್ಲಾದರೂ ಮೇಘರಾಜ ಕೃಪೆ ತೋರಿದರೆ ಹೈರಾಣಾಗಿರುವ ರೈತರು ಉಸಿರು ಬಿಡಲು ಸಾಧ್ಯವಾಗುತ್ತದೆ. ಕಳೆದ ವರ್ಷದಂತೆ ಈ ಬಾರಿಯೂ ಮಳೆ ಪ್ರಮಾಣ ಕಡಿಮೆಯಾಗಿದ್ದು, ಈ ವರ್ಷವೂ ಮುಂದುವರೆದರೆ ತೋಟಗಳೆಲ್ಲವೂ ಬೆಂಡಾಗಿ ರೈತನ ಬದುಕು ಅತಂತ್ರವಾಗುವ ಆತಂಕವಿದೆ ಎಂಬುದು ರೈತರ ಅಭಿಪ್ರಾಯವಾಗಿದೆ.
ಯೋಜನೆಗಳು ಪೂರ್ಣಗೊಳಿಸಲಿ :
ಚುನಾವಣೆ ಸಮಯಗಳಲ್ಲಿ ಮಾತ್ರ ರಾಜಕಾರಣಿ ಗಳು ಕೆರೆಗಳಿಗೆ ನೀರು ಪೂರೈಸುವ ಯೋಜನೆ ಬೇಗನೇ ಪೂರ್ಣಗೊಳ್ಳುತ್ತದೆಂದು ಭರವಸೆಗಳನ್ನ ನೀಡುತ್ತಾರೆ. ಮತ್ತೂಂದು ಚುನಾವಣೆ ಬರುವ ವರೆಗೂ ಆ ಯೋಜನೆಗಳು ಕುಂಟುತ್ತಾ ತೆವಳುತ್ತಾ ಸಾಗುತ್ತಲೇ ಇರುತ್ತವೆ. ಭರವಸೆಗಳ ಮಹಾಪೂರವನ್ನೇ ಹರಿಸುತ್ತಿರುವ ರಾಜಕಾರಣಿ ಗಳು ಮಾಗಡಿ ತಾಲೂಕಿನ ಕೆರೆಗಳನ್ನ ತುಂಬಿ ಸುವ ಯೋಜನೆಗಳು ಕ್ಷಿಪ್ರಗತಿಯಲ್ಲಿ ಸಾಗುವಂತೆ ಇಚ್ಛಾಶಕ್ತಿಯ ಪ್ರದರ್ಶನ ಮಾಡಿ ಸಾಕಾರಗೊಳಿಸ ಬೇಕಿದೆ. ಅಲ್ಲಿಯವರೆಗೂ ನೇಗಿಲಯೋಗಿಗಳ ನೀರಿನ ಬವಣೆಯೂ ತೀರುವುದಿಲ್ಲ, ಸಾಲ ಸೋಲ ಮಾಡಿ ಬೇಸಾಯ ಮಾಡುತ್ತಿರುವ ರೈತರ ಸಾಲದ ಹೊರೆಯೂ ಹೆಚ್ಚಾಗುತ್ತಲೇ ಇರುತ್ತದೆ. ಗ್ರಾಮೀಣ ಪ್ರದೇಶದ ಭಾಗದಲ್ಲಿ ಕೃಷಿ ಚಟುವಟಿಕೆಗೆ ಬೆಳಿಗ್ಗೆ ಸಮಯ 4 ಗಂಟೆಗಳ ಕಾಲ ಹಾಗೂ ರಾತ್ರಿ 10 ರ ನಂತರ 3 ಗಂಟೆಗಳ ಕಾಲ ವಿದ್ಯುತ್ ಪೂರೈಕೆಗೆ ಸರ್ಕಾರವೇ ಸಮಯ ನಿಗದಿ ಮಾಡಿದೆ. ಆದರೆ ಬೆಳಿಗ್ಗೆ ರಾತ್ರಿ ಸಮಯ ಎರಡೂ ಪಾಳಿಗಳಲ್ಲೂ ವಿದ್ಯುತ್ ಕಣ್ಣಾಮುಚ್ಚಾಲೆ ಆಗುತ್ತಿರುವುದರಿಂದ ದಿನಕ್ಕೆ ಒಟ್ಟು 4ಗಂಟೆ ವಿದ್ಯುತ್ ಕೂಡಸಿಗದೆ ಕೃಷಿ ಚಟುವಟಿಕೆ ಸಹ ಕಷ್ಟ ವಾಗಿದೆ. ಸಮರ್ಪಕ ವಿದ್ಯುತ್ ನೀಡಿದರೆ ಕೊಳವೆ ಬಾವಿಗಳಲ್ಲಿ ರುವ ನೀರನ್ನಾದರೂ ಬೆಳೆಗಳಿಗೆ ಹಾಯಿಸಿ ಬೆಳೆ ಉಳಿಸಿಕೊಳ್ಳಬಹುದಿತ್ತು ಇತ್ತ ಮಳೆ ಯಿಲ್ಲ, ಕೆರೆಕಟ್ಟೆಗಳು ನೀರಿಲ್ಲದೆ ಖಾಲಿ, ಕೊಳವೆಬಾವಿಗಳು ಭತ್ತಿವೆ. ಕೊನೆಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಯಿಲ್ಲದೆ ವಿದ್ಯುತ್ ಕಣ್ಣಾಮುಚ್ಚಾಲೆ ಯಿಂದ ರೈತರ ಬದುಕು ಮೂರಬಟ್ಟೆಯಾಗಿದೆ.-ರಾಜಣ್ಣ, ಪ್ರಗತಿಪರ ರೈತ ಶ್ಯಾನಭೋಗನಹಳ್ಳಿ
ವ್ಯವಸಾಯ ಅಂದ್ರೆ ನೀಸಾಯ, ನಾಸಾಯ ಮನೆ ಮಂದಿಯೆಲ್ಲ ಸಾಯ ಅನ್ನೋ ಮಾತಿದೆ. ಆ ರೀತಿ ಆಗಿದೆ ನಮ್ಮ ರೈತರ ಬದುಕು. ಮಳೆಯಿಲ್ಲದೆ ಕೆರೆಕಟ್ಟೆಗಳು ಬರಿ ದಾಗಿವೆ. ಜಲಾಶಯಗಳ ಮೂಲಕ ನೀರು ಪೂರೈಕೆ ಮಾಡೋ ಯೋಜನೆಗಳು ಸಾಕಾರ ಗೊಳ್ಳುತ್ತಿಲ್ಲ. ರೈತ ಬೆಳೆದ ಬೆಳೆಗೆ ಒಳ್ಳೆಯ ಬೆಂಬಲ ಬೆಲೆನೂ ಸಿಗುತ್ತಿಲ್ಲ. ರೈತರು ಮಾತ್ರ ಅನೇಕ ಜ್ವಲಂತ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ನಲುಗುತ್ತಿದ್ದಾರೆ. ರಾಜಕಾರಣಿಗಳ ಭರವಸೆಗಳಿಗಿಂದ ಮೇಘರಾಜ ಕೃಪೆ ತೋರಿದರೆ ಮಾತ್ರ ರೈತರ ಬದುಕು ಹಸನಾಗಲು ಸಾಧ್ಯ. -ಹೊಸಪಾಳ್ಯ ಲೋಕೇಶ್, ರೈತ ಸಂಘದ ಅಧ್ಯಕ್ಷ
ದೂರದ ಹೇಮಾವತಿ ನೀರು ತರುವ ಬದಲು ತಾಲೂಕಿನಲ್ಲಿರುವ ಮೂರು ಜಲಾಶಯಗಳನ್ನು ಮೇಲ್ದರ್ಜೆಗೇರಿಸಿ ನೀರು ಸಂಗ್ರಹಿಸಿ ರೈತರಿಗೆ ನೀಡಬಹು ದಿತ್ತು. ಜತೆಗೆ ಅಂತರ್ಜಲ ಸಹ ಹೆಚ್ಚಾಗುತ್ತಿತ್ತು. ಈಗಲಾದರೂ ಹೇಮಾವತಿ ಯೋಜನೆ ಆದಷ್ಟು ಬೇಗ.-ಟಿ.ಜಿ.ವೆಂಕಟೇಶ್, ತಾಪಂ ಮಾಜಿ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Fraud: “ವಿಡಿಯೋಗೆ ಲೈಕ್ ನೀಡಿ’ 13.97 ಲಕ್ಷ ಕಳೆದುಕೊಂಡರು!
C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!
By Election: ದೇವೇಗೌಡರನ್ನು 1994ರಲ್ಲಿ ಮುಖ್ಯಮಂತ್ರಿ ಮಾಡಿದ್ದೇ ನಾನು: ಸಿಎಂ ಸಿದ್ದರಾಮಯ್ಯ
Ramanagara: ಆರು ಟ್ರಾನ್ಸ್ ಫಾರ್ಮರ್ ಗಳ ಕಳವು
Congress Government: ಉಪಚುನಾವಣೆ ಬಳಿಕ ಗೃಹಲಕ್ಷ್ಮಿ ಸ್ಥಗಿತ: ಎಚ್.ಡಿ.ದೇವೇಗೌಡ ಭವಿಷ್ಯ
MUST WATCH
ಹೊಸ ಸೇರ್ಪಡೆ
Vikram Gowda ಎನ್‌ಕೌಂಟರ್; ತನಿಖೆ ಕರೆ ತಳ್ಳಿ ಹಾಕಿದ ಡಾ.ಜಿ. ಪರಮೇಶ್ವರ್
Doctor; ಖ್ಯಾತ ಹೃದ್ರೋಗ ತಜ್ಞ ಡಾ.ಎಸ್.ಜಿ.ಸರ್ವೋತ್ತಮ ಪ್ರಭು ವಿಧಿವಶ
Divorce: ಗಂಡನಿಂದ ವಿಚ್ಚೇದನ ಪಡೆದ ಎ.ಆರ್.ರೆಹಮಾನ್ ತಂಡದ ಸದಸ್ಯೆ ಮೋಹಿನಿ
Panaji: 55ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭಕ್ಕೆ ಕ್ಷಣಗಣನೆ ಆರಂಭ
Viral: ಮದುವೆ ಸಂಭ್ರಮದಲ್ಲಿ 20 ಲಕ್ಷ ರೂಪಾಯಿಯನ್ನು ಗಾಳಿಯಲ್ಲಿ ಎಸೆದ ಅತಿಥಿಗಳು.!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.