ಜಿಲ್ಲೆಯಲ್ಲಿ ಅಂತರ್ಜಲ ಬಳಕೆ ಹೆಚ್ಚು
ಬೋರ್‌ವೆಲ್ ಕೊರೆಯಲು ಅನುಮತಿ ಕಡ್ಡಾಯ
Team Udayavani, Oct 24, 2020, 2:35 PM IST
ರಾಮನಗರ: ಜಿಲ್ಲೆಯ ರಾಮನಗರ ಮತ್ತು ಕನಕಪುರ ತಾಲೂಕುಗಳಲ್ಲಿ ಅಂತರ್ಜಲ ಬಳಕೆ ಅತಿ ಹೆಚ್ಚು ಎಂದು ಅಂತರ್ಜಲ ನಿರ್ದೇಶನಾಲಯ ತಿಳಿಸಿದ್ದು, ಈ ತಾಲೂಕುಗಳಲ್ಲಿ ಕೊಳವೆ ಬಾವಿ ಕೊರೆಸುವುದಕ್ಕೆ ಅನು ಮತಿ ಕಡ್ಡಾಯ ಎಂದು ಮತ್ತೂಮ್ಮೆ ಹೇಳಿದೆ.
ಜಿಲ್ಲೆಯ ಮಾಗಡಿ ಮತ್ತು ಚನ್ನಪಟ್ಟಣ ತಾಲೂಕುಗಳಲ್ಲಿ ಅಂತರ್ಜಲ ಬಳಕೆ ಆಪತ್ತಿನಅಂಚಿನಲ್ಲಿದೆ ಎಂದು ಕೇಂದ್ರ ಅಂತರ್ಜಲ ಮಂಡಳಿಯ ವರದಿ ತಿಳಿಸಿದೆ. ವರದಿಯ ಪ್ರಕಾರ ಎರಡೂ ತಾಲೂಕುಗಳಲ್ಲಿ ನಿಗದಿಗಿಂತ ಹೆಚ್ಚು ಅಂದರೆ ಶೇ.100ಕ್ಕೂ ಹೆಚ್ಚು ಅಂತರ್ಜಲವನ್ನು ಈ ಎರಡೂ ತಾಲೂಕುಗಳಲಿ ಕೊಳವೆ ಬಾವಿಗಳಿಂದ ಹೀರಿಕೊಳ್ಳಲಾಗುತ್ತಿದೆ. ಹೀಗಾಗಿ ಅಂತರ್ಜಲವನ್ನು ಕಾಪಾಡಿಕೊಳ್ಳಲು ಅನುಮತಿ ಕಡ್ಡಾಯಗೊಳಿಸಲಾಗುತ್ತದೆ. ಹಾಗೊಮ್ಮೆ ನಿಯಮಗಳನ್ನು ಉಲ್ಲಂಘಿಸಿದರೆ, ಕಾನೂನು ಪ್ರಕಾರ ದಂಡ ಕಟ್ಟುವುದು ಸೇರಿದಂತೆ ಕ್ರಮಗಳನ್ನು ಎದುರಿಸಬೇಕಾಗುತ್ತದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
ಅಂತರ್ಜಲ ಮೌಲೀಕರಣ ಸಮಿತಿ 1997ರ ಮಾರ್ಗಸೂಚಿಯಂತೆ ಹಾಗೂ ಕೇಂದ್ರ ಜಲ ಸಂಪನ್ಮೂಲ ಮಂತ್ರಾಲಯದ ಸೂಚನೆಯಂತೆ ಅಂತರ್ಜಲ ಪ್ರಮಾಣದ ಮೌಲೀಕರಣ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುತ್ತದೆ.
ಜಿಲ್ಲಾಡಳಿತಕ್ಕೆ ಚಾಟಿ!: 2017ರ ಅಂತ್ಯಕ್ಕೆ ಮೌಲೀಕರಿಸಿದ ವರದಿ ಅನ್ವಯ ಜಿಲ್ಲೆಯಲ್ಲಿ ರಾಮನಗರ ಮತ್ತು ಕನಕಪುರ ಅಂತರ್ಜಲಅತಿ ಬಳಕೆ ಎಂದು ಘೋಷಣೆ ಮಾಡಲಾಗಿದೆ. ಮಾಗಡಿ ತಾಲೂಕಿನಲ್ಲಿ ಗಂಭೀರ ಸ್ಥಿತಿ ಮತ್ತು ಚನ್ನಪಟ್ಟಣದಲ್ಲಿ ಅರೆ ಗಂಭೀರ ಸ್ಥಿತಿ ಇರುವುದಾಗಿ ವರದಿ ತಿಳಿಸಿದೆ. ರಾಮನಗರ ಜಿಲ್ಲೆಯಲ್ಲಿ ನೀರು ಮರು ಪೂರಣಕ್ಕಿಂತ, ಬಳಕೆಯ ಪ್ರಮಾಣವೇ ಹೆಚ್ಚಾಗಿದೆ ಎಂದು ಜಿಲ್ಲಾಡಳಿತಕ್ಕೆ ಚಾಟಿ ಬೀಸಿದೆ.
ಈ ಎರಡು ತಾಲೂಕುಗಳಲ್ಲಿ ಅಂತರ್ಜಲ ಬಳಕೆಯು ವಾರ್ಷಿಕ ಮರು ಪೂರಣ ಪ್ರಮಾಣದ ಶೇ.100ಕ್ಕಿಂತ ಹೆಚ್ಚು ಬಳಕೆ ಮಾಡಲಾಗುತ್ತಿದೆ. ಮಾಗಡಿತಾಲೂಕಿನಲ್ಲಿ ಅಂತರ್ಜಲ ಮಟ್ಟ ಕ್ಲಿಷ್ಟಕರ ಪರಿಸ್ಥಿತಿಯಲ್ಲಿದ್ದು, ಅಂತರ್ಜಲ ಬಳಕೆ ಶೇ.90, ಚನ್ನಪಟ್ಟಣದಲ್ಲಿ ಅರೇ ಕ್ಲಿಷ್ಟಕರ ಅಂದರೆ ಶೇ. 90ಕ್ಕಿಂತ ಕಡಿಮೆ ಇದೆ.
ಕೊಳವೆ ಬಾವಿಗೆ ಅನುಮತಿ: ಅ.5 ರಿಂದ ಅಕ್ರಮ ಸಕ್ರಮ ಚಾಲ್ತಿಯಲ್ಲಿದ್ದು, ಅನುಮತಿ ಪಡೆಯದೆ ಕೊಳವೆ ಬಾವಿಗಳನ್ನು ಕೊರೆದಿದ್ದಲ್ಲಿ, ಅಕ್ರಮ-ಸಕ್ರಮ ಅವಕಾಶದಲ್ಲಿ ಪಡೆಯಲು ಸಾಧ್ಯವಿದ್ದು, 120 ದಿನಗಳ ಅವಕಾಶವಿದೆ. ನಂತರ ಅನುಮತಿ ಪಡೆಯಲು 5 ಸಾವಿರ ರೂ. ದಂಡ ಪಾವತಿಸಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಿಯಮಗಳು ಪಾಲನೆಯಾಗುತ್ತಿದೆಯೇ?: ಕರ್ನಾಟಕ ಅಂತರ್ಜಲ 2004ರ ಅಧಿನಿಯಮದ ಪ್ರಕಾರ ಸಾರ್ವಜನಿಕ ಕುಡಿಯುವ ನೀರಿನ ಮೂಲಗಳಿಂದ 500 ಮೀಟರ್ ಅಂತರದೊಳಗೆ ಬಾವಿ, ಕೊಳವೆಬಾವಿ ಕೊರೆಯಲು ಅವಕಾಶವಿಲ್ಲ.ಎಂಬ ನಿಯಮಗಳು ಜಿಲ್ಲೆಯಲ್ಲಿ ಪಾಲಿಸಲಾಗುತ್ತಿದೆ ಎಂಬ ಬಗ್ಗೆ ಅಧಿಕಾರಿಗಳು ಸ್ಪಷ್ಟ ಮಾಹಿತಿಯನ್ನು ಬಹಿರಂಗ ಪಡೆಸಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.
ಅಂತರ್ಜಲ ಮೌಲೀಕರಣ ವರದಿ ಬಿಡುಗಡೆಯಾಗಿದೆ. ಅಂತರ್ಜಲ ನಿರ್ವಹಣೆಯ ನಿಯಮಗಳ ಪ್ರಕಾರ ಕೊಳವೆ ಬಾವಿಗಳನ್ನು ಕೊರೆಸಲು ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಅನುಮತಿ ಪಡೆಯದೆ ಕೊಳವೆಬಾವಿ ಕೊರೆಸಿದ್ದಲ್ಲಿ, ಮನೆ ಬಳಕೆಗೆ50 ರೂ, ವಾಣಿಜ್ಯ ಬಳಕೆಗೆ 500ಪಾವತಿಸಿ ಅಕ್ರಮ ಸಕ್ರಮದಡಿ ಅನುಮತಿ ಪಡೆಯಬಹುದು -ಎಸ್.ಆರ್.ರಾಜಶ್ರಿ, ಹಿರಿಯ ಭೂ ವಿಜ್ಞಾನಿ, ಜಿಲ್ಲಾ ಅಂತರ್ಜಲ ನಿರ್ದೇಶನಾಲಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
JDS ರಾಮನಗರದಿಂದಲೂ ಔಟ್: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ
Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ
By Election: ನಿಖಿಲ್ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್; ಕುತೂಹಲದತ್ತ ಚನ್ನಪಟ್ಟಣ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Fraud: “ವಿಡಿಯೋಗೆ ಲೈಕ್ ನೀಡಿ’ 13.97 ಲಕ್ಷ ಕಳೆದುಕೊಂಡರು!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.