ಗೃಹಲಕ್ಷ್ಮೀ ನೋಂದಣಿ; ಸಂಕಷ್ಟದಲ್ಲಿ ಗ್ರಾಮ್‌ ಒನ್‌


Team Udayavani, Jul 25, 2023, 3:52 PM IST

ಗೃಹಲಕ್ಷ್ಮೀ ನೋಂದಣಿ; ಸಂಕಷ್ಟದಲ್ಲಿ ಗ್ರಾಮ್‌ ಒನ್‌

ರಾಮನಗರ: ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಪ್ರಕ್ರಿಯೆ ಪ್ರಾರಂಭಗೊಂಡಿದ್ದು, ಜಿಲ್ಲೆಯಲ್ಲೀಗ ಗ್ರಾಮ್‌ಒನ್‌ ಕೇಂದ್ರದ ಪ್ರಾಂಚೈಸಿಗಳು ಮತ್ತು ಸಾರ್ವಜನಿಕರ ನಡುವೆ ಶುಲ್ಕಕ್ಕಾಗಿ ಹಗ್ಗ ಜಗ್ಗಾಟ ಆರಂಭಗೊಂಡಿದೆ. ಒಂದೆಡೆ ಉಚಿತ ಎಂದರು ಹಣ ಪಡೆಯುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದರೆ, ಮತ್ತೂಂದೆಡೆ ಉಚಿತ ನೀಡಿ ನಾವೇನು ಮಾಡುವುದು ಎಂಬ ಪ್ರಶ್ನೆ ಗ್ರಾಮ್‌ಒನ್‌ ಪ್ರಾಂಚೈಸಿಗಳನ್ನು ಕಾಡುತ್ತಿದೆ.

ಗ್ರಾಮ್‌ಒನ್‌ಗಳಲ್ಲಿ ಗೃಹಲಕ್ಷ್ಮೀ ನೋಂದಣಿ ಮಾಡಿಸುವ ಮಹಿಳೆಯರಿಗೆ ಉಚಿತವಾಗಿ ನೋಂದಣಿ ಮಾಡಬೇಕು ಎಂದು ಸರ್ಕಾರ ಫರ್ಮಾನು ಹೊರಡಿಸಿದೆ. ಇನ್ನು ಗೃಹಲಕ್ಷ್ಮೀ ಯೋಜನೆಯನ್ನು ನೋಂದಣಿ ಮಾಡಿಕೊಡಲು ಹಣ ಕೇಳಿದ ಗ್ರಾಮ್‌ ಒನ್‌ ಕೇಂದ್ರದ ಪ್ರಾಂಚೈಸಿಯನ್ನು ರದ್ದುಪಡಿಸಿರುವುದಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ತಿಳಿಸಿದ್ದು, ಉಚಿತವಾಗಿ ನೋಂದಣಿ ಮಾಡಿದರೆ ನಾವೇನು ಮಾಡುವುದು ಎಂಬ ಆತಂಕ ಗ್ರಾಮ್‌ಒನ್‌ ಸಿಬ್ಬಂದಿಯದ್ದಾಗಿದೆ. ಮತ್ತೂಂದೆಡೆ ಗೃಹಲಕ್ಷ್ಮೀ ಯೋಜನೆಯ ನೋಂದಣಿಗೆ ಕೆಲ ಗ್ರಾಮ್‌ ಒನ್‌ಗಳಲ್ಲಿ ಹಣಪಡೆಯುತ್ತಿದ್ದಾರೆ ಎಂಬ ಆರೋಪ ಸಹ ಕೇಳಿ ಬರುತ್ತಿದ್ದು, ಸಾರ್ವಜನಿಕರು ಈ ಬಗ್ಗೆ ದೂರುತ್ತಿದ್ದಾರೆ.

ಗ್ರಾಮ್‌ಒನ್‌ ಪ್ರಾಂಚೈಸಿಗಳ ಅಳಲು: ಈಗಾಗಲೇ ಜಿಲ್ಲಾಡಳಿತ ಗೃಹಲಕ್ಷ್ಮೀ ಯೋಜನೆಗೆ ಯಾವುದೇ ಹಣವನ್ನು ಪಡೆಯದಂತೆ ಸೂಚಿಸಿದೆ. ಈ ಸಂಬಂಧ ಗ್ರಾಮ್‌ಒನ್‌ ಕೇಂದ್ರದ ಮುಂಭಾಗ ಫಲಕವನ್ನು ಹಾಕುವಂತೆ ತಿಳಿಸಿದೆ. ಗೃಹಲಕ್ಷ್ಮೀ ಯೋಜನೆಯ ನೋಂದಣಿಯನ್ನು ಹೊರತುಪಡಿಸಿ ಇತರೆ ಸೇವೆಗಳಾದ ಆಧಾರ್‌ ಲಿಂಕ್‌, ಗೃಹಲಕ್ಷ್ಮೀ ನೋಂದಣಿ ಪ್ರತಿ ಲ್ಯಾಮಿನೇಷನ್‌ ಸೇರಿದಂತೆ ಇತರೆ ಸೇವೆಗಳನ್ನು ಪಡೆದಲ್ಲಿ ಹಣ ಪಡೆಯಬಹುದು ಎಂದು ತಿಳಿಸಲಾಗಿದೆ. ಆದರೆ ಗ್ರಾಮ್‌ಒನ್‌ ಕೇಂದ್ರಗಳ ಮುಂಭಾಗ ಗೃಹಲಕ್ಷ್ಮೀ ಯೋಜನೆಗೆ ಹೆಚ್ಚು ಮಂದಿ ಸಾಲುಗಟ್ಟಿ ನಿಲ್ಲುತ್ತಿದ್ದು, ಇತರೆ ಸೇವೆಗಳನ್ನು ನೀಡಲು ಗ್ರಾಮ್‌ಒನ್‌ ಸಿಬ್ಬಂದಿ ಗಳಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ನಮ್ಮ ಪಾಡೇನು ಎಂದು ಗ್ರಾಮ್‌ಒನ್‌ ಸಿಬ್ಬಂದಿ ಪ್ರಶ್ನಿಸುತ್ತಿದ್ದಾರೆ.

ಪ್ರಾಂಚೈಸಿಗಳ ವಾದವೇನು?: ಗ್ರಾಮ್‌ಒನ್‌ ಕೇಂದ್ರಗಳನ್ನು ಪ್ರಾರಂಭಿಸಿದ ಸರ್ಕಾರ ನಮಗೆ ಸೇವಾಸಿಂಧು ಪೋರ್ಟಲ್‌ನ ಲಾಗಿನ್‌ ಐಡಿಯನ್ನು ಹೊರತು ಪಡಿಸಿದರೆ ಬೇರೇನನ್ನೂ ಉಚಿತವಾಗಿ ನೀಡಿಲ್ಲ. ಕೇಂದ್ರಗಳಿಗೆ ನೀಡಿರುವ ಬೋರ್ಡ್‌, ಸೂಚನಾಫಲಕ, ಗಡಿಯಾರ, ನಮಗೆ ನೀಡಿರುವ ಟೀ ಶರ್ಟ್‌ ಸೇರಿದಂತೆ ಎಲ್ಲದಕ್ಕೂ ಹಣ ಕಟ್ಟಿಸಿಕೊಳ್ಳ ಲಾಗಿದೆ. ಇದರೊಂದಿಗೆ ಗ್ರಾಮ್‌ಒನ್‌ ಕೇಂದ್ರಗಳನ್ನು ನಡೆಸುತ್ತಿರುವ ಸ್ಥಳಕ್ಕೆ ಬಾಡಿಗೆ, ಮುಂಗಡ, ಕಂಪ್ಯೂ ಟರ್‌ ಸೇರಿದಂತೆ ಅಗತ್ಯ ಉಪಕರಣಗಳಿಗೆ ಬಂಡವಾಳ ಸೇರಿ ಪ್ರತಿ ಗ್ರಾಮ್‌ಒನ್‌ ಕೇಂದ್ರಕ್ಕೆ ಒಂದೂವರೆ ಲಕ್ಷಕ್ಕೂ ಅಧಿಕ ಹಣವನ್ನು ವೆಚ್ಚಮಾಡಲಾಗಿದೆ. ಇದ ರೊಂದಿಗೆ ಪ್ರತಿ ತಿಂಗಳು ವಿದ್ಯುತ್‌ ಶುಲ್ಕ, ಇಂಟರ್‌ ನೆಟ್‌ ಶುಲ್ಕ, ಪ್ರಿಂಟರ್‌ಗೆ ಕಾರ್ಟೇಜ್‌ ರೀಫಿಲ್ಲಿಂಗ್‌ ಶುಲ್ಕ, ಎ4 ಹಾಳೆಗಳ ಶುಲ್ಕ ಸೇರಿದಂತೆ ಸಾಕಷ್ಟು ಖರ್ಚು ಬರುತ್ತಿದೆ. ಇದರೊಂದಿಗೆ ಕೇಂದ್ರದಲ್ಲಿ ಕೆಲಸ ನಿರ್ವಹಿಸುವವರ ಕೂಲಿ ಹಣ ಎಲ್ಲವನ್ನು ಯಾರು ಬರಿಸುತ್ತಾರೆ ಎಂದು ಗ್ರಾಮ್‌ಒನ್‌ ಪ್ರಾಂಚೈಸಿಪಡೆದಿರುವ ಸಿಬ್ಬಂದಿ ಪ್ರಶ್ನಿಸುತ್ತಿದ್ದಾರೆ.

ಕೈ ಸುಟ್ಟ ಗೃಹ ಜ್ಯೋತಿ: ಗೃಹ ಜ್ಯೋತಿಗೆ ನೋಂದಣಿ ಮಾಡಿಸಲು ಪ್ರಾರಂಭದಲ್ಲಿ ಸೇವಾಸಿಂಧು ವೆಬ್‌ ಪೋರ್ಟಲ್‌ನಲ್ಲಿ 20ರೂ. ಶುಲ್ಕ ನಾವು ಠೇವಣಿ ಇರಿಸಿರುವ ಮೊತ್ತದಲ್ಲಿ ಕಡಿತವಾಗುತಿತ್ತು. ನಾವು ಗ್ರಾಹಕರಿಂದ ಹಣ ಪಡೆದುಕೊಳ್ಳುತ್ತಿದ್ದೆವು. ಕೆಲ ದಿನಗಳ ಬಳಿಕ ಉಚಿತವಾಗಿ ನೀಡಿ ಎಂದು ಹೇಳಿದರು. ಉಚಿತವಾಗಿ ನಾವು ನೋಂದಣಿ ಮಾಡಿಕೊಟ್ಟಿದ್ದೇವೆ. ಆದರೆ ಇದೀಗ ಹಣ ಕಟ್ಟಿ ಎಂದು ಹೇಳುತ್ತಿದ್ದಾರೆ ಎಂದು ಗ್ರಾಮ್‌ಒನ್‌ ಪ್ರಾಂಚೆ„ಸಿಗಳು ಅಳಲು ತೋಡಿಕೊಂಡಿದ್ದಾರೆ.

ಗ್ಯಾರಂಟಿ ಏನು?: ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಮಾಡಿದ ಅರ್ಜಿಗಳಿಗೆ ಸರ್ಕಾರವೇ ಶುಲ್ಕ ಬರಿಸುತ್ತದೆ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ಯಾವುದೇ ಅಧಿಕೃತ ಪತ್ರ ಹೊರಡಿಸಿಲ್ಲ. ಕೇವಲ ಅಧಿಕಾರಿಗಳು ಭರವಸೆ ನೀಡುತ್ತಿದ್ದಾರೆ. ಈ ಹಿಂದೆ ಗ್ರಾಮ್‌ ಒನ್‌ಗಳಲ್ಲಿ ಆಯುಷ್‌ಮಾನ್‌ ಆರೋಗ್ಯ ಕರ್ನಾಟಕ ಕಾರ್ಡ್‌ಗಳನ್ನು ಉಚಿತವಾಗಿ ನೋಂದಣಿ ಮಾಡಿಕೊಡಲಾಯಿತು. ಪ್ರತಿ ಕಾರ್ಡ್‌ಗೆ 10 ರೂ.ನಂತೆ ಹಣ ನೀಡುವುದಾಗಿ ಹೇಳಿದ್ದ ಸರ್ಕಾರ 6 ತಿಂಗಳು ಕಳೆದರೂ ಇನ್ನೂ ನೀಡಿಲ್ಲ. ಇದೀಗ ಗೃಹಲಕ್ಷ್ಮೀಗೆ ಹಣ ನೀಡುತ್ತಾರೆ ಎಂಬುದು ಯಾವ ಗ್ಯಾರಂಟಿ ಎಂದು ಗ್ರಾಮ್‌ಒನ್‌ ಪ್ರಾಂಚೈಸಿಗಳು ಪ್ರಶ್ನಿಸುತ್ತಿದ್ದಾರೆ. ಉಚಿತವಾಗಿ ನೀಡಿ: ಇನ್ನು ಸಾರ್ವಜನಿಕರು ಗ್ರಾಮ್‌ ಒನ್‌ ಪ್ರಾಂಚೈಸಿಗಳ ಮಾತನ್ನು ಕೇಳಲು ಸಿದ್ದವಿಲ್ಲದಿದ್ದು, ಸರ್ಕಾರ ಉಚಿತವಾಗಿ ನೋಂದಣಿ ಮಾಡಿಸುವುದಾಗಿ ತಿಳಿಸಿದೆ.

ನಮಗೆ ಉಚಿತವಾಗಿ ನೋಂದಣಿ ಮಾಡಿಕೊಡಲಿ. ಕೆಲ ಗ್ರಾಮ್‌ಒನ್‌ಗಳಲ್ಲಿ 50 ರೂ.ನಿಂದ 100 ರೂ.ವರೆಗೆ ಹಣ ಕೇಳುತ್ತಿದ್ದಾರೆ. ನಾವು ಹಣ ಕೊಡುವುದಿಲ್ಲ ಉಚಿತವಾಗಿ ನೋಂದಣಿ ಮಾಡಿಕೊಡಲು ಕ್ರಮ ಕೈಗೊಳ್ಳಿ ಎಂದು ಜನತೆ ಆಗ್ರಹಿಸುತ್ತಿದ್ದಾರೆ.

ಜಿಲ್ಲೆಯಲ್ಲಿ 43 ಗ್ರಾಮ್‌ಒನ್‌ಗಳು ಸ್ತಬ್ಧ : ಜಿಲ್ಲೆಯಲ್ಲಿ ಗ್ರಾಮ್‌ಒನ್‌ ಪ್ರಾಂಚೈಸಿಗಳು ಮತ್ತು ಸಾರ್ವಜನಿಕರ ನಡುವೆ ಶುಲ್ಕದ ವಿಚಾರಕ್ಕೆ ಹಗ್ಗ ಜಗ್ಗಾಟ ನಡೆಯುತ್ತಿದ್ದರೆ ಮತ್ತೂಂದೆಡೆ ಜಿಲ್ಲೆಯ 153 ಗ್ರಾಮ್‌ಒನ್‌ ಕೇಂದ್ರಗಳ ಪೈಕಿ 110 ಕೇಂದ್ರಗಳು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದು, ಉಳದಿ 43 ಕೇಂದ್ರಗಳು ಗೃಹಲಕ್ಷ್ಮೀ ನೋಂದಣಿ ಕಾರ್ಯವನ್ನು ಮಾಡುತ್ತಿಲ್ಲ. ಗೃಹಲಕ್ಷ್ಮೀ ನೋಂದಣಿ ಪ್ರಕ್ರಿಯೆ ಆರಂಭಕ್ಕೂ ಮುನ್ನಾ ಎಲ್ಲಾ ಗ್ರಾಮ್‌ಒನ್‌ಕೇಂದ್ರಗಳಿಂದ ಜಿಲ್ಲಾ ಸಂಯೋಜಕರು ಮುಚ್ಚಳಿಕೆ ಬರೆಸಿ ಕೊಂಡು ಸಾರ್ವಜನಿಕರಿಗೆ ಸಮಸ್ಯೆಯಾಗದ ರೀತಿ ಸೇವೆ ನೀಡುವುದಾಗಿ ಲಿಖೀತ ಹೇಳಿಕೆ ಪಡೆದುಕೊಂಡಿದ್ದರು. ಹೀಗೆ ಲಿಖೀತವಾಗಿ ಭರವಸೆ ನೀಡಿದ 110 ಗ್ರಾಮ್‌ಒನ್‌ಗಳಿಗೆ ಮಾತ್ರ ನೋಂದಣಿಗೆ ಲಾಗಿನ್‌ಆಗಲು ಅನುಮತಿ ನೀಡಿದ್ದು, ಉಳಿದ ಕೇಂದ್ರಗಳಿಗೆ ನೀಡಿಲ್ಲ. ಇದೀಗ ಹೆಚ್ಚುವರಿಯಾಗಿ 5 ಕೇಂದ್ರಗಳು ನೋಂದಣಿಗೆ ಮುಂದಾಗಿದ್ದು, ಉಳಿದ ಕೇಂದ್ರಗಳು ಈ ಗೋಜಿಗೆ ಹೋಗುವುದೇ ಬೇಡ ಎಂದು ಸುಮ್ಮನಿದ್ದಂತೆ ಕಾಣುತ್ತಿದೆ. ಬಾಗಿಲು ತೆರೆಯದ ಗ್ರಾಮ್‌ಒನ್‌ ಕೇಂದ್ರಗಳ ಪರಿಶೀಲನೆಗೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದು, ಈ ಪ್ರಾಂಚೈಸಿಗಳು ಗ್ರಾಮ್‌ಒನ್‌ ಕೇಂದ್ರವನ್ನು ತೆರೆಯದಿದ್ದರೆ ಕೂಡಲೇ ಪ್ರಾಂಚೈಸಿ ರದ್ದುಪಡಿಸಿ ಹೊಸಬರಿಗೆ ಅವಕಾಶ ನೀಡುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾಗಿ ಕಂದಾಯ ಇಲಾಖೆ ಮೂಲಗಳು ಮಾಹಿತಿ ನೀಡಿವೆ.

ಗೃಹಲಕ್ಷ್ಮೀ ಯೋಜನೆಯನ್ನು ಉಚಿತ ವಾಗಿ ನೋಂದಣಿ ಮಾಡುವಂತೆ ಎಲ್ಲಾ ಗ್ರಾಮ್‌ಒನ್‌ ಕೇಂದ್ರಗಳಿಗೆ ಸೂಚಿಸಲಾಗಿದೆ. ಹಣ ಪಡೆದ ಮಾಹಿತಿ ಇದ್ದಲ್ಲಿ ನಿರ್ಧಾಕ್ಷಿಣ್ಯ ವಾಗಿ ಕ್ರಮ ಕೈಗೊಳ್ಳಲಾಗುವುದು. ಗ್ರಾಮ್‌ ಒನ್‌ ಕೇಂದ್ರಗಳು ನೋಂದಣಿ ಮಾಡಿದ ಅರ್ಜಿಗಳ ಸಂಖ್ಯೆಗೆ ಅನುಗುಣವಾಗಿ ಅವರಿಗೆ ಸರ್ಕಾರದಿಂದಲೇ ಶುಲ್ಕ ಪಾವತಿಸಲಾಗುವುದು. ● ವೇಣು, ಗ್ರಾಮ್‌ಒನ್‌ ಜಿಲ್ಲಾ ಸಂಯೋಜಕ, ರಾಮನಗರ

ಜಿಲ್ಲೆ ಗ್ರಾಮ್‌ಒನ್‌ ಕೇಂದ್ರವನ್ನು ಆರಂಭಿಸಲು ನಾವು ಲಕ್ಷಾಂತರ ರೂ. ಹಣ ಖರ್ಚು ಮಾಡಿದ್ದೇವೆ. ಇನ್ನು ಪ್ರತಿ ತಿಂಗಳು ಗ್ರಾಮ್‌ ಒನ್‌ ಕೇಂದ್ರ ನಿರ್ವಹಿಸಲು 10ರಿಂದ 15 ಸಾವಿರ ರೂ. ವರೆಗೆ ಖರ್ಚು ಬರುತ್ತದೆ. ಆರೋಗ್ಯ ಕರ್ನಾಟಕ ಕಾರ್ಡ್‌ ಮಾಡಿ ಹಲವು ತಿಂಗಳು ಕಳೆದರೂ ಇನ್ನೂ ಹಣ ನೀಡಿಲ್ಲ. ಇದರಲ್ಲೂ ಅದೇ ರೀತಿ ಆದರೆ ಏನು ಮಾಡುವುದು, ಪ್ರತಿ ಅರ್ಜಿಗೆ ಸರ್ಕಾರ 100 ರೂ. ಹಣವನ್ನು ಗ್ರಾಮ್‌ಓನ್‌ ಪ್ರಾಂಚೈಸಿಗಳಿಗೆ ನೀಡಲಿ. ● ಹೆಸರೇಳಿಚ್ಚಿಸದ ಗ್ರಾಮ್‌ಒನ್‌ ಪ್ರಾಂಚೈಸಿ

ಸರ್ಕಾರ ಉಚಿತವಾಗಿ ನೋಂದಣಿ ಮಾಡಿಸುವಂತೆ ತಿಳಿಸಿದೆ. ನಾವು ಹಣ ಕೊಡುವುದಿಲ್ಲ. ನಮಗೆ ಉಚಿತವಾಗಿ ನೋಂದಣಿ ಮಾಡಿಕೊಡಲಿ. ಗ್ರಾಮ್‌ಒನ್‌ನಲ್ಲಿ ಹಣ ಕೇಳುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು. ● ಶಿಲ್ಪಶ್ರೀ, ಗೃಹಿಣಿ

-ಸು.ನಾ.ನಂದಕುಮಾರ್‌

ಟಾಪ್ ನ್ಯೂಸ್

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

1-jmm

INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kumaraswamy

Congress Guarantee: ಗ್ಯಾರಂಟಿಗಳ ಹಂತ, ಹಂತವಾಗಿ ನಿಲ್ಲಿಸಲು ಡಿಸಿಎಂ ಪೀಠಿಕೆ: ಎಚ್‌ಡಿಕೆ

I was hit by conspiracy…: Nikhil Kumaraswamy shed tears during the campaign.

ByPoll: ಷಡ್ಯಂತ್ರದಿಂದ ಪೆಟ್ಟು ತಿಂದೆ…: ಪ್ರಚಾರದ ವೇಳೆ ಕಣ್ಣೀರಿಟ್ಟ ನಿಖಿಲ್‌ ಕುಮಾರಸ್ವಾಮಿ

HDK-Kandre

Forest Land: ಎಚ್‌ಎಂಟಿ ಜಾಗಕ್ಕೆ ಸಚಿವ ಖಂಡ್ರೆ ಅತಿಕ್ರಮ ಪ್ರವೇಶ: ಎಚ್‌.ಡಿ.ಕುಮಾರಸ್ವಾಮಿ

1-HDK

Channapatna; ವೈನಾಡ್‌ನಿಂದ ಪ್ರಿಯಾಂಕಾ ಉಮೇದುವಾರಿಕೆ ಪ್ರಶ್ನಿಸಿದ ಕುಮಾರಸ್ವಾಮಿ

Nikhil-CPY

Chennapattana By Election: ಬೊಂಬೆನಗರಿಗೆ ಇದು ಮೂರನೇ ಬಾರಿ ಉಪ ಚುನಾವಣೆ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

attack

Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ

1-reeee

Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.