ಅಪಾಯಕಾರಿ ವಲಯದಲ್ಲಿದೆ ಈ ಸರ್ಕಾರಿ ಶಾಲೆ!
Team Udayavani, Dec 10, 2021, 2:34 PM IST
ಕುದೂರು: ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಅಂತಾ ಸರ್ಕಾರ ನೂರಾರು ಕೋಟಿ ಹಣ ಮೀಸಲಿಸಿರಿದೆ. ಆದರೆ, ಇಲ್ಲೊಂದು ಶಾಲೆ ಹಲವು ವರ್ಷಗಳಿಂದ ಶಿಥಿಲಾವಸ್ಥೆಯಲ್ಲಿದೆ. ಮಕ್ಕಳು ಶಾಲೆಯಲ್ಲಿ ಪ್ರಾಣ ಭಯದಿಂದಲೇ ಕಲಿಕೆಗೆ ಮುಂದಾಗಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ.
ಒಂದೆಡೆ ಮುರಿದು ಬಿದ್ದ ಛಾವಣಿ, ಮತ್ತೂಂದೆಡೆ ಈಗಲೋ ಆಗಲೋ ಬೀಳುವಂತಿರುವ ಶಾಲಾ ಕಟ್ಟಡ ಇದು ಮಾಗಡಿ ತಾಲೂಕಿನ ಕುದೂರು ಹೋಬಳಿಯ ಕನ್ನಸಂದ್ರ ಕಾಲೋನಿ ಸರ್ಕಾರಿ ಶಾಲೆಯ ದುಸ್ಥಿತಿ. ಸುಮಾರು ವರ್ಷಗಳಿಂದ ಈ ಶಾಲೆಯ ಕಟ್ಟಡದ ಮೇಲ್ಛಾವಣಿ ದುರಸ್ತಿಯಾಗದೇ ಕುಸಿಯುವ ಹಂತ ತಲುಪಿದೆ. ಹಾಗಾಗಿ ಪೋಷಕರು ಆತಂಕದಲ್ಲೇಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದಾರೆ. ಎಲ್ಲಿ ಯಾವಾಗ ಅನಾಹುತ ಸಂಭವಿಸುವುದೋ ಎಂಬ ಆತಂಕ ಶಿಕ್ಷಕ ವರ್ಗಕ್ಕೂ ಇದೆ.
ಮಳೆ ಬಂದರೇ ಸೋರುವ ಕಟ್ಟಡ: ಕನ್ನಸಂದ್ರ ಕಾಲೋನಿಯ ಸರ್ಕಾರಿ ಶಾಲೆಯಲ್ಲಿ 1 ರಿಂದ 5ನೇ ತರಗತಿವರೆಗೆ ಒಟ್ಟು 21 ವಿದ್ಯಾರ್ಥಿ ಗಳು ವಿದ್ಯಾಭ್ಯಾಸ ಮಾಡುತ್ತಿದ್ದು ಇಬ್ಬರು ಶಿಕ್ಷಕರಿದ್ದಾರೆ. ಮಳೆ ಬಂದರೆ ಒಂದು ಕೊಠಡಿ ಸೋರುವುದು. ಆಗ ಬೇರೆ ಕೊಠಡಿಯಲ್ಲಿ ಒಂದೇ 1 ರಿಂದ 5ನೇ ತರಗತಿಯ ಎಲ್ಲ ಮಕ್ಕಳನ್ನು ಸೇರಿಸಿ ಪಾಠ ಮಾಡಬೇಕಾದ ಅನಿವಾರ್ಯತೆ ಶಿಕ್ಷಕರಿಗಿದೆ.
ಶಿಕ್ಷಣ ಇಲಾಖೆ ಜಡ: ತುರ್ತಾಗಿ ಕಟ್ಟಡ ದುರಸ್ತಿ ಕುರಿತು ಶಾಲೆಯ ಆಡಳಿತ ಮಂಡಳಿ ಹಾಗೂ ಗ್ರಾಮಸ್ಥರು ಸಲ್ಲಿಸಿದ ವರದಿಗೆ ಸರ್ಕಾರ ಶೀಘ್ರ ಅನುದಾನ ಬಿಡುಗಡೆಗೊಳಿಸಬೇಕಿದೆ. ಕಟ್ಟಡದ ಗೋಡೆ, ಚಾವಣೆ ಸಂಪೂರ್ಣ ಹಾಳಾಗಿದೆ. ವಿದ್ಯುತ್ ಸಂಪರ್ಕ ವ್ಯವಸ್ಥೆ ಸರಿಪಡಿಸಬೇಕಿದೆ.
ದುರಸ್ತಿಗೆ ಅಗ್ರಹ: ವಿದ್ಯಾರ್ಥಿಗಳಿಗೆ ಬೇಕಾಗಿರು ವ ಮೂಲ ಸೌಲಭ್ಯ ಸರ್ಕಾರ ಒದಗಿಸಿ ಶಾಲಾ ಅಭಿವೃದ್ಧಿಗೆ ಸಹಕರಿಸಿಬೇಕಿದೆ. ಕನ್ನಸಂದ್ರ ಶಾಲೆ ಪ್ರತಿ ವರ್ಷ 20ಕ್ಕೂ ಅಧಿಕ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಶಾಲಾ ಅಭಿವೃದ್ಧಿಗೆ ಶಾಸಕ ಎ.ಮಂಜುನಾಥ್, ಶಿಕ್ಷಣ ಇಲಾಖೆ ಅಧಿಕಾರಿಗಳು ಗಮನ ಹರಿಸುತ್ತಾರಾ ಕಾದು ನೋಡಬೇಕಿದೆ.
ಇದನ್ನೂ ಓದಿ:- She said YES..! ಆ್ಯಶಸ್ ಪಂದ್ಯದಲ್ಲಿ ಹೀಗೊಂದು ಪ್ರೇಮ ಪ್ರಸಂಗ: ವಿಡಿಯೋ
“ಶಾಲೆಯ ಕೊಠಡಿಗಳ ಸಮಸ್ಯೆ ಕುರಿತಂತೆ ಈಗಾಗಲೇ ಹಲವು ಬಾರಿ ಶಿಕ್ಷಣ ಇಲಾಖೆ ಗಮನಕ್ಕೆ ತಂದಿದ್ದೇವೆ. ಇಲಾಖೆಯಲ್ಲಿ ಅನುದಾನ ಬಿಡುಗಡೆ ಯಾದ ಕೂಡಲೇ ಕೊಠಡಿ ದುರಸ್ತಿಗೊಳಿಸುವುದಾಗಿ ಅಧಿಕಾರಿಗಳು ಹೇಳಿದ್ದಾರೆ.” ● ಸ್ವರ್ಣಗೌರಾಂಬಿಕೆ, ಶಿಕ್ಷಕಿ
“ಕನ್ನಸಂದ್ರ ಕಾಲೋನಿಯಲ್ಲಿರುವ ಶಾಲೆ ಕೊಠಡಿ ಹೊಸದಾಗಿ ನಿರ್ಮಿಸಿ. ಇಲ್ಲ ದುರಸ್ತಿಗೊಳಿಸಿ ಎಂದು 2015ರಿಂದಲೂ ಸಂಬಂಧಪಟ್ಟ ಶಿಕ್ಷಣ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನ ಆಗಿಲ್ಲ. ಮಕ್ಕಳಿಗೆ ಏನಾದರೂ ಆದರೆ ಶಿಕ್ಷಣ ಇಲಾಖೆಯೇ ಹೊಣೆ.” ● ರವಿಕುಮಾರ್, ಮಾಜಿ ಗ್ರಾಪಂ ಸದಸ್ಯ
– ಕೆ.ಎಸ್.ಮಂಜುನಾಥ್, ಕುದೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Fraud: “ವಿಡಿಯೋಗೆ ಲೈಕ್ ನೀಡಿ’ 13.97 ಲಕ್ಷ ಕಳೆದುಕೊಂಡರು!
C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!
By Election: ದೇವೇಗೌಡರನ್ನು 1994ರಲ್ಲಿ ಮುಖ್ಯಮಂತ್ರಿ ಮಾಡಿದ್ದೇ ನಾನು: ಸಿಎಂ ಸಿದ್ದರಾಮಯ್ಯ
Ramanagara: ಆರು ಟ್ರಾನ್ಸ್ ಫಾರ್ಮರ್ ಗಳ ಕಳವು
Congress Government: ಉಪಚುನಾವಣೆ ಬಳಿಕ ಗೃಹಲಕ್ಷ್ಮಿ ಸ್ಥಗಿತ: ಎಚ್.ಡಿ.ದೇವೇಗೌಡ ಭವಿಷ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.