ಸರ್ಕಾರಿ ನೌಕರರಿಗೆ ಆರೋಗ್ಯ ಯೋಜನೆ?
Team Udayavani, Sep 26, 2021, 5:43 PM IST
ರಾಮನಗರ: ರಾಜ್ಯದ ಸರ್ಕಾರಿ ನೌಕರರು ಮತ್ತು ಅವರ ಕುಟುಂಬ ಸದಸ್ಯರಿಗೆ ಉಪಯೋಗವಾಗುವಂತೆ ಆರೋಗ್ಯ ಯೋಜನೆ ಸದ್ಯದಲ್ಲೆ ಜಾರಿಯಾಗುವ ವಿಶ್ವಾಸವಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದರು.
6.5 ಲಕ್ಷ ನೌಕರರಿಗೆ ಅನುಕೂಲ: ನಗರದ ಸ್ಪೂರ್ತಿ ಭವನದ ಆವರಣದಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಪರೀಕ್ಷೆಗಳಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸರ್ಕಾರಿ ನೌಕರರಿಗೆಸೇವಾರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ಯೋಜನೆ ಜಾರಿಯಾದರೆ ಸರ್ಕಾರಿ ನೌಕರರು ಮತ್ತು ಅವರ ಕುಟುಂಬಕ್ಕೆವಾರ್ಷಿಕ 1 ಲಕ್ಷದವರೆಗೆ ಯಾವುದೇ ಕಾಯಿಲೆಗೆ ಉಚಿತ ಚಿಕಿತ್ಸೆ ದೊರೆಯಲಿದೆ. ಈ ಯೋಜನೆಯಿಂದ ರಾಜ್ಯದ 6.5 ಲಕ್ಷ ಸರ್ಕಾರಿ ನೌಕರರಿಗೆಅನುಕೂಲವಾಗಲಿದೆ ಎಂದರು.
1200 ಕೋಟಿ ರೂ.ಹೊರೆ: ಸರ್ಕಾರಿ ನೌಕರರು ಮತ್ತು ಅವರ ಕುಟುಂಬಕ್ಕೆ ಉಪಯೋಗವಾಗುವ ಈ ಯೋಜನೆಯ ಜಾರಿಗೆ ಸಂಘ ಶ್ರಮಪಟ್ಟಿದೆ. ಚಿಕಿತ್ಸೆಗೆ ತಗುಲುವ ಹಣವನ್ನು ಸರ್ಕಾರವೇ ಭರಿಸಲಿದೆ. ಸರ್ಕಾರಕ್ಕೆ ಸುಮಾರು 1200 ಕೋಟಿ ಹೊರೆಯಾಗಲಿದೆ. ಸರ್ಕಾರಿ ನೌಕರರು ಯೋಜನೆಗೆ ಶೇ.1ರಷ್ಟು ಪಾಲು ಕೊಡಲು ನಿರ್ಧರಿಸಿರುವುದಾಗಿ ತಿಳಿಸಿದರು.
ಪ್ರಾಥಮಿಕ ಶಿಕ್ಷಕರ ಸಮಸ್ಯೆ: ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆ ಸಮಸ್ಯೆ ಒಂದೆಡೆಯಾದರೆ, ವೇತನ ಆಯೋಗದ ಶಿಫಾರಸ್ಸು ಸರಿಯಾದ ಸಮಯಕ್ಕೆ ಜಾರಿ ಮಾಡದೆ ಕಡಿಮೆ ವೇತನಕ್ಕೆ ದುಡಿಯುವ ಸಮಸ್ಯೆ ಮತ್ತೂಂ ದೆಡೆ. ವೇತನದ ವಿಚಾರದಲ್ಲಿ ಸಮಸ್ಯೆ ಪರಿಹಾರಕ್ಕೆ ಗುಜರಾತ್, ಆಂಧ್ರ, ಕೇರಳ ಮತ್ತು ದೆಹಲಿ ರಾಜ್ಯಗಳು ಅನುಸರಿಸುತ್ತಿ ರುವ ಮಾದರಿ ಅಧ್ಯಯನ ಮಾಡಲಾಗುತ್ತಿದೆ. ಅಧ್ಯಯನದ ನಂತರ ಸ್ಪಷ್ಟ ನಿರ್ಧಾರವನ್ನು ಸಂಘ ತೆಗೆದುಕೊಳ್ಳಲಿದೆ ಎಂದರು.
ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ 6.5 ಲಕ್ಷ ನೌಕರರ ಮಾಹಿತಿಯನ್ನು ಸಂಘ ಕ್ರೂಢೀಕರಿಸುವ ಯತ್ನದಲ್ಲಿದೆ. ನೌಕರರು ತಮ್ಮ ಮೊಬೈಲ್ ಗಳಿಗೆ ಕಳುಹಿಸಿರುವ ಲಿಂಕ್ ಬಳಸಿ ಮಾಹಿತಿ ಹಂಚಿಕೊಳ್ಳಿ. ಸಂಘದ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸದಿ ದ್ದರೆ, ಪ್ರತಿಭಟನೆಗೆ ಸಜ್ಜಾಗಿ ಎಂದರು.
ಒಳ್ಳೆ ಕೆಲಸಕ್ಕೆ ವಿರೋಧ – ಪುಟ್ಟಣ್ಣ: ಪರಿಷತ್ ಸದಸ್ಯ ಪುಟ್ಟಣ್ಣ ಮಾತನಾಡಿ, ಉತ್ತಮ ಕೆಲಸ ಮಾಡುವಾಗ ಸಾವಿರಾರು ವಿರೋಧಗಳು ವ್ಯಕ್ತವಾಗುವುದು ಸಹಜ. ಎಲ್ಲಾ ವಿರೋಧಗಳನ್ನು ಮೆಟ್ಟಿನಿಂತಿ ಕೆಲಸ ಮಾಡಬೇಕಾದ ಹೊಣೆ ಎಲ್ಲಾ ನೌಕರರ ಮೇಲಿದೆ ಎಂದರು. ಸೇವಾ ರತ್ನ ಪ್ರಶಸ್ತಿ ಸ್ವೀಕರಿಸುತ್ತಿರುವ ಸರ್ಕಾರಿ ನೌಕರರು ಮುಂದೆಯೂ ಕಳಂಕ ರಹಿತ ಕರ್ತವ್ಯ ಸಲ್ಲಿಸಿ ಎಂದರು.
ಜಿಲ್ಲೆಯಲ್ಲಿ ಉತ್ತಮ ಸಾಧನೆ ಮಾಡಿದ ಸರ್ಕಾರಿ ನೌಕರರಿಗೆ ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡ. ಲಾಯಿತು. ಜಿಲ್ಲೆಯ 4 ತಾಲೂಕುಗಳಲ್ಲಿ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್.ಕೆ.ಭೈರಲಿಂಗಯ್ಯ ವಹಿಸಿ ಮಾತನಾಡಿದರು. ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ, ಆ.ದೇವೇಗೌಡ, ನೌಕರರ ಸಂಘದರಾಜ್ಯ ಪರಿಷತ್ ಸದಸ್ಯ ಸತೀಶ, ಜಿಲ್ಲಾ ಪದಾಧಿಕಾರಿಗಳಾದ ಟಿ.ನರಸಯ್ಯ, ಎಂ.ರಾಜೇಗೌಡ, ಎಂ.ಕಾಂತ ರಾಜು, ಸಿ.ಬೈರಪ್ಪ, ಎಂ.ಸಿ.ರಾಜಶೇಖರ ಮೂರ್ತಿ, ಶಿವಸ್ವಾಮಿ, ಮಂಜುನಾಥ್, ಶಿವರಾಮಯ್ಯ, ಚಿಕ್ಕೆಂ ಪೇಗೌಡ, ಹೆಚ್.ಸಿ.ಚಂದ್ರಶೇಖರ್ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.