ಬಿಸಿಲಿಗೆ ರೇಷ್ಮೆ ನಾಡಿನ ಜನತೆ ಹೈರಾಣು
Team Udayavani, Apr 27, 2023, 3:12 PM IST
ಕುದೂರು: ಹೆಚ್ಚಿದ ರಣ ಬಿಸಿಲಿಗೆ ರೇಷ್ಮೆನಾಡಿನ ರಾಮನಗರ ಜಿಲ್ಲೆ ಕೊತ ಕೊತ ಕುದಿಯುತ್ತಿದ್ದು, ಬಿಸಿಲಿನ ಹೊಡೆತಕ್ಕೆ ಜಿಲ್ಲೆಯ ಜನರು ತತ್ತರಿಸಿದ್ದಾರೆ. ರಾಮನಗರ ಜಿಲ್ಲೆಯಲ್ಲಿ 36ರಿಂದ 38 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು. ಇದು ವರ್ಷದ ದಾಖಲೆ ಬಿಸಿಲು ಆಗಿದೆ.
ಏಪ್ರಿಲ್‌ನಲ್ಲೇ ಈ ರೀತಿ ಇದ್ದು, ಮುಂದಿನ ಮೇ ತಿಂಗಳಲ್ಲಿ ಇನ್ನೂ ಬಿಸಿಲು ಹೆಚ್ಚುವ ಸಾಧ್ಯತೆ ಇದೆ. ಇದರಿಂದ ಜಿಲ್ಲೆಯ ಜನರು ಭಯಭೀತಿರಾಗಿದ್ದಾರೆ. ರಾಮನಗರ ಜಿಲ್ಲೆಯು ಬರಪೀಡಿತ ಪ್ರದೇಶವಾಗಿದೆ. ಇಲ್ಲಿ ಅತಿವೃಷ್ಟಿ. ಅನಾವೃಷ್ಟಿ ಕಟ್ಟಿಟ್ಟ ಬುತ್ತಿ. ಜಿಲ್ಲೆಯಲ್ಲಿ ಮಳೆ ಪ್ರಮಾಣ ಕಡಿಮೆಯಾಗುತ್ತಿದ್ದು, ಅಲ್ಲದೆ, ಮಳೆ ಕೂಡ ಕಡಿಮೆಯಾಗಿರುವುದರಿಂದ ಬಿಸಿಲಿನ ಪ್ರಖರತೆ ಹೆಚ್ಚಾಗಿದೆ. ನಗರದ ಜನರು ಅಷ್ಟೇ ಅಲ್ಲ, ರೈತಾಪಿ ಜನರೂ ಈ ಬಾರಿ ರಣ ಬಿಸಿಲಿಗೆ ತತ್ತರಿಸಿದ್ದಾರೆ.
ಬೆಳಗಿನ ಜಾವವೇ ರೈತರು ಹೊಲಕ್ಕೆ: ಬೆಳಗಿನ ಜಾವ ನುಸುಕಿನಲ್ಲಿಯೇ ಹೊಲ, ಗದ್ದೆಗಳಿಗೆ ರೈತರು ತೆರಳಿ ಕೃಷಿ ಚಟುವಟಿಕೆ ಮುಗಿಸಿ ಮಧ್ಯಾಹ್ನ 12ಗಂಟೆ ಆಗುತ್ತಿದ್ದಂತೆ ಮನೆ ಸೇರುತ್ತಿದ್ದಾರೆ. ನಗರ ಪ್ರದೇಶದ ಜನರೂ ಕೂಡ ಬೆಳಗ್ಗೆ 10 ಗಂಟೆ ಆಗುತ್ತಿದ್ದಂತೆಯೇ ಬೆವರಿನ ಸ್ನಾನ ಮಾಡುವಂತಾಗಿದೆ. ಇನ್ನು ಮಧ್ಯಾಹ್ನ ವಂತೂ ಜನರು ಈ ಸುಡುವ ಬಿಸಿಲಿಗೆ ಹೊರಗಡೆ ಬಾರದಿರುವುದರಿಂದ ಮಧ್ಯಾಹ್ನದ ಹೊತ್ತು ವ್ಯಾಪಾರಸ್ಥರು ಗಿರಾಕಿ ಇಲ್ಲಿದೆ ಅಂಗಡಿಗಳು ಬಿಕೋ ಎನ್ನುತ್ತಿವೆ. ಜಿಲ್ಲೆಯಲ್ಲಿ ಬಿಸಿಲ ಬೇಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ, ಜನರು ಮನೆಯಿಂದ ಹೊರಗೆ ಕಾಲಿಡಲು ಹೆದರುವಂತಾಗಿದೆ. ಸೂರ್ಯನ ತಾಪ ಮಾನಕ್ಕೆ ಏನು ಕುಡಿದರೂ ಸಮಾಧಾನ ಆಗದಂತಹ ಸ್ಥಿತಿ ನಿರ್ಮಾಣವಾಗಿದೆ. ಉರಿ ಬಿಸಿಲು ಎದುರಿಸಲು ಆಗದೆ, ಎದೆಯುಸಿರು ಬಿಡುವಂತಾಗಿದೆ. ಮಧ್ಯಾಹ್ನದಿಂದ ಸಂಜೆವರೆಗೂ ಜನರು ಓಡಾಡಲು ಆಗದೆ ಮನೆಯಲ್ಲೇ ಕುಳಿತುಕೊಂಡು ಕಾಲ ಕಳೆಯಬೇಕಿದೆ.
ಬಿಸಿಲಿನ ಜಳ ಹೆಚ್ಚಳ: ನಿತ್ಯ ಕೆಲಸ ಕಾರ್ಯಗಳಿಗೂ ಬಿಸಿಲಿನಿಂದ ಆಡಚಣೆಯಾಗಿದೆ. ಕಳೆದ ನಾಲ್ಕೈದು ದಿನಗಿಳಿಂದ 36 ಡಿಗ್ರಿ ಇದೆ. ಹೀಗಾಗಿ, ಬಿಸಿಲಿನ ತಾಪ ಹೆಚ್ಚಾಗಿದೆ. ಬಿಸಿಲಿನ ಜಳ ಹೆಚ್ಚಾಗಿದೆ. ಭೂಮಿ ಕಾದ ಕಾವಲಿಯಾಗಿದೆ. ಸೂರ್ಯ ಉದಯವಾಗುತ್ತಲೇ ಬಿಸಿಲಿನ ಪ್ರಖರತೆಗೆ ಜನ ಹೈರಾಣಾಗಿದ್ದಾರೆ. ಎಷ್ಟು ನೀರು ಕುಡಿದರೂ, ದಾಹ ತೀರದ ಹಿನ್ನೆಲೆ ಜನರು ತಂಪು ಪಾನೀಯಗಳಿಗೆ ಮೊರೆ ಹೋಗುತ್ತಿದ್ದಾರೆ.
ತಂಪು ಪಾನೀಯಗಳ ಮೊರೆ: ಮಧ್ಯಾಹ್ನ ಹೊತ್ತಿನಲ್ಲಿ ಜನರು ಹೊರ ಬರುತ್ತಿಲ್ಲ. ಹೀಗಾಗಿ, ನಗರದಲ್ಲಿ ಮ ಧ್ಯಾ ಹ್ನದ ಹೊತ್ತು ಜನ ಸಂಚಾರ ತೀವ್ರ ವಿರಳವಾ ಗಿದೆ. ಅಘೋಷಿತ ಕರ್ಫ್ಯೂ ವಾತಾವರಣ ಕಣ್ಣಿಗೆ ಗೋ ಚರಿಸುತ್ತದೆ. ಬಿಸಿಲಿನ ಪ್ರಖರತೆ ತಾಳಲಾರದೆ, ಜನರು ನೆರಳಿನ ಆಸರೆ ಪಡೆಯುತ್ತಿ ದ್ದಾರೆ. ಕಲ್ಲಂಗಡಿ, ಕರ್ಬೂಜ, ಐಸ ಕ್ರೀಂ, ಮಜ್ಜಿಗೆ, ಲಸ್ಸಿ ಮುಂತಾದ ತಂಪು ಪಾನೀಯಕ್ಕೆ ಜನರು ಮೊರೆ ಹೋಗುತ್ತಿದ್ದಾರೆ. ಮನೆ ಯಲ್ಲಿದ್ದವರು ಬಿಸಿಲಿನ ತಾಪಕ್ಕೆ ತಂಪು ಮಾಡಿ ಕೊಳ್ಳಲು ಕೂಲರ್, ಎಸಿ, ಫ್ಯಾನ್ ಮೊರೆ ಹೋದರೆ, ಹೊರಗಡೆ ಹೋಗುವ ಪಾದ ಚಾರಿಗಳು ಛತ್ರಿ ಆಶ್ರ ಯ ದಲ್ಲಿ ಎಳನೀರು, ಕಲ್ಲಂಗಡಿ ಹಣ್ಣು ಮತ್ತಿತರ ತಂಪು ಪಾನೀಯ ಸೇವಿಸಿ ದಣಿವಾರಿ ಸಿಕೊಳ್ಳುತ್ತಿದ್ದಾರೆ.
ಕಾಯಿಲೆ ಬರುವ ಸಾಧ್ಯತೆ: ಪಟಣ್ಣದಲ್ಲಿ ಭೂಮಿ ಕಾದು ಕೆಂಡದಂತಾಗಿದ್ದು, ರೈತರು ಜಮೀನಿಗೆ ಹೋಗ ದಂ ತಹ ಸ್ಥಿತಿ ನಿರ್ಮಾಣವಾಗಿದೆ. ಜೊತೆಗೆ ಪ್ರಾಣಿಗಳಿಗೆ ಆಹಾರದ ಸಮಸ್ಯೆಯುಂಟಾಗಿದ್ದು, ಕುಡಿಯುವ ನೀರಿ ಗಾಗಿ ಪ್ರಾಣಿ-ಪಕ್ಷಿಗಳು ಪರದಾಡುವಂತಹ ಸ್ಥಿತಿ ನಿರ್ಮಾಣ ಆಗಿದೆ. ಸೂರ್ಯನ ಪ್ರಖರತೆ ಹೆಚ್ಚಾದರೆ ಅನೇಕ ಕಾಯಿಲೆ ಬರುವ ಸಾಧ್ಯತೆ ಇದೆ ಎಂದು ವೈದ್ಯರು ಹೇಳುತ್ತಾರೆ.
ಮಡಕೆಗೆ ಭಾರೀ ಬೇಡಿಕೆ: ಬಿಸಿಲಿನ ಜಳಕ್ಕೆ ಮನೆಯಲ್ಲಿರುವ ಕುಡಿಯುವ ನೀರು ಸಹ ಬೆಚ್ಚಗೆ ಆಗುತ್ತದೆ. ಹೀಗಾಗಿ, ತಣಗಾಗಿಸಲು ಬಡವರ ಫ್ರೀಜ್ ಎಂದೆ ಕರೆಯುವ ಮಣ್ಣಿನ ಮಡಕೆಗಳಿಗೆ ಭಾರೀ ಬೇಡಿಕೆ ಇದೆ. ಹೀಗಾಗಿ, ಇವುಗಳ ವ್ಯಾಪಾರವೂ ಕೂಡ ಮಾರುಕಟ್ಟೆಯಲ್ಲಿ ಜೋರಾಗಿಯೇ ನಡೆಯುತ್ತಿದೆ.
ಸಂಜಿವೀನಿಯಾದ ಎಳನೀರು: ರಾಜ್ಯಾದ್ಯಂತ ಬಿಸಿಲಿನ ಪ್ರಮಾಣ ಅಧಿಕವಾಗಿರುವುದರಿಂದ ಎಲ್ಲರೂ ಎಳನೀರಿಗೆ ಮುಗಿ ಬೀಳುತ್ತಿದ್ದಾರೆ. ನೀರಿಲ್ಲದೆ ತಂಗಿನ ಮರಗಳಲ್ಲಿ ಕಾಯಿಗಳು ಕಡಿಮೆ ಆಗಿರುವುದರಿಂದ ಬೇರೆ ಜಿಲ್ಲೆಗಳಿಂದ ತಂದು ಮಾರಾಟ ಮಾಡಲಾಗುತ್ತಿದೆ. ಗ್ರಾಮದಲ್ಲಿ 30ರಿಂದ 40 ರೂ. ವರೆಗೂ ಒಂದು ಎಳನೀರು ಮಾರಾಟವಾಗುತ್ತಿದೆ ಎಂದು ವ್ಯಾಪಾರಸ್ಥರು ತಿಳಿಸಿದ್ದಾರೆ.
ಕಳೆದ ವರ್ಷಕ್ಕಿಂತ ಈ ಬಾರಿ ಬಿಸಿಲಿನ ತಾಪ ಹೆಚ್ಚಾಗಿದೆ. ಹೀಗಾಗಿ, ಎಳನೀರು ಸೇವಿಸಲು ಹೆಚ್ಚಾಗಿ ಆಗಮಿಸುತ್ತಿದ್ದಾರೆ. 30 ರೂ. ಇದ್ದರೂ ಗ್ರಾಹಕರು ಚೌಕಾಸಿ ಮಾಡದೆ ಕುಡಿದು ದಣಿವು ನಿವಾರಿಸಿಕೊಳ್ಳುತ್ತಿದ್ದಾರೆ. ವ್ಯಾಪಾರವೂ ಜೋರಾಗಿದೆ. -ಮಲ್ಲಪ್ಪ, ಎಳನೀರು ವ್ಯಾಪಾರಸ್ಥ
ಈ ಬಿಸಲು ಜನರಲ್ಲಿ ಬಳಲಿಕೆ ತರಿಸುತ್ತದೆ. ಸುಸ್ತು ಆದಂತಾಗುತ್ತದೆ. ಕೆಲವರಿಗೆ ಸನ್‌ಸ್ಟೋಕ್ ಆಗಬಹುದು. ನಿರಂತರವಾಗಿ ನೀರು ಕುಡಿಯಬೇಕು. ಊಟ ಕಡಿಮೆ ಮಾಡಬೇಕು. ಬಿಸಿಲಿನ ಝಳ ಹೆಚ್ಚುತ್ತಿದ್ದಂತೆ ಮನೆಯಿಂದ ಹೊರಗಡೆ ಬರಬಾರದು. ಮಕ್ಕಳು, ಗರ್ಭಿಣಿಯರು ಹಾಗೂ ಹಿರಿಯ ನಾಗರಿಕರು ಆದಷ್ಟು ಬಿಸಿಲಿಂದ ದೂರ ಇರಬೇಕು. – ಡಾ.ರಘುನಾಥ್, ವೈದ್ಯಾಧಿಕಾರಿ
-ಕೆ.ಎಸ್.ಮಂಜುನಾಥ್ ಕುದೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.