ರಾಮನಗರದಲ್ಲಿ ವರುಣನ ಆರ್ಭಟ : ತುಂಬಿ ಹರಿಯುತ್ತಿರುವ ಬೋಳಪ್ಪನಹಳ್ಳಿ ಕೆರೆ
Team Udayavani, Aug 30, 2022, 8:09 AM IST
ರಾಮನಗರ : ವರುಣನ ಆರ್ಭಟ ಮುಂದುವರಿದಿದೆ ತಡರಾತ್ರಿ ಗುಡುಗು ಸಹಿತ ಮಿಂಚಿನ ಭರಾಟೆ ಜೋರಾಗಿದ್ದು ಆತಂಕ ಹೆಚ್ಚಿಸಿದೆ. ಸಿಡಿಲು ಮತ್ತು ಗುಡುಗಿನ ಅಬ್ಬರಕ್ಕೆ ಜನತೆ ಬೆಚ್ಚಿಬಿದ್ದಿದ್ದಾರೆ.
ಸತತ ಮೂರನೇ ದಿನವಾದ ಇಂದೂ ಕೂಡ ಮಳೆ ಜೋರಾಗಿ ಸುರಿಯಲಾರಂಭಿಸಿದ್ದು ಬೋಳಪ್ಪನಹಳ್ಳಿಕೆರೆ ಭಾಗದ ನಾಗರೀಕರು ಆತಂಕದಲ್ಲಿರುವಂತೆ ಮಾಡಿದೆ .
ಬೋಳಪ್ಪನಹಳ್ಳಿ ಕೆರೆ ಏರಿ ಮೇಲೆ ಈಗಾಗಲೇ ಎರಡು ಕಡೆ ಕುಸಿತ ಕಂಡಿದ್ದು ಏರಿ ಒಡೆದು ಹೋಗುವ ಭೀತಿ ಕೂಡ ಇದೆ. ಅಕಸ್ಮಾತ್ ಅಂತಹ ಅನಾಹುತ ಜರುಗಿದರೆ ಸಾಕಷ್ಟು ಮನೆಗಳು ಜಲಾವೃತವಾಗುತ್ತವೆ. ಕೋಡಿಪುರ , ಮಾಗಡಿ ರಸ್ತೆ ಸೇರಿದಂತೆ ನಗರದ ಪ್ರಮುಖ ರಸ್ತೆ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿನ ನೂರಕ್ಕೂ ಹೆಚ್ಚು ಕಟ್ಟಡಗಳು ಜಲಾವೃತವಾಗಲಿವೆ.
ಈಗಾಗಲೇ ನೆರೆಪರಿಹಾರ ತಂಡ ಮುಂಜಾಗ್ರತಾ ಕ್ರಮವಾಗಿ ಕೋಡಿ ದೊಡ್ಡದು ಮಾಡಿದ್ದು ನೀರು ಜೋರಾಗಿ ಹರಿದು ಹೋಗುವಂತೆ ಮಾಡಲಾಗಿತ್ತು . ಅದೂ ಕೂಡ ಹಲವು ಮನೆಗಳಿಗೆ ನೀರು ನುಗ್ಗಿ ಆತಂಕ ಸೃಷ್ಟಿಸಿತ್ತು. ಅದೃಷ್ಠವಶಾತ್ ಹಾನಿಯಾಗಿಲ್ಲ ಎಂದು ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದರು. ಮತ್ತೆ ಮಳೆಹೆಚ್ಚಾಗಿದ್ದು ಆತಂಕದಲ್ಲೇ ದಿನದೂಡುವಂತೆ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
MUST WATCH
ಹೊಸ ಸೇರ್ಪಡೆ
IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.