ಹತ್ತು ಕಾಡಾನೆಗಳ ಹಿಂಡು ಪ್ರತ್ಯಕ್ಷ
Team Udayavani, Jan 12, 2017, 11:43 AM IST
ಚನ್ನಪಟ್ಟಣ: ಹತ್ತು ಆನೆಗಳ ತಂಡ ಕಾಣಿಸಿಕೊಂಡು ಜನರಲ್ಲಿ ¸ಯಭೀತಿ ಉಂಟು ಮಾಡಿರುವ ಘಟನೆ ತಾಲೂಕಿನ ಕೋಡಂಬಹಳ್ಳಿ ಸಿಂಗರಾಜಿಪುರ ರಸ್ತೆಯಲ್ಲಿ ಬುಧವಾರ ನಡೆದಿದೆ. ಕೋಡಂಬಹಳ್ಳಿ ಕೆರೆಯಲ್ಲಿ ನೀರು ತುಂಬಿರುವ ಹಿನ್ನೆಲೆಯಲ್ಲಿ ಈ ಆನೆಗಳು ಕೆರೆ ನೀರು ಕುಡಿಯಲು ಬಂದಿದ್ದು ಕೋಡಂಬಹಳ್ಳಿ ಸಿಂಗರಾಜಿಪುರ ರಸ್ತೆಯಲ್ಲಿ ಬೀಡುಬಿಟ್ಟಿದ್ದ ಆನೆಗಳನ್ನು ಕಂಡ ಸಾರ್ವಜನಿಕರು ಭಯದಲ್ಲಿ ದಿಕ್ಕಾಪಾಲಾಗಿ ಓಡಿದ್ದಾರೆ.
ಸುದ್ದಿ ತಿಳಿದು ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಆನೆಗಳನ್ನು ಕಾಡಿಗೆ ಅಟ್ಟಲು ಹರಸಾಹಸ ಪಟ್ಟಿದ್ದಾರೆ. ಆನೆಗಳು ಕಾಡಿನ ಕಡೆಗೆ ಹೋಗುವ ಮಾರ್ಗದಲ್ಲಿ ಸಿಕ್ಕ ಬೆಳೆಗಳು, ಪಂಪ್‌ಸೆಟ್‌ಗಳನ್ನು ತುಳಿದು ನಾಶಮಾಡಿವೆ. ಆನೆಗಳ ದಾಳಿಯಿಂದ ಬಾಳೆ, ಟೊಮೆಟೋ, ತೆಂಗಿನ ಬೆಳೆ ಸೇರಿದಂತೆ ಹಲವು ಬೆಳೆಗಳು ಧ್ವಂಸವಾಗಿವೆ.
ಇಷ್ಟೊಂದು ಆನೆಗಳನ್ನು ಒಟ್ಟಿಗೆ ನೋಡಿ ಜನರು ಭಯಭೀತರಾಗಿದ್ದಾರೆ. ಆನೆಗಳು ಹನಿಯೂರು, ಮಾದೇಗೌಡನದೊಡ್ಡಿ, ಸಾತನೂರು ವ್ಯಾಪ್ತಿಯ ಕಂಚನಹಳ್ಳಿ ಮುಂತಾದ ಕಡೆ ಓಡಾಡಿವೆ. ನಂತರ ಅರಣ್ಯ ಇಲಾಖೆ ಸಿಬ್ಬಂದಿ ಆನೆಗಳನ್ನು ಬುಧವಾರ ಸಂಜೆಯ ವೇಳೆಗೆ ಕಬ್ಟಾಳು ಕಾಡಿಗೆ ಅಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಇದುವರೆಗೆ 4 ಗಂಡಾನೆ ಮತ್ತು 1 ಹೆಣ್ಣಾನೆ ಸೇರಿದಂತೆ 5 ಆನೆಗಳ ತಂಡ ತೆಂಗಿನಕಲ್ಲು ಅರಣ್ಯಪ್ರದೇಶದ ವ್ಯಾಪಿಯಲ್ಲಿ ಸತತವಾಗಿ ದಾಳಿ ಮಾಡುತ್ತ ಬಂದಿದ್ದವು. ಆದರೆ, ಇದೀಗ ಆನೆಗಳ ಸಂಖ್ಯೆ 10ಕ್ಕೆ ಏರಿಕೆಯಾಗಿವೆ. ಆನೆಗಳ ಸರಣಿ ದಾಳಿ ಬಗ್ಗೆ ವನಪಾಲಕ ಕುಮಾರ್ ಪ್ರತಿಕ್ರಿಯೆ ನೀಡಿ, ಆನೆಗಳು ನೀರು ಹುಡುಕಿಕೊಂಡು ಕೆರೆಗಳಿಗೆ ಲಗ್ಗೆ ಇಡುತ್ತಿವೆ. ಶೀಘ್ರವೇ ಮುತ್ತತ್ತಿ ಕಾಡಿಗೆ ಓಡಿಸುವ ಕಾರ್ಯ ಮಾಡಲಾಗುತ್ತದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!
By Election: ದೇವೇಗೌಡರನ್ನು 1994ರಲ್ಲಿ ಮುಖ್ಯಮಂತ್ರಿ ಮಾಡಿದ್ದೇ ನಾನು: ಸಿಎಂ ಸಿದ್ದರಾಮಯ್ಯ
Ramanagara: ಆರು ಟ್ರಾನ್ಸ್ ಫಾರ್ಮರ್ ಗಳ ಕಳವು
Congress Government: ಉಪಚುನಾವಣೆ ಬಳಿಕ ಗೃಹಲಕ್ಷ್ಮಿ ಸ್ಥಗಿತ: ಎಚ್.ಡಿ.ದೇವೇಗೌಡ ಭವಿಷ್ಯ
By Election: ಗದ್ದುಗೆ ಸೈನಿಕ ಯೋಗೇಶ್ವರ್‌ಗೋ? ನಿಖಿಲ್ ಕುಮಾರಸ್ವಾಮಿಗೋ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.