ಮಹಿಳೆ ಶಿಕ್ಷಣ ಪಡೆದರೆ ದೌರ್ಜನ್ಯದಿಂದ ಮುಕ್ತಿ

ಕಾನೂನಿನ ಅರಿವು ಪಡೆಯುವುದು ಅವಶ್ಯಕ: ಜಯರತ್ನ

Team Udayavani, Nov 29, 2020, 11:15 AM IST

ಮಹಿಳೆ ಶಿಕ್ಷಣ ಪಡೆದರೆ ದೌರ್ಜನ್ಯದಿಂದ ಮುಕ್ತಿ

ರಾಮನಗರ: ಮಹಿಳೆಯರು ವಿದ್ಯಾವಂತರು, ವಿಚಾರವಂತರೂ ಆದಾಗ ಮಾತ್ರ ತಮ್ಮ ವಿರುದ್ಧದ ಶೋಷಣೆಯಿಂದ ಪಾರಾಗಲು ಸಾಧ್ಯ ಎಂದು ಜಿಪಂ ಉಪಾಧ್ಯಕ್ಷೆ ಡಿ.ಎಚ್‌.ಜಯರತ್ನ ಅಭಿಪ್ರಾಯಪಟ್ಟರು.

ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿದ್ದ ಮಹಿಳಾ ಸಾಂಸ್ಕೃತಿಕ ಉತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರು ತಮ್ಮ ವಿರುದ್ಧ ದೌರ್ಜನ್ಯ, ದುಷ್ಕೃತ್ಯಗಳಿಂದ ರಕ್ಷಣ ಪಡೆಯಲು ಕನಿಷ್ಠ ಕಾನೂನಿನ ಅರಿವಿರಬೇಕು. ಮನೆ ಹೊರಗೆ, ಒಳಗೆ ದುಡಿಯುವ ಶ್ರಮ ಜೀವಿ. ಆಕೆಗೂ ಒಂದು ಮನಸ್ಸಿದೆ, ಹೃದಯವಿದೆ. ಆಸೆ, ಆಕಾಂಕ್ಷೆಗಳಿವೆ. ಇವುಗಳನ್ನು ಸಾಧಿಸಬೇಕಾದರೆ ಮಹಿಳೆಯರು ಸ್ವಾವಲಂಬಿಗಳಾಗಬೇಕೆಂದರು.

ಅಡುಗೆ ಮನೆಗೆ ಸೀಮಿತವಿಲ್ಲ: ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿ ಅನಸೂಯಮ್ಮ ಮಾತನಾಡಿ, ಮಹಿಳೆ ಇಂದು ಅಡುಗೆ ಮನೆಗೆ ಸೀಮಿತವಾಗಿಲ್ಲ, ಆಗಲೂಬಾರದು ಎಂದರು. ಕೋವಿಡ್‌ 19 ಸೋಂಕು ಲಾಕ್‌ಡೌನ್‌ ವೇಳೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹಲವಾರು ಕಾಯ್ದೆಗಳಿಗೆ ತಿದ್ದುಪಡಿ ತಂದು ತಮಗೆ ಅನುಕೂಲವಾಗುವಂತೆ ಬದಲಾವಣೆ ಮಾಡಿಕೊಂಡಿವೆ ಎಂದು ಹರಿಹಾಯ್ದರು.

ಮೂಢನಂಬಿಕೆಗಳಿಂದ ದೂರವಿರಿ: ಮಹಿಳಾ ವಿಚಾರಗೋಷ್ಠಿ ಮತ್ತು ಕವಿಗೋಷ್ಠಿಯ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಡಾ.ನಾಗರತ್ನ ಬಂಜಗೆರೆ ಮಾತನಾಡಿ, ಮೂಢನಂಬಿಕೆ ಹಾಗೂ ಸಾಮಾಜಿಕ ಅನಿಷ್ಠಕಟ್ಟುಪಾಡುಗಳಿಂದ ದೂರ ಇರ ಬೇಕು. ಮಹಿಳೆ ಮತ್ತು ಸಮಾಜ ಕುರಿತು ಡಾ.ವಿಜಯಾ, ಡಾ.ಅಬೀದಾ ಬೇಗಂ, ಪುಣ್ಯ ಮಾತನಾಡಿದರು.ಕವಿಗೋಷ್ಠಿಯಲ್ಲಿ ಸುಮಂಗಳಾ, ಶೈಲಾ, ವಸಂತಲಕ್ಷ್ಮೀ, ಸುಪ್ರಿಯಾ ಕವಿತೆ ವಾಚಿಸಿದರು. ಮಹಿಳಾ ಕಲಾವಿದರಿಗೆ ರಂಗೋಲಿ ಸ್ಪರ್ಧೆ, ಆಶು ಭಾಷಣ ಸ್ಪರ್ಧೆ, ಪ್ರಬಂಧ ಸ್ಪರ್ಧೆ ನಡೆಯಿತು.

ಪುಸ್ತಕ ಮಳಿಗೆ, ಕರಕುಶಲ ವಸ್ತುಗಳ ಮಳಿಗೆ, ವಸ್ತು ಪ್ರದರ್ಶನ ನಡೆಯಿತು. ಮಹಿಳಾ ತಂಡಗಳಿಂದ ಪೂಜೆ, ಪಟ, ವೀರಗಾಸೆ, ಡೊಳ್ಳು, ಭರತನಾಟ್ಯ, ಸಮೂಹ ನೃತ್ಯ, ಲಂಬಾಣಿ ನೃತ್ಯ, ಜಾನಪದ ಗಾಯನ, ಸುಗ್ಗಿ ಕುಣಿತ, ಸೋಬಾನೆ ಪದ, ಯೋಗಾಸನ ಮತ್ತಿತರ ಪ್ರದರ್ಶನಗಳು ನಡೆದವು. ಎನ್‌.ಎಚ್‌.ವೀಣಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ವಿ.ವಿನಯ್ ಕುಮಾರ್‌, ಉಪನ್ಯಾಸಕ ಡಾ.ಅಂಕನಹಳ್ಳಿ ಪಾರ್ಥ ಮತ್ತಿತರರಿದ್ದರು.

ಮಹಿಳಾ ರಾಜಕೀಯ ಪಕ್ಷ ರಚನೆಯಾಗಲಿ :  ವಿಚಾರಗೋಷ್ಠಿ ಮತ್ತುಕವಿಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಿದ್ದ ಡಾ.ಪ್ರೇಮಾ ಸಿದ್ದರಾಜು ಮಾತನಾಡಿ, ಪುರುಷರಿಂದ ತಮ್ಮ ವಿರುದ್ಧ ದಬ್ಬಾಳಿಕೆ, ದೌರ್ಜನ್ಯ ನಡೆಯುತ್ತಿದೆ ಎಂದು ಹೇಳುವ ಬದಲಿಗೆಕಾನೂನು ಮತ್ತು ಸಂವಿಧಾನ ಮಹಿಳೆಯರಿಗೆ ನೀಡಿರುವ ಅವಕಾಶ, ರಕ್ಷಣೆಗಳ ಬಗ್ಗೆ ಅರಿಯಬೇಕು. ಅಕ್ಕಮಹಾದೇವಿಯ ಧೈರ್ಯ,ಕೆಚ್ಚು,ಆತ್ಮವಿಶ್ವಾಸ ಪ್ರತಿಯೊಬ್ಬ ಮಹಿಳೆಯಲ್ಲಿ ಮೂಡಬೇಕೆಂದರು. ಹೆಚ್ಚು ಮಹಿಳೆಯರು ರಾಜಕೀಯ ಪ್ರವೇಶ ಮಾಡಬೇಕು. ಮಹಿಳೆಗೆ ಮದುವೆ ಒಂದೇ ಮಾನದಂಡವಲ್ಲ. ಅದರಿಂದಾಚೆ ಸಾಧಿಸಬೇಕಾದುದುಬಹಳಷ್ಟಿದೆ. ಮಹಿಳೆಯರುಒಗ್ಗಟ್ಟಾಗಿಮಹಿಳಾಪಕ್ಷವನ್ನುಕಟ್ಟಿ ರಾಜಕೀಯಪ್ರವೇಶ ಮಾಡಿಸರ್ಕಾರ ರಚಿಸಬೇಕು ಎಂದು ತಿಳಿಸಿದರು.

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Channapatna: ಕೆಲಸದ ಒತ್ತಡ ತಾಳಲಾರದೆ ಮುಖ್ಯ ಶಿಕ್ಷಕ ವಿಷ ಸೇವಿಸಿ ಆತ್ಮಹ*ತ್ಯೆ

Channapatna: ಕೆಲಸದ ಒತ್ತಡ ತಾಳಲಾರದೆ ಮುಖ್ಯ ಶಿಕ್ಷಕ ವಿಷ ಸೇವಿಸಿ ಆತ್ಮಹ*ತ್ಯೆ

10-ramanagara

Ramanagara: ಕಾಡಾನೆ ದಾಳಿಗೆ ರೈತ ಬಲಿ

DOG (2)

Ramanagara:ನಾಯಿ ಜತೆ ಮೂವರ ಅನೈಸರ್ಗಿಕ ಲೈಂಗಿ*ಕ ಚಟುವಟಿಕೆ: ಓರ್ವ ಸೆರೆ

Magadi Bus Stand: ಮಾಗಡಿ ಬಸ್‌ ನಿಲ್ದಾಣದಲ್ಲಿ ಸಮಸ್ಯೆಗಳ ಸರಮಾಲೆ

Magadi Bus Stand: ಮಾಗಡಿ ಬಸ್‌ ನಿಲ್ದಾಣದಲ್ಲಿ ಸಮಸ್ಯೆಗಳ ಸರಮಾಲೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.