ಮಠದ ಆಸ್ತಿ ಅಕ್ರಮ ಮಾರಾಟ: ಆರೋಪ
ಕೇತೋಹಳ್ಳಿ ಮಠದ ವಿರೂಪಾಕ್ಷ ಸ್ವಾಮೀಜಿ ವಿರುದ್ಧ ವೀರಶೈವ ಮುಖಂಡರಿಂದ ಜಿಲ್ಲಾಡಳಿತಕ್ಕೆ ದೂರು
Team Udayavani, Jun 1, 2019, 11:06 AM IST
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವೀರಶೈವರ ಸಂಘದ ಅಧ್ಯಕ್ಷ ಎಂ.ಆರ್.ಶಿವಕುಮಾರಸ್ವಾಮಿ ಮಾತನಾಡಿದರು. ಕೆ.ಎಂ.ಎಫ್ ಅಧ್ಯಕ್ಷ ಪಿ.ನಾಗರಾಜು, ಚಂದ್ರಶೇಖರ್ ಇತರರು ಇದ್ದರು.
ರಾಮನಗರ: ತಾಲೂಕಿನ ಕೇತೋಹಳ್ಳಿ ಗ್ರಾಮದಲ್ಲಿರುವ ವಿರೂಪಾಕ್ಷ ದೇವರ ಮಠದ ಸುಮಾರು 10 ಎಕರೆ ಜಮೀನಿ ಇಂದಿನ ಮಾರುಕಟ್ಟೆ ಬೆಲೆ ಕೋಟ್ಯಂತರ ರೂ. ಬೆಲೆ ಬಾಳುತ್ತದೆ. ಮಠದ ಸ್ವತ್ತನ್ನು ವಿರೂಪಾಕ್ಷ ಸ್ವಾಮೀಜಿ ಅವರು ಖಾಸಗಿ ವ್ಯಕ್ತಿಗೆ ಮಾರಾಟ ಮಾಡಿದ್ದಾರೆ, ಸ್ವತ್ತು ಉಳಿಸಿಕೊಡಿ ಎಂದು ವೀರಶೈವ ಮುಖಂಡರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.
ಈ ಸಂಬಂಧ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೀರಶೈವರ ಸಂಘದ ಅಧ್ಯಕ್ಷ ಎಂ.ಆರ್.ಶಿವಕುಮಾರಸ್ವಾಮಿ, ಕೇತೋಹಳ್ಳಿಯ ವಿರೂಪಾಕ್ಷ ಮಠದ ಆಸ್ತಿ ಭಕ್ತವೃಂದ ಆಸ್ತಿ. ಮಠದ ಸ್ವತ್ತನ್ನು ವಿರೂಪಾಕ್ಷ ಸ್ವಾಮೀಜಿ ಅವರು ಗೌಪ್ಯವಾಗಿ ಖಾಸಗಿ ವ್ಯಕ್ತಿಗೆ ಮಾರಾಟ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸ್ವಾಮೀಜಿ ಅವರ ಸ್ವಯಾರ್ಜಿತ ಸ್ವತ್ತಲ್ಲ: ರಾಮನಗರ ತಾಲೂಕು ಕಸಬಾ ಹೋಬಳಿ ಕೇತೋಹಳ್ಳಿ ಗ್ರಾಮದ ಸರ್ವೆ ಸಂಖ್ಯೆ 68ರಲ್ಲಿ 4 ಎಕರೆ 36 ಗುಂಟೆ ಹಾಗೂ ಸರ್ವೆ ಸಂಖ್ಯೆ 69ರಲ್ಲಿ 5 ಎಕರೆ 18 ಗುಂಟೆ ಜಮೀನು ಭಕ್ತರ ಮೂಲದಿಂದ ವಿರೂಪಾಕ್ಷ ದೇವರ ಮಠಕ್ಕೆ ಸೇರಿದ್ದಾಗಿದೆ. ಸದರಿ ಸ್ವತ್ತುಗಳಿಂದ ಬರುತ್ತಿದ್ದ ಆದಾಯ, ಉತ್ಪತ್ತಿ ಎಲ್ಲವೂ ಮಠದ ಅಭಿವೃದ್ಧಿಗೆ ಮೀಸಲಾಗಿದೆ. ಆಸ್ತಿ ವಿರೂಪಾಕ್ಷ ಸ್ವಾಮೀಜಿ ಹೆಸರಿನಲ್ಲಿದೆ. ಆದರೆ ಈ ಆಸ್ತಿ ಅವರ ಸ್ವಯಾರ್ಜಿತ ಸ್ವತ್ತಲ್ಲ ಎಂಬುದು ಮುಖ್ಯ ಎಂದರು.
ರಾಮಲಿಂಗೇಶ್ವರ ಮಠದ ಶಾಖಾ ಮಠವಿದು: ಸದರಿ ಮಠವು ಶಿವಮೊಗ್ಗ ಜಿಲ್ಲೆಯ ಹಾರನಹಳ್ಳಿಯ ರಾಮಲಿಂಗೇಶ್ವರ ಮಠದ ಶಾಖಾ ಮಠ ಎಂದು ಉಚ್ಚ ನ್ಯಾಯಾಲಯ 27.6.2015ರಲ್ಲಿ ಆದೇಶ ಮಾಡಿದೆ. ಹೀಗಾಗಿ ಸ್ವತ್ತು ಯಾವುದೇ ಒಬ್ಬ ವ್ಯಕ್ತಿಗೆ ಸೀಮಿತವಾಗಿಲ್ಲ. ಹೀಗಿದ್ದರು ವಿರೂಪಾಕ್ಷ ಸ್ವಾಮೀಜಿ ಅವರು ಸ್ವಹಿತಾಸಕ್ತಿಗೆ ಹೆಚ್ಚು ಮಹತ್ವ ಕೊಟ್ಟು ಮೇ 20ರಂದು ಪರಮಶಿವಯ್ಯ ಎಂಬ ವ್ಯಕ್ತಿಗೆ ಕಾನೂನು ಬಾಹೀರವಾಗಿ ಮಾರಾಟ ಮಾಡಿದ್ದಾರೆ. ರಾಮನಗರ ಉಪನೋಂದಣಿ ಅಧಿಕಾರಿಗಳ ಕಚೇರಿಯಲ್ಲಿ ಸದರಿ ಸ್ವತ್ತು ಖಾಸಗಿ ವ್ಯಕ್ತಿಗೆ ನೋಂದಾಯವಾಗಿದೆ. ಕೋಟ್ಯಂತರ ರೂ. ಬೆಲೆ ಬಾಳುವ ಸ್ವತ್ತಿಗೆ ಕಡಿಮೆ ನೋಂದಣಿ ಶುಲ್ಕವನ್ನು ಪಾವತಿಸಲಾಗಿದೆ. ನೋಂದಣಿಯನ್ನು ತಕ್ಷಣ ಜಿಲ್ಲಾಡಳಿತ ತಡೆಹಿಡಿಯಬೇಕು ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿರುವುದಾಗಿ ತಿಳಿಸಿದರು.
ಹೋರಾಟದ ಎಚ್ಚರಿಕೆ: ಅಕ್ರಮವಾಗಿ ಆಸ್ತಿ ಖರೀದಿಸಿದ ವ್ಯಕ್ತಿ ಜೂನ್ 1ರಂದು ಆಯೋಜಿಸಿರುವ ಕಾರ್ಯಕ್ರಮವನ್ನು ತಕ್ಷಣ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ತಕ್ಷಣ ತಡೆಯಬೇಕು. ಆಸ್ತಿಯನ್ನು ಮಠಕ್ಕೆ ವಹಿಸಬೇಕು, ಇಲ್ಲದಿದ್ದಲ್ಲಿ ಹೋರಾಟ ಅನಿವಾರ್ಯವಾಗಲಿದೆ ಎಂದು ಸಭೆಯಲ್ಲಿ ಹಾಜರಿದ್ದ ವಿರೂಪಾಕ್ಷ ದೇವರ ಮಠದ ಭಕ್ತರು ಒಕ್ಕೊರಲಿನ ಎಚ್ಚರಿಕೆ ನೀಡಿದರು.
ಕೆ.ಎಂ.ಎಫ್ ಅಧ್ಯಕ್ಷ ಪಿ.ನಾಗರಾಜು ಮಾತನಾಡಿದರು. ವೀರಶೈವ ಮುಖಂಡರುಗಳಾದ ರಾಜಶೇಖರ್, ಚಂದ್ರಶೇಖರ್, ಯೋಗಾನಂದ್, ಹೊನ್ನಶೆಟ್ಟಿ, ಜಗದೀಶ್, ಡಿ.ಎಸ್.ಶಿವಕುಮಾರಸ್ವಾಮಿ, ವಿಭೂತಿಕೆರೆ ಶಿವಲಿಂಗಯ್ಯ, ಎ.ಜೆ.ಸುರೇಶ್, ಬಾಬು, ರೇಣುಕಾಪ್ರಸಾದ್, ಲೋಕೇಶ್, ಶಿವಶಂಕರ್, ಎಂ.ಮಹೇಶ್, ಶಿವಸ್ವಾಮಿ, ಚಂದ್ರಶೇಖರ್, ಬಸವಣ್ಣ, ಮಹದೇವು ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Elephant Camp: ರಾಮನಗರದ ಮುತ್ತತ್ತಿ ಬಳಿ ರಾಜ್ಯದ 10ನೇ ಆನೆ ಕ್ಯಾಂಪ್ ಶೀಘ್ರ ಆರಂಭ?
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Ramnagar; ಹೊಸವರ್ಷದಂದೇ ಎರಡು ಪ್ರತ್ಯೇಕ ಅಪಘಾ*ತ: ಮೂವರ ಸಾ*ವು
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.