5 ವರ್ಷದಲ್ಲಿ 2.66 ಲಕ್ಷ ಮತದಾರರು ಹೆಚ್ಚಳ


Team Udayavani, Mar 18, 2019, 7:15 AM IST

5varsha.jpg

ರಾಮನಗರ: ಅತಿ ದೊಡ್ಡ ಲೋಕಸಭಾ ಕ್ಷೇತ್ರಗಳಲ್ಲಿ ಒಂದಾದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಗಳಲ್ಲಿ ಕಳೆದ 5 ವರ್ಷಗಳಲ್ಲಿ 2.66 ಲಕ್ಷ ಮತದಾರರು ಸೇರ್ಪಡೆಯಾಗಿದ್ದಾರೆ. 2014ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ 21,90,159 ಮತದಾರರು ಇದ್ದರು. 2019ರ ಚುನಾವಣೆಗೆ 24,56,207 ಮತದಾರರಿದ್ದಾರೆ. 5 ವರ್ಷಗಳಲ್ಲಿ 2,66, 048 ಮತದಾರರು ಹೆಚ್ಚಾಗಿದ್ದಾರೆ. 

ಕುಣಿಗಲ್‌ ವಿಧಾನಸಭಾ ಕ್ಷೇತ್ರದಲ್ಲಿ 2014ರಲ್ಲಿ 177234 ಮತದಾರರು, 2019ರಲ್ಲಿ 189772 ಮತದಾರರಿದ್ದಾರೆ. ರಾಜರಾಜೇಶ್ವರಿ ನಗರ ವಿಧಾನ ಸಭಾ ಕ್ಷೇತ್ರದಲ್ಲಿ 2014ರಲ್ಲಿ 386535 ಮತದಾರರು, 2019ರಲ್ಲಿ 445847 ಮತದಾರರಾಗಿದ್ದಾರೆ. ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ 2014ರಲ್ಲಿ 549558 ಮತದಾರರಿದ್ದರು. ಹಾಲಿ ಇಲ್ಲಿ 598230 ಮತದಾರರಿದ್ದಾರೆ. ಆನೇಕಲ್‌ ವಿಧಾನಸಭಾ ಕ್ಷೇತ್ರದಲ್ಲಿ ಸದ್ಯ 356638 ಮತದಾರರಿದ್ದಾರೆ. 2014ರಲ್ಲಿ 305750 ಮತದಾರರಿದ್ದರು.

ರಾಮನಗರ ಜಿಲ್ಲೆಯ ಮಾಗಡಿಯಲ್ಲಿ 209938 ಮತದಾರರು 2014ರಲ್ಲಿ ಮತ್ತು ಹಾಲಿ ಈ ಕ್ಷೇತ್ರದಲ್ಲಿ 222853 ಮತದಾರರಿದ್ದಾರೆ. ರಾಮನಗರದಲ್ಲಿ ಹಾಲಿ 207388 ಮತದಾರರಿದ್ದಾರೆ. 2014ರಲ್ಲಿ ಈ ಕ್ಷೇತ್ರದಲ್ಲಿ 191273 ಮತದಾರರಿದ್ದರು. ಕನಕಪುರದಲ್ಲಿ 2014ರಲ್ಲಿ 215346 ಮತದಾರರಿದ್ದರು. ಈಗ ಈ ಕ್ಷೇತ್ರದಲ್ಲಿ 219866 ಮತದಾರರಿದ್ಧಾರೆ.

ಚನ್ನಪಟ್ಟಣದಲ್ಲಿ ಸದ್ಯ 215613 ಮತದಾರರಿದ್ದಾರೆ. 2014ರಲ್ಲಿ ಈ ಕ್ಷೇತ್ರದಲ್ಲಿ 208485 ಮತದಾರರಿದ್ದರು. 2013ರಲ್ಲಿ ಸಂಸದರಾಗಿದ್ದ ಎಚ್‌.ಡಿ.ಕುಮಾರಸ್ವಾಮಿ ಅವರು ತಮ್ಮ ಸ್ಥಾನಕ್ಕೆ ನೀಡಿದ ರಾಜೀನಾಮೆ ನೀಡಿದ ಕಾರಣ ನಡೆದ ಉಪ ಚುನಾವಣೆಯಲ್ಲಿ ಕ್ಷೇತ್ರದಲ್ಲಿ 9,86,387 ಪುರುಷರು ಮತ್ತು 9,16,976 ಮಹಿಳೆಯರು ಸಹಿತ 19,03,363 ಮತದಾರರು ಈ ಕ್ಷೇತ್ರದಲ್ಲಿದ್ದರು. 

ಬೆಂಗಳೂರು ನಗರ ಮತದಾರರ ಸಂಖ್ಯೆಯೇ ಹೆಚ್ಚು: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡುವ 8 ವಿಧಾನ ಸಭಾ ಕ್ಷೇತ್ರಗಳು 3 ಜಿಲ್ಲೆಗಳಲ್ಲಿ ವ್ಯಾಪಿಸಿದೆ. ಬೆಂಗಳೂರು ನಗರ ಜಿಲ್ಲೆಗೆ ಸೇರಿದ ರಾಜರಾಜೇಶ್ವರಿ ನಗರ, ಬೆಂಗಳೂರು ದಕ್ಷಿಣ ಮತ್ತು ಆನೇಕಲ್‌ ವಿಧಾನಸಭಾ ಕ್ಷೇತ್ರಗಳಲ್ಲಿ ನ ಮತದಾರರ ಸಂಖ್ಯೆಯೇ 14,00,715 ಮತದಾರರಿದ್ದಾರೆ. ಅಂದರೆ ಒಟ್ಟು ಕ್ಷೇತ್ರದ ಪೈಕಿ ಅಂದಾಜು ಶೇ.57ರಷ್ಟು ಮತದಾರರು ರಾಜಧಾನಿ ಬೆಂಗಳೂರು ನಗರ ಜಿಲ್ಲೆಯಲ್ಲೇ ಇದ್ದಾರೆ. 

ಅತಿ ಹೆಚ್ಚು ಮತದಾರರಿರುವುದು ಬೆಂಗಳೂರು ದಕ್ಷಿಣದಲ್ಲಿ: ಅತಿ ಹೆಚ್ಚು ಮತದಾರರಿರುವುದು ಬೆಂಗಳೂರು ದಕ್ಷಿಣದಲ್ಲಿ. ಬೆಂಗಳೂರು ದಕ್ಷಿಣದಲ್ಲಿ 598230 ಮತದಾರರಿದ್ದಾರೆ. ಅತಿ ಹೆಚ್ಚು ಮತದಾರರಿರುವ ಎರಡನೇ ಕ್ಷೇತ್ರ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ. ಇಲ್ಲಿ 445847 ಮತದಾರರಿದ್ದಾರೆ. ಮೂರನೇ ಸ್ಥಾನ ಆನೇಕಲ್‌ (356638), ನಾಲ್ಕನೇ ಸ್ಥಾನ ಮಾಗಡಿ (222853), ಐದನೇ ಸ್ಥಾನ ಕನಕಪುರ (219866), ಆರನೇ ಸ್ಥಾನ ಚನ್ನಪಟ್ಟಣ (215613), ಏಳನೇ ಸ್ಥಾನ ರಾಮನಗರ (207388), ಎಂಟನೇ ಸ್ಥಾನ ಕುಣಿಲಗಲ್‌ ಇಲ್ಲಿ 189772 ಮತದಾರರಿದ್ದಾರೆ. 

ಮೂರು ಕ್ಷೇತ್ರಗಳಲ್ಲಿ ಮಹಿಳೆಯರ ಪ್ರಾಬಲ್ಯ: ರಾಮನಗರ, ಕನಕಪುರ ಹಾಗೂ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಮಹಿಳಾ ಮತದಾರರ ಸಂಖ್ಯೆ ಪುರುಷ ಮತದಾರರಿಗಿಂತ ಹೆಚ್ಚಾಗಿದೆ. ಕನಕಪುರದಲ್ಲಿ 110244 ಮಹಿಳಾ ಮತದಾರರಿದ್ದಾರೆ. ಚನ್ನಪಟ್ಟಣದಲ್ಲಿ 109976 ಮತ್ತು ರಾಮನಗರದಲ್ಲಿ 104344 ಮಹಿಳಾ ಮತದಾರರಿದ್ದಾರೆ.

ಬೆಂಗಳೂರು ದಕ್ಷಿಣದಲ್ಲಿ ಇತರೆ ಮತದಾರರು ಹೆಚ್ಚು: ಇಡೀ ಕ್ಷೇತ್ರದಲ್ಲಿ 340 ಇತರೆ ಮತದಾರರಿದ್ದಾರೆ. ಅತಿ ಹೆಚ್ಚು ಇತರೆ ಮತದಾರರಿರುವುದು ಬೆಂಗಳೂರು ದಕ್ಷಿಣದಲ್ಲಿ. ಇಲ್ಲಿ 101 ಇತರೆ ಮತದಾರರಿದ್ದಾರೆ. ಆನೇಕಲ್‌ನಲ್ಲಿ 85, ರಾಜರಾಜೇಶ್ವರಿ ನಗರದಲ್ಲಿ 80, ರಾಮನಗರದಲ್ಲಿ 24, ಮಾಗಡಿಯಲ್ಲಿ 19, ಕುಣಿಗಲ್‌ನಲ್ಲಿ 15, ಕನಕಪುರದಲ್ಲಿ 9 ಮತ್ತು ಚನ್ನಪಟ್ಟಣದಲ್ಲಿ 7 ಇತರೆ ಮತದಾರರಿದ್ದಾರೆ. 

ಇನ್ನು ಅಂತಿಮವಾಗಿಲ್ಲ ಮತದಾರರ ಸಂಖ್ಯೆ: ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆ ಏಪ್ರಿಲ್‌ 18ರಂದು ನಡೆಯಲಿದೆ. ನಾಮಪತ್ರಗಳನ್ನು ಸಲ್ಲಿಸಲು ಮಾರ್ಚ್‌ 26. ಮತದಾರ ಪಟ್ಟಿಗೆ ಹೊಸ ಮತದಾರರು ಮಾರ್ಚ್‌ 26ರವರೆಗೆ ಸೇರ್ಪಡೆಗೆ ಅವಕಾಶವಿದೆ. ಹೀಗಾಗಿ ಹಾಲಿ ಇರುವ ಮತದಾರರ ಸಂಖ್ಯೆಯಲ್ಲಿ ಹೆಚ್ಚಳವಾಗುವ ಸಂಭವ ಇದೆ.

* ಬಿ.ವಿ.ಸೂರ್ಯ ಪ್ರಕಾಶ್‌

ಟಾಪ್ ನ್ಯೂಸ್

1-horoscope

Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ

Mangaluru: ಅಪ್ರಾಪ್ತ ಬಾಲಕಿಯ ಅತ್ಯಾ*ಚಾರ: ಗರ್ಭಪಾತ ಪ್ರಕರಣ ಅಪರಾಧಿಗೆ 20 ವರ್ಷ ಜೈಲು

ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ

adani

Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

ashok

CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್‌.ಅಶೋಕ್‌

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Fraud: “ವಿಡಿಯೋಗೆ ಲೈಕ್‌ ನೀಡಿ’ 13.97 ಲಕ್ಷ ಕಳೆದುಕೊಂಡರು!

Fraud: “ವಿಡಿಯೋಗೆ ಲೈಕ್‌ ನೀಡಿ’ 13.97 ಲಕ್ಷ ಕಳೆದುಕೊಂಡರು!

Yogeshwar

C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!

CM-Ramanagara

By Election: ದೇವೇಗೌಡರನ್ನು 1994ರಲ್ಲಿ ಮುಖ್ಯಮಂತ್ರಿ ಮಾಡಿದ್ದೇ ನಾನು: ಸಿಎಂ ಸಿದ್ದರಾಮಯ್ಯ

Ramanagara: ಆರು ಟ್ರಾನ್ಸ್‌‌ ಫಾರ್ಮರ್ ಗಳ ಕಳವು

Ramanagara: ಆರು ಟ್ರಾನ್ಸ್‌‌ ಫಾರ್ಮರ್ ಗಳ ಕಳವು

HDD-Gowda

Congress Government: ಉಪಚುನಾವಣೆ ಬಳಿಕ ಗೃಹಲಕ್ಷ್ಮಿ ಸ್ಥಗಿತ: ಎಚ್‌.ಡಿ.ದೇವೇಗೌಡ ಭವಿಷ್ಯ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-horoscope

Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ

Mangaluru: ಅಪ್ರಾಪ್ತ ಬಾಲಕಿಯ ಅತ್ಯಾ*ಚಾರ: ಗರ್ಭಪಾತ ಪ್ರಕರಣ ಅಪರಾಧಿಗೆ 20 ವರ್ಷ ಜೈಲು

ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ

adani

Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.