ಡಿ.2ರಿಂದ ಇಂದ್ರಧನುಷ್ ಲಸಿಕೆ ಅಭಿಯಾನ
Team Udayavani, Nov 30, 2019, 5:01 PM IST
ರಾಮನಗರ: ಜಿಲ್ಲೆಯಲ್ಲಿ ಮಿಷನ್ ಇಂದ್ರ ಧನುಷ್ ಕಾರ್ಯಕ್ರಮದಡಿಯಲ್ಲಿ ಡಿಸೆಂಬರ್2ರಿಂದ ಆರಂಭಿಸಿ 2-10 ವರ್ಷದೊಳಗಿನ ಮಕ್ಕಳಿಗೆ ರೋಗನಿರೋಧಕ ಲಿಸಿಕೆ ನೀಡುವ ಅಭಿಯಾನವನ್ನು 4 ಹಂತಗಳಲ್ಲಿ ಹಮ್ಮಿಕೊಂಡಿರುವುದಾಗಿ ಡಿಎಚ್‌ಒ ಡಾ.ನಿರಂಜನ್ ತಿಳಿಸಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಇಲಾಖೆಯ ಕಚೇರಿ ಯಲ್ಲಿ ಹಮ್ಮಿಕೊಳ್ಳಲಾಗಿದ್ದ ಜನಪರ ಮಾಹಿತಿ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಕ್ಕಳನ್ನು ಮಾರಕ ರೋಗಗ ಳಿಂದ ದೂರವಿರಿಸಲು ಈ ಲಸಿಕೆಗಳ ಅಭಿಯಾನ ಅವಶ್ಯಕವಾಗಿದೆ ಎಂದರು.
4 ಹಂತಗಳಲ್ಲಿ ಅಭಿಯಾನ: ಈ ಬಾರಿ ಇಂದ್ರ ಧನುಷ್ ಕಾರ್ಯಕ್ರಮ 4 ಹಂತಗಳಲ್ಲಿ ಅಂದರೆಡಿಸೆಂಬರ್ 2 ರಿಂದ 10 ರವರೆಗೆ, 2020 ಜನವರಿ 3 ರಿಂದ 13 ರವರೆಗೆ, ಫೆಬ್ರವರಿ 3 ರಿಂದ 12 ರವರೆಗೆ ಹಾಗೂ ಮಾರ್ಚ್ 02 ರಿಂದ 10 ವರೆಗೆ ನಡೆಸಲಾಗುವುದು. ಲಸಿಕೆಯಿಂದ ವಂಚಿತರಾಗಿರುವ ಮಕ್ಕಳು ಮತ್ತು ಗರ್ಭಿಣಿಯರನ್ನು ಮನೆ ಮನೆ ಸರ್ವೆ ಮಾಡಿ ಗುರುತಿಸಿ ಈ ಕಾರ್ಯ ಕ್ರಮದಲ್ಲಿ ಲಸಿಕೆ ಹಾಕಲಾಗುವುದು. ಮುಖ್ಯವಾಗಿ ಅಲೆಮಾರಿ ಜನಾಂಗ ಹಾಗೂ ಬುಡಕಟ್ಟು ಸಮುದಾಯದ 2 ವರ್ಷದೊಳಗಿನ ಲಸಿಕೆ ವಂಚಿತ ಮಕ್ಕಳನ್ನು ಗುರುತಿಸಿ ಲಸಿಕೆ ಹಾಕಿ ಶೇ 100 ಗುರಿ ಸಾಧಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
ಜಿಲ್ಲೆಯಲ್ಲಿ ಈಗಾಗಲೇ ಸಮೀಕ್ಷೆ ನಡೆಸಿ ಲಸಿಕೆ ಪಡೆಯದೆ ಇರುವ 713 ಮಕ್ಕಳು ಹಾಗೂ 102 ಗರ್ಭಿಣಿಯರನ್ನು ಗುರುತಿಸಲಾಗಿದೆ. ಅವರಿಗೆ ಈ ಅಭಿಯಾನದಲ್ಲಿ ಲಸಿಕೆ ನೀಡಲು ಆರೋಗ್ಯಇಲಾಖೆಯಿಂದ ಸಿದ್ಧತೆಗಳನ್ನು ಮಾಡಿಕೊಳ್ಳ ಲಾಗಿದೆ, ಚನ್ನಪಟ್ಟಣ ತಾಲೂಕಿನಲ್ಲಿ 307 ಮಕ್ಕಳು ಹಾಗೂ 38 ಗರ್ಭಿಣಿಯರನ್ನು, ಕನಕಪುರ ತಾಲೂಕಿನಲ್ಲಿ 110 ಮಕ್ಕಳು ಹಾಗೂ 22 ಗರ್ಭಿಣಿ ಯರನ್ನು, ಮಾಗಡಿ ತಾಲೂಕಿನಲ್ಲಿ 78 ಮಕ್ಕಳು ಹಾಗೂ 9 ಗರ್ಭಿಣಿಯರು, ರಾಮನಗರ ತಾಲೂಕಿನಲ್ಲಿ 218 ಮಕ್ಕಳು ಹಾಗೂ 33 ಗರ್ಭಿಣಿಯರನ್ನು ಗುರುತಿಸಲಾಗಿದೆ ಎಂದು ಹೇಳಿದರು.
ಇಂದ್ರಧನುಷ್ ಮೊದಲನೇ ಸುತ್ತು ಈಗಾಗಲೇ ಮೇ-2018 ರಿಂದ ಜುಲೈ 2018 ರವರೆಗೆ ನಡೆಸಲಾಗಿದ್ದು, ಶೇ 92.97 ರಷ್ಟು ಹಾಗೂ ಆಗಸ್ಟ್-2018 ರಿಂದ ಅಕ್ಟೋಬರ್ -2018 ರವರಗೆ ನಡೆದ ಅಭಿಯಾನದಲ್ಲಿ ಶೇ 97.27 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದರು. ಸಂವಾದ ಕಾರ್ಯಕ್ರಮದಲ್ಲಿ ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ. ಪದ್ಮ ಉಪಸ್ಥಿತರಿದ್ದರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.