ರೈತ ಮಿತ್ರ “ರಣಕಾಟೆ’ ಹದ್ದು ಸಂತತಿ ಅಭಿವೃದ್ಧಿ 


Team Udayavani, Sep 3, 2022, 2:37 PM IST

ರೈತ ಮಿತ್ರ “ರಣಕಾಟೆ’ ಹದ್ದು ಸಂತತಿ ಅಭಿವೃದ್ಧಿ 

ರಾಮನಗರ: ಇಂದು ಅಂತಾರಾಷ್ಟ್ರೀಯ ರಣಹದ್ದು ಜಾಗೃತಿ ದಿನ. ಇಲ್ಲಿನ ರಾಮದೇವರ ಬೆಟ್ಟದ ರಣಹದ್ದು ವನ್ಯಜೀವಿ ಧಾಮದಲ್ಲಿನ ರಣಹದ್ದುಗಳುಕಳೆದ ಐದು ವರ್ಷಗಳ ಬಳಿಕ ಇದೀಗ ಸಂತಾನವೃದ್ಧಿಸಿಕೊಂಡಿದ್ದು, ನಶಿಸಿ ಹೋಗುತ್ತಿವೆ ರಣಹದ್ದುಗಳಸಂತತಿ ಎಂಬ ಪಕ್ಷಿಪ್ರೇಮಿಗಳ ಕೂರಗಿಗೆ ವಿರಾಮ ಕೊಟ್ಟಂತಾಗಿದೆ.

ಪ್ರಸಿದ್ಧ ರಾಮದೇವರ ಬೆಟ್ಟ ರಣಹದ್ದು ವನ್ಯಜೀವಿಧಾಮದಲ್ಲಿ ವಾಸವಾಗಿರುವ ಅಪರೂಪದ ಉದ್ದ ಕೊಕ್ಕಿನ ರಣಹದ್ದುಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ಸರ್ಕಾರ 2012ರಲ್ಲಿ ರಾಮದೇವರ ಬೆಟ್ಟವನ್ನು ರಣಹದ್ದು ವನ್ಯಜೀವಿ ಧಾಮವನ್ನಾಗಿ ಘೋಷಣೆಮಾಡಿತ್ತು. ಅಲ್ಲಿಂದ ಅರಣ್ಯ ಇಲಾಖೆಯು ರಣಹದ್ದುಗಳ ರಕ್ಷಣೆಗೆ ಕೆಲವು ಕ್ರಮಗಳನ್ನುತೆಗೆದುಕೊಂಡಿದೆ. ಇದರ ಫಲವಾಗಿ ರಣಹದುಗಳು ಪುನಃ ಇಲ್ಲಿ ಮೊಟ್ಟೆ ಇಡಲು ಆರಂಭಿಸಿದ್ದವು. ಕಳೆದ ಐದು ವರ್ಷಗಳ ಬಳಿಕ ರಣಕಾಟೆ ಹದ್ದು ಮರಿ ಮಾಡಿದ್ದು ಸಂತಸವಾಗಿದೆ ಎಂದು ರಾಮನಗರದ ಪರಿಸರ ಪ್ರೇಮಿ ಶಶಿಕುಮಾರ್‌ ಹರ್ಷ ವ್ಯಕ್ತಪಡಿಸಿದ್ದಾರೆ.

ಬೆಟ್ಟದ ಮೇಲಿನ ಗೂಡೊಂದರಲ್ಲಿ ಸದಾ ಎರಡು ರಣಹದ್ದುಗಳು ಬಂದು ಹೋಗುವುದನ್ನು ಗಮನಿಸಿದ್ದೇನೆ, “ಬೈನಾಕ್ಯುಲರ್‌’ ಮೂಲಕ ಸೂಕ್ಷ್ಮವಾಗಿ ನೋಡಿದೆ. ಗೂಡಿನಲ್ಲಿನ ಒಂದು ಮೊಟ್ಟೆ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಕಳೆದ ಐದು ವರ್ಷಗಳ ಬಳಿಕ ಮರಿಮಾಡುತ್ತದೆ ಎಂಬ ನಂಬಿಕೆ ಇದೀಗ ನಿಜವಾಗಿದೆ ಎಂದು ಹೇಳಿದರು.

ರಣಹದ್ದುಗಳು ಮರಿ ಮಾಡುವುದೇ ವಿಶೇಷ: ಎರಡು ರಣಹದ್ದುಗಳು ಸರತಿಯಂತೆ ಗೂಡಿನಲ್ಲಿ ಮೊಟ್ಟೆಗಳಿಗೆ ಕಾವು ಕೊಡುತ್ತಿವೆ. ಒಂದು ಹದ್ದು ಕಾವು ಕೊಡುವಾಗ ಇನ್ನೊಂದು ಹದ್ದುಹೊರ ಹೋಗಿ ಆಹಾರ ಹುಡುಕಿಕೊಂಡು ಬರುತ್ತದೆ. ಅಲ್ಲದೆ, ಗೂಡಿಗೆ ಹುಲ್ಲು, ಕಡ್ಡಿಯನ್ನು ತರುವುದನ್ನು ನೋಡಿದ್ದೇನೆ. ಎರಡರಲ್ಲಿ ಯಾವುದಾದರೂ ಒಂದು ರಣಕಾಟೆ ಹದ್ದು ಸಂತಾನೋತ್ಪತ್ತಿ ಕಾಲದಲ್ಲಿ ಸದಾಗೂಡಿನಲ್ಲಿಯೇ ಇರುತ್ತದೆ. ಇದೀಗ ಮರಿಗಳಾಗಿದ್ದು ಹೊರಗೆ ತಾಯಿ ಮತ್ತು ಮರಿ ಎರಡು ಜೋಡಿಯಲ್ಲಿ ಕುಳಿತಿರುವ ದೃಶ್ಯವನ್ನೂ ಸೆರೆ ಹಿಡಿದಿರುವುದಾಗಿ ಸಂತಸ ವ್ಯಕ್ತಪಡಿಸಿದರು.

ನವೆಂಬರ್‌ನಿಂದ ಮಾರ್ಚ್‌ನಲ್ಲಿ ರಣಕಾಟೆ ಹದ್ದುಗಳ ಸಂತಾನೋತ್ಪತ್ತಿ ಕಾಲವಾಗಿದ್ದು,2021-2022ರ ಸಾಲಿನಲ್ಲಿ ರಣಕಾಟೆ ಹದ್ದು ಮರಿ ಮಾಡಿದೆ. ಮರಿ ಕೂಡ ಬಾನೆತ್ತರಕ್ಕೆ ಹಾರಿಹೋಗಿದೆ. ಹಿಂದೆ ಸಾವಿರಾರು ಸಂಖ್ಯೆಯಲ್ಲಿದ್ದರಣಕಾಟೆ ಹದ್ದು ಪರಿಸರ ಸ್ವಚ್ಛತೆಯಲ್ಲಿ ಪ್ರಮುಖಪಾತ್ರ ವಹಿಸಿದ್ದವು ಎಂದೇ ಗುರುತಿಸಿಕೊಂಡಿದ್ದರಣಕಾಟೆ ಹದ್ದುಗಳ ಸಂತತಿ ಅಭಿವೃದ್ಧಿ ಕಾಣಿಸುತ್ತದೆ ಎಂಬ ನಂಬಿಕೆ ಹೆಚ್ಚಿಸಿದೆ.

ಪರಿಸರ ಸ್ವಚ್ಛತಾ ಕಾರ್ಯ: ರೈತರ ಜಾನುವಾರುಗಳು ಸೇರಿದಂತೆ ಕಾಡು ಪ್ರಾಣಿಗಳು ಸಾವನ್ನಪ್ಪಿದ್ದರೆ ಅವುಗಳನ್ನ ಹಳ್ಳಕೊಳ್ಳ, ಬಯಲು ಪ್ರದೇಶಗಳಲ್ಲಿ ಬಿಸಾಕುತ್ತಿದ್ದರು. ಅದರಿಂದ ಹಲವು ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇತ್ತು, ಆದರೆ, ಆ ಸತ್ತಪ್ರಾಣಿಗಳ ಮಾಂಸ ತಿಂದು ಸ್ವತ್ಛಗೊಳಿಸಿ ಯಾವುದೇಸಾಂಕ್ರಾಮಿಕ ರೋಗ ಹರಡದಂತೆ ಪರಿಸರಮತ್ತು ಜನಸಾಮಾನ್ಯರ ರಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದವು.

ರಣ ಹದ್ದು ಸಂತತಿ ಕ್ಷೀಣಿಸಲು ಕಾರಣ: ರೈತರು ಹೆಚ್ಚು ರಾಸು ಸಾಗಾಣೆ ಮಾಡುತ್ತಿದ್ದರು. ಅನಾರೋಗ್ಯಕ್ಕೊಳಗಾದಾಗ ಅದಕ್ಕೆ ಔಷಧೋಪಚಾರ ಮಾಡುವ ಸಂಧರ್ಭದಲ್ಲಿ ವಿಡೈಕ್ಲೋಪಿನಾಕ್‌ವಿ ಎಂಬ ಚುಚ್ಚು ಮದ್ದನ್ನು ಅತಿ ಹೆಚ್ಚು ಪ್ರಮಾಣದಲ್ಲಿ ಬಳಕೆ ಮಾಡುತ್ತಿದ್ದರು. ಆರೋಗ್ಯ ಸುಧಾರಣೆಯಾಗದೆ ರಾಸುಗಳುಸತ್ತರೆ ಅದನ್ನ ಹಳ್ಳಕೊಳ್ಳಗಳಿಗೆ ಹಾಕಲಾಗುತ್ತಿತ್ತು. ಅದರ ಮಾಂಸ ತಿಂದ ರಣಕಾಟೆ ಹದ್ದುಗಳು ಕಿಡ್ನಿ ವೈಫಲ್ಯದಿಂದಾಗಿ ಸಾವನ್ನಪ್ಪುವ ಮೂಲಕ ಬೆರಳೆಣಿಕೆಯಷ್ಟಾಗಿವೆ.

ವರ್ಷಕ್ಕೊಮ್ಮೆ ಮೊಟ್ಟೆ ವರ್ಷಕ್ಕೆ ಒಮ್ಮೆ ಮಾತ್ರ ಒಂದು ಮೊಟ್ಟೆ ಇಡುವುದು ಉದ್ದ ಕೊಕ್ಕಿನ ರಣಹದ್ದುಗಳವಿಶೇಷತೆ. ಇದರ ಜೀವಿತಾವದಿ 35ರಿಂದ 40 ವರ್ಷ. ಇವು ಇದೀಗ ತೀರಾ ಅಳಿವಿನಂಚಿನಲ್ಲಿವೆ. ಸದ್ಯ ಕಳೆದ ಮಾರ್ಚ್‌ ಅಂತ್ಯಕ್ಕೆ ಏಳುಉದ್ದಕೊಕ್ಕಿನ ರಣ ಹದ್ದು ಕಂಡು ಬಂದಿದ್ದು, ರಣಹದ್ದು ವನ್ಯಜೀವಿ ಧಾಮ ಅಲ್ಲದೆ ನಮ್ಮ

ಸುತ್ತಮುತ್ತಲ ಇತರ ಬೆಟ್ಟಗುಡ್ಡ ಪ್ರದೇಶದಲ್ಲಿ ಕಂಡು ಬರುವ ಇನ್ನೊಂದು ಜಾತಿಯ ರಣಹದ್ದು ಕುಂಬಾರ್‌ಕೋಳಿ(ಈಜಿಫ್ರೀಯನ್‌ ವೊಲ್ಚರ್‌) 25ಕ್ಕೂ ಹೆಚ್ಚು ಕಾಣಸಿಗುತ್ತವೆ.

ಆಹಾರ ಸಮಸ್ಯೆ ಮತ್ತು ಹವಾಮಾನ ವೈಪರಿತ್ಯದಿಂದ ಮೊಟ್ಟೆಗಳಿನ್ನಿಟ್ಟರುಮರಿಯಾಗದಿರುವ ಸಮಸ್ಯೆ ಇತ್ತು. ಇದೀಗಕಳೆದ ಐದು ವರ್ಷಗಳ ಬಳಿಕ ಉದ್ದಕೊಕ್ಕಿನರಣಹದ್ದು ಮರಿ ಮಾಡಿದ್ದು ಅದರ ಸಂತತಿ ಮುಂದಿನ ಪೀಳಿಗೆಗೂ ಕೊಡುಗೆಯಾಗಿದೊರಕುತ್ತದೆ ಎಂಬ ಖುಷಿ ತಂದಿದೆ. ಕಳೆದ ಕೆಲವು ವರ್ಷಗಳ ಹಿಂದೆಯೇ ಬಜೆಟ್‌ನಲ್ಲಿಹಣ ಮೀಸಲಿಟ್ಟು ರಣಹದ್ದುಸಂತಾನೋತ್ಪತ್ತಿ ಅಭಿವೃದ್ಧಿ ಕೆಂದ್ರ ಸ್ಥಾಪನೆಗೆ ಸರ್ಕಾರ ಆದೇಶಿಸಿತ್ತು. ಆದರೆ, ಇನ್ನು ಕಾರ್ಯಗತವಾಗಿಲ್ಲ ಎಂಬ ಕೊರಗು ಕಾಡುತ್ತಿದೆ. ಬಿ. ಶಶಿಕುಮಾರ್‌, ಕರ್ನಾಟಕ ರಣಹದ್ದು ಸಂರಕ್ಷಣಾ ಟ್ರಸ್ಟ್‌ ಕಾರ್ಯದರ್ಶಿ

ರಾಮದೇವರ ಬೆಟ್ಟದಲ್ಲಿ ಮಾಡಬೇಕಿದ್ದ ರಣಹದ್ದು ಸಂತಾನೋತ್ಪತ್ತಿ ಅಭಿವೃದ್ಧಿ ಕೆಂದ್ರ ಬನ್ನೇರುಘಟ್ಟದಲ್ಲಿಮಾಡಲು ಚಿಂತಿಸಲಾಗಿತ್ತು. ಕಳೆದ ಒಂದುವರ್ಷದಿಂದ ಕಾಮಗಾರಿ ನಡೆಯುತ್ತಿದ್ದು,ರಾಮದೇವರ ಬೆಟ್ಟ ಮರಿಗಳ ಬಿಡುಗಡೆಕೇಂದ್ರ ಮಾಡಲಾಗುತ್ತದೆ. ಇದರಿಂದ ರಣಹದ್ದು ಸಂತತಿ ಅಭಿವೃದ್ಧಿಯಾಗಲಿದೆ. ಕಿರಣ್‌ ಕುಮಾರ್‌, ವಲಯ ಅರಣ್ಯಾಧಿಕಾರಿ ರಾಮನಗರ

 

ಎಂ. ಎಚ್‌. ಪ್ರಕಾಶ್‌, ರಾಮನಗರ

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ

Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ

DK Shivakumar: ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ನೀನೇನು ಮಾಡಿದ್ದೆ ಹೇಳಪ್ಪಾ?- ಡಿಕೆಶಿ

DK Shivakumar: ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ನೀನೇನು ಮಾಡಿದ್ದೆ ಹೇಳಪ್ಪಾ?- ಡಿಕೆಶಿ

10-ramanagara

Ramanagara: ಬೆಂ.-ಮೈ. ಎಕ್ಸ್‌ ಪ್ರೆಸ್‌ವೇ ಬಿಡದಿ ಎಕ್ಸಿಟ್‌ ಬಂದ್‌

Ramanagara: ಕೆಎಂಎಫ್‌ ಅಧ್ಯಕ್ಷ ಸ್ಥಾನಕ್ಕೆ ಡಿಕೆಸು ಕಣ್ಣು ?

Ramanagara: ಕೆಎಂಎಫ್‌ ಅಧ್ಯಕ್ಷ ಸ್ಥಾನಕ್ಕೆ ಡಿಕೆಸು ಕಣ್ಣು ?

3-bank

Kudur: ಬಿಡಿಸಿಸಿ ಬ್ಯಾಂಕ್‌ನಲ್ಲಿರುವ ಚಿನ್ನದ ಅವ್ಯವಹಾರದ ಆರೋಪ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.