ನೀರಾವರಿ ಯೋಜನೆ ಪೂರ್ಣಗೊಳಿಸಿದ ವೆಂಕಟೇಗೌಡ
Team Udayavani, Jun 28, 2023, 1:36 PM IST
ಚನ್ನಪಟ್ಟಣ: ತಾಲೂಕಿನಲ್ಲಿ ನೀರಾವರಿ ಯೋಜ ನೆಗಳು ಸಮರ್ಪಕವಾಗಿ ಸಾಕಾರಗೊಳ್ಳುವಲ್ಲಿ ತಮ್ಮದೇ ಆದ ಗಣನೀಯ ಪಾತ್ರ ಹಾಗೂ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ ತಾಲೂಕಿನ ಎ.ವಿ.ಹಳ್ಳಿ ಗ್ರಾಮದ ವೆಂಕಟೇಗೌಡರು, ಕಾವೇರಿ ನೀರಾವರಿ ನಿಗಮ ನಿಯಮಿತ, ಮಂಚನಬೆಲೆ ಜಲಾಶಯದ ಕಾರ್ಯಪಾಲಕ ಎಂಜಿನಿಯರ್ ವೃತ್ತಿಯಿಂದ ನಿವೃತ್ತಿಯಾಗಿದ್ದಾರೆ.
ರಾಜ್ಯವೇ ಚನ್ನಪಟ್ಟಣ ತಾಲೂಕಿನ ಕಡೆಗೆ ತಿರುಗಿ ನೋಡುವಂತೆ ನೀರಾವರಿ ಕ್ಷೇತ್ರವನ್ನು ಅಭಿವೃದ್ಧಿ ಮಾಡಿ ಬರಗಾಲದಲ್ಲೂ ಕೆರೆ-ಕಟ್ಟೆಗೆ ನೀರು ತುಂಬಿಸಿ ಬಾಗಿನ ಅರ್ಪಿಸುವ ಜತೆಗೆ ಬತ್ತಿಹೋಗಿದ್ದ ಕೊಳವೆ ಬಾವಿಗಳಲ್ಲಿ ಬೊಗಸೆ ಇಟ್ಟರೆ, ನೀರು ಸಿಗುವಂತೆ ಮಾಡಿದವರು. ಕ್ಷೇತ್ರಕ್ಕೆ ನೀರಾವರಿ ಯೋಜನೆ ರೂಪು – ರೇಷೆಯಿಂದ ಹಿಡಿದು ಯೋಜನೆಯನ್ನು ಸಂಪೂರ್ಣಗೊಳಿಸುವ ಹಂತದವರೆಗೆ ಶ್ರಮಿಸಿ ದವರಲ್ಲಿ ತಾಲೂಕಿನ ಎ.ವಿ.ಹಳ್ಳಿ ಎಂಜಿನಿಯರ್ ಮೊದಲಿಗರು. ವೆಂಕಟೇಗೌಡರು ತಾಲೂಕಿನಲ್ಲಿ ಕಾವೇರಿ ನೀರಾವರಿ ನಿಗಮದಲ್ಲಿ ಜೆಇ, ಎಇ, ಎಇಇ ಆಗಿ ಸೇವೆ ಸಲ್ಲಿಸಿ ಬಳಿಕ ವಿವಿಧ ಇಲಾಖೆ ಗಳಲ್ಲಿ ಇಇ ಆಗಿ ಸೇವೆ ಸಲ್ಲಿಸಿದ್ದಾರೆ.
ಪ್ರಸ್ತುತ ರಾಮನಗರ ಜಿಲ್ಲಾ ಕಾವೇರಿ ನೀರಾವರಿ ನಿಗಮದ ಮಂಚನಬೆಲೆ ಜಲಾಶಯದ ಕಾರ್ಯಪಾಲಕ ಎಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ದರು. ಕಣ್ವ-ಶಿಂಷಾ ಕುಡಿವ ನೀರು ಯೋಜನೆಗೆ ಹೆಗಲು ಕೊಟ್ಟು ಪೈಪ್‌ಲೈನ್ ಕಾಮಗಾರಿಯಿಂದ ಮೋಟಾರ್ ಅಳವಡಿಕೆವರೆಗೆ ಗುಣಮಟ್ಟ ಕಾಯ್ದು ಕೊಳ್ಳುವ ಜತೆಗೆ ತನ್ನ ತಾಲೂಕಿನ ಯೋಜನೆ ತಮ್ಮ ಕನಸು ಎಂಬಂತೆ ನಿಷ್ಠೆಯಿಂದ ಹಗಲಿರುಳು ಶ್ರಮಿಸಿದರು.
ಸತ್ತೇಗಾಲ ಯೋಜನೆ ರೂವಾರಿ: ತಾಲೂಕಿನ ಕಣ್ವಾ-ಶಿಂಷಾ ಕುಡಿವ ನೀರು ಯೋಜನೆ ಸಾಕಾರ ಗೊಂಡ ಬಳಿಕ, ಸತ್ತೇಗಾಲ ಯೋಜನೆ ರೂಪಿಸಿದ್ದು ಇವರೇ. 2018ರಲ್ಲಿ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಅನುಮತಿ ಪಡೆಯಲು ಈ ಯೋಜನೆ ಮಾಹಿತಿಯನ್ನು ಡಿಕೆಶಿ ಸಹೋದರರಿಗೆ ನೀಡುವ ಮೂಲಕ 540 ಕೋಟಿ ರೂ.ವೆಚ್ಚದ ಸತ್ತೇಗಾಲ ಯೋಜನೆಗೆ ನೀರಾವರಿ ಸಚಿವರಾಗಿದ್ದ ಡಿಕೆಶಿ ಅವರಿಂದಲೇ ಡಿಪಿಆರ್ ಮಾಡಿಸಿ ಸಿಎಂ ಆಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರಿಂದ ಅನು ಮೋದನೆ ಮಾಡಿಸಿ ಅನುದಾನ ಬಿಡುಗಡೆ ಮಾಡಿಸಿ ಕಾಮಗಾರಿಗೂ ಚಾಲನೆ ನೀಡಿದ್ದರು. ಇದೀಗ ಶೇ.60 ಕಾಮಗಾರಿ ಮುಗಿದಿದ್ದು ವರ್ಷಾಂತ್ಯದಲ್ಲಿ ಪೂರ್ಣಗೊಳ್ಳುವ ಸಾಧ್ಯತೆಯಿದೆ.
ರಾಜ್ಯದಲ್ಲಿ ಮೊದಲಿಗೆ ಏತ ನೀರಾವರಿ ಮೂಲಕ ಕೆರೆ ತುಂಬಿಸಿದ ಕೀರ್ತಿ ರಾಮನಗರ ಜಿಲ್ಲೆ ಯ ಚನ್ನಪಟ್ಟಣ ತಾಲೂಕಿಗೆ ಸಲ್ಲುತ್ತದೆ. ಇಲ್ಲಿಯ ಕಣ್ವ ಮತ್ತು ಗರಕಹಳ್ಳಿ ಏತ ನೀರಾವರಿ ಯೋಜನೆ ನಾಡಿಗೆ ಮಾದರಿ ಯಾಗಿವೆ. ಗರಕಹಳ್ಳಿ ಯೋಜನೆಯಡಿ 14, ಕಣ್ವ ಯೋಜನೆಯಡಿ 106 ಕೆರೆಗೆ ನೀರು ಹರಿಸಲಾಗಿದೆ. ಕಣ್ವದ 86 ಕೆರೆ ಭರ್ತಿಯಾಗಿದೆ. ಇದು ಸಾಕಾರಗೊ ಳ್ಳಲು ಸರ್ವರೂ ಸಹಕಾರ ನೀಡಿದ್ದಾರೆ. ಈ ಹೊಣೆಗಾರಿಕೆ ದೊರೆತದ್ದು ನನ್ನ ಜೀವಮಾನದ ಸುಕೃತವೇ ಸರಿ. ●ಎ.ವಿ.ಹಳ್ಳಿ ವೆಂಕಟೇಗೌಡ, ಕಾರ್ಯ ಪಾಲಕ ಎಂಜಿನಿಯರ್, ಕಾವೇರಿ ನೀರಾವರಿ ನಿಗಮ ನಿಯಮಿತ, ಮಂಚನಬೆಲೆ ಜಲಾಶಯ
-ಎಂ.ಶಿವಮಾದು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಕೋಳಿ ಅಂಕಕ್ಕೆ ಪೊಲೀಸ್ ದಾಳಿ: ಗುರಿಕಾರರಿಂದ ವ್ಯಾಘ್ರ ಚಾಮುಂಡಿ ದೈವಕ್ಕೆ ಮೊರೆ
National Mourning: ಮಂಗಳೂರಿನ ಬೀಚ್ ಉತ್ಸವ ಮುಂದೂಡಿಕೆ
Clown Kohli: ವಿರಾಟ್ ಕೊಹ್ಲಿಗೆ ಅವಮಾನ ಮಾಡಿದ ಆಸೀಸ್ ಮಾಧ್ಯಮಗಳು!
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.