ಬಾಲ್ಯವಿವಾಹ ತಡೆಯುವುದು ನಮ್ಮ ಕರ್ತವ್ಯ
Team Udayavani, Mar 8, 2019, 7:16 AM IST
ಕನಕಪುರ: ವಿಶ್ವದಲ್ಲಿ ಹೆಚ್ಚಿನ ಸಂಖ್ಯೆಯ ಮಕ್ಕಳು ಬಾಲ್ಯವಿವಾಹಕ್ಕೆ ಒಳಗಾಗುತ್ತಿದ್ದಾರೆ ಎಂಬ ಅಂಕಿ ಅಂಶಗಳನ್ನು ವಿಶ್ವಸಂಸ್ಥೆ ತನ್ನ ವರದಿಯಲ್ಲಿ ದಾಖಲಿಸಿದೆ. ಇದು ಭಾರತದಲ್ಲೂ ಅದರಲ್ಲೂ ಗ್ರಾಮೀಣ ಭಾಗದಲ್ಲಿ ಹೆಚ್ಚು ಕಾಣಸಿಗುತ್ತವೆ. ಈ ಬಾಲ್ಯವಿವಾಹವನ್ನು ತಡೆಯುವುದು ನಮ್ಮ ಕರ್ತವ್ಯವಾಗಿದೆ ಎಂದು ತಾಪಂ ಇಒ ಶಿವರಾಮು ಹೇಳಿದರು.
ನಗರದ ಶಿಕ್ಷಕರ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ರಾಮನಗರ, ಶಿಶು ಅಭಿವೃದ್ಧಿ ಯೋಜನೆ ಕನಕಪುರ ಹಾಗೂ ನ್ಯೂ ಡ್ರೀಮ್ ಫೌಂಡೇಷನ್ (ರಿ) ಸಹಯೋಗದಲ್ಲಿ ನಡೆದ ಬಾಲ್ಯವಿವಾಹದ ನಿಷೇಧದ ಬಗ್ಗೆ ಜಾಗೃತಿ ಮೂಡಿಸುವ ಅರಿವಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಸ್ಕೃತಿ ಮತ್ತು ಸಂಪ್ರದಾಯದ ಭಾಗವಾಗಿರುವ ಭಾತರದಲ್ಲಿ ಔಪಚಾರಿಕ ಮತ್ತೂಂದು ಅನೌಪಚಾರಿ ಮದುವೆ ನಡೆಯುತ್ತವೆ.
ಔಪಚಾರಿಕ ಎಂದರೆ ಪೋಷಕರು ಹಾಗೂ ಕುಟುಂಬದವರು ಸೇರಿ ಮಾಡುವುದು. ಅನೌಪಚಾರಿಕ ಎಂದರೆ ಅಪ್ರಾಪ್ತ ವಯಸ್ಸಿನ ಮಕ್ಕಳು ಆಕರ್ಷಣೆಗೆ ಒಳಗಾಗಿ ಮದುವೆ ಮಾಡಿಕೊಳ್ಳುವುದು. ಇದರಿಂದಲೂ ಸಹ ಬಾಲ್ಯವಿವಾಹ ನಡೆಯುತ್ತವೆ. ಬಾಲ್ಯವಿವಾಹವನ್ನು ತಡೆಗಟ್ಟಲು ವಿಶ್ವ ಸಂಸ್ಥೆಯ ಗಂಡು, ಹಣ್ಣಿಗೆ ಮದುವೆ ವಯಸ್ಸನ್ನು ನಿಗದಿ ಮಾಡಿದೆ. ಅದಕ್ಕಿಂತ ಕಡಿಮೆ ವಯಸ್ಸಿನಲ್ಲಿ ಮದುವೆ ಮಾಡಬಾರದು. ಯಾವುದೇ ಗಂಡು ಅಥವಾ ಹೆಣ್ಣು ಮಕ್ಕಳು ಮಾನಸಿಕ ಮತ್ತು ಶಾರೀರಿಕವಾಗಿ ಸಿದ್ಧರಾಗದೇ ಮದುವೆ ಮಾಡಬಾರದು ಎಂದರು.
ಬಾಲ್ಯ ವಿವಾಹದಿಂದ ಮಕ್ಕಳ ಭವಿಷ್ಯ ಹಾಳು: ಗ್ರಾಮೀಣ ಭಾಗದಲ್ಲಿ ಪೋಷಕರು ತಮ್ಮ ಜವಾಬ್ದಾರಿ ನೆಪದಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳ ಮದುವೆಗೆ ನಿಶ್ಚಯಿಸುತ್ತಾರೆ. ಇದರಿಂದ ಕಾನೂನು ಉಲ್ಲಂಘನೆಯಾಗುತ್ತದೆ. ಇಂತಹ ಘಟನೆಗಳು ಗಮನಕ್ಕೆ ಬಂದರೆ ಪೋಷಕರಿಗೆ ಅರಿವು ಮೂಡಿಸಬೇಕು. ಇದರಿಂದ ಅವರ ಮಕ್ಕಳ ಭವಿಷ್ಯ ನಾಶವಾಗುವ ಜೊತೆಗೆ ಸಮಾಜಕ್ಕೆ ಅನಾರೋಗ್ಯ ಪ್ರಜೆಗಳನ್ನು ನೀಡಿದಂತಾಗುತ್ತದೆ ಎಂದು ಹೇಳಿದರು.
ಬಾಲ್ಯ ವಿವಾಹ ತಡೆಗೆ ವಿವಿಧ ಇಲಾಖೆ ಶ್ರಮ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ನಿರೂಪಣಾ ಅಧಿಕಾರಿ ಗೀತಾ ಪಾಟೀಲ್ ಮಾತನಾಡಿ, ಬಾಲ್ಯ ವಿವಾಹ ಪದ್ಧತಿಯನ್ನು ತಡೆಗಟ್ಟಲು ಸರ್ಕಾರ ರೂಪಿಸಿರುವ ಕಾಯ್ದೆಗಳ ಅನುಷ್ಠಾನವಾಗಬೇಕು. ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪಂಚಾಯತ್ ರಾಜ್ ಇಲಾಖೆ ಹಾಗೂ ಇನ್ನಿತರ ಇಲಾಖೆ ಮತ್ತು ಸ್ವಯಂಸೇವಾ ಸಂಸ್ಥೆಗಳು ಕಾಯ್ದೆ ಜಾರಿಗೆ ಶ್ರಮವಹಿಸಿ ಕಾರ್ಯನಿರ್ವಹಿಸುತ್ತಿವೆ. ಆದರೂ ಕೂಡ ಬಾಲ್ಯವಿವಾಹ ಪದ್ಧತಿಯನ್ನು ತಡೆಯಲು ಸಾಧ್ಯವಾಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಜನನದ ದಿನಾಂಕದ ಬಗ್ಗೆ ಜಾಗೃತರಾಗಿ: ತಾಪಂ ಅಧ್ಯಕ್ಷ ಧನಂಜಯ ಮಾತನಾಡಿ, ನಮ್ಮ ಗ್ರಾಮೀಣ ಭಾಗದಲ್ಲಿ ಸಂಸ್ಕೃತಿ ಮತ್ತು ಸಂಪ್ರದಾಯದ ಮೂಲಕ ಮದುವೆ ಮಾಡುತ್ತಿದ್ದು, ಮದುವೆ ನಿಗದಿ ಮತ್ತು ಮಾಡಿಸುವ ಹೊಣೆ ಒತ್ತುಕೊಳ್ಳುವ ಪುರೋಹಿತರು ಗಂಡು ಮತ್ತು ಹೆಣ್ಣಿನ ಜಾತಕಗಳನ್ನು ನೋಡದೆ ಮದುವೆ ಮಾಡುವುದಿಲ್ಲ. ಅಂತಹ ಸಮಯದಲ್ಲಿ ಜನನದ ದಿನಾಂಕದ ಬಗ್ಗೆ ಜಾಗೃತರಾದರೆ ಬಹುತೇಕ ಬಾಲ್ಯವಿವಾಹ ತಡೆಯಲು ಸಾಧ್ಯ ಎಂದರು.
ಕಾನೂನು ಎಲ್ಲರಿಗೂ ಅನ್ವಯ: ವಕೀಲ ಎಚ್.ಡಿ.ಲಿಂಗರಾಜು ಮಾತನಾಡಿ, ಬಾಲ್ಯವಿವಾಹ ಪದ್ಧತಿ ತಡೆಗೆ ಬಾಲ್ಯವಿವಾಹ ಅಧಿನಿಯಮ 2006ರ ಪ್ರಕಾರ ಭಾರತದ ಗಣರಾಜ್ಯದ 57ನೇ ವರ್ಷದಲ್ಲಿ ಜಾರಿಗೆ ಬಂದಿದೆ. ಇದು ಜಮ್ಮು ಮತ್ತು ಕಾಶ್ಮೀರ ರಾಜ್ಯ ಹೊರತುಪಡಿಸಿ ಭಾರತ ದೇಶ ಮತ್ತು ಭಾರತದ ಪ್ರಜೆಗಳು ಇತರೆ ದೇಶದಲ್ಲಿ ನೆಲೆಸಿರುವ ಪ್ರಜೆಗಳಿಗೂ ಅನ್ವಯವಾಗುತ್ತದೆ.
ಬಾಲ್ಯವಿವಾಹಕ್ಕೆ ಒಳಗಾದ ಹೆಣ್ಣು ಮಗಳಿಗೆ ವಸತಿ ಮತ್ತು ಜೀವನಾಂಶದ ಬಗ್ಗೆ, ಬಾಲ್ಯ ವಿವಾಹದಿಂದ ಹುಟ್ಟಿದ ಮಕ್ಕಳ ಜೀವನಾಂಶ ಮತ್ತು ರಕ್ಷಣೆ, ಜಿಲ್ಲಾ ನ್ಯಾಯಾಲಯವು ಬಾಲ್ಯವಿವಾಹದ ಬಗ್ಗೆ ತೆಗೆದುಕೊಳ್ಳುವ ತಿರ್ಮಾನಗಳ ಬಗ್ಗೆ. ಬಾಲ್ಯವಿವಾಹಕ್ಕೆ ಭಾಗಿಯಾದವರಿಗೆ ದಂಡ ಮತ್ತು ಶಿಕ್ಷೆಯ ಬಗ್ಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ತಾಲೂಕು ಶಿಶು ಅಭಿವೃದ್ಧಿ ಅಧಿಕಾರಿ ಬಿ.ಎಲ್ ಸುರೇಂದ್ರ, ನ್ಯೂ ಡ್ರೀಮ್ ಫೌಂಡೆಷನ್ ಅಧ್ಯಕ್ಷ ಬಿ.ಎಸ್.ದೊಡ್ಡಿ ಜೈರಾಮೇಗೌಡ, ಸಂಪನ್ಮೂಲ ವ್ಯಕ್ತಿಗಳಾದ ಗೋವಿಂದು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!
ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.