ಜಂಬೂ ನೇರಳೆ ಹಣ್ಣಿಗೆ ಬೇಡಿಕೆ ಹೆಚ್ಚಳ
Team Udayavani, Jun 8, 2022, 3:11 PM IST
ಮಾಗಡಿ: ಇತ್ತೀಚಿನ ದಿನಗಳಲ್ಲಿ ಜಂಬೂ ನೇರಳೆ ಹಣ್ಣಿಗೆ ಬೇಡಿಕೆ ಹೆಚ್ಚಾಗಿದೆ. ಇದು ವರ್ಷಕ್ಕೊಮ್ಮೆ ಸಿಗುವ ಅಪರೂಪ ಹಣ್ಣು. ಜಂಬೂ ನೇರಳೆ ತಿನ್ನುವುದರಿಂದ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರಲಿದ್ದು, ಔಷಧಿ ಗುಣ ಹೆಚ್ಚಿದೆ ಎಂಬ ಹಿನ್ನೆಲೆಯಲ್ಲಿ ಭಾರಿ ಬೇಡಿಕೆ ಕಂಡು ಬಂದಿದೆ.
ಒಂದು ಕೆ.ಜಿ ಜಂಬೂ ನೇರಳೆ ಹಣ್ಣು ಸುಮಾರು 150ರಿಂದ 200 ರೂ.ಗೆ ಮಾರಾಟವಾಗುತ್ತಿದೆ. ನೇರಳೆ ಹಣ್ಣಿ ಸುಗ್ಗಿ ಆರಂಭ: ಈಗ ಮಾರುಕಟ್ಟೆಯಲ್ಲಿ ಜಂಬೂ ನೇರಳೆಗೆ ಭಾರಿ ಬೇಡಿಕೆ ಕಂಡು ಬಂದಿದ್ದು, ಮಾವಿನ ಫಸಲಿನ ಜೊತೆ ನೇರಳೆ ಹಣ್ಣಿಗೂ ಬೇಡಿಕೆ ಹೆಚ್ಚಾಗಿದ್ದು, ನೇರಳೆ ಹಣ್ಣಿ ಸುಗ್ಗಿ ಆರಂಭವಾಗಿರುವುದರಿಂದ ರೈತರಲ್ಲಿ ಮಂದಹಾಸ ಮೂಡಿಸಿದೆ.
ಸಾಮಾಜಿಕ ಅರಣ್ಯ ಇಲಾಖೆಯವರು ತಾಲೂಕಿನ ಪ್ರಮುಖ ರಸ್ತೆ ಬದಿ ಮತ್ತು ಸಾವನದುರ್ಗ ಅರಣ್ಯ ಪ್ರದೇಶದಲ್ಲೂ ಜಂಬೂ ನೇರಳೆ ಮರಗಳನ್ನು ಬೆಳೆಸಿದ್ದಾರೆ. ಅಲ್ಲದೆ, ಕೆಲವು ಕೃಷಿಕರು ತಮ್ಮ ಜಮೀನಿನಲ್ಲಿ ಉತ್ತಮ ಕಸಿಯ ನೇರಳೆ ಗಿಡಗಳನ್ನು ಹಾಕಿದ್ದು, 3 ವರ್ಷಕ್ಕೆ ಫಸಲು ಬಿಡಲು ಆರಂಭವಾಗಿರುವುದರಿಂದ ಹಣ್ಣಿಗೆ ಹೆಚ್ಚಿನ ಬೇಡಿಕೆಯಿದೆ. ಮೊದಲು ಉಚಿತವಾಗಿ ಹಣ್ಣುಗಳು ಸಿಗುತ್ತಿತ್ತು. ಈಗ ಔಷಧಿ ಗುಣ ಇರುವುದು ಪತ್ತೆಯಾಗಿರುವುದರಿಂದ ಹಣ್ಣಿಗೆ ಬೇಡಿಕೆ ಹೆಚ್ಚಾಗಿದೆ.
ಮಾವು, ಹುಣಸೆಗೆ ಪರ್ಯಾಯ ಬೆಳೆ: ನೇರಳೆ ಹಣ್ಣು ವ್ಯಾಪಾರಿಗಳು ಖಾಸಗಿ ವ್ಯಕ್ತಿಗಳಿಂದ ಫಸಲು ಖರೀದಿಸಿ, ಹಗಲು ರಾತ್ರಿ ಕಾವಲಿದ್ದು, ಉದ್ದನೆಯ ಬಿದಿರಿನ ಸಹಾಯದಿಂದ ಮರ ಹತ್ತಿ ಹಣ್ಣು ಬಿಡಿಸಿ ಮಾರುಕಟ್ಟೆಗೆ ಕೊಂಡೋಯ್ದು ಮಾರಾಟ ಮಾಡುತ್ತಾರೆ. ದೊಡ್ಡ ಗಾತ್ರದ ಒಂದು ಮರದ ಫಸಲು 60ರಿಂದ 80 ಸಾವಿರ ರೂ.ಗೆ ಮಾರಾಟವಾಗಿದ್ದು, ಕೆಲವು ರೈತರು ಮಾವು ಹಾಗೂ ಹುಣಸೆಗೆ ಪರ್ಯಾಯವಾಗಿ ಜಂಬೂ ನೇರಳೆ ಗಿಡ ನೆಟ್ಟು ಬೆಳೆಸುತ್ತಿದ್ದಾರೆ.
ಅಪರೂಪದ ನೇರಳೆ ಹಣ್ಣನ್ನು ನೋಡುತ್ತಿದ್ದಂತೆ ಬಾಯಲ್ಲಿ ನೀರೂರುತ್ತದೆ. ಜ್ಯೂಸ್ ತಯಾರಿಕೆಯಲ್ಲೂ ನೇರಳೆ ಹಣ್ಣನ್ನು ಬಳಸಲಾಗುತ್ತದೆ. ಔಷಧಿ ಗುಣ ಹೆಚ್ಚಾಗಿರುವುದರಿಂದ ಮಧುಮೇಹ ಇರುವವರು ಈ ಹಣ್ಣನ್ನು ಹೆಚ್ಚಾಗಿ ಸೇವಿಸುತ್ತಾರೆ. ಮಾಗಡಿ ಮಾರುಕಟ್ಟೆಯಲ್ಲಿ ನೇರಳೆ ಹಣ್ಣು ಭರ್ಜರಿಯಾಗಿ ವ್ಯಾಪಾರವಾಗುತ್ತಿದ್ದು, ದಿನದಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ
. ಜಂಬೂ ನೇರಳೆಗೆ ಸಾಕಷ್ಟು ಬೇಡಿಕೆಯಿದ್ದು, ಕಳೆದ 3 ವರ್ಷದಿಂದ ನೇರಳೆಯ ವಿವಿಧ ತಳಿಯ ಕಸಿ ಗಿಡಗಳನ್ನು ಸಾಕಷ್ಟು ರೈತರಿಗೆ ನೀಡಿ, ತೋಟಗಳಲ್ಲಿ ಬೆಳೆಸಲಾಗುತ್ತಿದೆ. ಮುಂದಿನ ವರ್ಷ ನಮ್ಮ ತಾಲೂಕಿನಲ್ಲಿ ಸಾಕಷ್ಟು ಫಸಲುಗಳನ್ನು ಕಾಣಬಹುದು. ರೈತರಿಗೆ ಜಂಬೂ ನೇರಳೆ ವರದಾನವಾಗಿದ್ದು, ಸಾಕಷ್ಟು ಹಣ ಗಳಿಸಲು ಉತ್ತಮ ಬೆಳೆಯಾಗಿದೆ. ಮಾರುಕಟ್ಟೆಯಲ್ಲೂ ಜಂಬೂ ನೇರಳೆ ಹಣ್ಣಿಗೆ ಬೇಡಿಕೆಯಿದೆ. –ಕನ್ನಡ ಕುಮಾರ್, ರಾಜ್ಯ ಶ್ರೀಗಂಧ ಮತ್ತು ರಕ್ತ ಚಂದನ ಬೆಳೆಗಾರರ ವ್ಯವಸ್ಥಾಪಕ ನಿರ್ದೇಶಕ
ಮಳೆಗಾಲದಲ್ಲಿ ಗಿಡ ನೆಟ್ಟು ಜಾನುವಾರ ಬಾಯಿ ಹಾಕದಂತೆ ನೋಡಿಕೊಂಡರೆ 2-3 ವರ್ಷದಲ್ಲಿ ಬೆಳೆಯುತ್ತದೆ. ವರ್ಷದಿಂದ ವರ್ಷಕ್ಕೆ ಫಸಲು ಕೂಡ ಹೆಚ್ಚಾಗುತ್ತದೆ. ಹುಳು ಬಾಧೆಗೆ ಒಂದೆರಡು ಸಲ ಔಷಧಿ ಸಿಂಪಡಿಸಿದರೆ ಸಾಕು ಉತ್ತಮ ಬೆಳೆ ಬರುತ್ತದೆ. –ನಾಗರಾಜು, ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ
-ತಿರುಮಲೆ ಶ್ರೀನಿವಾಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Election: ಯೋಗೇಶ್ವರ್ ನಿಂದಿಸಿದ್ದ ಡಿ.ಕೆ.ಸುರೇಶ್ ಆಡಿಯೋ ಎಚ್‌ಡಿಕೆ ಬಿಡುಗಡೆ
Chennapattana By Poll: ಅಳುವ ಗಂಡಸು, ಯಾವತ್ತೂ ನಂಬಬೇಡಿ: ಸಿಎಂ ಸಿದ್ದರಾಮಯ್ಯ
By Election: ಸಿ.ಪಿ.ಯೋಗೇಶ್ವರ್ ಬಾಯಿ ಮಾತಿನ ಭಗೀರಥ: ಎಚ್.ಡಿ.ದೇವೇಗೌಡ ವಾಗ್ದಾಳಿ
By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್.ಡಿ.ದೇವೇಗೌಡ ಗುಡುಗು
By Election: ಮಗನಿಗಾಗಿ ಎಚ್‌ಡಿಕೆ ನಿಮ್ಮ ಊರು ಹುಡುಕಿ ಬರುತ್ತಾರಷ್ಟೇ: ಡಿ.ಕೆ.ಸುರೇಶ್
MUST WATCH
ಹೊಸ ಸೇರ್ಪಡೆ
ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
ಐತಿಹಾಸಿಕ ಮುಡಗೇರಿ ಗ್ರಾಮ ನಿರ್ಲಕ್ಷ್ಯ; ಸೋದೆ ಅರಸರ ಕೋಟೆ ಪಳೆಯುಳಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.