ಬೊಂಬೆನಗರಿಯಲ್ಲಿ ಕಾಮನಹಬ್ಬದ ರಂಗು!

Team Udayavani, Mar 17, 2024, 1:32 PM IST

9

ಚನ್ನಪಟ್ಟಣ: ಬೊಂಬೆನಾಡು ಚನ್ನಪಟ್ಟಣದ ಮಂಡಿಪೇಟೆಯಲ್ಲಿ ಆಚರಿಸುವ ಕಾಮನ ಹಬ್ಬವು ರಾಜ್ಯದಲ್ಲಿಯೇ ಬಲು ವಿಶಿಷ್ಟವಾದುದು.

ಈಗಾಗಲೇ ಬೊಂಬೆನಗರಿಯಲ್ಲಿ ಕಾಮನಹಬ್ಬ ರಂಗೇರಿದ್ದು, ಮಾರ್ಚ್‌ 25ರವರೆವಿಗೂ ವಿಜೃಂಭಣೆಯಿಂದ ನಡೆಯಲಿದೆ.

ಶಿವರಾತ್ರಿ ಅಮಾವಾಸ್ಯೆಯಂದು ಹೊರಗೆ ಕಾಮಣ್ಣನ ಪ್ರತಿಷ್ಠಾಪನೆಯ ಮೂಲಕ ಹಬ್ಬದ ಆಚರಣೆ ಶುರುವಾಗುತ್ತದೆ. ಈ ಕಾಮಣ್ಣನ ಮೂರ್ತಿಯನ್ನು ಪೊರಕೆ ಕಾಮಣ್ಣನೆಂದೂ ಕರೆಯುತ್ತಾರೆ. ಈ ಕಾಮಣ್ಣನ ಮೂರ್ತಿಯನ್ನು ಪೊರಕೆ, ಬಿದಿರಿನ ಮೊರ, ಪುರಿ ಉಂಡೆ, ಬೆರಣಿ ಹಾಗೂ ಹೂವಿನಿಂದ ತಯಾರಿಸುತ್ತಾರೆ.

ಪೊರಕೆ ಕಾಮಣ್ಣನ ಪ್ರತಿಷ್ಠಾಪನೆಯ ನಂತರ ಹೋಳಿ ಹುಣ್ಣಿಮೆವರೆಗೆ ರತಿ ಮನ್ಮಥರ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿ ದಿನಕ್ಕೊಂದು ವೇಷಭೂಷಣದಿಂದ ಅಲಂಕರಿಸಲಾಗುತ್ತದೆ. ಉತ್ಸವದ ಪ್ರತಿದಿನವೂ ಹಬ್ಬದ ಕಳೆ ರಂಗೇರುವಂತೆ ಆಚರಣೆಗಳು ನಡೆಯುತ್ತವೆ.

ಹುಣ್ಣಿಮೆ ಉತ್ಸವ: ಹುಣ್ಣಿಮೆ ದಿನದ ಹಿಂದಿನ ಸಂಜೆ ಕಾಮದೇವನು ಶಿವನಿಗೆ ಹೂಬಾಣ ಬಿಡುವ ಸ್ತಬ್ಧಚಿತ್ರವನ್ನು ವೇದಿಕೆಯಲ್ಲಿ ಸಿದ್ಧಪಡಿಸಿ ಪುರಾ ಣದ ಸನ್ನಿವೇಶ ಮರುಕಳಿಸುವಂತೆ ಪ್ರತಿವರ್ಷವೂ ಸೃಷ್ಟಿಸುವುದು ವಿಶೇಷ. ಅದೇ ದಿನ ಸಂಜೆ ಮೈಸೂರಿನ ದಸರಾ ಜಂಬೂಸವಾರಿ ಹೋಲುವ ರೀತಿಯಲ್ಲಿ ದೇಶೀಯ ಜಂಬೂ ಸವಾರಿಯನ್ನು ಕಾಮದೇವನ ಮೂರ್ತಿಯೊಂದಿಗೆ ಮಾಡಲಾಗುತ್ತದೆ. ಪಟಾವಳಿ ಕಾಮಣ್ಣನ ಚಿತ್ರವೂ ಜತೆಗಿರುತ್ತದೆ. ಸಾಂಸ್ಕೃತಿಕ ಮೆರುಗನ್ನು ಹೆಚ್ಚಿಸುವ ಕರಗ, ಪೌರಾಣಿಕ ವೇಷಭೂಷಣ, ಕತ್ತಿವರಸೆ, ದೊಣ್ಣೆ ವರಸೆ ಮೊದಲಾದ ಮೇಳಗಳೊಂದಿಗೆ ನಗರದ ತುಂಬಾ ನಡೆಯುತ್ತದೆ.

ಕಾಮದಹನ: ಉತ್ಸವ ಸಾಗುತ್ತ ಮುಂದೆ ಹೋದಂತೆ ರಸ್ತೆಯುದ್ದಕ್ಕೂ ಮಜ್ಜಿಗೆ ಪಾನಕ ಸಿಹಿತಿಂಡಿ ಪ್ರಸಾದಗಳನ್ನು ತಮ್ಮ ತಮ್ಮ ಮನೆಗಳ ಮುಂದೆ ವಿತರಿಸಿ ಜನರ ದಣಿವು ನಿವಾರಿಸುತ್ತಾರೆ. ಹೀಗೆ ಕಾಮರತಿಯ ಉತ್ಸವದ ಮೆರವಣಿಗೆ ಮುಗಿಸಿ ಸ್ಥಳಕ್ಕೆ ಬಂದ ನಂತರ ದಹನ ಮಾಡುವ ಜಾಗದಲ್ಲಿ ಕೊರಕಿ ಕಾಮಣ್ಣನನ್ನು ನಿಲ್ಲಿಸಿ ಅದಕ್ಕೆ ಕಟ್ಟಿಗೆ ಸೌದೆ, ಬೆರಣಿ, ಹಳೆ ಚಾಪೆ, ಒಣಗರಿ ಹಾಕಿ ಕಾಮದಹನಕ್ಕೆ ಜಾಗ ಸಿದ್ಧಪಡಿಸುತ್ತಾರೆ. ಕಾಮನ ಉತ್ಸವ ಮಂಟಪಕ್ಕೆ ಪೂಜೆ ಸಲ್ಲಿಸಿ ಕಾಮನ ಶಿರವನ್ನು ತಕ್ಷಣ ಅಲ್ಲಿಂದ ತೆಗೆದು ಕೊಂಡು ಹೋಗುತ್ತಾರೆ. ಅನಂತರ ಪಟಾವಳಿ ಕಾಮಣ್ಣನ ಚಿತ್ರವನ್ನು ಉತ್ಸವ ಮಂಟಪದಿಂದ ತೆಗೆದು ದಹನಕ್ಕೆ ಸಿದ್ಧಪಡಿಸಿರುವ ಜಾಗದ ಸುತ್ತ ಸುತ್ತು ಹಾಕಿ ಅದನ್ನು ದಹನ ಜಾಗಕ್ಕೆ ಸೇರಿಸುತ್ತಾರೆ. ಅದೇ ಸಮಯಕ್ಕೆ ಕಾಮನ ಅಣಕು ಶವಯಾತ್ರೆ ಮಾಡಿ ದಹನ ಮಾಡುವ ಮುನ್ನ ಶಾಸ್ತ್ರಾನುಸಾರ ಚಟ್ಟ ಸಿದ್ಧಪಡಿಸುತ್ತಾರೆ. ದಹನದ ಜಾಗದಲ್ಲಿ ಪೊರಕೆ ಕಾಮಣ್ಣ ಹಾಗೂ ಪಟಾವಳಿ ಕಾಮಣ್ಣನ ಚಿತ್ರಪಟವನ್ನು ಕಾಮನ ಪ್ರತಿರೂಪವಾಗಿ ಇಟ್ಟು ಅದಕ್ಕೆ ಬೆಂಕಿ ಹಚ್ಚಿ ದಹಿಸುತ್ತಾರೆ. ಇದು ಕಾಮದಹನದ ಸಂಕೇತ.

ಮರುಜನ್ಮ ತಾಳುವ ಪ್ರತೀಕ: ಹುಣ್ಣಿಮೆ ಚಂದ್ರನ ಬೆಳಕಲ್ಲಿ ರತಿ ತನ್ನ ಪತಿ ಕಾಮದೇವನನ್ನು ಕಳೆದುಕೊಂಡು ದುಖಃಭರಿತಳಾಗಿ ತನ್ನ ಪತಿಗೆ ಮರುಜನ್ಮ ನೀಡಿ ಎಂದು ಶಿವನಲ್ಲಿ ಬೇಡುವ ಹಾಗೆ ಬಿಳಿ ಸೀರೆ ಉಡಿಸಿ, ತಮಟೆ, ಬ್ಯಾಂಡ್‌, ಭಜಂತ್ರಿಗಳ ಸದ್ದಿನ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗುತ್ತದೆ. ಶಿವನ ಅನುಗ್ರಹ ಪಡೆದು ಕಾಮದೇವನು ಮರುಜನ್ಮ ತಾಳುವ ಕಥೆಯ ಪ್ರತೀಕವಾಗಿ ಹುಣ್ಣಿಮೆಯ ಮಾರನೇ ದಿನ ವಿಜಯೋತ್ಸವ ಆಚರಿಸುವ ಪದ್ಧತಿ ಇಲ್ಲಿದೆ. ಈ ದಿನ ಬಣ್ಣ ಬಣ್ಣದ ಓಕುಳಿ ಹರಿಸಿ ಇಲ್ಲಿನ ಜನರೆಲ್ಲ ಸಂತೋಷದಿಂದ ಕುಣಿದು ಕುಪ್ಪಳಿಸಿ ಉತ್ಸವ ಆಚರಿಸುತ್ತಾರೆ.

15ದಿನ ಇರುವಾಗಲೇ ಸಿದ್ಧತೆ: ಪ್ರತಿವರ್ಷ ಆಚರಿಸುವ ಕಾಮನಹಬ್ಬದ ಬಗ್ಗೆ ಬಹುತೇಕರಿಗೆ ತಿಳಿದಿಲ್ಲ. ವರನಿಗೆ ಕಚ್ಚೆ ಪಂಚೆ, ಕೋಟು, ವಧುವಿಗೆ ಸೀರೆ, ತೋಳುಬಂದಿ, ಬೈತಲೆಬೊಟ್ಟು, ಸರ, ಕಿವಿಯೋಲೆ, ನಡುವಿನ ಡಾಬು, ಒಡವೆ, ಮೊಗ್ಗಿನ ಜಡೆ ಮುಂತಾದವುಗಳ ಅಲಂಕಾರ. ಪ್ರತಿದಿನವೂ ಸಂಜೆಯ ವೇಳೆ ವಿವಿಧ ರೀತಿಯ ಆಚರಣೆಗಳನ್ನು ನಡೆಸಲಾಗುತ್ತದೆ. ಉದಾಹರಣೆಗೆ ನಿಶ್ಚಿತಾರ್ಥ ಪ್ರಸಂಗ, ವೈವಾಹಿಕ ಪ್ರಸಂಗ, ವಿವಾಹದ ನಂತರ ಸತ್ಯನಾರಾಯಣ ಪೂಜೆಯ ಸನ್ನಿವೇಶ ಹೀಗೆ. ನಿಶ್ಚಿತಾರ್ಥ ಹಾಗೂ ಮದುವೆ ಶಾಸ್ತ್ರ ಸಂಪ್ರದಾಯಗಳನ್ನು ವಿಧಿವತ್ತಾಗಿ ನಾದಸ್ವರ ಮತ್ತು ಮಂಗಳ ವಾದ್ಯಗಳೊಂದಿಗೆ ನಡೆಸಲಾಗುತ್ತದೆ. 15 ದಿನ ನಡೆಯುವ ಈ ಉತ್ಸವಕ್ಕೆ ಒಂದೂವರೆ ತಿಂಗಳಿನಿಂದಲೇ ಸಿದ್ಧತೆ ನಡೆಯುತ್ತವೆ.

ಕಾಮನಹಬ್ಬದ ಪ್ರಯುಕ್ತ ರತಿ- ಮನ್ಮಥ ಮೂರ್ತಿಗಳಿಗೆ ನಿತ್ಯವೂ ವಿವಿಧ ರೀತಿಯ ಅಲಂಕಾರ ಮಾಡಲಾಗುತ್ತದೆ. ಮೆರವಣಿಗೆಯೂ ಜೋರಾಗಿ ನಡೆಯುತ್ತದೆ. ವರನಿಗೆ ಕಚ್ಚೆ ಪಂಚೆ, ಕೋಟು, ವಧುವಿಗೆ ಸೀರೆ, ತೋಳುಬಂದಿ, ಬೈತಲೆಬೊಟ್ಟು, ಸರ, ಕಿವಿಯೋಲೆ, ನಡುವಿನ ಡಾಬು, ಒಡವೆ, ಮೊಗ್ಗಿನ ಜಡೆ ಮುಂತಾದವುಗಳ ಅಲಂಕಾರ. ಪ್ರತಿದಿನವೂ ಸಂಜೆಯ ವೇಳೆ ವಿವಿಧ ರೀತಿಯ ಆಚರಣೆಗಳನ್ನು ನಡೆಸಲಾಗುತ್ತದೆ. -ರಮೇಶ್‌ ಬಾಬು, ಕನ್ನಡ ಉಪನ್ಯಾಸಕ, ಎಂ.ಜಿ.ರಸ್ತೆ ನಿವಾಸಿ, ಚನ್ನಪಟ್ಟಣ

ಶಿವ ಪರಮಾತ್ಮನ ಅನುಗ್ರಹ ಪಡೆದು ಕಾಮದೇವ ಮನ್ಮಥನು ಮರುಜನ್ಮ ತಾಳುವ ಕಥೆಯ ಪ್ರತೀಕವಾಗಿ ಹುಣ್ಣಿಮೆಯ ಮಾರನೇ ದಿನ ವಿಜಯೋತ್ಸವ ಆಚರಿಸಲಾಗುತ್ತದೆ. ಅಂದು ಬಣ್ಣ ಬಣ್ಣದ ಓಕುಳಿ ಹರಿಸಿ ಇಲ್ಲಿನ ಜನರೆಲ್ಲ ಸಂತೋಷದಿಂದ ಕುಣಿದು ಕುಪ್ಪಳಿಸಿ ಉತ್ಸವ ಆಚರಿಸುತ್ತಾರೆ. -ಜಿತೇಂದ್ರ, ಮಂಡಿಪೇಟೆ ನಿವಾಸಿ, ಚನ್ನಪಟ್ಟಣ 

ಟಾಪ್ ನ್ಯೂಸ್

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Channapatna: ಕೆಲಸದ ಒತ್ತಡ ತಾಳಲಾರದೆ ಮುಖ್ಯ ಶಿಕ್ಷಕ ವಿಷ ಸೇವಿಸಿ ಆತ್ಮಹ*ತ್ಯೆ

Channapatna: ಕೆಲಸದ ಒತ್ತಡ ತಾಳಲಾರದೆ ಮುಖ್ಯ ಶಿಕ್ಷಕ ವಿಷ ಸೇವಿಸಿ ಆತ್ಮಹ*ತ್ಯೆ

10-ramanagara

Ramanagara: ಕಾಡಾನೆ ದಾಳಿಗೆ ರೈತ ಬಲಿ

DOG (2)

Ramanagara:ನಾಯಿ ಜತೆ ಮೂವರ ಅನೈಸರ್ಗಿಕ ಲೈಂಗಿ*ಕ ಚಟುವಟಿಕೆ: ಓರ್ವ ಸೆರೆ

Magadi Bus Stand: ಮಾಗಡಿ ಬಸ್‌ ನಿಲ್ದಾಣದಲ್ಲಿ ಸಮಸ್ಯೆಗಳ ಸರಮಾಲೆ

Magadi Bus Stand: ಮಾಗಡಿ ಬಸ್‌ ನಿಲ್ದಾಣದಲ್ಲಿ ಸಮಸ್ಯೆಗಳ ಸರಮಾಲೆ

Toll: ವರ್ಷದಲ್ಲೇ 438 ಕೋ.ರೂ. ಟೋಲ್‌ ಶುಲ್ಕ ಸಂಗ್ರಹ

Toll: ವರ್ಷದಲ್ಲೇ 438 ಕೋ.ರೂ. ಟೋಲ್‌ ಶುಲ್ಕ ಸಂಗ್ರಹ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

6

Mangaluru: ಕ್ರಿಸ್ಮಸ್‌ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು

5

Health: ಶೀಘ್ರ ಕ್ಯಾನ್ಸರ್‌ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.