ಪ್ರಬಲ ಅಭ್ಯರ್ಥಿ ಕಣಕ್ಕಿಳಿಸಲು ಬಿಜೆಪಿ ಸಿದ್ಧತೆ
Team Udayavani, Apr 6, 2023, 2:36 PM IST
ಕನಕಪುರ: ರಾಷ್ಟ್ರೀಯ ನಾಯಕರ ಅಣತಿ ಯಂತೆ ಬಿಜೆಪಿ ಪಾಲಿಗೆ ಹುಕ್ಕಿನ ಕಡಲೆ ಯಾಗಿರುವ ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಬಾವುಟ ಹಾರಿಸಲು ರಾಮನಗರ ಜಿಲ್ಲೆಯ ನಾಲ್ಕು ಕ್ಷೆತ್ರಗಳಲ್ಲಿ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದು ಬಿಜೆಪಿ ಸಂಭಾವ್ಯ ಅಭ್ಯರ್ಥಿ ಅಪ್ಪಾಜಿಗೌಡ ತಿಳಿಸಿದರು.
ನಗರದ ಕೋಟೆ ಗಣಪತಿ ದೇವಾಲಯದಲ್ಲಿ ಬಿಜೆಪಿ ಕಾರ್ಯಕರ್ತರು, ಮುಖಂಡರೊಂದಿಗೆ ನಡೆದ ಸಮಾಲೋಚನೆ ಸಭೆಯಲ್ಲಿ ಮಾತ ನಾಡಿದ ಅವರು, ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಪಕ್ಷವನ್ನು ಬಲಗೊಳಿಸುವಂತೆ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರ ಸೂಚನೆ ಮೇರೆಗೆ ರಾಜ್ಯ ನಾಯಕರು ರಾಮನಗರ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಿದ್ಧತೆ ನಡೆಸಿದ್ದಾರೆ. ಕನಕಪುರ ತಾಲೂಕಿನಲ್ಲಿ ನನ್ನನ್ನು ಅಭ್ಯರ್ಥಿಯಾಗುವಂತೆ ಸೂಚನೆ ಕೊಟ್ಟಿದ್ದಾರೆ. ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ ಎಂದರು.
ತಾಲೂಕಿನ ಶೈಕ್ಷಣಿಕ ಪ್ರಗತಿ ಹರಿಕಾರ ಎಸ್. ಕರಿಯಪ್ಪನವರ ಶಿಷ್ಯ ಮತ್ತು ಅವರ ಅನುಯಾಯಿ. ಈ ತಾಲೂಕಿನಲ್ಲಿ ನನಗೂ ಬಂಧುಗಳಿದ್ದಾರೆ. ಈ ತಾಲೂಕಿಗೂ ನನಗೂ ಒಂದು ಸಂಬಂಧವಿದೆ. ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಐದು ಬಾರಿ ಸ್ಪರ್ಧೆ ಮಾಡಿದ್ದೇನೆ. ಒಕ್ಕಲಿಗರ ಸಂಘ ದ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ತಾಲೂಕಿನ ಹಲವರು ಗ್ರಾಮಗಳಲ್ಲಿ ಓಡಾಡಿದ್ದೇನೆ. ಜನರ ಪರಿಚಯ ಮತ್ತು ಒಡನಾಟವಿದೆ. ಪಕ್ಷ ನನ್ನನ್ನು ಅಭ್ಯರ್ಥಿಯನ್ನಾಗಿ ಅಷ್ಟೇ ಮಾಡಿಲ್ಲ. ಈ ತಾಲೂಕಿನಲ್ಲಿ ಪಕ್ಷದ ಸ್ಥಿತಿಗತಿಗಳೇನು? ಪಕ್ಷವನ್ನು ಹೇಗೆ ಬಲಪಡಿಸಬೇಕು ಎಂದು ಪಕ್ಷದ ನಾಯಕರ ಬಳಿ ಚರ್ಚೆ ಮಾಡಬೇಕು. ಹಾಗಾಗಿ, ಇಲ್ಲಿನ ಕಾರ್ಯಕರ್ತರು, ಮುಖಂಡರು ಬೆಂಬಲ ಕೊಡಬೇಕು ಎಂದರು.
ಬಿಜೆಪಿ ಪಕ್ಷ ಬಲಗೊಳಿಸುವೆ: ಕಾಂಗ್ರೆಸ್ ರಾಷ್ಟ್ರೀ ಯ ಪಕ್ಷವಾದರೂ ಅದರ ಕೆಲವು ಸಂಕೋಲೆಗಳಿಂದ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ. ಬಿಜೆಪಿ ಮತ್ತೂಮ್ಮೆ ಮುಂಬರುವ ಚುನಾವಣೆ ಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ನಾವೆಲ್ಲರೂ ಶಕ್ತಿ ಮೀರಿ ಕೆಲಸ ಮಾಡಬೇಕು. ಸೋಲು ಗೆಲುವು ಏನೇ ಇರಲಿ ಕಾರ್ಯಕರ್ತರು ಮುಖಂಡರನ್ನು ಒಗ್ಗೂಡಿಸಿಕೊಂಡು ಬಿಜೆಪಿ ಪಕ್ಷವನ್ನು ಬಲಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಡಿಕೆಶಿ ಎದುರು ಸ್ಪರ್ಧೆ ಮಾಡಲ್ಲ: ಬಿಜೆಪಿ ಕಾರ್ಯಕರ್ತ ಭರತ್ ಹಾಗೂ ಮಂಜು ಮಾತನಾಡಿ, ತಾಲೂಕಿನಲ್ಲಿ ಕಳೆದ ಬಾರಿ ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಕೊನೆ ಕ್ಷಣದಲ್ಲಿ ಅನಿತಾ ಕುಮಾರಸ್ವಾಮಿಯವರು ಕಣಕ್ಕಿಳಿದರು. ಬಿಜೆಪಿ ಪಕ್ಷದಿಂದ ರುದ್ರೇಶ್ ಅಭ್ಯರ್ಥಿ ಎಂದು ಹೇಳುತ್ತಿದ್ದರೂ, ಆದ್ರೆ ಕೊನೆ ಕ್ಷಣದಲ್ಲಿ ಯಾರೋ ಒಬ್ಬರನ್ನು ಚುನಾವಣೆಗೆ ಕಣಕ್ಕಿಳಿಸಿದರು. ಆದರೆ, ಸರಿಯಾಗಿ ಚುನಾವಣೆಯನ್ನು ಮಾಡದೆ ಹಿಂದೆ ಸರಿದರು. ಆದರೂ ಬಿಜೆಪಿ ಮೇಲಿನ ಅಭಿಮಾನದಿಂದ 15 ಸಾವಿರ ಮತ ಬಿದ್ದಿವೆ ಎಂದ ಅವರು, ನಮ್ಮ ಕ್ಷೇತ್ರದಲ್ಲಿ ಪ್ರಭಾವಿ ರಾಜಕಾರಣಿ ಡಿ.ಕೆ.ಶಿವಕುಮಾರ್ ಎದುರು ಯಾರು ಸ್ಪರ್ಧೆ ಮಾಡುವುದಿಲ್ಲ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿದೆ. ಹಾಗಾಗಿ, ಕ್ಷೇತ್ರದಲ್ಲಿ ಶಾಸಕ ಡಿ.ಕೆ. ಶಿವಕುಮಾರ್, ಸಂಸದ ಡಿ.ಕೆ. ಸುರೇಶ್, ವಿಧಾನಪರಿಷತ್ ಸದಸ್ಯ ಎಸ್. ರವಿ, ಯಾರೇ ಚುನಾವಣೆಗೆ ನಿಲ್ಲಲಿ. ಯಾವು ದಕ್ಕೂ ಕಿವಿಗೊಡದೆ ಚುನಾವಣೆ ಮಾಡುವು ದಾದರೆ ಮಾತ್ರ ಸ್ಪರ್ಧೆ ಮಾಡಿ ಎಂದರು .
ಮುಖಂಡರಿಗೆ ರಕ್ಷಣೆ ಇಲ್ಲ: ಈ ಕ್ಷೇತ್ರದಲ್ಲಿ ಪಕ್ಷವನ್ನು ಬಲಪಡಿಸಲು ಅಶ್ವತ್ಥ್ನಾರಾಯಣ್ ಎಲ್ಲ ರೀತಿ ಸಹಕಾರ ಕೊಡುವುದಾಗಿ ಭರವಸೆ ಕೊಟ್ಟಿದ್ದರು. ಆದರೆ, ಎಲ್ಲ ಭರವಸೆ ಹುಸಿ ಯಾಗಿವೆ. ತಾಲೂಕಿನಲ್ಲಿ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರನ್ನು ಕಡೆಗಣಿಸಲಾಗುತ್ತದೆ. ತಾಲೂಕಿನ ಕಾರ್ಯಕರ್ತರು, ಮುಖಂಡರಿಗೆ ರಕ್ಷಣೆ ಇಲ್ಲ. ಅವರ ಸಮಸ್ಯೆ ಕೇಳಿ ಬಗೆಹರಿಸುವ ಕೆಲಸ ಮಾಡುತ್ತಿಲ್ಲ ಎಂದು ದೂರಿದರು.
ಹಲವಾರು ಸದಸ್ಯರು ಆಯ್ಕೆ: ತಾಲೂಕಿನಲ್ಲಿ ಗ್ರಾಪಂ ಚುನಾವಣೆಯಲ್ಲಿ ಬಿಜೆಪಿಯಿಂದ ಹಲವಾರು ಸದಸ್ಯರು ಆಯ್ಕೆಗೊಂಡಿದ್ದಾರೆ. ಆದರೆ, ಸಂಸದ ಡಿ.ಕೆ ಸುರೇಶ್ ಎಲ್ಲರೂ ನಮ್ಮ ಪಕ್ಷದಿಂದಲೇ ಗೆದ್ದಿದ್ದಾರೆ ಎಂದು ಹೇಳಿಕೊಳ್ಳುತ್ತಾರೆ. ನಮ್ಮ ಪಕ್ಷ ದಿಂದ ಗೆಲುವು ಸಾಧಿಸಿರುವ ಸದಸ್ಯರ ಅಂಕಿ- ಅಂಶ ಹೇಳುವವರೇ ಇಲ್ಲ. ಅಂತಹ ಪರಿಸ್ಥಿತಿ ತಾಲೂಕಿನಲ್ಲಿದೆ. ನಿಮ್ಮಂತಹ ಅಭ್ಯರ್ಥಿ ತಾಲೂಕಿಗೆ ಅವಶ್ಯಕತೆ ಇತ್ತು. 1983ರಲ್ಲಿ ಯಡಿಯೂರಪ್ಪ ಅವರು ಪಕ್ಷ ಸಂಘಟ ನೆಗೆ ಬಂದು ಕಲ್ಲೇಟು ತಿಂದು ದಲಿತರ ಮನೆಯಲ್ಲಿ ಆಶ್ರಯ ಪಡೆದು ಹೋಗಿದ್ರು. ಆ ರೀತಿ ಪಕ್ಷ ಕಟ್ಟುವ ನಿಷ್ಠೆ ಇದ್ದರೆ ನಾವು ಸ್ವಾಗತ ಮಾಡುತ್ತೇವೆ ಎಂದರು.
ಬಿಜೆಪಿ ನಗರ ಘಟ ಕದ ಅಧ್ಯಕ್ಷ ಮುತ್ತಣ್ಣ, ಉಪಾಧ್ಯಕ್ಷ ಮುರಳೀಧರ್, ಕೃಷ್ಣಪ್ಪ, ಪ್ರಧಾನ ಕಾರ್ಯದರ್ಶಿ ಕೋಟೆ ರಾಜೇಶ್, ಗ್ರಾಪಂ ಸದಸ್ಯ ಕುಮಾರಸ್ವಾಮಿ, ಮಂಜುನಾಥ್, ಕಾರ್ಯಕಾರಿ ಸಮಿತಿ ಸದಸ್ಯ ಮರೀಗೌಡ, ಪಾಲಾಕ್ಷ, ಸ್ವಾಮಿ, ಮಹಿಳಾ ಘಟಕದ ಪವಿತ್ರಾ, ವರ ಲಕ್ಷ್ಮೀ ಹಾಗೂ ಬಿಜೆಪಿ ಮುಖಂಡರು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.