ಕನಕಪುರದಲ್ಲಿಕಣ್ಮನ ಸೆಳೆದ ಫಲಪುಷ್ಪ ಪ್ರದರ್ಶನ
Team Udayavani, Jan 11, 2018, 5:30 PM IST
ರಾಮನಗರ/ಕನಕಪುರ: ನಗರದ ಮುನ್ಸಿಪಾಲ್ ಕಾಲೇಜು ಆವರಣದಲ್ಲಿ ಜಿಲ್ಲಾ ಪಂಚಾಯಿತಿ ತೋಟಗಾರಿಕೆ ಇಲಾಖೆ ಹಮ್ಮಿಕೊಂಡಿರುವ ಫಲಪುಷ್ಪ ಪ್ರದರ್ಶನ ಸಂಗ-2018 ನಾಗರಿಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಸೇವಂತಿಗೆ, ಗುಲಾಬಿ ಹೂಗಳಿಂದ ಅರಳಿರುವ ಶಕ್ತಿದೇವತೆ ಕಬ್ಟಾಳಮ್ಮ ದೇವಿಯ ದೇವಾಲಯ ಪ್ರಮುಖ ಆಕರ್ಷಣೆಯಾಗಿದೆ. 18 ಅಡಿ ಅಗಲ ಮತ್ತು 20 ಅಡಿ ಎತ್ತರಕ್ಕೆ ಸುಮಾರು 2 ಲಕ್ಷಕ್ಕೂ ಅಧಿಕ ಸೇವಂತಿಗೆ ಮತ್ತು ಗುಲಾಬಿ ಹೂಗಳಿಂದ ರಚನೆಯಾಗಿರುವ ದೇವಾಲಯದ ಪ್ರತಿರೂಪ ಮತ್ತು ಅದರಲ್ಲಿ ವಿರಾಜಮಾನವಾಗಿರುವ ದೇವಿಯ ಉತ್ಸವ ಮೂರ್ತಿ ನೋಡುಗರಲ್ಲಿ ಭಕ್ತಿಯನ್ನು ಮೂಡಿಸುತ್ತಿರುವುದು ವಿಶೇಷ.
ಕ್ಯಾಪ್ಸಿಕಂನಲ್ಲಿ ಮೂಡಿದ ಕರ್ನಾಟಕ ಭೂಪಟ: ವಿವಿಧ ಬಗೆಯ ತರಾಕಾರಿ ಮತ್ತು ಹೂಗಳಿಂದ ಸಿಂಗಾರಗೊಂಡಿರುವ ಉಯ್ನಾಲೆ, ಸಿ-ಸಾಗಳು ಮಕ್ಕಳ ಕುತೂಹಲಕ್ಕೆ ಕಾರಣವಾದರೆ, ಕೆಂಪು ಮತ್ತು ಹಳದೀ ಬಣ್ಣದ ದೊಣ್ಣೆ ಮೆಣಸಿನಕಾಯಿ (ಕ್ಯಾಪ್ಸಿಕಂ)ನಲ್ಲಿ ಅರಳಿರುವ ಕರ್ನಾಟಕದ ಭೂ ಪಟ ನೋಡುಗರೆಲ್ಲರ ಮೆಚ್ಚುಗೆಗಳಿಸಿತು. ಬಿಳಿ ಸೇವಂತಿಗೆಯಲ್ಲಿ ರಚನೆಯಾಗಿರುವ ಹಸು ಮತ್ತು ಕರುವಿನ ಮೂರ್ತಿಗಳ ಸಹ ಗಮನ ಸೆಳೆಯುವಲ್ಲಿ ಯಶಸ್ವಿಯಾದವು.
ಕನಕಪುರದಲ್ಲಿ ಡಿಕೆಶಿ ಚಾರಿಟಬಲ್ ಟ್ರಸ್ ವತಿಯಿಂದ ಜಿಲ್ಲಾ ಮಟ್ಟದ ಕನಕೋತ್ಸವದ ಅಂಗವಾಗಿ ತೋಟಗಾರಿಕೆ ಇಲಾಖೆ ಫಲಪುಷ್ಪ ಪ್ರದರ್ಶನ ಏರ್ಪಡಿಸಿದೆ. ಸಾವಿರಾರು ಮಂದಿ ಫಲಪುಷ್ಪ ಪ್ರದರ್ಶನ ವೀಕ್ಷಿಸಿದರು.ಜೊತೆಗೆ ರೈತರು ಮತ್ತು ಸಾಮಾನ್ಯ ನಾಗರಿಕರಿಗೆ ವಿವಿಧ ವಿಚಾರಗಳಲ್ಲಿ ಮಾಹಿತಿಯನ್ನು ನೀಡುತ್ತಿದೆ.
ಉತ್ತಮ ಆರೋಗ್ಯಕ್ಕೆ ಯೋಗ ಅವಶ್ಯ: ಸುರೇಶ್ ಕನಕಪುರ: ಬದುಕಿನಲ್ಲಿ ಶಾಂತಿ ನೆಮ್ಮದಿ ಆರೋಗ್ಯವನ್ನುಕಾಣಬೇಕಾದರೆ ಯೋಗಾಸನ ಅತ್ಯಂತ ಅವಶ್ಯ ಎಂದು ಸಂಸದ ಡಿ.ಕೆ. ಸುರೇಶ್ ಹೇಳಿದರು.
ನಗರದ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ 5 ದಿನಗಳ ಕನಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರತಿದಿನ ಕನಕೋತ್ಸವ ಆರಂಭಕ್ಕೂ ಮುನ್ನ ಪ್ರಾತಃಕಾಲ ಯೋಗಾಸನ ಹಮ್ಮಿಕೊಲಾಗಿದೆ. ತಾಲೂಕಿನ ಎಲ್ಲಾ ಜನತೆ ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ತಿಳಿಸಿದರು.
ದೇಗುಲ ಮಠದ ಮುಮ್ಮಡಿ ನಿರ್ವಾಣ ಮಹಾಸ್ವಾಮೀಜಿ ಮಾತನಾಡಿ, ಮನುಷ್ಯ ಜನೋಪಯೋಗಿ ಕಾರ್ಯಗಳನ್ನು ಮಾಡಿದಾಗ ಮಾತ್ರ ಜೀವನದಲ್ಲಿ ಸದ್ಗತಿಗಳು ಕಾಣಲು ಸಾಧ್ಯ. ರಾಮಾಯಣದಲ್ಲಿ ಶ್ರೀರಾಮ ತನ್ನ ಪ್ರಜೆಗಳಿಗಾಗಿ ಇಡೀ ತನ್ನ ಜೀವನವನ್ನೆ ಮುಡಿಪಾಗಿಟ್ಟನು. ಆದೇ ರೀತಿ ತಾಲೂಕಿನ ಜನರ ಏಳಿಗೆ ಹಾಗೂ ಅಭಿವೃದ್ಧಿಗಾಗಿ .ಕೆ.ಶಿವಕುಮಾರ್ ಮತ್ತು ಡಿ.ಕೆ. ಸುರೇಶ್ ಅವರು ಟೊಂಕ ಕಟ್ಟಿನಿಂತಿರುವುದು ನಿಜಕ್ಕೂ ಅತ್ಯಂತ ಶ್ಲಾಘನೀಯವಾದ
ವಿಚಾರವೆಂದರು.
ಪ್ರತಿವರ್ಗದ ಜನರ ಏಳಿಗಾಗಿ ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಎಲ್ಲರಿಗೂ ಸಹ ಸನ್ಮಾನವನ್ನು ಮಾಡುತ್ತಿರುವುದು ಅವರ ವಿಶಾಲವಾದ ಹೃದಯವನ್ನು ತೋರಿಸುತ್ತದೆ ಎಂದು ನುಡಿದರು. ನೀರು ಗಾಳಿ ಶರೀರಕ್ಕೆ ಎಷ್ಟು ಅವಶ್ಯವೋ ಅಷ್ಟೇ ಅವಶ್ಯ ಯೋಗ. ಯೋಗವನ್ನು ಪ್ರತಿನಿತ್ಯ ಮಾಡುವುದರಿಂದ ರೋಗ ಮುಕ್ತವಾಗಿ ಮಾಡಬಹುದಾಗಿದೆ. ಪ್ರತಿನಿತ್ಯ ಧ್ಯಾನ ದೇವರ ಸ್ಮರಣೆ ಮಾಡುವುದರಿಂದ ಮನಸ್ಸಿನಲ್ಲಿ ಇರುವ ಕಲ್ಮಷವನ್ನು ಹೋಗಲಾಡಿಸಬಹುದಾಗಿದೆ ಎಂದರು. ಯೋಗ ಗುರು ವಿದ್ಯಾಶ್ರೀ ಚನ್ನಬಸವಣ್ಣ ಯೋಗ ಪ್ರದರ್ಶನ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.