ನಗರಸಭೆ: 57.86 ಲಕ್ಷ ರೂ. ಉಳಿತಾಯ ಬಜೆಟ್
Team Udayavani, Mar 22, 2021, 12:28 PM IST
ಕನಕಪುರ: ನಗರಸಭೆ ಅಧ್ಯಕ್ಷ ಮಕ್ಬುಲ್ ಪಾಷಾ 2021-22 ನೇ ಸಾಲಿನ 57.86 ಲಕ್ಷರೂ.ನ ಉಳಿತಾಯ ಬಜೆಟನ್ನು ಮಂಡಿಸಿದರು.
ನಗರದ ನಗರಸಭೆ ಸಭಾಂಗಣದಲ್ಲಿ 2021-22ನೇ ಸಾಲಿನ ಆಯವ್ಯಯ ಮಂಡಿಸಿದ ಅವರು, 2021-22ನೇ ಸಾಲಿನ7.43 ಕೋಟಿ ರೂ. ಆರಂಭ ಶಿಲ್ಕು, 29.35ಕೋಟಿ ರೂ. ಆದಾಯ ಸೇರಿ ಒಟ್ಟು 36.78ಕೋಟಿ ರೂ.ನಲ್ಲಿ 36.20 ಕೋಟಿ ರೂ. ವೆಚ್ಚತೋರಲಾಗಿದೆ. ಉಳಿಕೆ 57.86 ಲಕ್ಷ ರೂ.ಉಳಿತಾಯದ ಅಯವ್ಯಯ ಮಂಡಿಸಿದ್ದಾಗಿ ತಿಳಿಸಿದರು.
15ನೇ ಹಣಕಾಸು ಅನುದಾನದಿಂದ ರಸ್ತೆ, ಚರಂಡಿ, ಬೀದಿ ದೀಪ, ಕುಡಿಯುವನೀರು, ಘನತ್ಯಾಜ್ಯ ವಸ್ತು ನಿರ್ವಹಣೆ,ಶೌಚಾಲಯ ನಿರ್ಮಾಣ ನಿರ್ವಹಣೆ,ಸ್ಮಶಾನ ಚಿತಾಗಾರ ಕಚೇರಿ ನಿರ್ವಹಣೆಮುಂತಾದ ಅಭಿವೃದ್ಧಿ ಕಾಮಗಾರಿಗಳಿಗೆ2.50 ಕೋಟಿ ರೂ. ಮೀಸಲಿರಿಸಲಾಗಿದೆ,ವಾರ್ಡ್‌ಗಳ ನಾಮಫಲಕಕ್ಕೆ 20 ಲಕ್ಷ ರೂ.,ಉದ್ಯಾನ ಪರಿಸರ ಸಂರಕ್ಷಣೆಗೆ 30 ಲಕ್ಷ ರೂ., ನಿರ್ವಹಣೆಗೆ 12 ಲಕ್ಷ ರೂ., ನಗರದನೈರ್ಮಲ್ಯ ಸ್ವತ್ಛತೆಗಾಗಿ 2.34 ಕೋಟಿ ರೂ.,ಕಸ ಸಂಗ್ರಹಣೆಗೆ 30 ಲಕ್ಷ ರೂ., ಆರೋಗ್ಯಘನತ್ಯಾಜ್ಯ ನಿರ್ವಹಣೆ ಮತ್ತು ಸ್ವತ್ಛತೆಜಾಗೃತಿ ಕಾರ್ಯಕ್ರಮಗಳಿಗೆ 10 ಲಕ್ಷ ರೂ.,ನಗರಸಭೆಯ ಕುಡಿಯುವ ನೀರಿನ ಸೌಲಭ್ಯಕಾಮಗಾರಿಗಾಗಿ 50 ಲಕ್ಷ ರೂ., 2.28ಕೋಟಿ ರೂ.ನಲ್ಲಿ ನಿರ್ಮಾಣವಾಗುತ್ತಿರುವವಿದ್ಯುತ್ ಚಿತಾಗಾರ ಕಾಮಗಾರಿಗೆ 25 ಲಕ್ಷ ರೂ. ನೀಡಲಾಗಿದೆ ಎಂದು ಹೇಳಿದರು.
ಆದಾಯದ ನಿರೀಕ್ಷೆ: ಬೀದಿದೀಪಗಳ ನಿರ್ವಹಣೆಗೆ 35 ಲಕ್ಷ ರೂ., ಪರಿಶಿಷ್ಟ ಜಾತಿ, ಪಂಗಡದ ಕಲ್ಯಾಣಕ್ಕೆ 15 ಲಕ್ಷ ರೂ., ಇತರೆ ಸಮುದಾಯದ ಅಭಿವೃದ್ಧಿಗೆ 6 ಲಕ್ಷ ರೂ.,ದಿವ್ಯಾಂಗರ ಕಲ್ಯಾಣ ಕಾರ್ಯಕ್ರಮಕ್ಕೆ 5 ಲಕ್ಷರೂ., ಪರಿಶಿಷ್ಟ ಜಾತಿ, ಪಂಗಡದವರಆರೋಗ್ಯದ ಶಸ್ತ್ರಚಿಕಿತ್ಸೆಗೆ (ಪತ್ರಕರ್ತರನ್ನುಒಳಗೊಂಡಂತೆ) 3 ಲಕ್ಷ ರೂ.,ಪೌರಕಾರ್ಮಿಕರ ಸುರಕ್ಷತಾ ಸಾಮಗ್ರಿಗಳಿಗೆ 5 ಲಕ್ಷ ರೂ., ಪೌರಕಾರ್ಮಿಕರಉಪಾಹಾರಕ್ಕೆ 8 ಲಕ್ಷ ರೂ., ಪೌರಕಾರ್ಮಿಕರ ಆರೋಗ್ಯಕ್ಕೆ 2 ಲಕ್ಷ ರೂ.,ಪೌರಕಾರ್ಮಿಕರ ದಿನಾಚರಣೆಗೆ 2.50 ಲಕ್ಷ ರೂ., ನೇರ ಪಾವತಿ ವೇತನಕ್ಕಾಗಿ 95 ಲಕ್ಷ ರೂ., ನಗರದ ಆಸ್ತಿ ತೆರಿಗೆಯಿಂದ 2.95 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ.
ಖಾತೆ ವರ್ಗಾವಣೆ ಹಾಗೂ ಇತರೆ ಮೂಲ ಗಳಿಂದ 15 ಲಕ್ಷ ರೂ., ಜಾಹೀರಾತಿನಿಂದ 4 ಲಕ್ಷ ರೂ., ಕಟ್ಟಡಗಳ ಪರವಾನಗಿಯಿಂದ50 ಲಕ್ಷ ರೂ., ರಸ್ತೆಗಳ ಅಗೆತದಿಂದ 25 ಲಕ್ಷರೂ. ಆದಾಯ ಬರುವ ನಿರೀಕ್ಷೆ ಇದೆ ಎಂದು ವಿವರಿಸಿದರು. ಕುಡಿಯುವ ನೀರಿನ ಬವಣೆ ನೀಗಿಸಲು ಸರ್ಕಾರದಿಂದ 25 ಲಕ್ಷ ರೂ. ಅನುದಾನದಲ್ಲಿ 15 ಲಕ್ಷ ರೂ. ಬಿಡುಗಡೆ ಮಾಡಬಹುದೆಂಬ ನಿರೀಕ್ಷೆ ಇದೆ ಎಂದು ಹೇಳಿದರು.
ಆದಾಯ ಹೆಚ್ಚಿಸಿ: ನಗರಸಭಾ ಸದಸ್ಯರಾದ ಸ್ಟುಡಿಯೋ ಚಂದ್ರು, ಜಯರಾಮು,ರಾಜು ಮಾತನಾಡಿ, ಎಂಎಚ್‌ಎಸ್ ರಸ್ತೆಯಲ್ಲಿರುವ ವಾಣಿಜ್ಯ ಮಳಿಗೆಯಲ್ಲಿ ಹರಾಜಾಗಿದೆ ಉಳಿದಿರುವ ಮೂರು ಮಗಳಿಗೆ ಮತ್ತು ಕನಕ ವಾಣಿಜ್ಯ ಸಂಕೀರ್ಣದ 22ಮಳಿಗೆಗಳ ಭದ್ರತಾ ಠೇವಣಿ ಕಡಿತಗೊಳಿಸಿ,ಹರಾಜು ಹಾಕಬೇಕು, ಜಮೀನನ್ನು ನಗರಸಭೆಗೆ ಹಸ್ತಾಂತರಿಸಲು ಕೋರಿರುವ ಅರ್ಜಿಗಳನ್ನು ಅನುಮೋದಿಸಿ, ನಗರಸಭೆಆದಾಯ ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ನಗರಸಭೆ ಪ್ರಭಾರ ಪೌರಾಯುಕ್ತ ರಾಘವೇಂದ್ರ, ಉಪಾಧ್ಯಕ್ಷ ಗುಂಡಣ್ಣ, ನಗರ ಸಭೆ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Channapatna: ಕೆಲಸದ ಒತ್ತಡ ತಾಳಲಾರದೆ ಮುಖ್ಯ ಶಿಕ್ಷಕ ವಿಷ ಸೇವಿಸಿ ಆತ್ಮಹ*ತ್ಯೆ
Ramanagara: ಕಾಡಾನೆ ದಾಳಿಗೆ ರೈತ ಬಲಿ
Ramanagara:ನಾಯಿ ಜತೆ ಮೂವರ ಅನೈಸರ್ಗಿಕ ಲೈಂಗಿ*ಕ ಚಟುವಟಿಕೆ: ಓರ್ವ ಸೆರೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Karkala: ಚಿನ್ನದಂಗಡಿ ಕಳ್ಳತನ: ಕುಖ್ಯಾತ ಸರಗಳ್ಳ ಅರೆಸ್ಟ್
ICC ವರ್ಷದ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿಗೆ ಜಸ್‌ಪ್ರೀತ್ ಬುಮ್ರಾ ಹೆಸರು
Contracter Case: ಸಿಐಡಿ ಮೇಲೆ ವಿಶ್ವಾಸವಿಲ್ಲ, ಸಿಬಿಐಗೆ ಕೊಡಿ: ಸಚಿನ್ ಸಹೋದರಿ ಸುರೇಖಾ
First Test Match: ಜಿಂಬಾಬ್ವೆ-ಅಫ್ಘಾನಿಸ್ಥಾನ ಟೆಸ್ಟ್ ಡ್ರಾ
Misuse; ಐಶ್ವರ್ಯ ಗೌಡ ವಿರುದ್ಧ ಪೊಲೀಸ್ ದೂರು ದಾಖಲಿಸಿದ ಡಿ.ಕೆ.ಸುರೇಶ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.