65 ಅಡಿ ಅಗಲದ ಕನ್ನಡ ಬಾವುಟ ಹಾರಾಟ
Team Udayavani, Nov 2, 2020, 1:02 PM IST
ಕುದೂರು: ಕನ್ನಡಕ್ಕಾಗಿ ದುಡಿದ ಮಹನೀಯರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕೆಂದು ಡಾ. ರಾಜ್‌ಕುಮಾರ್ ಅಭಿಮಾನಿ ಸಂಘದ ಅಧ್ಯಕ್ಷ ಕೆ. ಎಚ್.ನಾಗೇಶ್ ತಿಳಿಸಿದರು.
ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕುದೂರಿನ ಭೈರವನದುರ್ಗದ ತುದಿ ಮೇಲೆ 65 ಅಡಿ ಅಗಲದ ಕನ್ನಡ ಬಾವುಟವ ಹಾರಿಸಿ ಮಾತನಾಡಿದರು. ರಾಜ್ಯೋತ್ಸವ ಎಂದರೆ, ಬಾವುಟ ಹಾರಿಸುವುದು ಮಾತ್ರವಲ್ಲ. ನಾಡಿನ ನೆಲ, ಜಲ, ಭಾಷೆ ಅಭಿಮಾನಕ್ಕೆ ಕೊಂಚವೂ ದಕ್ಕೆಯಾಗದಂತೆ ಸ್ವಾಭಿಮಾನಿ ಬದುಕನ್ನು ರೂಢಿಸಿಕೊಳ್ಳಬೇಕಾಗಿದೆ. ಎಂದರು.
ಭೈರವನದುರ್ಗ ಐತಿಹಾಸಿಕ ತಾಣವಾಗಿದ್ದು, ಇಲ್ಲಿನ ನೆಲ, ಜಲ, ಭಾಷೆ-ಸಂಸ್ಕೃತಿ, ಬೆಟ್ಟ ಗುಡ್ಡ ಕಾಪಾಡಿಕೊಳ್ಳಬೇಕು. ಇದೊಂದು ಸುಂದರ ಪ್ರವಾಸಿ ತಾಣವಾಗಬೇಕು. ಭೈರವನದುರ್ಗ ಕುದೂರು ಗ್ರಾಮದ ಅತಿದೊಡ್ಡ ನೈಸರ್ಗಿಕ ಸಂಪತ್ತಾಗಿದೆ. ಆದರೆ ಅದರ ಮಹತ್ವ ಗೊತ್ತಿಲ್ಲದೆ ಇಂದು ಈ ದುರ್ಗದಲ್ಲಿ ಮರಗಳ ಮಾರಣಹೋಮ ನಡೆಯುತ್ತಿದೆ ಎಂದು ಹೇಳಿದರು.
ಐತಿಹಾಸಿಕ ಬೆಟ್ಟವನ್ನು ಉಳಿಸಿಬೇಕಿದ್ದು, ಪ್ರಾಯೋಗಿಕವಾಗಿ ಬೆಟ್ಟದ ತುದಿಯಲ್ಲಿ ಕನ್ನಡದ ಬಾವುಟ ಹಾರಿಸಿ. ದುರ್ಗವನ್ನು ಉಳಿಸಿ ಎಂಬ ಸಂದೇಶವನ್ನು ಜಿಲ್ಲಾ ಆಡಳಿತಕ್ಕೆ ನೀಡುತ್ತಿದ್ದೇವೆ. ಎಂದು ತಿಳಿಸಿದರು.
ಸಂಘದ ಸದಸ್ಯರಾದ ಜಗದೀಶ್, ಲೋಕೇಶ್, ಟೈಲರ್ ಸುರೇಶ್. ಜಗದೀಶ್, ಸಿದ್ಧರಾಜು, ಹರ್ಷ, ಬೆಳ್ಳಿ ಕೃಷ್ಣ, ಕೆಂಪಚಾರಿ ಮಹಮ್ಮದ್ ಇಮ್ರಾನ್, ನವೀನ, ಜಯಂತ್, ಶರತ್, ಕಿರಣ್, ಜಿಮ್‌ಪ್ರತಾಪ್, ಮಂಜು, ಗಗನ್, ಲಕ್ಷ್ಮೀಕಾಂತ, ಮಂಜುನಾಥ್ , ಮೂರ್ತಪ್ಪ ಹಾಜರಿದ್ದರು.
ಕನ್ನಡ ಭಾಷೆಗೆ ಸರ್ಕಾರದ ಬೆಂಬಲ :
ಕನಕಪುರ: ಸರ್ಕಾರದ ಬೆಂಬಲದೊಂದಿಗೆ ನಮ್ಮ ಕನ್ನಡ ಭಾಷೆಯನ್ನು ರಾಷ್ಟ್ರಮಟ್ಟಕ್ಕೆ ಕೊಂಡಯ್ಯಬೇಕು ಎಂದು ತಹಶೀಲ್ದಾರ್ ವರ್ಷಾ ಒಡೆಯರ್ ಸಲಹೆ ನೀಡಿದರು.
ನಗರದ ತಾಲೂಕು ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾತೃ ಭಾಷೆ ಮತ್ತು ಬದುಕು ಒಂದೇ ಮುಖದ ಎರಡು ನಾಣ್ಯಗಳಿಂದ್ದಂತೆ, ನಾಡು ನುಡಿಗೆ ನಮನ ಸಲ್ಲಿಸುವುದು ನಮ್ಮ ಕರ್ತವ್ಯವಾಗಬೇಕು. ನಮ್ಮ ಭಾಷೆಯನ್ನು ಮತ್ತಷ್ಟು ಬೆಳೆಸುವ ಚಿಂತನೆಗಳು ಎಲ್ಲರಲ್ಲೂ ಬಂದಾಗ ಮಾತ್ರ ಕನ್ನಡ ಭಾಷೆ ಇನ್ನಷ್ಟು ಶ್ರೀಮಂತವಾಗಲು ಸಾಧ್ಯ. ನಾವು ಕನ್ನಡಿಗರು ಎಂದು ಹೆಮ್ಮೆಯಿಂದ ಹೇಳಿಕೊಳ್ಳಲು ಬೇರೆ ಭಾಷೆಗಳು ಅಡ್ಡಿಯಾಗಬಾರದು ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಲು ಎಲ್ಲರೂ ಒಂದಾಗಬೇಕು ಎಂದರು.
ಕರವೇ ಕಬ್ಟಾಳೇಗೌಡ ಮಾತನಾಡಿ, ಸಂವಿಧಾನದಲ್ಲಿ ಎಲ್ಲ ಭಾಷೆಗಳಿಗೂ ಸಮಾನ ಸ್ಥಾನಮಾನ ಇದ್ದರೂ, ಹಿಂದಿ ಭಾಷೆಯನ್ನು ಮಾತ್ರ ರಾಷ್ಟ್ರ ಭಾಷೆ ಎಂದು ಒಪ್ಪಿಕೊಳ್ಳುವಂತೆ ಒತ್ತಡ ಹೇರಲಾಗುತ್ತಿದೆ. ನಮ್ಮ ಭಾಷೆಯನ್ನು ನಾವೇ ಗೌರ ವಿಸ ದಿದ್ದರೆ, ಬೇರೆ ಯಾರೂ ಗೌರವಿಸಲು ಸಾಧ್ಯವಿಲ್ಲ ಎಂದರು. ಶಿರಸ್ತೆದಾರ್ ರಘು, ಕರವೇ ಉಪಾಧ್ಯಕ್ಷ ಕೃಷ್ಣಪ್ಪ, ಜಿಲ್ಲಾ ಲೇಖಕರ ವೇದಿಕೆ ಅಧ್ಯಕ್ಷ ಕೂಗಿ ಗಿರಿಯಪ್ಪ, ರೈತ ಸಂಘದ ಜಿಲ್ಲಾ ಕಾರ್ಯಧ್ಯಕ್ಷ ಚೀಲೂರು ಮುನಿರಾಜು, ಸ್ವ.ತ.ಕರವೇ ಜಿಲ್ಲಾಧ್ಯಕ್ಷ ಭಾಸ್ಕರ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Ramnagar; ಹೊಸವರ್ಷದಂದೇ ಎರಡು ಪ್ರತ್ಯೇಕ ಅಪಘಾ*ತ: ಮೂವರ ಸಾ*ವು
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Channapatna: ಕೆಲಸದ ಒತ್ತಡ ತಾಳಲಾರದೆ ಮುಖ್ಯ ಶಿಕ್ಷಕ ವಿಷ ಸೇವಿಸಿ ಆತ್ಮಹ*ತ್ಯೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Sanju Weds Geetha 2: ಸಂಜು-ಗೀತಾಗೆ ಕಿಚ್ಚ ಸಾಥ್
Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್ ಮಾದರಿಯ ಎಚ್ ಎಂಪಿವಿ ವೈರಸ್?
Gadag: ನಿರ್ಮಿತಿ ಕೇಂದ್ರದ ಗುತ್ತಿಗೆ ಆಧಾರಿತ ಇಂಜಿನಿಯರ್ ಆತ್ಮಹ*ತ್ಯೆ
Bantwala: ನೇತ್ರಾವತಿ ನದಿಯ ಅಂಬಿಗ ನಾಪತ್ತೆ; ಸ್ಥಳೀಯರಿಂದ ಶೋಧ ಕಾರ್ಯ
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ರಸ್ತೆಯಲ್ಲೇ ನಡೆಯಿತು ಪವಾಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.