ಕಸಾಪ: ಮಹೇಶ್ ಜೋಶಿ ಪರ ರುದ್ರೇಶ್ವರ ಪ್ರಚಾರ
Team Udayavani, Nov 20, 2021, 3:53 PM IST
ರಾಮನಗರ: ಕಸಾಪ ಜನಸಾಮಾನ್ಯರ ಪರಿಷತ್ತನ್ನಾಗಿ ಮಾಡಲು ಕಸಾಪ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ನಾಡೋಜ ಡಾ.ಮಹೇಶ್ ಜೋಶಿ ಅವರಿಗೆ ಕಸಾಪ ಸದಸ್ಯರು ಮತ ನೀಡಬೇಕು ಎಂದು ಲೇಖಕ ಎಸ್. ರುದ್ರೇಶ್ವರ ತಿಳಿಸಿದರು.
ತಾಲೂಕಿನ ಬಿಡದಿಯಲ್ಲಿ ಕಸಾಪ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ನಾಡೋಜ ಡಾ.ಮಹೇಶ್ ಜೋಶಿ ಅವರ ಪರವಾಗಿ ಮತಯಾಚನೆ ಮಾಡಿ ಅವರು ಮಾತನಾಡಿ, 21ರಂದು ನಡೆಯುವ ಕಸಾಪ ಚುನಾವಣೆಯಲ್ಲಿ ಮಹೇಶ್ ಜೋಶಿ ಅವರನ್ನು ಬೆಂಬಲಿಸಬೇಕು. ಈ ನಾಡಿನ ಸಾಹಿತ್ಯ- ಸಂಸ್ಕೃತಿ, ನಾಡು-ನುಡಿ, ನೆಲ-ಜಲದ ಪ್ರಾಮಾ ಣಿಕ ಸೇವೆಗಾಗಿ ಅವರು ಕಾರ್ಯನಿರ್ವಹಿಸಲಿದ್ದಾರೆ ಎಂದರು.
ಗಡಿನಾಡಿನ ಸಮಸ್ಯೆ ಬಗ್ಗೆ ಅರಿವಿದೆ
ಗಡಿನಾಡಿನ ಸಮಸ್ಯೆ ಗಳ ಬಗ್ಗೆ ಅದರಲ್ಲೂ ಕನ್ನಡ ಶಾಲೆಗಳ ಸ್ಥಿತಿ-ಗತಿ ಹಾಗೆಯೇ ಕನ್ನಡಿಗರಿಗೆ ಇರುವ ಉದ್ಯೋಗದ ಸಮಸ್ಯೆಗಳ ಬಗ್ಗೆ ಮಹೇಶ್ ಜೋಶಿ ಅವರಿಗೆ ಆಳವಾದ ಅರಿವಿದೆ. ಕನ್ನಡ ಅನ್ನದ ಭಾಷೆ ಆಗಬೇಕು ಎಂಬ ಮಹಾದಾಸೆಯನ್ನು ಅನು ಷ್ಠಾನಗೊಳಿಸಲು ಅವರು ಶ್ರಮಿಸಲಿದ್ದಾರೆ ಹಾಗಾಗಿ ಸದಸ್ಯರು ಮತ ನೀಡುವಂತೆ ಮನವಿ ಮಾಡಿದರು.
ತಂತ್ರಜ್ಞಾನ ಬಳಕೆ
ಕನ್ನಡ ಸಾಹಿತ್ಯ ಪರಿಷತ್‌ಗೆ ತಂತ್ರಜಾnನ ವನ್ನು ಬಳಸಿಕೊಳ್ಳುವ ಮೂಲಕ ಆಧುನಿಕ ಸ್ಪರ್ಶವನ್ನು ನೀಡಲಿದ್ದಾರೆ ಎಂದು ಹೇಳಿದರು.
ಕನ್ನಡದ ರಾಯಭಾರಿಯಾಗಿ ಕೆಲಸ
ಮೂರು ದಶಕ ಗಳಿಗೂ ಮೀರಿದ ವಿವಿಧ ಹುದ್ದೆಗಳ ಆಡಳಿತಾತ್ಮಕ ಅನು ಭವಗಳಿದ್ದರೂ, ಕನ್ನಡದ ರಾಯಭಾರಿಯಾಗಿ ಕೆಲಸ ಮಾಡಿ ಹೊಸ ದಿಕ್ಕನ್ನು ಸೃಷ್ಠಿಸುವ ಉದ್ದೇಶದಿಂದ ಸ್ಪರ್ಧಿಸಿದ್ದಾರೆ ಎಂದು ತಿಳಿಸಿದರು. ಸ್ಪಂದನ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮುತ್ತಣ್ಣ, ಅಖೀಲ ಭಾರತೀಯ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಮಿತಿ ಕಾರ್ಯ ದರ್ಶಿ ವಿಜಯೇಂದ್ರ, ಮಕ್ಕಳ ಘಟಕ ಪರಿಷತ್ ಜಿಲ್ಲಾ ಪ್ರಮುಖ್ ಮತ್ತು ಘಟಕ ಪ್ರಮುಖ್ ಎಂ.ಎಸ್. ಚನ್ನ ವೀರಪ್ಪ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.