Kengal Hanumanthaiah: ಕೆಂಗಲ್‌ ಹನುಮಂತಯ್ಯ ಜನ್ಮದಿನ ಸ್ಮರಿಸದ ಜಿಲ್ಲೆ

Team Udayavani, Feb 15, 2024, 5:15 PM IST

Kengal Hanumanthaiah: ಕೆಂಗಲ್‌ ಹನುಮಂತಯ್ಯ ಜನ್ಮದಿನ ಸ್ಮರಿಸದ ಜಿಲ್ಲೆ

ರಾಮನಗರ: ಅಧಿಕಾರವನ್ನು ಲೆಕ್ಕಿಸದೆ ಅಖಂಡ ಕರ್ನಾಟಕ ಘೋಷಣೆ ಮಾಡಿದ, ರಾಜ್ಯದ ಆಡಳಿತ ಕೇಂದ್ರವಾದ ವಿಧಾನಸೌಧವನ್ನು ನಿರ್ಮಾಣ ಮಾಡಿದ, ಮಾಜಿ ಮುಖ್ಯಮಂತ್ರಿ ಕೆಂಗಲ್‌ ಹನುಮಂತಯ್ಯ ಅವರ ಜನ್ಮದಿವನ್ನು ಜಿಲ್ಲಾಡಳಿತ ಮತ್ತು ಸರ್ಕಾರ ಮರೆತಿದೆಯಾ..?

ಕೆಂಗಲ್‌ ಹನುಮಂತಯ್ಯ ಬಗ್ಗೆ ಜಿಲ್ಲೆಯಲ್ಲಿ ತೋರುತ್ತಿರುವ ಉದಾಸೀನ ಸಾರ್ವಜನಿಕರಲ್ಲಿ ಇಂತಹುದೊಂದು ಪ್ರಶ್ನೆ ಮೂಡಿದೆ. ಫೆ.14 ಕೆಂಗಲ್‌ ಹನುಮಂತಯ್ಯ ಅವರ ಜನ್ಮದಿನ. ಜಿಲ್ಲೆಯ ಹಾಗೂ ರಾಜ್ಯದ ಪ್ರಮುಖ ರಾಜ ಕಾರಣಿಗಳು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಈಕುರಿತು ಪೋಸ್ಟ್‌ಗಳನ್ನು ಹಾಕಿಕೊಂಡದ್ದಾರೆ. ಆದರೆ, ಅವರ ತವರು ನೆಲದಲ್ಲಿ ಕೆಂಗಲ್‌ ಹನುಮಂತಯ್ಯ ಅವರನ್ನು ಸ್ಮರಿಸುವ ಕನಿಷ್ಠ ಕಾರ್ಯವೂ ನಡೆಯದೇ ಇರುವುದು ವಿಷಾದನೀಯ.

ಪ್ರತಿಮೆ ಮತ್ತು ಸಮಾಧಿಗೆ ಧೂಳು ಹೊಡೆದು ಹೂ ಇಡುವವರಿಲ್ಲ: ರಾಮನಗರ ಜಿಲ್ಲೆಯಲ್ಲಿ ಯಾವುದೇ ರಾಜಕೀಯ ಕಾರ್ಯಕ್ರಮಗಳು ನಡೆದಾಗಲು ನಗರದ ಕೆಂಗಲ್‌ ಹನುಮಂತಯ್ಯ ವೃತ್ತದಲ್ಲಿರುವ ಕೆಂಗಲ್‌ ಹನುಮಂತಯ್ಯ ಅವರ ಪ್ರತಿಮೆಗೆ ಹಾರ ಹಾಕುವುದು ರಾಜ ಕಾರಣಿಗಳ ವಾಡಿಕೆ. ಇನ್ನು ಕೆಲ ಪ್ರತಿಭಟನೆಗೂ ಕೆಂಗಲ್‌ ಹನುಮಂತಯ್ಯ ಪ್ರತಿಮೆಯೇ ಕೇಂದ್ರಸ್ಥಾನ. ಈ ಪ್ರತಿಮೆಯನ್ನು ಅವರ ಜನ್ಮದಿನದಂದು ಧೂಳು ತೆಗೆಯುವ ಪ್ರಯತ್ನಕ್ಕೂ ಯಾರೂ ಮುಂದಾಗದಿರುವುದು ವಿಷಾದನೀಯವೇ ಸರಿ. ಇನ್ನು ಚನ್ನಪಟ್ಟಣದ ಕೆಂಗಲ್‌ ಆಂಜನೇಯಸ್ವಾಮಿ ದೇವಾಲಯದ ಸಮೀಪ ಕೆಂಗಲ್‌ ಹನುಮಂತಯ್ಯ ಅವರ ಸಮಾಧಿ ಇದ್ದು, ಈ ಸಮಾಧಿ ಅಭಿವೃದ್ಧಿ ಕಾರ್ಯ ಕೇವಲ ಭರವಸೆಯಾಗೇ ಉಳಿದಿದೆ. ಅವರ ಸಮಾಧಿಗೆ ಪೂಜೆ ಸಲ್ಲಿಸುವವರೂ ಇಲ್ಲವಾಗಿದ್ದು ಸಮಾಧಿ ಸ್ಥಳ ಧೂಳು ತಿನ್ನುತ್ತಿದೆ.

ಜಿಲ್ಲಾಡಳಿತ ಜಾಣಮೌನ: ರಾಜ್ಯದ ಸರ್ಕಾರ ಸುವ ರ್ಣ ಕರ್ನಾಟಕ ರಾಜ್ಯೋತ್ಸವದ ಆಚರಣೆಯಲ್ಲಿದೆ. ಇಂತಹ ಮಹತ್ವದ ಕ್ಷಣಕ್ಕೆ ಕಾರಣೀ ಭೂತ ರಾದ ಪ್ರಮುಖ ವ್ಯಕ್ತಿ ಕೆಂಗಲ್‌ ಹನುಮಂತಯ್ಯ ಅವರ ಜನ್ಮದಿನವನ್ನು ಸರ್ಕಾರ ಇಷ್ಟೊಂದು ಕಡೆಗಣಿಸುತ್ತಿರುವುದು ಹಲವು ಸಮಸ್ಯೆಗಳಿಗೆ ಕಾರಣವಾಗಿದೆ. ಸರ್ಕಾರ ಒತ್ತಟ್ಟಿಗಿರಲಿ, ಜಿಲ್ಲಾಡಳಿತವಾಗಲಿ ಕೆಂಗಲ್‌ ಹನುಮಂತ್ಯವರನ್ನು ಸ್ಮರಿಸದೇ ಇರುವುದು ವಿಷಾದನೀಯವೇ ಸರಿ. ಕೆಂಗಲ್‌ ಹನುಮಂತಯ್ಯ ಅವರ ಪ್ರತಿಮೆಗೆ ಹಾರ ಹಾಕಿ ಅವರು ನಾಡಿಗೆ ನೀಡಿದ ಕೊಡುಗೆಯನ್ನು ಸ್ಮರಿಸದಷ್ಟು ಉದಾಸೀನ ಜಿಲ್ಲಾ ಡಳಿತಕ್ಕೆ ಯಾಕೆ? ಇಂತಹ ಮುತ್ಸದ್ಧಿ ರಾಜಕಾರಣಿಯ ಬಗ್ಗೆ ಈಪರಿಯ ನಿರ್ಲಕ್ಷ್ಯ ಸರಿಯೇ ಎಂದು ಜಿಲ್ಲೆಯ ಜನತೆ ಪ್ರಶ್ನಿಸುತ್ತಿದ್ದಾರೆ.

ಪೋಸ್ಟ್‌ಗೆ ಸೀಮಿತವಾದ ಸ್ಮರಣೆ: ರಾಮನಗರ ಜಿಲ್ಲೆಯಿಂದ ಮೊದಲು ಮುಖ್ಯಮಂತ್ರಿಯಾದವರು ಕೆಂಗಲ್‌ ಹನುಮಂತಯ್ಯ, ಅವರ ಬಳಿಕ ಜಿಲ್ಲೆಯಿಂದ ಮೂರು ಮಂದಿ ನಾಲ್ಕು ಬಾರಿ ಮುಖ್ಯಮಂತ್ರಿ, ಒಬ್ಬರು ಉಪಮುಖ್ಯಮಂತ್ರಿಯಾಗಿದ್ದಾರೆ. ಎಲ್ಲಾ ರಾಜಕೀಯ ನಾಯಕರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಕೆಂಗಲ್‌ ಹನುಮಂತಯ್ಯ ಅವರ ಜನ್ಮದಿನಾಚರಣೆಯ ಬಗ್ಗೆ ಪೋಸ್ಟ್‌ ಹಾಕುವುದಕ್ಕೆ ಸೀಮಿತವಾಗಿದ್ದಾರೆ.

ಜನ್ಮದಿನದ್ದೂ ಗೊಂದಲ : ಕೆಂಗಲ್‌ ಹನುಮಂತಯ್ಯ ಅವರ ಜನ್ಮದಿನದ ಬಗ್ಗೆ ಗೊಂದಲವಿದೆ. ಕೆಂಗಲ್‌ ಹನುಮಂತಯ್ಯ ಅವರ ಜನ್ಮದಿನ ಫೆ.14ಎಂದು ಗೂಗಲ್‌ನಲ್ಲಿ ನಮೂದಾಗಿದ್ದರೆ, ಅವರ ಕುಟುಂಬದ ಮೂಲಗಳ ದಾಖಲೆ ಪ್ರಕಾರ ಅವರ ಜನ್ಮದಿನ ಫೆ.10. ಈ ಎರಡೂ ದಿನಗಳ ಬಗ್ಗೆ ಗೊಂದಲ ಇರುವ ಕಾರಣ ಕೆಲ ಮುಖಂಡರು ಫೆ.14 ರಂದು ಕೆಂಗಲ್‌ ಹನುಮಂತಯ್ಯ ಅವರ ಜನ್ಮದಿನವನ್ನು ಆಚರಿಸಿದರೆ ಮತ್ತೆ ಕೆಲವರು ಫೆ.10ರಂದೇ ಜನ್ಮ ದಿನ ಆಚರಿಸುತ್ತಾರೆ. ಆದರೆ ಜಿಲ್ಲಾಡಳಿತವಾಗಲಿ, ಜಿಲ್ಲೆಯ ಯಾವುದೇ ಸಂಘ ಸಂಸ್ಥೆಗಳಾಗಲಿ ಎರಡೂ ದಿನವೂ ಕೆಂಗಲ್‌ ಹನುಮಂತಯ್ಯ ಅವರನ್ನು ಸ್ಮರಿಸದಿರುವುದು ವಿಷಾದನೀಯವೇ ಸರಿ.

ಕೆಂಗಲ್‌ ಹನುಮಂತಯ್ಯ ಅವರ ಜನ್ಮದಿನ ಫೆ.10. ಗೂಗಲ್‌ನಲ್ಲಿ ತಪ್ಪು ದಿನಾಂಕವನ್ನು ನಮೂದಿ ಸಲಾಗಿದೆ. ಫೆ.10ರಂದು ಕೆಂಗಲ್‌ ಹನುಮಂತಯ್ಯ ಟ್ರಸ್ಟ್‌ ವತಿಯಿಂದ ಸರಳವಾಗಿ ಆಚರಿಸಿದ್ದೇವೆ. ರಾಜ್ಯ ಸರ್ಕಾರ ದಂತಕತೆ, ಪುರಾಣಕತೆಯಲ್ಲಿರುವ ವ್ಯಕ್ತಿಗಳ ಜನ್ಮದಿನವನ್ನು ಆಚರಿಸುತ್ತಿರುವಾಗ, ವಿಧಾನಸೌಧ ನಿರ್ಮಾತೃ, ಕರ್ನಾಟಕ ಏಕೀಕರಣ ಮಾಡಿದ ಮಹಾನ್‌ ವ್ಯಕ್ತಿಯ ಜನ್ಮದಿನಾಚರಣೆಯನ್ನು ನಡೆಸಲು ಉದಾ ಸೀನ ತೋರುತ್ತಿರುವುದು ಯಾಕೆ. ಮುಂದಾದರೂ ಕೆಂಗಲ್‌ ಹನುಮಂತಯ್ಯ ಅವರ ಕೊಡುಗೆಯನ್ನು ಸ್ಮರಿಸಿ ಅವರನ್ನು ಗೌರವಿಸುವಕೆಲಸ ಮಾಡಲಿ. -ಪ್ರೋ.ಎಂ.ಶಿವನಂಜಯ್ಯ, ವಿಶ್ರಾಂತಪ್ರಾಂಶುಪಾಲ, ಅಧ್ಯಕ್ಷರು ಕೆಂಗಲ್‌ ಹನುಮಂತಯ್ಯ ಟ್ರಸ್ಟ್‌ ರಾಮನಗರ

ಸು.ನಾ.ನಂದಕುಮಾರ್‌

ಟಾಪ್ ನ್ಯೂಸ್

Belagavi-Sess

Legislative House: ಶಾಸನಸಭೆಯೊಳಗೆ ಪೊಲೀಸ್‌ ಪ್ರವೇಶಕ್ಕಿಲ್ಲ ಅವಕಾಶ: ತಜ್ಞರು

1-eewqew

Christmas; ಪ್ರಭು ಕ್ರಿಸ್ತನ ಸ್ವಾಗತಕ್ಕೆ ಕರಾವಳಿ ಸಡಗರದಿಂದ ಸಜ್ಜು

Jammu- Kashmir: ಆಯ್ಕೆಯಾಗಿ 2 ತಿಂಗಳಾದ್ರೂ ಶಾಸಕರಿಗೆ ಮೊದಲ ವೇತನ ಸಿಕ್ಕಿಲ್ಲ!

Jammu- Kashmir: ಆಯ್ಕೆಯಾಗಿ 2 ತಿಂಗಳಾದ್ರೂ ಶಾಸಕರಿಗೆ ಮೊದಲ ವೇತನ ಸಿಕ್ಕಿಲ್ಲ!

HD-Kumaraswmy

Police System: ಕರ್ನಾಟಕ ಪೊಲೀಸರ ಘನತೆ ಕಾಂಗ್ರೆಸ್‌ನಿಂದ ಸರ್ವನಾಶ: ಎಚ್‌.ಡಿ.ಕುಮಾರಸ್ವಾಮಿ

1-koteshwara

Koteshwara: ಟಯರ್‌ಗೆ ಗಾಳಿ ತುಂಬುತ್ತಿದ್ದ ವೇಳೆ ಸ್ಫೋ*ಟಗೊಂಡು ಯುವಕ ಗಂಭೀರ; ಕಾರಣಗಳೇನು?

2nd ODI: ವನಿತಾ ಏಕದಿನ ಸರಣಿ: ಇಂದು ಭಾರತ-ವಿಂಡೀಸ್‌ 2ನೇ ಪಂದ್ಯ

2nd ODI: ವನಿತಾ ಏಕದಿನ ಸರಣಿ: ಇಂದು ಭಾರತ-ವಿಂಡೀಸ್‌ 2ನೇ ಪಂದ್ಯ

Enforcement Directorate: ಕ್ರಿಮಿನಲ್‌ ಪಿತೂರಿಯಡಿ ಮಾತ್ರವೇ ಅಕ್ರಮ ಹಣ ವರ್ಗ ಕೇಸು ಬೇಡ

Enforcement Directorate: ಕ್ರಿಮಿನಲ್‌ ಪಿತೂರಿಯಡಿ ಮಾತ್ರವೇ ಅಕ್ರಮ ಹಣ ವರ್ಗ ಕೇಸು ಬೇಡ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Channapatna: ಕೆಲಸದ ಒತ್ತಡ ತಾಳಲಾರದೆ ಮುಖ್ಯ ಶಿಕ್ಷಕ ವಿಷ ಸೇವಿಸಿ ಆತ್ಮಹ*ತ್ಯೆ

Channapatna: ಕೆಲಸದ ಒತ್ತಡ ತಾಳಲಾರದೆ ಮುಖ್ಯ ಶಿಕ್ಷಕ ವಿಷ ಸೇವಿಸಿ ಆತ್ಮಹ*ತ್ಯೆ

10-ramanagara

Ramanagara: ಕಾಡಾನೆ ದಾಳಿಗೆ ರೈತ ಬಲಿ

DOG (2)

Ramanagara:ನಾಯಿ ಜತೆ ಮೂವರ ಅನೈಸರ್ಗಿಕ ಲೈಂಗಿ*ಕ ಚಟುವಟಿಕೆ: ಓರ್ವ ಸೆರೆ

Magadi Bus Stand: ಮಾಗಡಿ ಬಸ್‌ ನಿಲ್ದಾಣದಲ್ಲಿ ಸಮಸ್ಯೆಗಳ ಸರಮಾಲೆ

Magadi Bus Stand: ಮಾಗಡಿ ಬಸ್‌ ನಿಲ್ದಾಣದಲ್ಲಿ ಸಮಸ್ಯೆಗಳ ಸರಮಾಲೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Belagavi-Sess

Legislative House: ಶಾಸನಸಭೆಯೊಳಗೆ ಪೊಲೀಸ್‌ ಪ್ರವೇಶಕ್ಕಿಲ್ಲ ಅವಕಾಶ: ತಜ್ಞರು

1-eewqew

Christmas; ಪ್ರಭು ಕ್ರಿಸ್ತನ ಸ್ವಾಗತಕ್ಕೆ ಕರಾವಳಿ ಸಡಗರದಿಂದ ಸಜ್ಜು

Jammu- Kashmir: ಆಯ್ಕೆಯಾಗಿ 2 ತಿಂಗಳಾದ್ರೂ ಶಾಸಕರಿಗೆ ಮೊದಲ ವೇತನ ಸಿಕ್ಕಿಲ್ಲ!

Jammu- Kashmir: ಆಯ್ಕೆಯಾಗಿ 2 ತಿಂಗಳಾದ್ರೂ ಶಾಸಕರಿಗೆ ಮೊದಲ ವೇತನ ಸಿಕ್ಕಿಲ್ಲ!

HD-Kumaraswmy

Police System: ಕರ್ನಾಟಕ ಪೊಲೀಸರ ಘನತೆ ಕಾಂಗ್ರೆಸ್‌ನಿಂದ ಸರ್ವನಾಶ: ಎಚ್‌.ಡಿ.ಕುಮಾರಸ್ವಾಮಿ

1-koteshwara

Koteshwara: ಟಯರ್‌ಗೆ ಗಾಳಿ ತುಂಬುತ್ತಿದ್ದ ವೇಳೆ ಸ್ಫೋ*ಟಗೊಂಡು ಯುವಕ ಗಂಭೀರ; ಕಾರಣಗಳೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.