ಜಿಲ್ಲೆಯಲ್ಲಿ ಗಾಳಿಪಟ ಉತ್ಸವ ಅರ್ಥಪೂರ್ಣ ಆಚರಣೆ
Team Udayavani, Jul 30, 2022, 3:26 PM IST
ರಾಮನಗರ: ಜಾನಪದ ಕಲೆಯಾಗಿರುವ ಗಾಳಿಪಟ ಹಾರಿಸುವ ಉತ್ಸವವನ್ನು ಜಿಲ್ಲೆಯಲ್ಲಿಅರ್ಥ ಪೂರ್ಣವಾಗಿ ಆಚರಿಸುತ್ತಿರುವುದು ಬಹಳ ಸಂತೋಷದ ವಿಷಯವಾಗಿದ್ದೂ, ಮಕ್ಕಳಿಗೆ ಗಾಳಿಪಟದ ಮೂಲಕ ಸಮಾಜಿಕಸಂದೇಶ ನೀಡಬೇಕು ಎಂದು ಸಚಿವ ಡಾ.ಅಶ್ವತ್ಥನಾರಾಯಣ ಸಿ.ಎನ್ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಾನಪದ ಪರಿಷತ್, ಕನ್ನಡ ಮತ್ತು ಸಂಸ್ಕೃತಿಇಲಾಖೆಯಿಂದ ಜಿಲ್ಲಾ ಕ್ರೀಡಾಂಗಣದಲ್ಲನಡೆದ ರಾಜ್ಯ ಮಟ್ಟದ ಗಾಳಿಪಟ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,ಮಹಾಪುರುಷರಾದ ಎಚ್.ಎಲ್ ನಾಗೇಗೌಡರು ಜಾನಪದ ಲೋಕವನ್ನು ಸ್ಥಾಪಿಸಿ, ಜಾನಪದ ಕಲೆಯನ್ನು ಉಳಿಸಿಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.ಅಲ್ಲದೆ, ಜಾನಪದದ ಬಗ್ಗೆ ಅವರಿದ್ದ ಕಾಳಜಿಯ ಫಲವಾಗಿ ಜಿಲ್ಲೆಯಲ್ಲಿ ಜಾನಪದ ಲೋಕವೆಂಬ ಕಾಶಿ ತಲೆ ಎತ್ತುವಂತಾಗಿದೆ. ಇದು ನಮ್ಮೆಲ್ಲರಿಗೂ ಹೆಮ್ಮೆಯ ವಿಚಾರ ಎಂದರು.
ಪ್ರಕೃತಿಯೊಂದಿಗೆ ಸಂಸ್ಕೃತಿ ಬೆಳೆಸಿ: ರಾಮನಗರ ಜಿಲ್ಲೆ ಎಲ್ಲಾ ಕ್ಷೇತ್ರದಲ್ಲಿ ಮಾದರಿಯಾಗಿ ಬೆಳೆಯುತ್ತಿದೆ. ಅದನ್ನ ಸದ್ಬಳಕೆ ಮಾಡಿಕೊಂಡು ನಾವು ಮುಂದೆ ಸಾಗಬೇಕಿದೆ. ಅಲ್ಲದೆ, ಪ್ರಕೃತಿಕೂಡ ನಮಗೆ ಸಾಕಷ್ಟು ವರದಾನವಾಗಿದೆ. ಈನಿಟ್ಟಿನಲ್ಲಿ ಪ್ರಕೃತಿಯೊಂದಿಗೆ ನಮ್ಮಸಂಸ್ಕೃತಿಯನ್ನು ನಾವೆಲ್ಲರೂ ಉಳಿಸಿ ಬೆಳೆಸೋಣ ಎಂದರು.
ಜಾನಪದ ಬೆಳೆಸುವುದು ಅವಶ್ಯ: ಗಾಳಿಪಟದ ಬಗ್ಗೆ ಹರಿವು ಇಲ್ಲದ ಮಕ್ಕಳಲ್ಲಿ ಗಾಳಿಪಟದ ಬಗ್ಗೆ ಹರಿವು ಮೂಡಿಸುವುದರೊಂದಿಗೆ ಗ್ರಾಮೀಣ ಸೊಗಡು ಉಳಿಸಿ ಬೆಳೆಸುವ ಕೆಲಸವನ್ನು ಕನ್ನಡ ಮತ್ತು ಸಂಸ್ಕೃತಿ, ಜನಪದಪರಿಷತ್ತು ಮಾಡುತ್ತಿದೆ. ಇದು ಉತ್ತಮಬೆಳವಣಿಗೆ. ಗಾಳಿಪಟ ಮಾನವನ ಹಾರುವಿಕೆಗೆ ಪರಿಕಲ್ಪನೆಯ ಮೂಲ ಎಂದರೆ ತಪ್ಪಲ್ಲ.ಗಾಳಿಪಟ ಕಟ್ಟುವಿಕೆ ಕೂಡ ಒಂದು ಕಲೆಯೂಆಗಿರುವುದರಿಂದ ನಶಿಸಿ ಹೋಗುತ್ತಿರುವ ಈ ಕಲೆಯನ್ನು ಉಳಿಸಿ ಬೆಳೆಸುವುದುಅತ್ಯವಶ್ಯವಾಗಿದೆ. ಈ ಅಮೂಲ್ಯ ಸಂಸ್ಕೃತಿಯನ್ನು ಭವಿಷ್ಯಕ್ಕೆ ಉಳಿಸಿಕೊಡುವ ನಿಟ್ಟಿನಲ್ಲಿ ಗಾಳಿಪಟ ಉತ್ಸವ ದಾರಿದೀಪವಾಗಿದೆ ಎಂದರು.
ಮನುಷ್ಯ ಜೀವನ ಕೂಡ ಸೂತ್ರವಿರದ ಗಾಳಿಪಟವಿದ್ದಂತೆ ಅಲ್ಲಿ ಎಲ್ಲರೂ ಕಷ್ಟಪಟ್ಟು ಮೇಲೇರಬೇಕು. ಶ್ರಮಜೀವಿಗಳಾಗಿ ನಾವೆಲ್ಲರೂ ಜೀವನದಲ್ಲಿ ಗಾಳಿಪಟದಂತೆಎತ್ತರಕ್ಕೆ ಬೆಳೆಯಬೇಕು. ರಾಮನಗರ ಜಿಲ್ಲೆ ಗಾಳಿಪಟದಂತೆ ಬೆಳೆಯಲಿ, ಅದಕ್ಕೆ ಸರ್ಕಾರ ಸದಾ ಕಾಲ ಸಹಕಾರ ಕೊಡುತ್ತೆ ಜೊತೆಗೆಜಿಲ್ಲೆಯ ಬೆಳವಣಿಗೆಗೆ ಪೂರಕವಾಗಿ ನಾವು ಬೆಂಗಾವಲಾಗಿ ಇರುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯರಾದ ಸಿ.ಎಂ.ಲಿಂಗಪ್ಪ, ಅ.ದೇವೇಗೌಡ,ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್, ಜಿಲ್ಲಾ ಪೊಲೀಸ್‌ವರಿಷ್ಠಾಧಿಕಾರಿ ಸಂತೋಷ್ ಬಾಬು, ಆರ್ಥಿಕಇಲಾಖೆಯ ಉಪ ಕಾರ್ಯದರ್ಶಿ ಇಕ್ರಂ,ಕರ್ನಾಟಕ ಜಾನಪದ ಪರಿಷತ್ತಿನಮ್ಯಾನೇಜಿಂಗ್ ಟ್ರಸ್ಟಿ ಆದಿತ್ಯ ನಂಜರಾಜ ಹಾಗೂ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಭಾಗಹಿಸಿದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ramanagara: ಬಸ್ -ಬೈಕ್ ಅಪಘಾತ; ಇಬ್ಬರು ಮಕ್ಕಳು ಮೂವರು ಸ್ಥಳದಲ್ಲೇ ಮೃತ್ಯು
Elephant Camp: ರಾಮನಗರದ ಮುತ್ತತ್ತಿ ಬಳಿ ರಾಜ್ಯದ 10ನೇ ಆನೆ ಕ್ಯಾಂಪ್ ಶೀಘ್ರ ಆರಂಭ?
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Ramnagar; ಹೊಸವರ್ಷದಂದೇ ಎರಡು ಪ್ರತ್ಯೇಕ ಅಪಘಾ*ತ: ಮೂವರ ಸಾ*ವು
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
MUST WATCH
ಹೊಸ ಸೇರ್ಪಡೆ
Chhattisgarh: ಮೂವರು ನಕ್ಸಲರ ಎನ್‌ಕೌಂಟರ್… ವರ್ಷ ಆರಂಭದಲ್ಲೇ 9 ನಕ್ಸಲರು ಉಡೀಸ್
Ajekar: ಎಷ್ಟು ದಿನ ಟವರ್ ನೋಡ್ಕೊಂಡಿರ್ಲಿ, ನಮ್ಗೆ ಬೇಗನೆ ಕನೆಕ್ಷನ್ ಕೊಡಿ ಸ್ವಾಮಿ!
Champions Trophy: ಬಾಂಗ್ಲಾದೇಶ ತಂಡ ಪ್ರಕಟ; ಇಬ್ಬರು ಹಿರಿಯ ಆಟಗಾರರಿಗೆ ಇಲ್ಲ ಸ್ಥಾನ
Kundapura: ಕೋಡಿ ಸಮುದ್ರ ತೀರದಲ್ಲಿ ಶೌಚಾಲಯ ಸಿದ್ಧವಾದರೂ ಪ್ರವಾಸಿಗರ ಬಳಕೆಗೆ ಇಲ್ಲ!
Mangaluru: ನಾಗುರಿ ಬಳಿ ನೀರು ಪೂರೈಕೆ ಪೈಪ್‌ಲೈನ್ ಅಳವಡಿಕೆ ಪೂರ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.