Kudur: ವಿವಿಧ ಕಾರ್ಯಕ್ರಮಗಳಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಚಾಲನೆ, ಶಂಕು ಸ್ಥಾಪನೆ
Team Udayavani, Oct 7, 2023, 4:14 PM IST
ಕುದೂರು: ಇಲ್ಲಿನ ಕೆಪಿಎಸ್ ಶಾಲೆಯ ರಂಗಮಂದಿರದಲ್ಲಿ ವಿವಿಧ ಕಾರ್ಯಕ್ರಮಗಳಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚಾಲನೆ ನೀಡಿದರು.
ಕುದೂರಿನಲ್ಲಿ ಟಯೋಟಾ ಕಾರ್ಲೋಸ್ಕರ್ ಸಹಯೋಗದೊಂದಿಗೆ ಕೆಪಿಎಸ್ ಶಾಲಾ ಕಟ್ಟಡ ಶಂಕು ಸ್ಥಾಪನೆ, ಪಟ್ಟಣದಲ್ಲಿ ಪಾರ್ಕ್ ಅಭಿವೃದ್ಧಿಗೆ ಶಂಕುಸ್ಥಾಪನೆ, ಬಯಲು ರಂಗ ಮಂದಿರಕ್ಕೆ ಶಂಕುಸ್ಥಾಪನೆ, ರೈತರಿಗೆ ಸಾಗುವಳಿ ಚೀಟಿ ಹಾಗೂ ಹಕ್ಕು ಪತ್ರ ವಿತರಣೆ ಕಾರ್ಯಕ್ರಮಗಳು ಒಂದೇ ವೇದಿಕೆಯಲ್ಲಿ ನಡೆದವು.
ಬಳಿಕ ಮರೂರು ಹ್ಯಾಂಡ್ ಪೋಸ್ಟ್ ನಲ್ಲಿ ಡಿಪ್ಲೋಮಾ ಕಾಲೇಜು ಕಟ್ಟಡಕ್ಕೆ ಶಂಕುಸ್ಥಾಪನೆ, ತಿಪ್ಪಸಂದ್ರ ಹೋಬಳಿಯಲ್ಲಿನ ಕೆಂಪಾಪುರದಲ್ಲಿ ನಾಡ ಪ್ರಭು ಕೆಂಪೇಗೌಡರ ಸಮಾಧಿ ವೀಕ್ಷಣೆ, ಮಾಗಡಿ ತಾಪಂ ಕಚೇರಿ ಹಾಗೂ ಕೆಂಪೇಗೌಡರ ಕೋಟೆಯನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ತಂಡ ವೀಕ್ಷಣೆ ನಡೆಸಿತ್ತು.
ನಂತರ ಮಾತನಾಡಿದ ಅವರು ನಮ್ಮ ಜಿಲ್ಲೆಗೆ ಇದು ಸಂತೋಷದ ದಿನ. ಗ್ರಾಮೀಣ ಪ್ರದೇಶದಲ್ಲಿ ಸಿಎಸ್ಆರ್ ನಿಧಿ ಮೂಲಕ ರಾಜ್ಯದಲ್ಲಿ ಮಾದರಿ ಸರ್ಕಾರಿ ಶಾಲೆ ಕಟ್ಟಬೇಕು ಎಂಬ ಉದ್ದೇಶದಿಂದ ಈಗ ಕುದೂರಿನ ಮೂಲಕ ನನ್ನ ಕನಸು ನಸಾಗಿದೆ. ಟಯೂಟೂ ಸಂಸ್ಥೆ ಐದು ಕೂಟಿ ವೆಚ್ಚದಲ್ಲಿ ಕೆಪಿಎಸ್ ಶಾಲೆಯನ್ನು ನಿರ್ಮಾಣ ಮಾಡಲಿದ್ದಾರೆ ಇಂತಹ ಶಾಲೆಗಳು ಪ್ರತಿ ಪಂಚಾಯಿತಿಗೂಂದು ನಿರ್ಮಾಣ ಮಾಡಲಾಗುವುದು ಎಂದರು.
ಶಿಕ್ಷಣಕ್ಕಾಗಿ ಬೆಂಗಳೂರಿಗೆ ಓಡಾಡುವ ಪರದಾಟ ತಪ್ಪಿಸಲು ಗ್ರಾಮೀಣ ಪ್ರದೇಶಗಳಲ್ಲಿ ಮಾದರಿ ಶಾಲೆಗಳು ನಿರ್ಮಾಣವಾಗಲಿವೆ ಎಂದರು.
ಗೃಹಲಕ್ಷ್ಮಿ ಸಮಸ್ಯೆ ಶೀಘ್ರ ಪರಿಹಾರ: ಶೇ.88 ರಷ್ಟು ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ ತಲುಪಿದೆ. ಉಳಿದ ಅರ್ಜಿದಾರರಿಗೆ ಬ್ಯಾಂಕ್ ಸಮಸ್ಯೆ, ಆದಾರ್ ಲಿಂಕ್ ಗಳು ಸರಿಯಾಗಿ ಆಗದ ಕಾರಣ ಹಣ ತಲುಪಿಲ್ಲ. ಈ ಸಮಸ್ಯೆಯನ್ನು ಬಗೆಹರಿಸುವುದಾಗಿ ತಿಳಿಸಿದರು.
ಸಚಿವ ರಾಮಲಿಂಗರೆಡ್ಡಿ ಭಾಷಣದ ಮಧ್ಯೆ ಶಾಸಕ ಬಾಲಕೃಷ್ಣ ಕುದೂರಿನಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ ಡಿಪೋ ವ್ಯವಸ್ಥೆ ಮಾಡುವಂತೆ ಚೀಟಿ ಬರೆದು ಕಳುಹಿಸಿದರು. ಮೂದಲು ಜಾಗ ನಮ್ಮ ಇಲಾಖೆಗೆ ವರ್ಗಾವಣೆ ಮಾಡಿ ನಂತರ ಕೆಲಸ ಪ್ರರಂಭ ಮಾಡೋಣ ಎಂದರು.
ಸಂಸದ ಡಿ.ಕೆ.ಸುರೇಶ್ ಮಾತನಾಡಿ, ರಾಜ್ಯದಲ್ಲಿ ಸಾವಿರ ಮಾದರಿ ಶಾಲೆಗಳನ್ನು ನಿರ್ಮಾಣ ಮಾಡುವುದು ಡಿ.ಕೆ.ಶಿ. ಅವರ ಕನಸಿನ ಕೂಸು. ಹೀಗಾಗಿ ಕುದೂರಿನ ಮೂಲಕ ಇಂತಹ ಯೂಜನೆಗೆ ಅಡಿಗಲ್ಲು ಹಾಕಲಾಗಿದೆ ಎಂದರು.
ನಮ್ಮ ವಿರುದ್ದ ಟೀಕೆಗಳು ನಡೆಯುತ್ತಲೆ ಇದೆ. ರಾಜ್ಯದ ಜನ ನಮ್ಮ ಗ್ಯಾರಂಟಿಗಳ ಮೂಲಕ ಖುಷಿಯಾಗಿದ್ದಾರೆ. ಗ್ಯಾರಂಟಿಗೆ ಮಾತ್ರವಲ್ಲ ಶಿಕ್ಷ ಣ ಹಾಗೂ ಆರೋಗ್ಯಕ್ಕೂ ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.
ಶಾಸಕ ಹೆಚ್.ಸಿ.ಬಾಲಕೃಷ್ಣ ಮಾತನಾಡಿ, ನಮ್ಮ ಸರ್ಕಾರದ ಗ್ಯಾರಂಟಿ ಯೋಜನಗಳಿಂದ ಜನತೆಗೆ ಉಪಕಾರವಾಗಿದೆ. ಹಿಂದಿನ ಬಿಜೆಪಿ ಸರ್ಕಾರ ಸಿದ್ದಗಂಗಾ ಶ್ರೀಗಳ ಪುತ್ಥಳಿ ಕಾರ್ಯವನ್ನು ನಿಲ್ಲಿಸಿದ್ದಾರೆ. ಅದನ್ನು ನಾವು ಮುಂದುವರೆಸುತ್ತೇವೆ ಎಂದರು.
ಕಳ್ಳರ ಕೈಚಳ: ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಕಾರ್ಯಕ್ರಮದಲ್ಲಿ ಕಳ್ಳನೂಬ್ಬ ಶಾಸಕರ ಅಪ್ತ ಸಹಾಯಕರ ಲೂಕೇಶ್ ಜೇಬಿನಿಂದ 50 ಸಾವಿರ ಎಗರಿಸಿ ತನ್ನ ಕೈಚಳಕ ತೋರಿಸಿದ್ದಾನೆ. ಇದಕ್ಕೂ ಮುನ್ನ ಮರೂರು ಹ್ಯಾಂಡ್ ಪೋಸ್ಟ್ ಬಳಿ ಡಿಕೆಶಿಗೆ ಸ್ವಾಗತ ಕೂರುವ ವೇಳೆ ಕಾಂಗ್ರೆಸ್ ಮುಖಂಡ ಬಾಬು ಅವರ ಜೇಬಿಗೂ ಕತ್ತರಿ ಹಾಕಿ 4 ಸಾವಿರ ರೂ. ಎಗರಿಸಿದ್ದಾರೆ.
ಕಾದು ಹೈರಾಣಾದ ಮಕ್ಕಳು; ಕಾರ್ಯಕ್ರಮದಲ್ಲಿ ಮಕ್ಕಳೇ ವೇದಿಕೆ ಮುಂದಿನ ಸೀಟುಗಳಲ್ಲಿ ಅತಿಥಿಗಳಾಗಿ ಕುಳಿತಿದ್ದರು. ಮಕ್ಕಳಿಗೆ ಮಧ್ಯ ವಾರ್ಷಿಕ ಪರೀಕ್ಷೆ ಇತ್ತಾದರೂ ಅದನ್ನೂ ಮುಂದೂಡಲಾಗಿತ್ತು. ಬೆಳಗ್ಗೆ 10.30 ಕ್ಕೆ ನಡೆಯುವ ಕಾರ್ಯಕ್ರಮ ಮಧ್ಯಾಹ್ನ 1.30 ಕ್ಕೆ ಆರಂಭಗೊಂಡಿತ್ತು. ಡಿಕೆಶಿಗೆ ಬ್ಯಾಂಡ್ ಸೆಟ್, ಪೂರ್ಣಕುಂಭದ ಮೂಲಕ ಸ್ವಾಗತ ಕೋರಲು ತಯಾರಾಯಾಗಿದ್ದ ಮಕ್ಕಳು ಕಾದು ಕಾದು ಹೈರಾಣಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Election: ಮಗನಿಗಾಗಿ ಎಚ್‌ಡಿಕೆ ನಿಮ್ಮ ಊರು ಹುಡುಕಿ ಬರುತ್ತಾರಷ್ಟೇ: ಡಿ.ಕೆ.ಸುರೇಶ್
Police FIR: ಎಫ್ಐಆರ್ ದಾಖಲಿಸಿ ನನ್ನ ವಿರುದ್ಧ ಸರ್ಕಾರದಿಂದ ದ್ವೇಷ ಸಾಧನೆ: ಎಚ್‌ಡಿಕೆ
By Election: ಚನ್ನಪಟ್ಟಣದಲ್ಲಿ ಧರ್ಮ-ಅಧರ್ಮದ ನಡುವೆ ಚುನಾವಣೆ: ಎಚ್.ಡಿ.ಕುಮಾರಸ್ವಾಮಿ
By Poll: ರಣರಂಗವೂ ಇಲ್ಲ, ಚದುರಂಗವೂ ಇಲ್ಲ, ಜನರೇ ಪಟ್ಟಿ ಮಾಡಿ, ಅಂಕ ನೀಡ್ತಾರೆ: ಡಿಕೆಶಿ
By Election: ಮಾತೃ ಹೃದಯಗಳಲ್ಲಿ ಕಣ್ಣೀರು ಸಹಜ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ
MUST WATCH
ಹೊಸ ಸೇರ್ಪಡೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.