Ramnagar: ಬೇಸಿಗೆಗೆ ಮುನ್ನವೇ ಕಾಡುತ್ತಿದೆ ವಿದ್ಯುತ್ ಕೊರತೆ
Team Udayavani, Oct 10, 2023, 11:51 AM IST
ರಾಮನಗರ: ಬೇಸಿಗೆಗೂ ಮುನ್ನವೇ ಬೆಸ್ಕಾಂ ರೈತರಿಗೆ ಲೋಡ್‌ಶೆಡ್ಡಿಂಗ್ ಶಾಕ್ ನೀಡಲು ಆರಂಭಿಸಿದೆ. ರಾಜ್ಯದಲ್ಲಿ ಎದುರಾಗಿರುವ ವಿದ್ಯುತ್ ಅಭಾವದ ಹೊರೆಯನ್ನು ಮೊದಲಿಗೆ ಕೃಷಿಕರ ಮೇಲೆ ಹೊರಿಸಿರುವ ಬೆಸ್ಕಾಂ. ಅನಧಿಕೃತ ಲೋಡ್ ಶೆಡ್ಡಿಂಗ್ ಅನ್ನು ಪಂಪ್‌ಸೆಟ್‌ಗಳ ಮೇಲೆ ಆರಂಭಿಸಿದೆ.
ಬೇಸಿಗೆ ಇನ್ನು ಸಾಕಷ್ಟು ದಿನ ಇರುವಾಗಲೇ ಲೋಡ್‌ಶೆಡ್ಡಿಂಗ್ ಆರಂಭಗೊಂಡಿ ರುವುದು ರೈತರು ಆತಂಕ್ಕೆ ಸಿಲುಕು ವಂತೆ ಮಾಡಿದೆ. ಮಳೆ ಕೊರತೆಯಿಂದ ಬೆಳೆ ಇಲ್ಲದೆ ಕಂಗಾಲಾಗಿರುವ ರೈತರು ಕೊಳವೆಬಾವಿ ಸಹಾಯದಿಂದಲಾ ದರೂ ಬೆಳೆ ಬೆಳೆ ಯೋಣ ಎಂದು ಸಿದ್ಧತೆ ಮಾಡಿಕೊಂಡಿ ರುವ ಸಮಯದಲ್ಲಿ ಬೆಸ್ಕಾಂ ವಿದ್ಯುತ್ ಪೂರೈಕೆ ಕಡಿತಗೊಳಿಸಿರುವುದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಐಪಿ ಸೆಟ್‌ಗಳಿಗೆ ವಿದ್ಯುತ್ ಕಡಿತ: ನಿರಂತರ ಜ್ಯೋತಿ ಯೋಜನೆಯನ್ನು ಬೆಸ್ಕಾಂ ಜಾರಿಗೆ ತಂದ ಬಳಿಕ ಗ್ರಾಮೀಣ ಭಾಗದಲ್ಲಿ ಐಪಿ ಸೆಟ್‌ಗಳಿಗೆ ಬೇರೆ ವಿದ್ಯುತ್ ಮಾರ್ಗ, ಕೊಳವೆ ಬಾವಿಗಳಿಗೆ ಬೇರೆ ಮಾರ್ಗ ಹೊಂದಿದ್ದು, ಗೃಹ ಬಳಗೆಕೆ 24 ತಾಸು ವಿದ್ಯುತ್ ಪೂರೈಕೆ ಮಾಡಲಾಗುತಿತ್ತು. ಇನ್ನು ಕೃಷಿ ಪಂಪ್‌ಸೆಟ್‌ಗಳಿಗೆ ಬೆಳಗ್ಗೆ 3 ತಾಸು, ರಾತ್ರಿ 4 ತಾಸು ವಿದ್ಯುತ್ ಪೂರೈಕೆ ಮಾಡಲಾಗುತಿತ್ತು. ಆದರೆ, ಕೆಲ ದಿನ ಗಳಿಂದ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಕೆ ಮಾಡುವ ಅವಧಿ ಯನ್ನು ಕಡಿತಗೊಳಿ ಸಿದ್ದು, ಈ ಹಿಂದೆ ದಿನಾ 7 ತಾಸುಗಳ ಕಾಲ ವಿದ್ಯುತ್ ಪೂರೈಕೆ ಮಾಡು ತ್ತಿದ್ದ ಬೆಸ್ಕಾಂ ಇದೀಗ ಪ್ರತಿದಿನ 3 ರಿಂದ 4 ತಾಸು ವಿದ್ಯುತ್ ಪೂರೈಕೆ ಮಾಡಿದರೆ ಹೆಚ್ಚು ಎನ್ನುವಂತಾಗಿದೆ.
4 ತಾಸು ಕೊಟ್ಟರೆ ಹೆಚ್ಚು: ಬೆಸ್ಕಾಂ ರೈತರ ಕೊಳವೆ ಬಾವಿಗಳಿಗೆ ಹಗಲು 2 ತಾಸು, ರಾತ್ರಿ 2 ತಾಸು ನೀಡುತ್ತಿದ್ದು, ಕೆಲ ಭಾಗದಲ್ಲಿ ಹಗಲು 3 ತಾಸು, ರಾತ್ರಿ ಎರಡು ತಾಸು ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಇನ್ನು ಕೆಲ ಗ್ರಾಮಗಳಲ್ಲಿ ಕೊಡುವ ವಿದ್ಯುತ್ ಅನ್ನು ಅಸಮರ್ಪಕವಾಗಿ ಪೂರೈಕೆ ಮಾಡುತ್ತಿದ್ದು, ಮಧ್ಯ ಮಧ್ಯೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದರಿಂದ ರೈತರು ಬೆಳೆಗಳಿಗೆ ನೀರು ಹಾಯಿ ಸಲು ಸಮಸ್ಯೆಯಾಗುತ್ತಿದೆ.
ಸಂಕಷ್ಟಕ್ಕೆ ಸಿಲುಕಿದ ರೈತರು: ಬೆಸ್ಕಾಂ ಅನಧಿಕೃತ ಲೋಡ್ ಶೆಡ್ಡಿಂಗ್ ಆರಂಭಿಸಿರುವ ಹಿನ್ನೆಲೆಯಲ್ಲಿ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಈಗಾಗಲೇ 7 ತಾಸು ವಿದ್ಯುತ್ ಪೂರೈಕೆಯಾಗುತ್ತದೆ ಎಂದು ನಂಬಿ ರೈತರು ತಮ್ಮ ಜಮೀನಿಗೆ ಬೆಳೆಗಳನ್ನು ಹಾಕಿಕೊಂಡಿದ್ದರು. ಆದರೆ, ಏಕಾಏಕಿ 4 ತಾಸು, 5 ತಾಸು ಎನ್ನುತ್ತಿರುವುದು ರೈತರಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ಅಲ್ಪ ಸಮಯ ವಿದ್ಯುತ್ ಪೂರೈಕೆ ಮಾಡುತ್ತಿರುವುದರಿಂದ ಹಾಕಿರುವ ಬೆಳೆಗೆ ನೀರು ಹಾಯಿಸಲು ಸಾಧ್ಯವಾಗದೆ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. 7 ತಾಸು ನೀರು ಪೂರೈಕೆ ಮಾಡಿದ್ದೇ ಆದಲ್ಲಿ ಸರದಿ ಮೇಲೆ ನೀರು ಹಾಯಿಸುವ ಪದ್ಧತಿಯನ್ನು ಅಳವಡಿಸಿ ಕೊಂಡು ಒಂದು ಕೊಳವೆಬಾವಿಯಿಂದ ಎರಡರಿಂದ 3 ಎಕರೆ ಭೂಮಿಯಲ್ಲಿ ಬೆಳೆ ಬೆಳೆಯಬಹುದಿತ್ತು. ಆದರೆ, ಇದೀಗ ಏಕಾಏಕಿ 4 ತಾಸು ವಿದ್ಯುತ್ ನೀಡುತ್ತಿದ್ದು ಒಂದು ಎಕರೆಯಲ್ಲಿ ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ. ಅಕ್ಟೋಬರ್ ತಿಂಗಳಲ್ಲೇ ಈರೀತಿ ಆದರೆ, ಮುಂದೆ ಎದುರಾಗಲಿರುವ ಬೇಸಿಗೆಯಲ್ಲಿ ಪರಿಸ್ಥಿತಿಯನ್ನು ನಿಭಾಯಿಸುವುದೇಗೆ ಎಂದು ರೈತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಜೀವ ಭಯದಲ್ಲಿ ಕೃಷಿ: ಇನ್ನು ಬೆಸ್ಕಾಂ ಕೃಷಿ ಪಂಪ್ ಸೆಟ್‌ಗಳಿಗೆ ಹಗಲು 2 ತಾಸುನ ಜೊತೆಗೆ ರಾತ್ರಿ ವೇಳೆ 2 ತಾಸು ವಿದ್ಯುತ್ ಪೂರೈಕೆ ಮಾಡುತ್ತಿದ್ದು, ಜಿಲ್ಲೆಯಲ್ಲಿ ಕಾಡುಪ್ರಾಣಿಗಳ ಹಾವಳಿ ತೀವ್ರವಾಗಿರುವ ಸಮಯದಲ್ಲಿ ರೈತರು ಬೆಳೆ ಉಳಿಸಿಕೊಳ್ಳಲು ತಮ್ಮ ಜೀವವನ್ನು ಪಣಕ್ಕಿಟ್ಟು ಜಮೀನಿಗೆ ನೀರು ಹಾಯಿಸಬೇಕಾದ ಅನಿವಾರ್ಯತೆ ನಿರ್ಮಾಣ ಗೊಂಡಿದೆ. ಜಿಲ್ಲೆಯಲ್ಲಿ ಜಮೀನಿಗೆ ರಾತ್ರಿ ವೇಳೆ ನೀರುಕಟ್ಟುವಾಗ ಕರಡಿ, ಆನೆ, ಚಿರತೆ ದಾಳಿ ಮಾಡಿರುವ, ಹಾವು ಕಚ್ಚಿ ಸಾವಿಗೀಡಾಗಿರುವ ಘಟನೆಗಳು ಸಾಕಷ್ಟಿದ್ದು, ಬೆಳೆ ಉಳಿಸಿಕೊಳ್ಳಲೇ ಬೇಕು ಎಂದಾದಲ್ಲಿ ತಡ ರಾತ್ರಿಯಲ್ಲೂ ನೀರು ಕಟ್ಟಲೇ ಬೇಕಾದ ಅನಿವಾರ್ಯತೆ ರೈತರಿಗೆ ನಿರ್ಮಾಣವಾಗಿದೆ.
ಜಿಲ್ಲೆಯಲ್ಲಿ 55 ಸಾವಿರ ಕೊಳವೆ ಬಾವಿ: ಜಿಲ್ಲೆಯ 5 ತಾಲೂಕುಗಳಲ್ಲಿ ಅಂದಾಜು 55 ಸಾವಿರ ಕೊಳವೆ ಬಾವಿಗಳಿವೆ ಎಂದು ಬೆಸ್ಕಾಂ ಮೂಲಗಳು ಮಾಹಿತಿ ನೀಡಿದ್ದು, ಈ ಕೊಳವೆ ಬಾವಿಗಳಿಂದ ಸುಮಾರು 80 ಸಾವಿರ ಎಕರೆ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ 2 ಸಾವಿರಕ್ಕೂ ಹೆಚ್ಚು ಕೊಳವೆ ಬಾವಿಗಳು ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರು ಪೂರೈಕೆಗೆ, 1200 ಕೊಳವೆ ಬಾವಿಗಳು ನಗರ ಪ್ರದೇಶದಲ್ಲಿ ಕುಡಿಯುವ ನೀರು ಪೂರೈಕೆಗೆ ಬಳಕೆಯಾಗುತ್ತಿವೆ. ಗ್ರಾಮೀಣ ಭಾಗದಲ್ಲಿ ಕೃಷಿ ಪಂಪ್‌ಸೆಟ್‌ಗಳಿಗೆ ಪ್ರತ್ಯೇಕ ವಿದ್ಯುತ್ ಮಾರ್ಗ ನಿರ್ಮಾಣ ಮಾಡಲಾಗಿದೆ.
ಗೃಹ ಬಳಕೆಗೂ ಕತ್ತರಿ: ಒಂದೆಡೆ ಕೃಷಿ ಪಂಪ್‌ಸೆಟ್‌ಗಳ ವಿದ್ಯುತ್ ಪೂರೈಕೆಗೆ ಕತ್ತರಿ ಹಾಕಿರುವ ಬೆಸ್ಕಾಂ ಮತ್ತೂಂದೆಡೆ ಗ್ರಾಮೀಣ ಭಾಗದಲ್ಲಿ ಗೃಹ ಬಳಕೆ ವಿದ್ಯುತ್ ಕಡಿತಗೊಳಿಸುವ ಕಾರ್ಯವನ್ನು ಮಾಡುತ್ತಿದೆ. ಯಾವುದೇ ಮುನ್ಸೂಚನೆ ನೀಡದೆ ಪ್ರತಿದಿನ ಆಗಾಗ್ಗ ವಿದ್ಯುತ್ ಕಡಿತ ಮಾಡುತ್ತಿದ್ದು, 3 ರಿಂದ 4 ತಾಸುಗಳ ಕಾಲ ಗೃಹ ಬಳಗೆ ವಿದ್ಯುತ್ ಅನ್ನು ಕಡಿತ ಮಾಡಲಾಗುತ್ತಿದೆ. ಇನ್ನು ನಗರಪ್ರದೇಶವೂ ಹೊರತಾಗಿಲ್ಲದಿದ್ದ ಅಗಾಗ್ಗ ವಿದ್ಯುತ್ ಕಡಿತ ಮಾಡಲಾಗುತ್ತಿದೆ.
ಬೇಸಿಗೆ ಮುನ್ನಾ ವಿದ್ಯುತ್ ಕೊರತೆಯಾ?: ರೈತರ ಕೊಳವೆ ಬಾವಿಗಳಿಗೆ ಏಕಾಏಕಿ ವಿದ್ಯುತ್ ಕಡಿತ ಮಾಡುತ್ತಿರುವ ಹಿನ್ನೆಲೆಯಲ್ಲಿ ಬೆಸ್ಕಾಂ ಬೇಸಿಗೆಗೆ ಮುನ್ನಾ ವಿದ್ಯುತ್ ಕೊರತೆ ಎದುರಿಸುತ್ತಿದೆಯಾ ಎಂಬ ಪ್ರಶ್ನೆ ಮೂಡಿದೆ. ರಾಜ್ಯಾದ್ಯಂತ ಮಳೆ ಕೈಕೊಟ್ಟಿದ್ದು ಜಲವಿದ್ಯುತ್ ಉತ್ಪಾದನೆ ಕುಸಿತಗೊಂಡಿದೆ. ಇದರಿಂದಾಗಿ ಇರುವ ವಿದ್ಯುತ್‌ಅನ್ನು ಹೊಂದಾಣಿಕೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಬೆಸ್ಕಾಂ ಎದು ರಾಗಿದ್ದು, ವಿದ್ಯುತ್ ಹೊಂದಾಣಿಕೆಗೆ ರೈತರ ಮೇಲೆ ಬರೆ ಎಳೆಯಲಾರಂಭಿಸಿದೆ.ಬೇಡಿಕೆಗಿಂತ ಕಡಿಮೆ ವಿದ್ಯುತ್ ಉತ್ಪಾನೆಯಾಗುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯವಾಗೇ ಹೊಂದಾಣಿಕೆ ಮೂಲಕ ವಿದ್ಯುತ್ ಕೊರತೆಯನ್ನು ನೀಗಿಸಲು ಬೆಸ್ಕಾಂ ಅಧಿಕಾರಿಗಳಿಗೆ ಇಂಧನ ಇಲಾಖೆ ಸೂಚನೆ ನೀಡಿದ್ದು, ಹೊಂದಾಣಿಕೆಗಾಗಿ ವಿದ್ಯುತ್ ಪೂರೈಕೆಯ ಅವಧಿಯನ್ನು ಕಡಿಮೆ ಮಾಡುವ ಕಾರ್ಯಕ್ಕೆ ಮುಂದಾಗಿದ್ದಾರೆ ಎಂದು ಇಂಧನ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ.
ಗ್ರೀಡ್ ಮತ್ತು ಫವರ್ ಜನರೇಷನ್ ಸಮಸ್ಯೆಯಿಂದಾಗಿ ಪ್ರತಿದಿನ 5 ತಾಸು ಗಳ ಕಾಲ ವಿದ್ಯುತ್ ಪೂರೈಕೆ ಮಾಡಲಾಗು ತ್ತಿದೆ. ರಾಜ್ಯಮಟ್ಟದ ಸಮಸ್ಯೆಯಾಗಿದ್ದು, ಇನ್ನೆರಡು ಮೂರು ದಿನಗಳಲ್ಲಿ ಸಮಸ್ಯೆ ಸರಿಹೋಗಲಿದೆ. ● ನಾಗರಾಜು, ಕಾರ್ಯಪಾಲಕ ಅಭಿಯಂತರ ಬೆಸ್ಕಾಂ ರಾಮನಗರ ವಿಭಾಗ
7 ತಾಸು ವಿದ್ಯುತ್ ನೀಡುವುದಾಗಿ ಹೇಳಿ ಬೆಸ್ಕಾಂ ಏಕಾಏಕಿ ಅಧಿಕಾರಿಗಳ ಇದೀಗ ಮೂರರಿಂದ ನಾಲ್ಕು ತಾಸು ನೀಡುತ್ತಿದ್ದಾರೆ. ನಾವು ಕೃಷಿ ಕೆಲಸ ಮಾಡುವುದಾದರೂ ಹೇಗೆ? ಮಳೆ ನಮಗೆ ಕೈಕೊಟ್ಟಿತು. ಇದೀಗ ಬೆಸ್ಕಾಂ ಸಹ ನಮಗೆ ಕೈಕೊಟ್ಟಿದೆ.ಸರ್ಕಾರ ಕೂಡಲೇ ಮಧ್ಯ ಪ್ರವೇಶ ಮಾಡಿ ರೈತರಿಗೆ ಸಮಪರ್ಕ ವಿದ್ಯುತ್ ಪೂರೈಕೆ ಮಾಡಲು ಮುಂದಾಗಬೇಕು.-ಶಿವಣ್ಣ ಸುಳ್ಳೇರಿ, ರೈತ
–ಸು.ನಾ.ನಂದಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Fraud: “ವಿಡಿಯೋಗೆ ಲೈಕ್ ನೀಡಿ’ 13.97 ಲಕ್ಷ ಕಳೆದುಕೊಂಡರು!
C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!
By Election: ದೇವೇಗೌಡರನ್ನು 1994ರಲ್ಲಿ ಮುಖ್ಯಮಂತ್ರಿ ಮಾಡಿದ್ದೇ ನಾನು: ಸಿಎಂ ಸಿದ್ದರಾಮಯ್ಯ
Ramanagara: ಆರು ಟ್ರಾನ್ಸ್ ಫಾರ್ಮರ್ ಗಳ ಕಳವು
Congress Government: ಉಪಚುನಾವಣೆ ಬಳಿಕ ಗೃಹಲಕ್ಷ್ಮಿ ಸ್ಥಗಿತ: ಎಚ್.ಡಿ.ದೇವೇಗೌಡ ಭವಿಷ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.