ಭೈರವನದುರ್ಗ ಬೆಟ್ಟದಲ್ಲಿ ಸೌಲಭ್ಯ ಕೊರತೆ


Team Udayavani, Nov 23, 2019, 4:44 PM IST

RN-TDY-1

ಕುದೂರು: ಹತ್ತು ಹಲವು ವೈಶಿಷ್ಟ್ಯಗಳ ಅಗರ ಹಾಗೂ ಚಾರಣ ಪ್ರೀಯರ ಸ್ವರ್ಗವಾಗಿರುವ ಭೈರವನದುರ್ಗ ಬೆಟ್ಟವನ್ನು ಪ್ರವಾಸೋದ್ಯಮ ಇಲಾಖೆ ಅಭಿವೃದ್ಧಿ ಗೊಳಿಸದೇ ದಿವ್ಯ ನಿರ್ಲಕ್ಷ್ಯ ವಹಿಸಿದ್ದು, ಪ್ರವಾಸಿಗರ ಆಕ್ರೋಶಕ್ಕೆ ಗುರಿಯಾಗಿದೆ.

ಪ್ರಕೃತಿ ಸೌಂದರ್ಯ, ಗುಹಾಂತರ ದೇವಾಲಯ ಕೋಟೆ, ಇದರೊಳಗೊಂದು ಪಾತಾಳ ಗಂಗೆ, ರಾಜ ಮಹರಾಜರ ಕಾಲದ ಶಾಸನಗಳು, ಮೂರ್ತಿಗಳು, ಉಬ್ಬು ಶಿಲ್ಪಿಗಳು ಇವೆಲ್ಲವುಗಳ ಜತೆಗೆ ವನ್ಯಜೀವಿಗಳು ಹೀಗೆ ಪ್ರಕೃತಿ ಸೌಂದರ್ಯ ದಿಂದ ಕಂಗೊಳಿಸುತ್ತಿರುವ ಈ ಬೆಟ್ಟ ಅಭಿವೃದ್ಧಿಯಿಂದ ವಂಚಿತವಾಗಿರುವುದು ಚಾರಣ ಪ್ರಿಯರ ಮುನಿಸಿಗೆ ಕಾರಣವಾಗಿದೆ.

ಪ್ರತಿ ಭಾನುವಾರ ಪೂಜೆ: ಬೆಟ್ಟದ ಮಧ್ಯ ಭಾಗದಲ್ಲಿರುವ ಭೈರವೇಶ್ವರ ಸ್ವಾಮಿಗೆ ಪ್ರತಿ ಭಾನುವಾರ ಪೂಜೆ ನೆಡೆಯುತ್ತದೆ. ಬೆಳಗ್ಗೆ 11ರಿಂದ 4 ವರೆಗೆ ಪೂಜೆ ನೆಡೆಯುತ್ತದೆ. ಈ ವೇಳೆ ಭಕ್ತರ ದಂಡೆ ಹರಕೆ ತೀರಿಸಲು ಬೆಟ್ಟಕ್ಕೆ ಬಂದಿರುತ್ತದೆ. ಹಲಸಿನ ರಸಾಯನ ಸ್ವಾಮಿಗೆ ಹೆಚ್ಚು ಪ್ರಿಯ ಎಂದು ನಂಬಲಾಗಿದ್ದು ಹೆಚ್ಚಿನ ಭಕ್ತರು ಇದನ್ನೆ ನೈವೇದ್ಯಕ್ಕೆ ತರುತ್ತಾರೆ ಎಂದು ಹೇಳುತ್ತಾರೆ ಅರ್ಚಕರು.

ಸಿಹಿ ನೀರಿನ ಪಾತಾಳ ಗಂಗೆ: ಬೆಟ್ಟದ ತುದಿಯಲ್ಲಿ ಸಿಹಿ ನೀರಿನ ಕಲ್ಯಾಣಿಯಿದೆ. ಬೆಟ್ಟ ಹತ್ತಿ ಆಯಾಸ ವಾಗಿರುವವರು ಈ ನೀರನ್ನು ಕುಡಿದು ದಣಿವಾರಿಸಿ ಕೊಳ್ಳುತ್ತಾರೆ. ಇವೆಲ್ಲವೂ ರಾಜ ಮಹರಾಜರ ಆಳ್ವಿಕೆಯ ವೈಭವವನ್ನು ನಿರೂಪಿಸುವ ಕುರುಹುಗಳಿವೆ. ಏಳೆಂಟು ದೊಡ್ಡ ಬಂಡೆಗಳು ಆಧಾರವಿಲ್ಲದೆ ನಿಂತಿರುವುದು ಸೋಜಿಗ ಮೂಡಿಸುತ್ತದೆ.

ಕಡಿದಾದ ಬಂಡೆಗಳ ಇಳಿಜಾರು: ಬೆಟ್ಟವು ಕಡಿದಾದ ಬಂಡೆಗಳ ಸಾಲಿನ ಮಧ್ಯೆ ಇದ್ದು, ಸಾಹಸ ಪ್ರಿಯರಿಗೆ ಹೇಳಿ ಮಾಡಿಸಿದ ಸ್ಥಳ. ಕಡಿದಾದ ಬಂಡೆಗಳ ನಡುವೆ ರೋಫಿಂಗ್, ಕ್ಲೈಂಬಿಂಗ್‌ ಮಾಡಲು ಸೂಕ್ತವಾಗಿದೆ. ಬೆಟ್ಟದ ತುದಿಯಲ್ಲಿ ಒಂದು ಕಾಲು ದಾರಿಯಿದ್ದು, ಉಳಿದ ಅರ್ಧ ಭಾಗ ಕ್ರಮಿಸಲು ಕಡಿದಾದ ಬಂಡೆಗಳ ಮೂಲಕ ಸಾಗಬೇಕು. ಅದ್ದರಿಂದ ಪ್ರಕೃತಿ ಸೌಂದರ್ಯದಿಂದ ಕಂಗೊಳಿಸುವ ವಿಶಿಷ್ಟ, ವಿಭಿನ್ನ, ಬೆಟ್ಟಕ್ಕೆ ಮೂಲ ಸೌಲಭ್ಯ ಒದಗಿಸಬೇಕೆಂದು ಪರಿಸರ ಪ್ರಿಯರು ಒತ್ತಾಯಿಸಿದ್ದಾರೆ.

ಬೆಟ್ಟ ತಲುಪುವುದು ಹೇಗೆ?:  ಕುದೂರು ನಿಲ್ದಾಣದಿಂದ 1.5 ಕೀ.ಮಿ. ದೊರದಲ್ಲಿರುವ ಈ ಬೆಟ್ಟದ ಬುಡಕ್ಕೆ ಪ್ರವೇಶಿಸುತ್ತಿದ್ದಂತೆ ದೇವಾಲಯ ಆರಂಭದ ಮೆಟ್ಟಿಲುಗಳ ಬಳಿ ಎರಡು ಉಬ್ಬು ಶಿಲ್ಪಿಗಳು ಕಾಣಸಿಗುತ್ತವೆ. 400 ರಿಂದ 500 ಮೆಟ್ಟಿಲುಗಳು ಹತ್ತಿದರೆ ಬೈರವೇಶ್ವರ ಸ್ವಾಮಿ ಲಿಂಗ ರೂಪದಲ್ಲಿ ಪ್ರತಿಷ್ಠಾಪಿತವಾಗಿರುವ ಪುರಾತನ ಗುಹೆ ಗೋಚರಿಸುತ್ತದೆ. ಅದರ ಅಕ್ಕಪಕ್ಕ ಅನೇಕ ಗುಹೆಗಳಿವೆ. ದೇವಾಲಯದ ಬಳಿ ವಿಶಿಷ್ಟ ಸುಗಂಧ ಭರಿತ ಜಲಾರ್‌, ಶಿವನಿಗೆ ಪ್ರಿಯ ಬಿಲ್ವ ಪತ್ರೆ ಮರಗಳಿವೆ. ಸ್ವಾಮಿ ಪೂಜೆಗೆ ಹೂ ಒದಗಿಸುತ್ತವೆ. ದೇವಾಲಯದ ಪಕ್ಕದಲ್ಲಿ ಇಳಿ ಜಾರಿದ್ದು, ಕಾಲಿಟ್ಟರೆ ಜಾರುವಂತಹ ನುಣುಪನ್ನು ಕಾಣಬಹುದಾಗಿದೆ.

 

-ಕೆ.ಎಸ್‌.ಮಂಜುನಾಥ್‌

ಟಾಪ್ ನ್ಯೂಸ್

10

ODI: ಶ್ರೀಲಂಕಾ ಬ್ಯಾಟಿಂಗ್‌ ಕುಸಿತ; ನ್ಯೂಜಿಲ್ಯಾಂಡ್‌ಗೆ ಸುಲಭ ಜಯ

Yathanaa

BJP Inner Politics: ಬಿ.ವೈ.ವಿಜಯೇಂದ್ರ ಬಿಜೆಪಿ ಹಂಗಾಮಿ ರಾಜ್ಯಾಧ್ಯಕ್ಷ: ಬಸನಗೌಡ ಯತ್ನಾಳ್‌

7

‌RJD ಜೊತೆ ಮೈತ್ರಿ ಮಾಡಿಕೊಂಡು 2 ಬಾರಿ ತಪ್ಪೆಸಗಿದ್ದೆ: ನಿತೀಶ್‌ ಕುಮಾರ್

Byrathi–CM

Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ

1-wewq

Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು

1-gambhir

Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ

Cheluvaraya-swamy

Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Channapatna; ನ್ಯೂಇಯರ್‌ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು

Channapatna; ನ್ಯೂಇಯರ್‌ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು

1-carr

Ramnagar; ಹೊಸವರ್ಷದಂದೇ ಎರಡು ಪ್ರತ್ಯೇಕ ಅಪಘಾ*ತ: ಮೂವರ ಸಾ*ವು

aane

Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Channapatna: ಕೆಲಸದ ಒತ್ತಡ ತಾಳಲಾರದೆ ಮುಖ್ಯ ಶಿಕ್ಷಕ ವಿಷ ಸೇವಿಸಿ ಆತ್ಮಹ*ತ್ಯೆ

Channapatna: ಕೆಲಸದ ಒತ್ತಡ ತಾಳಲಾರದೆ ಮುಖ್ಯ ಶಿಕ್ಷಕ ವಿಷ ಸೇವಿಸಿ ಆತ್ಮಹ*ತ್ಯೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

10

ODI: ಶ್ರೀಲಂಕಾ ಬ್ಯಾಟಿಂಗ್‌ ಕುಸಿತ; ನ್ಯೂಜಿಲ್ಯಾಂಡ್‌ಗೆ ಸುಲಭ ಜಯ

Yathanaa

BJP Inner Politics: ಬಿ.ವೈ.ವಿಜಯೇಂದ್ರ ಬಿಜೆಪಿ ಹಂಗಾಮಿ ರಾಜ್ಯಾಧ್ಯಕ್ಷ: ಬಸನಗೌಡ ಯತ್ನಾಳ್‌

de

Kundapura: ಗುಲ್ವಾಡಿ; ಗಾಯಾಳು ಸಾವು

7

‌RJD ಜೊತೆ ಮೈತ್ರಿ ಮಾಡಿಕೊಂಡು 2 ಬಾರಿ ತಪ್ಪೆಸಗಿದ್ದೆ: ನಿತೀಶ್‌ ಕುಮಾರ್

Byrathi–CM

Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.