ಬರಲಿದೆ ನೀರಿಗೆ ಹಾಹಾಕಾರ, ಎಚ್ಚರ!

Team Udayavani, Feb 23, 2022, 12:47 PM IST

ಬರಲಿದೆ ನೀರಿಗೆ ಹಾಹಾಕಾರ, ಎಚ್ಚರ!

ಮಾಗಡಿ: ಮಾಗಡಿ ತಾಲೂಕಿನಲ್ಲಿ ಮಂಚನಬೆಲೆ ಹಾಗೂ ವೈ.ಜಿ.ಗುಡ್ಡ ಸೇರಿದಂತೆ ಒಟ್ಟು ಎರಡು ಜಲಾಶಯಗಳಿದ್ದರೂ ಸಹ ಜಲಮಂಡಳಿ ಮತ್ತುಪುರಸಭೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ಪಟ್ಟಣದ ಪುರನಾಗರಿಕರು ನಿಜಕ್ಕೂ ವಿಷ ಜಲಕುಡಿಯುವ ಪರಿಸ್ಥಿತಿ ಎದುರಿಸುತ್ತಿರುವು ದು ವಿಪರ್ಯಾಸ.

ರಥಸಪ್ತಮಿ ಮುಗಿಯುತ್ತಿದ್ದಂತೆ ಬೇಸಿಗೆ ಸುಡುಬಿಸಿಲು ಪ್ರಾರಂಭವಾಗುತ್ತದೆ. ಪುರಜನತೆ ಮತ್ತುಗ್ರಾಮೀಣ ಜನರಿಗೆ ನೀರಿನ ಸಮಸ್ಯೆ ತಲೆದೋರುತ್ತದೆ.ಬಿಸಿಲಿನ ತಪಾಮಾನಕ್ಕೆ ಕೆರೆ ಕಟ್ಟೆ ಭತ್ತಿ ಹೋಗುತ್ತಿವೆ.ಪುರಜನರು ಮತ್ತು ನೂರಾರು ಗ್ರಾಮಗಳಲ್ಲಿಕುಡಿಯುವ ನೀರಿನ ಅಭಾವ ಹೆಚ್ಚುವ ಲಕ್ಷಣಗಳು ಗೋಚರಿಸುತ್ತಿದೆ.

ಬಿಸಿಲಿನ ತಾಪಮಾನ ದಿನೇ ದಿನೇ ಹೆಚ್ಚಾಗಿದೆ.ತಾಲೂಕಿನ 32 ಗ್ರಾಪಂ ವ್ಯಾಪ್ತಿಯಲ್ಲಿ ಹಲವಾ ರು ಗ್ರಾಮಗಳಲ್ಲಿ ಹಾಗೂ ಪಟ್ಟಣದ ಕೆಲವು ವಾರ್ಡ್‌ಗಳಲ್ಲಿಕುಡಿಯುವ ನೀರಿನ ಸಮಸ್ಯೆ ಈಗಾ ಗಲೇ ಹೆಚ್ಚಾಗಿದೆ. ತಾಲೂಕಿನ ಮಾಡಬಾಳ್‌ ಹೋಬಳಿಯಲ್ಲಿರುವ ವೈ..ಜಿ.ಗುಡ್ಡ ಜಲಾಶಯದಿಂದ ಮತ್ತಿಕೆರೆ, ಅಗಲಕೋಟೆ, ದೋಣಕುಪ್ಪೆ, ಏಳಿಗೆಹಳ್ಳಿ ಕಾಲೋನಿ ಸಾತನೂರು, ಹಲಸಬೆಲೆ ಸೇರಿದಂತೆ 14 ಗ್ರಾಮಗಳಿಗೆ ನೀರು ಪೂರೈಸಲು ಪೈಪ್‌ಲೈನ್‌ ಆಳವಡಿಸಲಾಗಿದೆ.

ಅದರಲ್ಲಿ ನಿರಂತರವಾಗಿ 12 ಗ್ರಾಮಗಳಿಗೆ ವೈ.ಜಿ.ಗುಡ್ಡ ಜಲಾಶಯದಿಂದ ಕುಡಿಯುವ ನೀರು ಪೂರೈಸಲಾಗುತ್ತಿದೆ. ಆದರೂ ಬೇಸಿಗೆ ಬಿಸಿಲಿಗೆ ನೀರಿನ ಸಮಸ್ಯೆಉಂಟಾಗಲಿದ್ದು, ಗ್ರಾಮ ಪಂಚಾಯ್ತಿಗಳು ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸಜ್ಜಾಗಬೇಕಿದೆ.

ರೋಗಬಾಧೆಯಿಂದ ಮುಕ್ತಿ ಹೊಂದಲು ಗ್ರಾಮೀಣ ಭಾಗದ ಎಲ್ಲ ಟ್ಯಾಂಕ್‌ಗಳಿಗೂ ಬ್ಲೀಚಿಂಗ್‌ ಪೌಡರ್‌ ಬಳಸಿ, ಶಿಲೀಂದ್ರ, ಪಾಚಿಯನ್ನು ಮುಕ್ತಿಗೊಳಿಸಿ ಸ್ವತ್ಛತೆಕಾಯ್ದುಕೊಳ್ಳಬೇಕಿದೆ.

ಪಟ್ಟಣಕ್ಕೆ ಮಂಚನಬೆಲೆ ಡ್ಯಾಂ ನೀರು: ಅಂದಾಜು 30 ಸಾವಿರ ಜನಸಂಖ್ಯೆ ಇರುವ ಮಾಗಡಿ ಪಟ್ಟಣಕ್ಕೆಮಂಚನಬೆಲೆ ಜಲಾಶಯದಿಂದ ಕುಡಿಯುವ ನೀರು ಪೂರೈಸಲಾಗುತ್ತಿದ್ದು, 24/7 ಕೆಎಂಆರ್‌ಪಿ ಯೋಜನೆಯ ಕಾಮಗಾರಿ ಪೂರ್ಣಗೊಂಡಿದೆ. ಬಹುತೇಕ ವಾರ್ಡ್‌ಗಳಲ್ಲಿ 24/7 ಕುಡಿಯುವ ನೀರಿನ ಪೈಪ್‌ಲೈನ್‌ ಸಮರ್ಪ ಕವಾಗಿ ಆಳವಡಿಸದ ಕಾರಣ ನೀರು ಪೂರೈಕೆಯಾಗುತ್ತಿಲ್ಲ ಎಂಬ ದೂರು ಕೇಳಿ ಬಂದಿದೆ.

ನೀರು ಪೂರೈಕೆಯಾಗುತ್ತಿರುವ ವಾರ್ಡ್‌ಗಳ ಕೊಳಾಯಿಗಳಲ್ಲಿ ಕಲುಷಿತ ನೀರು ಪೂರೈಕೆಯಾಗು ತ್ತಿದ್ದು, ಇದರಿಂದ ಸಾಂಕ್ರಾಮಿಕ ಕಾಯಿಲೆ ಉಲ್ಬಣವಾಗಲಿದೆ.ಶುದ್ಧೀಕರಣವಿಲ್ಲದೇ ವಿಷ ಜಲವನ್ನು ಪುರಸಭೆಪೂರೈಸಿ ಜನರ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂಬುದು ಪುರನಾಗರಿಕರ ಆತಂಕವಾಗಿದೆ.

ಜೀವ ಸಂಕುಲಕ್ಕೆ ಜೀವಜಲ ಒದಗಿಸಿ :

ಬೇಸಿಗೆ ಝಳಕದಿಂದ ಪಾರಾಗಲು ಯಾರಿಗೂ ಸಾಧ್ಯವಿಲ್ಲ. ಮನುಷ್ಯನಿಗೆ ಇನ್ನಿಲ್ಲದಂತೆಕಾಡುವ ರಣಬಿಸಿಲು ದೇಹಕ್ಕೆ ಸುಸು, ಆಯಾಸ, ಬಳಲಿಕೆ ಉಂಟುಮಾಡಿ ಬದುಕನ್ನುಜರ್ಜರಿತವಾಗಿಸಿಬಿಡುತ್ತದೆ. ಬಿಸಿಲ ತಾಪಮಾನದಿಂದ ತಲೆನೋವು, ಜ್ವರ, ಇನ್ನಿತರೆಕಾಯಿಲೆಗಳು ಬಿಟ್ಟುಬಿಡದ ಹಾಗೆ ಕಾಡುವುದು ಸಾಮಾನ್ಯ. ಎಲ್ಲವನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಮೂಗಿನ ನೇರಕ್ಕೆ ಮಾಡಿಕೊಂಡಿರುವ ಮನುಕುಲಕ್ಕೆ ಇಷ್ಟೊಂದು ಸಂಕಷ್ಟ ತಂದೊಡ್ಡುವ ಬೇಸಿಗೆ ಇನ್ನೂ ಪ್ರಾಣಿ-ಪಕ್ಷ, ಇತರೆ ಜೀವ ಸಂಕುಲಗಳಿಗೆ ಇನ್ನೆಷ್ಟು ಸಂಕಷ್ಟ ನೀಡಬಲ್ಲದು. ಹಾಗಾಗಿ ಸಾಧ್ಯವಾದಷ್ಟು ಮಟ್ಟಿಗೆ ಯುವ ಸಮೂಹ ಪ್ರಾಣಿ-ಪಕ್ಷಿ ಇತರೆ ಜೀವ ಸಂಕಲಗಳಿಗೆ ಜೀವ ಜಲ ಒದಗಿಸಲು ಮುಂದಾಗಬೇಕು. ತೆಂಗಿನ ಕಾಯಿ ಕಂಟ, ಪಾಟ್‌ಗಳಲ್ಲಿ ಶುದ್ಧ ನೀರು ಇಟ್ಟು, ಸಾಧ್ಯವಾದರೆ ದವಸ-ಧಾನ್ಯವಿಟ್ಟು ಜೀವಸಂಕುಲಕ್ಕೆ ನೆರವಾಗಿ ಅಂತಾರೆ ಪರಿಸರ ಪ್ರೇಮಿ ಕಲ್ಪನಾ ಶಿವಣ್ಣ.

ಮುಂದಿನ ಪೀಳಿಗೆಗೆ ನೀರನ್ನು ಸಂರಕ್ಷಿಸಿ :ಇತ್ತೀಚಿನ ದಿನಗಳಲ್ಲಿ ದಿನ ನಿತ್ಯದ ಚಟುವಟಿಕೆಗಳಿಗೆ ಪ್ಯಾಕೆಟ್‌ಹಾಗೂ ಬಾಟೆಲ್‌ ರೂಪದಲ್ಲಿ ಹಣ ಕೊಟ್ಟು ನೀರನ್ನು ಖರೀದಿಸುವಕಾಲವನ್ನು ಎದುರಿಸಬೇಕಾಗಿದೆ. ಆದ್ದರಿಂದ ನಾವೆಲ್ಲರೂ ನೀರನ್ನುಹೆಚ್ಚು ಪೋಲು ಮಾಡದೆ, ನೀರಿನ ಸದ್ಬಳಕೆ ಮಾಡಬೇಕು. ಮುಂದಿನಪೀಳಿಗೆಗೆ ನೀರನ್ನು ಸಂರಕ್ಷಿಸೋಣ ಎಂಬ ಧ್ಯೇಯ ವಾಕ್ಯ ಮನಸ್ಸಿನಲ್ಲಿಜಾಗೃತವಾಗಿರಲಿ. ಕಲುಷಿತ ನೀರಿನ ಮರು ಬಳಕೆ, ಮಳೆ ನೀರುಕೋಯ್ಲು ಮತ್ತು ನೀರಿನ ಸಂರಕ್ಷಣೆ ಕುರಿತು ಗ್ರಾಪಂ ಅಧಿಕಾರಿಗಳುಜನರಲ್ಲಿ ಜಾಗೃತಿ ಮೂಡಿಸಬೇಕು. ಸಮಸ್ಯೆ ಮುನ್ನಾ ಗ್ರಾಪಂಪಿಡಿಒಗಳು ತುರ್ತುಕ್ರಮ ವಹಿಸಿದರೆ ನೀರಿನ ಸಮಸ್ಯೆ ಉಂಟಾಗದು ಎಂದು ರೈತ ಮುಖಂಡ ರಾಜಣ್ಣ ತಿಳಿಸಿದರು.

ಕೆಎಂಆರ್‌ಪಿ ಯೋಜನೆ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಮಿಷನ್‌ ಸಹ ಕಳೆದು ಹೋಗಿದ್ದವು. ಹೊಸ ಮಿಷನ್‌ ಅಳವಡಿಸಲು ಕ್ರಮ ಕೈಗೊಂಡಿದ್ದೇನೆ. ಪಂಪ್‌ಹೌಸ್‌ನಲ್ಲಿ ನೀರು ಶುದ್ಧೀಕರಣವಾಗುತ್ತಿಲ್ಲ. ಈಕುರಿತು ತನಿಖೆಗೆ ಪತ್ರ ಬರೆದಿದ್ದೇನೆ. ಸರಿಪಡಿಸುವ ಕೆಲಸಕ್ಕೆ ಎಂಜಿನಿಯರ್‌ 3 ವರದಿತಯಾರಿಸಿದ್ದಾರೆ. ಶುದ್ಧೀಕರಣ ಕೆಲಸಕ್ಕೆ ಕ್ರಮ ವಹಿಸಿದ್ದೇವೆ.ಎ.ಮಂಜುನಾಥ್‌, ಮಾಗಡಿ ಶಾಸಕ

ಮಂಚನಬೆಲೆ ಜಲಾಶಯದ ನೀರನ್ನುಶುದ್ಧೀಕರಿಸಿ ಪಟ್ಟಣಕ್ಕೆ ಪೂರೈಸಲುಕೆಎಂಆರ್‌ಪಿ ಎಂಜಿನಿಯರ್‌ಗೆ ಸೂಚಿಸುತ್ತೇನೆ. ವಿಜಯಾ ರೂಪೇಶ್‌, ಪುರಸಭೆ ಅಧ್ಯಕ್ಷೆ, ಮಾಗಡಿ

ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದರೆ ಹಾಲಿ ಇರುವಕೊಳವೆ ಬಾವಿಗಳಿಗೆ ಪೈಪ್‌ ಅಳವಡಿಸಲುಗ್ರಾಪಂ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಟಿ.ಪ್ರದೀಪ್‌, ಮಾಗಡಿ ತಾಪಂ ಇಒ

ಮಂಚನಬೆಲೆ ಡ್ಯಾಂನಿಂದ ಪಟ್ಟಣಕ್ಕೆ ಶುದ್ಧೀಕರಿಸದ ನೀರು ಪೂರೈಕೆಯಾಗುತ್ತಿದೆ.ಡ್ಯಾಂ ಬಳಿ ಮತ್ತು ವೀರೇಗೌಡನ ದೊಡ್ಡಿ, ಹೊಸಪೇಟೆ ಬಳಿ ನೀರು ಸಂಗ್ರಹಗಾರವಿದೆ. ಇಲ್ಲಿಂದಪಟ್ಟಣಕ್ಕೆ ನೀರು ಪೂರೈಸಲಾಗುತ್ತಿದೆ. ಮುಂಜಾಗ್ರತಾ ಕ್ರಮದಿಂದ ನೀರಿನ ಶುದ್ಧೀಕರಣಗೊಳಿಸಲು ಕ್ರಮ ವಹಿಸಲಾಗುತ್ತಿದೆ.ಹೆಸರೇಳದ ಅಧಿಕಾರಿಗಳು, ಪುರಸಭೆ ಮಾಗಡಿ

ತಿರುಮಲೆ ಶ್ರೀನಿವಾಸ್‌

ಟಾಪ್ ನ್ಯೂಸ್

IRCTC: ತಾಂತ್ರಿಕ ದೋಷ- ರೈಲು ಟಿಕೆಟ್‌ ಬುಕ್ಕಿಂಗ್‌ ಸಮಸ್ಯೆ-ಪ್ರಯಾಣಿಕರ ಆಕ್ರೋಶ

IRCTC Down: ತಾಂತ್ರಿಕ ದೋಷ- ರೈಲು ಟಿಕೆಟ್‌ ಬುಕ್ಕಿಂಗ್‌ ಸಮಸ್ಯೆ-ಪ್ರಯಾಣಿಕರ ಆಕ್ರೋಶ

Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…

Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…

Belagavi: ಮಹಾತ್ಮ ಗಾಂಧಿ ಪುತ್ಥಳಿ ಅನಾವರಣಗೊಳಿಸಿದ ಸಿಎಂ ಸಿದ್ದರಾಮಯ್ಯ

Belagavi: ಮಹಾತ್ಮ ಗಾಂಧಿ ಪುತ್ಥಳಿ ಅನಾವರಣಗೊಳಿಸಿದ ಸಿಎಂ ಸಿದ್ದರಾಮಯ್ಯ

ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ನೆರವು: ಸಿಎಂ ಘೋಷಣೆ

Belagavi: ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ನೆರವು: ಸಿಎಂ ಘೋಷಣೆ

Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!

Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!

INDvAUS: ಯುವ ಆಟಗಾರನ ಕೆಣಕಿ ತಪ್ಪು ಮಾಡಿದರೆ ಕೊಹ್ಲಿ? ಶಿಕ್ಷೆ ಗ್ಯಾರಂಟಿ!

INDvAUS: ಯುವ ಆಟಗಾರನ ಕೆಣಕಿ ತಪ್ಪು ಮಾಡಿದರೆ ಕೊಹ್ಲಿ? ಶಿಕ್ಷೆ ಗ್ಯಾರಂಟಿ!

ಪತ್ನಿ ಊರಿನತ್ತ ಪ್ರಯಾಣ ಬೆಳೆಸಿದರೆ… ಸಾವಿನ ಮನೆಯ ಕದ ತಟ್ಟಿದ ಯೋಧ ನಾಗಪ್ಪ ಮರೆಗೊಂಡ

ಪತ್ನಿ ಊರಿನತ್ತ ಪ್ರಯಾಣ ಬೆಳೆಸಿದರೆ… ಸಾವಿನ ಮನೆಯ ಕದ ತಟ್ಟಿದ ಯೋಧ ನಾಗಪ್ಪ ಮರೆಗೊಂಡ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Channapatna: ಕೆಲಸದ ಒತ್ತಡ ತಾಳಲಾರದೆ ಮುಖ್ಯ ಶಿಕ್ಷಕ ವಿಷ ಸೇವಿಸಿ ಆತ್ಮಹ*ತ್ಯೆ

Channapatna: ಕೆಲಸದ ಒತ್ತಡ ತಾಳಲಾರದೆ ಮುಖ್ಯ ಶಿಕ್ಷಕ ವಿಷ ಸೇವಿಸಿ ಆತ್ಮಹ*ತ್ಯೆ

10-ramanagara

Ramanagara: ಕಾಡಾನೆ ದಾಳಿಗೆ ರೈತ ಬಲಿ

DOG (2)

Ramanagara:ನಾಯಿ ಜತೆ ಮೂವರ ಅನೈಸರ್ಗಿಕ ಲೈಂಗಿ*ಕ ಚಟುವಟಿಕೆ: ಓರ್ವ ಸೆರೆ

Magadi Bus Stand: ಮಾಗಡಿ ಬಸ್‌ ನಿಲ್ದಾಣದಲ್ಲಿ ಸಮಸ್ಯೆಗಳ ಸರಮಾಲೆ

Magadi Bus Stand: ಮಾಗಡಿ ಬಸ್‌ ನಿಲ್ದಾಣದಲ್ಲಿ ಸಮಸ್ಯೆಗಳ ಸರಮಾಲೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

IRCTC: ತಾಂತ್ರಿಕ ದೋಷ- ರೈಲು ಟಿಕೆಟ್‌ ಬುಕ್ಕಿಂಗ್‌ ಸಮಸ್ಯೆ-ಪ್ರಯಾಣಿಕರ ಆಕ್ರೋಶ

IRCTC Down: ತಾಂತ್ರಿಕ ದೋಷ- ರೈಲು ಟಿಕೆಟ್‌ ಬುಕ್ಕಿಂಗ್‌ ಸಮಸ್ಯೆ-ಪ್ರಯಾಣಿಕರ ಆಕ್ರೋಶ

Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…

Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…

Belagavi: ಮಹಾತ್ಮ ಗಾಂಧಿ ಪುತ್ಥಳಿ ಅನಾವರಣಗೊಳಿಸಿದ ಸಿಎಂ ಸಿದ್ದರಾಮಯ್ಯ

Belagavi: ಮಹಾತ್ಮ ಗಾಂಧಿ ಪುತ್ಥಳಿ ಅನಾವರಣಗೊಳಿಸಿದ ಸಿಎಂ ಸಿದ್ದರಾಮಯ್ಯ

Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು

Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು

Tragic: ಮದುವೆ ಹರಕೆ ಹೊತ್ತು ಘಾಟಿ ದೇಗುಲಕ್ಕೆ ಬಂದಿದ್ದ ಯುವತಿ ಸಾವು

Tragic: ಮದುವೆ ಹರಕೆ ಹೊತ್ತು ಘಾಟಿ ದೇಗುಲಕ್ಕೆ ಬಂದಿದ್ದ ಯುವತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.